Activa Electric: 1 ಸಾವಿರ ರೂಗೆ ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಬುಕ್ಕಿಂಗ್‌ ಮಾಡಿ; ಫೆಬ್ರವರಿಯಲ್ಲಿ ಡೆಲಿವರಿ, ಯಾವುದು ತಗೋತೀರಿ
ಕನ್ನಡ ಸುದ್ದಿ  /  ಕರ್ನಾಟಕ  /  Activa Electric: 1 ಸಾವಿರ ರೂಗೆ ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಬುಕ್ಕಿಂಗ್‌ ಮಾಡಿ; ಫೆಬ್ರವರಿಯಲ್ಲಿ ಡೆಲಿವರಿ, ಯಾವುದು ತಗೋತೀರಿ

Activa Electric: 1 ಸಾವಿರ ರೂಗೆ ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಬುಕ್ಕಿಂಗ್‌ ಮಾಡಿ; ಫೆಬ್ರವರಿಯಲ್ಲಿ ಡೆಲಿವರಿ, ಯಾವುದು ತಗೋತೀರಿ

Activa Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬುಕ್ಕಿಂಗ್‌ ಆರಂಭವಾಗಿದೆ. ಫೆಬ್ರವರಿ ತಿಂಗಳಲ್ಲಿಯೇ ಈ ಸ್ಕೂಟರ್‌ಗಳ ಡೆಲಿವರಿ ಆರಂಭವಾಗಲಿದೆ. ಇವುಗಳಲ್ಲಿ ಕ್ಯೂಸಿ 1 ಸ್ಕೂಟರ್‌ ಅನ್ನು ನಿರ್ದಿಷ್ಟವಾಗಿ ಭಾರತದ ಮಾರುಕಟ್ಟೆಗೆ ಅಭಿವೃದ್ಧಿಪಡಿಸಲಾಗಿದೆ. ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಅನ್ನು ಭಾರತ ಮತ್ತು ಇತರೆ ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.

1 ಸಾವಿರ ರೂ ನೀಡಿ, ಹೋಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್‌ ಸ್ಕೂಟರ್‌ ಬುಕ್ಕಿಂಗ್‌ ಮಾಡಿ
1 ಸಾವಿರ ರೂ ನೀಡಿ, ಹೋಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್‌ ಸ್ಕೂಟರ್‌ ಬುಕ್ಕಿಂಗ್‌ ಮಾಡಿ

Activa Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬುಕ್ಕಿಂಗ್‌ ಆರಂಭವಾಗಿದೆ. ಫೆಬ್ರವರಿ ತಿಂಗಳಲ್ಲಿಯೇ ಈ ಸ್ಕೂಟರ್‌ಗಳ ಡೆಲಿವರಿ ಆರಂಭವಾಗಲಿದೆ. ಇವುಗಳಲ್ಲಿ ಕ್ಯೂಸಿ 1 ಸ್ಕೂಟರ್‌ ಅನ್ನು ನಿರ್ದಿಷ್ಟವಾಗಿ ಭಾರತದ ಮಾರುಕಟ್ಟೆಗೆ ಅಭಿವೃದ್ಧಿಪಡಿಸಲಾಗಿದೆ. ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಅನ್ನು ಭಾರತ ಮತ್ತು ಇತರೆ ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಹೋಂಡಾ ಆ್ಯಕ್ಟಿವಾ ಇ ಮತ್ತು ಕ್ಯೂಸಿ 1 ಅನ್ನು 1 ಸಾವಿರ ರೂಪಾಯಿ ನೀಡಿ ಬುಕ್ಕಿಂಗ್‌ ಮಾಡಬಹುದು. ಬೆಂಗಳೂರು, ದೆಹಲಿ, ಮುಂಬೈನ ಆಯ್ದ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಈ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಬುಕ್ಕಿಂಗ್‌ ಮಾಡಬಹುದು. ಕ್ಯೂಸಿ 1 ಸ್ಕೂಟರ್‌ ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್‌, ಚಂಡೀಗಡಗಳಲ್ಲಿ ಬುಕ್ಕಿಂಗ್‌ಗೆ ಲಭ್ಯವಿದೆ.

ಈ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ನವೆಂಬರ್‌ 2024ರಲ್ಲಿ ಅನಾವರಣ ಮಾಡಲಾಗಿತ್ತು. ಈ ಮೂಲಕ ಭಾರತದ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಗೆ ಹೋಂಡಾ ಮೋಟಾರ್‌ಸೈಕಲ್‌ ಆಂಡ್‌ ಸ್ಕೂಟರ್‌ ಇಂಡಿಯಾ ಲಗ್ಗೆಯಿಟ್ಟಿದೆ. ಹೋಂಡಾ ಆ್ಯಕ್ಟಿವಾ ಇ ಮತ್ತು ಕ್ಯೂಸಿ 1 ಸ್ಕೂಟರ್‌ಗಳ ದರವನ್ನು ಭಾರತ್‌ ಮೊಬಿಲಿಟಿ ಗ್ಲೋಬಲ್‌ ಎಕ್ಸ್‌ಪೋ 2025ರಲ್ಲಿ ಘೋಷಿಸಲಾಗುತ್ತದೆ. ಈ ಎರಡು ಸ್ಕೂಟರ್‌ಗಳ ಡೆಲಿವರಿಯನ್ನು ಫೆಬ್ರವರಿ 2025ರಲ್ಲಿ ಆರಂಭಿಸಲು ಕಂಪನಿ ಉದ್ದೇಶಿಸಿದೆ.

ಹೋಂಡಾ ಆ್ಯಕ್ಟಿವಾ ಇ

ಹೋಂಡಾ ಆ್ಯಕ್ಟಿವಾ ಇ ಮೇಲ್ನೋಟಕ್ಕೆ ಆ್ಯಕ್ಟಿವಾ ಸ್ಕೂಟರ್‌ನಂತೆ ಕಾಣಿಸುತ್ತದೆ. ಅದರದ್ದೇ ಬಾಡಿ ಮತ್ತು ಫ್ರೇಮ್‌ ಹೊಂದಿದೆ. ಇತರೆ ಪ್ರತಿಸ್ಪರ್ಧಿಗಳು ತುಸು ಭಿನ್ನ ಎಲೆಕ್ಟ್ರಿಕ್‌ ಸ್ಕೂಟರ್‌ ಡಿಸೈನ್‌ ಪರಿಚಯಿಸಿದರೆ, ಹೋಂಡಾ ಮಾತ್ರ ತನ್ನ ಬೆಸ್ಟ್‌ ಸೆಲ್ಲಿಂಗ್‌ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ನ ವಿನ್ಯಾಸವನ್ನೇ ಉಳಿಸಿಕೊಂಡಿದೆ. ಹೋಂಡಾ ಆ್ಯಕ್ಟಿವಾ ಇಯಲ್ಲಿ ಎಲ್‌ಇಡಿ ಲೈಟ್‌ಗಳು, ಇಂಡಿಕೇಟರ್‌ಗಳು ಇವೆ. ನೋಡಲು ಸಣ್ಣದಾಗಿ ಆಕರ್ಷಕವಾಗಿ ಈ ಸ್ಕೂಟರ್‌ ಕಾಣಿಸುತ್ತದೆ.

ಈ ಹೋಂಡಾ ಸ್ಕೂಟರ್‌ ತೆಗೆಯಬಹುದಾದ ಬ್ಯಾಟರಿಗಳನ್ನು ಹೊದಿವೆ. ಇದನ್ನು ಹೋಂಡಾ ಆ್ಯಕ್ಟಿವಾದ ಇ ಸ್ಟೇಷನ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ಹೋಂಡಾ ಆ್ಯಕ್ಟಿವಾ ಇಯು 5.6 ಬಿಚ್‌ಪಿ ಮತ್ತು ಗರಿಷ್ಠ 8 ಬಿಎಚ್‌ಪಿ ಪವರ್‌ ನೀಡುತ್ತದೆ. ಈ ಸ್ಕೂಟರ್‌ ಸ್ಟಾಂಡರ್ಡ್‌, ಸ್ಪೋರ್ಟ್‌, ಇಕಾನ್‌ ಎಂಬ ಮೂರು ರೈಡಿಂಗ್‌ ಮೋಡ್‌ಗಳನ್ನು ಹೊಂದಿದೆ. ಒಂದು ಸಿಂಗಲ್‌ ಚಾರ್ಜ್‌ನಲ್ಲಿ 102 ಕಿ.ಮೀ. ಪ್ರಯಾಣಿಸಬಹುದು ಎಂದು ಕಂಪನಿ ತಿಳಿಸಿದೆ.

ಹೋಂಡಾ ಆ್ಯಕ್ಟಿವಾ ಇ
ಹೋಂಡಾ ಆ್ಯಕ್ಟಿವಾ ಇ

ಹೋಂಡಾ ಕಂಪನಿಯ ಈ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಗೆ ಹೋಂಡಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕರ್ನಾಟಕದಲ್ಲಿರುವ ಬೆಂಗಳೂರಿನ ಘಟಕದಲ್ಲಿ ಉತ್ಪಾದಿಸುತ್ತಿದೆ. ಈ ಬೆಂಗಳೂರು ಫ್ಯಾಕ್ಟರಿಯು ದೇಶೀಯ ಮತ್ತು ರಫ್ತು ಬೇಡಿಕೆಯನ್ನು ಪೂರೈಸುತ್ತದೆ. EICMA 2024ನಲ್ಲಿ ಕಂಪನಿಯು ಪ್ರದರ್ಶಿಸಿದ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಹೋಲಿಸಿದರೆ ಈಗ ಅನಾವರಣ ಮಾಡಿರುವ ಸ್ಕೂಟರ್‌ಗಳು ತುಂಬಾ ಡಿಫರೆಂಟ್‌ ಆಗಿವೆ. ನೋಡಲು ಆಕರ್ಷಕವಾಗಿವೆ.

ಬ್ಯಾಟರಿಗಳನ್ನು ಸುಲಭವಾಗಿ ಬದಲಾಯಿಸಲು ಅನುಕೂಲವಾಗುವಂತೆ ಹೋಂಡಾ ತನ್ನ ಚಾರ್ಜಿಂಗ್ ಸ್ಟೇಷನ್‌ಗಳನ್ನು ದೇಶಾದ್ಯಂತ ನಿರ್ಮಿಸಲು ಉದ್ದೇಶಿಸಿದೆ. ಹೋಂಡಾ ಆಕ್ಟಿವಾ ಇ ಮುಂಭಾಗ ಮತ್ತು ಹಿಂಭಾಗಕ್ಕೆ ಎಲ್ಇಡಿ ಸಂಯೋಜನೆಯ ಲ್ಯಾಂಪ್‌ಗಳು ಮತ್ತು ಇಂಡಿಕೇಟರ್‌ಗಳು ಇವೆ. ಕ್ಯೂಸಿ 1ನಲ್ಲಿ ಮೌಂಟೆಡ್ ಎಲ್ಇಡಿ ಡಿಆರ್‌ಎಲ್‌, ಟೈಲ್ ಲೈಟ್ ಮುಂತಾದವುಗಳು ಇವೆ. ಆಕ್ಟಿವಾ ಇಯಲ್ಲಿ ಕೆಲವು ಕ್ರೋಮ್‌ ವಿನ್ಯಾಸಗಳು ಮಿಸ್‌ ಆಗಿವೆ. ಆಕ್ಟಿವಾದಲ್ಲಿ ಮುಂಭಾಗದಲ್ಲಿ ಡಿಸ್ಕ್‌ ಬ್ರೇಕ್‌ ಇದೆ. ಕ್ಯೂಸಿ1ನಲ್ಲಿ ಡ್ರಮ್‌ ಬ್ರೇಕ್‌ಗಳು ಇವೆ. ಈ ಸ್ಕೂಟರ್‌ನ ದರ ಎಷ್ಟಿರಬಹುದು ಎಂಬ ವಿವರ ಸದ್ಯದಲ್ಲಿಯೇ ಬಹಿರಂಗವಾಗಲಿದೆ.

Whats_app_banner