ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಸಾಧನೆ ಅಪಾರ; ಅವರ ಶಿಕ್ಷಣ ಹಾಗೂ ಕೊಡುಗೆಗಳ ಬಗ್ಗೆ ಪಲ್ಲವಿ ಇಡೂರ್ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಸಾಧನೆ ಅಪಾರ; ಅವರ ಶಿಕ್ಷಣ ಹಾಗೂ ಕೊಡುಗೆಗಳ ಬಗ್ಗೆ ಪಲ್ಲವಿ ಇಡೂರ್ ಬರಹ

ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಸಾಧನೆ ಅಪಾರ; ಅವರ ಶಿಕ್ಷಣ ಹಾಗೂ ಕೊಡುಗೆಗಳ ಬಗ್ಗೆ ಪಲ್ಲವಿ ಇಡೂರ್ ಬರಹ

64 ವಿಷಯಗಳಲ್ಲಿ ಮಾಸ್ಟರ್ಸ್ ಹೊಂದಿರುವ, 9ಭಾಷೆಗಳನ್ನು ಸುಲಲಿತವಾಗಿ ತಿಳಿದಿದ್ದ, ಜಗತ್ತಿನ ಅಷ್ಟೂ ಧರ್ಮಗಳನ್ನು ಸತತ 21 ವರ್ಷಗಳ ಕಾಲ ತುಲನಾತ್ಮಕ ಅಧ್ಯಯನ ನಡೆಸಿ ತಿಳಿದುಕೊಂಡಿದ್ದ, ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಸಾಧನೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದು ಊಹೆಗೂ ನಿಲುಕದು. (ಪಲ್ಲವಿ ಇಡೂರ್ ಬರಹ)

ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಸಾಧನೆ
ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಸಾಧನೆ (ಸಂಗ್ರಹ ಚಿತ್ರ)

ಭಾರತದ ಮೊದಲ ವಿದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ "ಡಾಕ್ಟರ್ ಆಫ್ ಆಲ್ ಸೈನ್ಸ್" ಪದವಿ ಪಡೆದ ಏಕೈಕ ವ್ಯಕ್ತಿ. ಬಿ. ಆರ್. ಅಂಬೇಡ್ಕರ್ ಅವರ ಸಾಧನೆಗಳು ಮತ್ತು ಕೊಡುಗೆಗಳ ಬಗ್ಗೆ ವಿವರವಾಗಿ ಪಲ್ಲವಿ ಇಡೂರ್ ಅವರು ಹಂಚಿಕೊಂಡ ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ. ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಷಯವನ್ನು ನಾವಿಲ್ಲಿ ಯಥಾವತ್ತಾಗಿ ಪ್ರಕಟಿಸಿದ್ದೇವೆ.

ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ 8 ವರ್ಷದ ಕಾಲಾವಧಿಯ ಎಕನಾಮಿಕ್ಸ್ ಓದುವಾಗ ದಿನದಲ್ಲಿ ಸತತ 21ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಟ್ಟು ಕೇವಲ 2ವರ್ಷ 3ತಿಂಗಳಲ್ಲಿ ಎಕನಾಮಿಕ್ಸ್ ಅಧ್ಯಯನ ಮುಗಿಸಿ, ಭಾರತದ ಮೊಟ್ಟ ಮೊದಲ ವಿದೇಶದಲ್ಲಿ ಎಕನಾಮಿಕ್ಸ್ ನಲ್ಲಿ ಡಾಕ್ಟರೇಟ್ ಪಡೆದವರೆಂಬ ಗರಿಮೆಯನ್ನು ತನ್ನದಾಗಿಸಿಕೊಂಡ, ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ "ಡಾಕ್ಟರ್ ಆಫ್ ಆಲ್ ಸೈನ್ಸ್"(Doctor of All Science) ಅನ್ನುವ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿರುವ ಜಗತ್ತಿನ ಏಕೈಕ ವ್ಯಕ್ತಿ. ತದನಂತರದಿಂದ ಇಂದಿಗೂ ಪ್ರಪಂಚದಾದ್ಯಂತ ಅನೇಕ ಬುದ್ಧಿವಂತ ವಿದ್ಯಾರ್ಥಿಗಳು, ವಿದ್ವಾಂಸರು ಈ ಪದವಿಗಾಗಿ ಪ್ರಯತ್ನಿಸಿದರೂ ಇಂದಿಗೂ ಇವರ ಮುಡಿಯೇರಿದ ಕಿರೀಟವನ್ನು ತಮ್ಮದಾಗಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಜಗತ್ತಿನ ಶ್ರೇಷ್ಟಾತಿಶ್ರೇಷ್ಟ ಎಕನಾಮಿಕ್ಸ್ ಗಳಿಗೂ ಇವತ್ತಿಗೂ ಗುರುವಿನ ಸಮಾನವಾದವರು.

ತನ್ನೊಂದಿಗೆ ಎಂಟೂವರೆ ಲಕ್ಷ ಜನರನ್ನು ಏಕಕಾಲದಲ್ಲಿ ಬೌದ್ಧ ಧರ್ಮಕ್ಕೆ ಕೊಂಡೊಯ್ಯುವುದರೊಂದಿಗೆ ಜಗತ್ತಿನ ಅತ್ಯಂತ ದೊಡ್ಡ ಮಟ್ಟದ mass conversion ಮಾಡಿರುವ ದಾಖಲೆಯೊಂದಿಗೆ ಬೌದ್ಧ ಗುರುವಾಗಿರುವ ಮಹಾಂತ ವೀರ್ ಚಂದ್ರಮಣಿಯವರಿಂದ ‘The Modern Buddha of this age’ ಎಂದು ಕರೆಸಿಕೊಂಡಿರುವವರು. ಇವತ್ತಿಗೂ ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಹಾಡು, ಕಥೆ, ಕವಿತೆಗಳು ರಚನೆಯಾಗಿರುವ ದಾಖಲೆಯಿರುವುದೂ ಇವರ ಮೇಲೆಯೇ.

ಇಷ್ಟಲ್ಲದೆ 64 ವಿಷಯಗಳಲ್ಲಿ ಮಾಸ್ಟರ್ಸ್ ಹೊಂದಿರುವ, 9ಭಾಷೆಗಳನ್ನು ಸುಲಲಿತವಾಗಿ ತಿಳಿದಿದ್ದ, ಜಗತ್ತಿನ ಅಷ್ಟೂ ಧರ್ಮಗಳನ್ನು ಸತತ 21 ವರ್ಷಗಳ ಕಾಲ ತುಲನಾತ್ಮಕ ಅಧ್ಯಯನ ನಡೆಸಿ ತಿಳಿದುಕೊಂಡಿದ್ದ, ಕೊಲಂಬಿಯಾ ಯುನಿವರ್ಸಿಟಿ ತಯಾರಿಸಿದ ಜಗತ್ತಿನ 100 ಶ್ರೇಷ್ಟ ಸ್ಕಾಲರ್ ಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ, ಐವತ್ತು ಸಾವಿರ ಪುಸ್ತಕಗಳ 'ರಾಜಗೃಹ' ಎನ್ನುವ ಜಗತ್ತಿನ ಅತ್ಯಂತ ದೊಡ್ಡ ಖಾಸಗೀ ಲೈಬ್ರೆರಿಯನ್ನು ಹೊಂದಿದ್ದ ಇವರು ಭಾರತದಲ್ಲಿ ಶತಶತಮಾನಗಳಿಂದಲೂ ತುಳಿಯಲ್ಪಟ್ಟ ಜಾತಿಯಲ್ಲಿ ಹುಟ್ಟಿ, ಜಾತಿಯ ಸಂಕೋಲೆಯನ್ನೂ ಮೀರಿ ಜಗತ್ತಿನ ಶ್ರೇಷ್ಟರ ಪಟ್ಟಿಯಲ್ಲಿ ಮೊದಲಿಗರಾಗುವುದೆಂದರೆ 'ಅಸಾಮಾನ್ಯ' ಎನ್ನುವ ಪದಕ್ಕೂ ಮೀರಿದ ಸಾಧನೆ. 

ಬಾಬಾಸಾಹೇಬ್ ಅವರ ಜೀವನ ಸಾಧನೆ

ಪಟ್ಟಿ ಮಾಡುತ್ತಾ ಹೋದರೆ ಡಾ. ಬಿ. ಆರ್. ಅಂಬೇಡ್ಕರ್ ಅನ್ನುವ ನಮ್ಮೆಲ್ಲರ ಪ್ರೀತಿಯ ಬಾಬಾಸಾಹೇಬ್ ಅವರ ಜೀವನ ಸಾಧನೆಯೆನ್ನುವುದು ನಮ್ಮ ಊಹೆಗೂ ನಿಲುಕದ್ದು. ಸ್ವತಃ ಗಾಂಧಿಯವರ ಪ್ರಕಾರ 500ಸ್ಕಾಲರ್ ಗಳಿಗೆ ಒಬ್ಬ ಅಂಬೇಡ್ಕರ್ ಅನ್ನುವಂತಹ ಅಸಾಮಾನ್ಯ. 

ಇಂತಹ ಅಸಾಮಾನ್ಯ ಚೇತನದ ಒಂದು ಕಣದಷ್ಟು ಬುದ್ಧಿವಂತಿಕೆ ನಮ್ಮೆಲ್ಲರದ್ದಾದರೂ ನಾವುಗಳು ಧನ್ಯ. ಬಾಬಾ ಸಾಹೇಬರ ಜಯಂತಿಯ ಈ ದಿನದಂದು ಅವರ ಶ್ರೇಷ್ಟ ಚಿಂತನೆಯೆಡೆಗಿನ ಬದುಕನ್ನು ಬದುಕುವ ಮೂಲಕವಾದರೂ ಮನುಷ್ಯರಾಗೋಣ ಎನ್ನುವ ಕರೆಯೊಂದಿಗೆ ನಿಮ್ಮೆಲ್ಲರಿಗೂ, ಮಾನವತೆಯ, ಸಮಾನತೆಯ, ಬೌದ್ಧಿಕತೆಯ ಜಯಂತಿಯ ಶುಭಾಶಯಗಳು.

"ನನಗೆ ಆ ಪರಿಸ್ಥಿತಿಯಲ್ಲಿ ಎದ್ದು ನಿಂತ ಆ ಮನೋಬಲದ ಬಗ್ಗೆ ಸಕತ್ ಅಚ್ಚರಿಯಾಗುತ್ತದೆ.. ಸುತ್ತಲೂ ಕತ್ತಲುಪ್ರಿಯರೇ ತುಂಬಿರುವಾಗ ಸಣ್ಣ ಮೊಂಬತ್ತಿ ಬೆಳಗಿಸುವುದು ಸಹ ಮಹಾನ್ ಸಾಹಸವೇ. ಅಂಥದರಲ್ಲಿ ಇವರು ಸೂರ್ಯನನ್ನೇ ಬೆಳಗಿಸಿಬಿಟ್ಟರು" ಎಂದು ಈ ಪೋಸ್ಟ್‌ಗೆ ಗುರುರಾಜ್‌ ಕೋಡ್ಕಣಿ ಕಾಮೆಂಟ್‌ ಮಾಡಿದ್ದಾರೆ. ಇನ್ನು ಸಾಕಷ್ಟು ಜನರು ಈ ಸಂದರ್ಭದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಸಾಧನೆಗಳನ್ನು ನೆನಪಿಸಿಕೊಂಡಿದ್ದಾರೆ. 

Suma Gaonkar

eMail
Whats_app_banner