ಬೆಂಗಳೂರು ಜನರೇ ಗಮನಿಸಿ; ಪೀಣ್ಯ ಸೇರಿದಂತೆ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ, ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಜನರೇ ಗಮನಿಸಿ; ಪೀಣ್ಯ ಸೇರಿದಂತೆ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು ಜನರೇ ಗಮನಿಸಿ; ಪೀಣ್ಯ ಸೇರಿದಂತೆ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರಿನ ಪೀಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡಿಸೆಂಬರ್ 8ರ ಭಾನುವಾರ ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಎಲ್ಲೆಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಡಿಸೆಂಬರ್ 8ರ ಭಾನುವಾರ ಬೆಂಗಳೂರಿನ ಪೀಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ಡಿಸೆಂಬರ್ 8ರ ಭಾನುವಾರ ಬೆಂಗಳೂರಿನ ಪೀಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ-ಬೆಸ್ಕಾಂ ವತಿಯಿಂದ ನಗರದಲ್ಲಿ ಆಗಾಗ ವಿದ್ಯುತ್ ನಿರ್ವಹಣೆ ಹಾಗೂ ಕಾಮಗಾರಿಗಳನ್ನು ಮಾಡಲಾಗುತ್ತದೆ. ಕೆಲವೊಂದು ಕಡೆ ಕೇಬಲ್ ನಿರ್ವಹಣೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮುಂಚಿತವಾಗಿಯೇ ತಿಳಿಸಲಾಗುತ್ತದೆ. ಅದರಂತೆ ಇಂದು (ಡಿಸೆಂಬರ್ 8, ಭಾನುವಾರ) ಪೀಣ್ಯ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ತಿಳಿದು ಬಂದಿದೆ. ಯಾವೆಲ್ಲಾ ಪ್ರದೇಶಗಳಲ್ಲಿ ಎಷ್ಟು ಗಂಟೆಯಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

220/66/11 ಕೆವಿ ಎಸ್‌ಆರ್‌ಎಸ್ ಪೀಣ್ಯ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 08.12.2024 (ಭಾನುವಾರ) ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 3:30 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 8ರ ಭಾನುವಾರ ಪೀಣ್ಯದ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

“ಪೀಣ್ಯ ಗ್ರಾಮ, ಎಸ್ ಆರ್ ಎಸ್ ರಸ್ತೆ, 4ನೇ ಬ್ಲಾಕ್, ಎಂಇಐ ಕಾರ್ಖಾನೆ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜೆಕೆಡಬ್ಲೂ ಲೇಔಟ್, ಬೈರವೇಶ್ವರ ನಗರ, 10ನೇ ಕ್ರಾಸ್, 1ನೇ ಕ್ರಾಸ್, 1ನೇ ಹಂತ ಪೀಣ್ಯ ಕೈಗಾರಿಕಾ ಪ್ರದೇಶ, 3ನೇ ಕ್ರಾಸ್, 4ನೇ ಅಡ್ಡರಸ್ತೆ, ಎಸ್ ಎಸ್ ಟ್ರೇಜ್ ಏರಿಯಾ 1ನೇ ಕ್ರಾಸ್, ಅನುಸೋಲಾರ್ ರಸ್ತೆ, ಚೇರದ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಮೈಸೂರು ಇಂಜಿನಿಯರ್ ರಸ್ತೆ, ಸನ್ ರೈಸ್ ಕಾಸ್ಟಿಂಗದ ರಸ್ತೆ, 3ನೇ ಹಂತ, ವೈಷ್ಣವಿ ಮಾಲ್+ ಕಾವೇರಿ ಮಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

Whats_app_banner