ಡಿ 11 ಸರಕಾರಿ ರಜೆ: ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ಇಂದು ರಜೆ ಇರುವುದೇ? ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಡಿ 11 ಸರಕಾರಿ ರಜೆ: ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ಇಂದು ರಜೆ ಇರುವುದೇ? ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ

ಡಿ 11 ಸರಕಾರಿ ರಜೆ: ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ಇಂದು ರಜೆ ಇರುವುದೇ? ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ

Bank Holidays in December 2024: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ನಿಧನಕ್ಕೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ಸರಕಾರ ಆದೇಶಿಸಿದೆ. ಇದೇ ಸಮಯದಲ್ಲಿ ಬುಧವಾರ, ಡಿಸೆಂಬರ್‌ 11ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂದಹಾಗೆ, ಇಂದು ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುವುದೇ?

ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ
ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ (Mint)

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ನಿಧನದ ಶೋಕಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ಬ್ಯಾಂಕ್‌ಗಳಿಗೆ (Bank Holidays in December 2024) ರಜೆ ಘೋಷಿಸಲಾಗಿದೆಯೇ? ಉತ್ತರ: ಇಲ್ಲ. ಡಿಸೆಂಬರ್‌ 11ರಂದು ಶಾಲೆ, ಕಾಲೇಜುಗಳು, ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಆದರೆ, ಬ್ಯಾಂಕ್‌ಗಳಿಗೆ ರಜೆ ನೀಡುವ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ಇಲ್ಲಿಯವರೆಗೆ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆ ಕರ್ನಾಟಕದಲ್ಲಿರುವ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಇಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಹಿರಿಯ ರಾಜಕಾರಣಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ಡಿಸೆಂಬರ್‌ 10ರಂದು ವಯೋಸಹಜ ಕಾಯಿಲೆಗಳಿಂದ ಮತ್ತು ದೀರ್ಘಕಾಲದ ಅಸೌಖ್ಯದಿಂದ ಮೃತಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಸರಕಾರವು ಡಿಸೆಂಬರ್‌ 11ರಂದು ಎಲ್ಲಾ ಸರಕಾರಿ ಕಚೇರಿಗಳಿಗೆ, ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ.

ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ 2024ರಲ್ಲಿ ಹಲವು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತವೆ. ಎಸ್‌ಎಂ ಕೃಷ್ಣ ನಿಧನಕ್ಕೆ ಬ್ಯಾಂಕ್‌ಗಳಿಗೆ ರಜೆ ಇಲ್ಲದೆ ಇದ್ದರೂ ಈ ತಿಂಗಳು ಹಬ್ಬಗಳು, ಪ್ರಾದೇಶಿಕ ಮತ್ತು ರಾಷ್ಟ್ರೀಯ ರಜೆಗಳು ಇರುತ್ತವೆ. ಇದರೊಂದಿಗೆ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳು ಎರಡು ಶನಿವಾರ ಮತ್ತು ಐದು ಭಾನುವಾರ ಮುಚ್ಚಿರುತ್ತವೆ. ಈ ತಿಂಗಳು ಬ್ಯಾಂಕ್‌ನಲ್ಲಿ ಅಗತ್ಯ ಕೆಲಸಗಳನ್ನು ಹೊಂದಿರುವವರು ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್‌ಗೆ ಭೇಟಿ ನೀಡುವುದು ಉತ್ತಮ.

ಡಿಸೆಂಬರ್‌ 2024ರಲ್ಲಿ ವಾರಾಂತ್ಯಗಳು ಸೇರಿದಂತೆ ಒಟ್ಟು 17 ಪಟ್ಟಿ ಮಾಡಲಾದ ರಜೆ ದಿನಗಳು ಇವೆ. ಕೆಲವೊಂದು ದೀರ್ಘಕಾಲದ ವೀಕೆಂಡ್‌ಗಳು ಇವೆ. ಡಿಸೆಂಬರ್‌ ತಿಂಗಳ ಬ್ಯಾಂಕ್‌ ಹಾಲಿಡೇ ಲಿಸ್ಟ್‌ ಇಲ್ಲಿದೆ. ಕೆಲವೊಂದು ರಜೆಗಳು ಆಯಾ ರಾಜ್ಯಗಳಿಗೆ ಸೀಮಿತವಾಗಿರುತ್ತವೆ.

ಡಿಸೆಂಬರ್ 2024: ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ

  • ಡಿಸೆಂಬರ್ 1 - ಭಾನುವಾರ (ಭಾರತದಾದ್ಯಂತ)
  • ಡಿಸೆಂಬರ್ 3 - ಶುಕ್ರವಾರ - ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ (ಗೋವಾ) ಹಬ್ಬ
  • ಡಿಸೆಂಬರ್ 8 - ಭಾನುವಾರ (ಭಾರತದಾದ್ಯಂತ)
  • ಡಿಸೆಂಬರ್ 12 - ಮಂಗಳವಾರ - ಪಾ-ಟೋಗನ್ ನೆಂಗ್ಮಿಂಜ ಸಂಗ್ಮಾ (ಮೇಘಾಲಯ)
  • ಡಿಸೆಂಬರ್ 14 - ಎರಡನೇ ಶನಿವಾರ (ಭಾರತದಾದ್ಯಂತ)
  • ಡಿಸೆಂಬರ್ 15 - ಭಾನುವಾರ (ಭಾರತದಾದ್ಯಂತ)
  • ಡಿಸೆಂಬರ್ 18 - ಬುಧವಾರ - ಯು ಸೋಸೋ ಥಾಮ್ (ಮೇಘಾಲಯ)
  • ಡಿಸೆಂಬರ್ 19 - ಗುರುವಾರ - ಗೋವಾ ವಿಮೋಚನಾ ದಿನ (ಗೋವಾ)
  • ಡಿಸೆಂಬರ್ 22 - ಭಾನುವಾರ (ಭಾರತದಾದ್ಯಂತ)
  • ಡಿಸೆಂಬರ್ 24 - ಮಂಗಳವಾರ - ಕ್ರಿಸ್ಮಸ್ ಈವ್ (ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯ)
  • ಡಿಸೆಂಬರ್ 25 - ಬುಧವಾರ - ಕ್ರಿಸ್ಮಸ್ (ಭಾರತದಾದ್ಯಂತ)
  • ಡಿಸೆಂಬರ್ 26 - ಗುರುವಾರ - ಕ್ರಿಸ್ಮಸ್ ಆಚರಣೆ (ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯ)
  • ಡಿಸೆಂಬರ್ 27 - ಶುಕ್ರವಾರ - ಕ್ರಿಸ್ಮಸ್ ಆಚರಣೆ (ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯ)
  • ಡಿಸೆಂಬರ್ 28 - ನಾಲ್ಕನೇ ಶನಿವಾರ (ಭಾರತದಾದ್ಯಂತ)
  • ಡಿಸೆಂಬರ್ 29 - ಭಾನುವಾರ (ಭಾರತದಾದ್ಯಂತ)
  • ಡಿಸೆಂಬರ್ 30 - ಸೋಮವಾರ - ಯು ಕಿಯಾಂಗ್ ನಂಗ್ಬಾ (ಮೇಘಾಲಯ)
  • ಡಿಸೆಂಬರ್ 31- ಮಂಗಳವಾರ - ಹೊಸ ವರ್ಷದ ಮುನ್ನಾದಿನ/ಲಾಸಾಂಗ್/ನಮ್ಸೂಂಗ್ (ಮಿಜೋರಾಂ, ಸಿಕ್ಕಿಂ)

ಕೆಲವು ರಜಾದಿನಗಳು ಆಯಾ ಬ್ಯಾಂಕ್‌ಗಳಿಗೆ ಸೀಮಿತವಾಗಿರುತ್ತವೆ. ರಜಾ ದಿನಗಳ ಕುರಿತು ನಿಮ್ಮ ಸ್ಥಳೀಯ ಬ್ಯಾಂಕ್‌ಗಳಲ್ಲಿ ಖಚಿತಪಡಿಸಿಕೊಳ್ಳಿ. ಹಣಕ್ಕಾಗಿ ಬ್ಯಾಂಕ್‌ಗಳನ್ನೇ ಅವಲಂಬಿಸಿರುವವರು ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಹಣ ಹೊಂದಿಸಿಕೊಳ್ಳಿ. ಈಗ ಎಲ್ಲಾ ಬ್ಯಾಂಕ್‌ಗಳು ಆನ್‌ಲೈನ್‌ ಬ್ಯಾಂಕಿಂಗ್‌ ಹೊಂದಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಿ. ಬ್ಯಾಂಕ್‌ ಎಟಿಎಂಗಳ ಮೂಲಕವೂ ಹಣ ಪಡೆಯಬಹುದು. ಹೆಚ್ಚು ರಜಾ ದಿನಗಳು ಇರುವ ಸಮಯದಲ್ಲಿ ಕೆಲವು ಎಟಿಎಂಗಳು ಹಣವಿಲ್ಲದೆ ಖಾಲಿ ಹೊಡೆಯಬಹುದು ಎಚ್ಚರವಿರಲಿ.

Whats_app_banner