ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ; ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನಾ ಪ್ರದರ್ಶನ, ನಾಳೆ ಏನೇನಿರುತ್ತೆ ಕಾರ್ಯಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ; ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನಾ ಪ್ರದರ್ಶನ, ನಾಳೆ ಏನೇನಿರುತ್ತೆ ಕಾರ್ಯಕ್ರಮ

ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ; ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನಾ ಪ್ರದರ್ಶನ, ನಾಳೆ ಏನೇನಿರುತ್ತೆ ಕಾರ್ಯಕ್ರಮ

Army Day 2025: ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ ಎಂಬ ವಿಶೇಷ ಕಾರ್ಯಕ್ರಮವನ್ನು ಭಾರತೀಯ ಸೇನೆ ಆಯೋಜಿಸಿದೆ. ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನಾ ಪ್ರದರ್ಶನ ನಾಳೆ ನಡೆಯಲಿದ್ದು, ಏನೇನಿರುತ್ತೆ ಕಾರ್ಯಕ್ರಮ ಎಂಬ ವಿವರ ಇಲ್ಲಿದೆ.

ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ನಾಳೆ ಭಾರತೀಯ ಸೇನಾ ಪ್ರದರ್ಶನ ಇರಲಿದ್ದು, ನಿಮ್ಮ  ಸೇನೆ ಬಗ್ಗೆ ತಿಳ್ಕೊಳ್ಳಿ ಕಾರ್ಯಕ್ರಮ
ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ನಾಳೆ ಭಾರತೀಯ ಸೇನಾ ಪ್ರದರ್ಶನ ಇರಲಿದ್ದು, ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ ಕಾರ್ಯಕ್ರಮ

Army Day 2025: ಬೆಂಗಳೂರಿಗರಿಗೆ ಒಂದು ಸುವರ್ಣಾವಕಾಶ. ಹೌದು ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ (Know Your Army) ಎಂಬ ಮೇಳವನ್ನು ಭಾರತೀಯ ಸೇನೆ ಬೆಂಗಳೂರಿನಲ್ಲಿ ಆಯೋಜಿಸಿದೆ. ಕಬ್ಬನ್ ರಸ್ತೆಯ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಶನಿವಾರ (ಜನವರಿ 11) ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ತನಕ ಈ ಪ್ರದರ್ಶನ ಮೇಳ ನಡೆಯಲಿದೆ. ಸೇನಾ ದಿನಾಚರಣೆ ನಿಮಿತ್ತ ಈ ಪ್ರದರ್ಶನವನ್ನು ಭಾರತೀಯ ಸೇನೆ ಹಮ್ಮಿಕೊಂಡಿದೆ.

ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ; ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಏನೇನು ಕಾರ್ಯಕ್ರಮ

ನಮ್ಮ ಸೇನೆ ನಮ್ಮ ಹೆಮ್ಮೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಭಾರತೀಯ ಸೇನೆಯ ಬಗ್ಗೆ ತಿಳಿದುಕೊಂಡಿರಬೇಕು. ಭಾರತೀಯ ಸೇನೆ ಇದೇ ಉದ್ದೇಶ ಇಟ್ಟುಕೊಂಡು ಭಾರತದ ಪ್ರಜೆಗಳಿಗೆ ಸೇನೆಯನ್ನು ಪರಿಚಯಿಸುವ ಸಲುವಾಗಿ “ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ” ಕಾರ್ಯಕ್ರಮ ಆಯೋಜಿಸಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ತನಕ ಈ ಪ್ರದರ್ಶನ ಇರಲಿದ್ದು, ನಿರಂತರ ಕಾರ್ಯಕ್ರಮಗಳೊಂದಿಗೆ ಜನರಲ್ಲಿ ಸೇನೆಯ ಬಗ್ಗೆ ಅರಿವು ಮೂಡಿಸಲಿದೆ.

ಭಾರತೀಯ ಸೇನೆಯ 'ನೋ ಯುವರ್ ಆರ್ಮಿ ಮೇಳ'ವು ಪ್ರದರ್ಶನವನ್ನು ಮೀರಿದ ಮರೆಯಲಾಗದ ಅನುಭವವನ್ನು ನೀಡುತ್ತದೆ. ಇದು ವಿಶ್ವದ ಅತ್ಯುತ್ತಮ ಸಶಸ್ತ್ರ ಪಡೆಗಳ ಶಕ್ತಿ, ನಿಖರತೆ ಮತ್ತು ಮಾನವೀಯ ಮುಖವನ್ನು ಅರಿಯವುದಕ್ಕೆ ಇರುವಂತಹ ವೇದಿಕೆಯಾಗಿದೆ. ಭಾರತೀಯ ಸೇನೆಯು ರಾಷ್ಟ್ರೀಯ ಭದ್ರತೆ ಮಾತ್ರವಲ್ಲದೆ, ವಿಪತ್ತು ಪರಿಹಾರದಲ್ಲೂ ಪರಿಣತಿ ಪಡೆದಿರುವಂಥದ್ದು. ಹೀಗಾಗಿ ಇದು ಜನರ ಸೇನೆಯೂ ಹೌದು.

“ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ” ಪ್ರದರ್ಶನ ಕಾರ್ಯಕ್ರಮದ 4 ಹೈಲೈಟ್ಸ್

ಭಾರತೀಯ ಸೇನೆ ಆಯೋಜಿಸಿರುವ “ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ” ಪ್ರದರ್ಶನ ಕಾರ್ಯಕ್ರಮದ ನಾಲ್ಕು ಹೈಲೈಟ್ಸ್ ಇವು

1) ನಿಮ್ಮ ಸೇನೆಯ ವ್ಯಾಪ್ತಿಯನ್ನು ತಿಳಿದುಕೊಳ್ಳಿ – ಭಾರತೀಯ ಸೇನೆಯ ಶ್ರೀಮಂತ ಪರಂಪರೆ ಮತ್ತು ಕೊಡುಗೆಗಳ ಒಳನೋಟಗಳನ್ನು ಈ ಪ್ರದರ್ಶನದಲ್ಲಿ ಪಡೆಯಬಹುದು

2) ಆಯುಧ ಮತ್ತು ಸಲಕರಣೆಗಳ ಪ್ರದರ್ಶನ - ಅತ್ಯಾಧುನಿಕ ಮಿಲಿಟರಿ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳು ಹೇಗಿವೆ ಎಂಬುದನ್ನು ನೋಡಿ ಅರಿತುಕೊಳ್ಳಬಹುದು.

3) ಪೈಪ್ ಬ್ಯಾಂಡ್ ಡಿಸ್‌ಪ್ಲೇ - ಇಂಡಿಯನ್ ಆರ್ಮಿ ಪೈಪ್ ಬ್ಯಾಂಡ್‌ನ ಸುಮಧುರ ಮತ್ತು ಸ್ಫೂರ್ತಿದಾಯಕ ಪ್ರದರ್ಶನವನ್ನು ಆನಂದಿಸಬಹುದು.

4) ಸಾಹಸ ಕ್ರೀಡೆಗಳು - ಟೊರ್ನಾಡೋಸ್ ಬೈಕ್ ಪ್ರದರ್ಶನ ಮತ್ತು ಕುದುರೆ ಸವಾರಿಗಳನ್ನು ಆನಂದಿಸಬಹುದು.

ನಮ್ಮ ಸೇನೆಯ ಬಗ್ಗೆ ತಿಳಿದುಕೊಳ್ಳಲು ಬೆಂಗಳೂರಿಗರಿಗೆ ಒಂದು ಅವಕಾಶ

ಭಾರತೀಯ ಸೇನೆ ಎಂದರೆ ಅದು ಜನರ ಸೇನೆ. ವಿಪತ್ತು ಪರಿಹಾರ ಕಾರ್ಯಗಳಲ್ಲೂ ಸೈ ಎನಿಸಿಕೊಂಡ ನಮ್ಮ ಸೇನೆಯು ಇತ್ತೀಚೆಗೆ ನಡೆದ ವಯನಾಡು ಭೂಕುಸಿತ ದುರಂತ, ಕೊಡಗು ಭೂಕುಸಿತ ದುರಂತ ಮುಂತಾದ ಸಂದರ್ಭಗಳಲ್ಲಿ ನಡೆಸಿದ ಕಾರ್ಯಾಚರಣೆ ಸದಾ ಕಾಲ ನೆನಪಿಗೆ ಬರುವಂತಿದೆ. ಈ ಪ್ರದರ್ಶನ ಮೇಳದಲ್ಲಿ ಭಾರತೀಯ ಸೇನೆಯ ಬಗ್ಗೆ ಮಾತ್ರವಲ್ಲ, ಯೋಧರ ಕಾರ್ಯವೈಖರಿ ಬಗ್ಗೆ ಕೂಡ ತಿಳಿದುಕೊಳ್ಳಬಹುದು. ಬೆಂಗಳೂರಿಗರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಸೇನೆ ಸೇರಲು ಬಯಸುವ ಯುವಜನರು ಅದಕ್ಕೆ ಸಂಬಂಧಿಸಿದಂತೆ ಸೇನಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಕ್ಕೂ ಅವಕಾಶ ಸಿಗಬಹುದು. ಅಂದ ಹಾಗೆ ಇವುಗಳ ಹೊರತಾಗಿ ಆಹಾರ ಮೇಳವೂ ಇರಲಿದ್ದು, ಆ ಆಕರ್ಷಣೆಯೂ ಜತೆಗಿದೆ.

Whats_app_banner