ಕನ್ನಡ ಸುದ್ದಿ  /  Karnataka  /  Bagalkot News Fighting Between Two Drunkers In Moving Bus One Person Fell Down And Died Smu

ಚಲಿಸುತ್ತಿದ್ದ ಬಸ್‌ನಲ್ಲಿ ಇಬ್ಬರು ಕುಡುಕರ ಮಧ್ಯೆ ಗಲಾಟೆ; ಕೆಳಗೆ ಬಿದ್ದು ಓರ್ವ ಸಾವು -Bagalkot News

Bagalkot News: ಚಲಿಸುತ್ತಿದ್ದ ಬಸ್‌ನಲ್ಲಿ ಇಬ್ಬರು ಕುಡುಕರ ಮಧ್ಯೆ ನಡೆದ ಗಲಾಟೆಯಲ್ಲಿ ಒಬ್ಬ ಬಸ್ಸಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಚಲಿಸುತ್ತಿದ್ದ ಬಸ್‌ನಲ್ಲಿ ಇಬ್ಬರು ಕುಡುಕರ ನಡುವೆ ನಡೆದ ಗಲಾಟೆ ವೇಳೆ ಓರ್ವ ಬಸ್ಸಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಚಲಿಸುತ್ತಿದ್ದ ಬಸ್‌ನಲ್ಲಿ ಇಬ್ಬರು ಕುಡುಕರ ನಡುವೆ ನಡೆದ ಗಲಾಟೆ ವೇಳೆ ಓರ್ವ ಬಸ್ಸಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ: ಚಲಿಸುತ್ತಿದ್ದ ಬಸ್‌ನಲ್ಲಿ ಇಬ್ಬರು ಕುಡುಕರ ನಡುವೆ ನಡೆದ ಗಲಾಟೆ ವೇಳೆ ಓರ್ವ ಕುಡುಕ ಬಸ್‌ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮುಧೋಳ – ಕುಳಲಿ ರಸ್ತೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮುಧೋಳ ತಾಲೂಕಿನ ಸೋರಗಾವಿ ಗ್ರಾಮದ ಪ್ರಹ್ಲಾದ್ ಮುರಿಗೆಪ್ಪ ಮಾದರ (38) ಎಂದು ಗುರುತಿಸಲಾಗಿದೆ. ಮುಧೋಳ ಮೂಲಕ ಬನಹಟ್ಟಿಗೆ ಹೊರಿಟಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಪಾನಮತ್ತ ಇಬ್ಬರ ನಡುವೆ ಗಲಾಟೆ ನಡೆದಿದೆ. ಆಗ ಓರ್ವ ಕುಡುಕನನ್ನು ಮತ್ತೋರ್ವ ಕುಡುಕ ಬಸ್ ನಿಂದ ಹೊರ ತಳ್ಳಿದ್ದಾನೆ. ಕೆಳಗೆ ಬಿದ್ದ ಪ್ರಹ್ಲಾದ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸ್ ನಿಂದ ಬೀಳುತ್ತಿದ್ದಂತೆ ರಸ್ತೆ ಪಕ್ಕದಲ್ಲಿನ ಚರಂಡಿಗೆ ಹೋಗಿ ಬಿದ್ದಿದ್ದಾನೆ. ಸಾವನ್ನಪ್ಪಿದ ಪ್ರಹ್ಲಾದ್ ಶವವನ್ನು ಜೆಸಿಬಿ ಮೂಲಕ ಹೊರತೆಗೆಯಲಾಗಿದೆ.

ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

IPL_Entry_Point