Viral News: ತ್ರಿಬಲ್‌ರೈಡಿಂಗ್‌ ವೇಳೆ ಸಿಕ್ಕಿಬಿದ್ದು ಕಾಲೇಜು ಶುಲ್ಕದ ಹಣ ಕಟ್ಟಿ ಕಣ್ಣೀರು ಹಾಕಿದ ವಿದ್ಯಾರ್ಥಿ, ಮಾಫಿ ಮಾಡಿ ಸಂತೈಸಿದ ಪಿಎಸ್ಐ
ಕನ್ನಡ ಸುದ್ದಿ  /  ಕರ್ನಾಟಕ  /  Viral News: ತ್ರಿಬಲ್‌ರೈಡಿಂಗ್‌ ವೇಳೆ ಸಿಕ್ಕಿಬಿದ್ದು ಕಾಲೇಜು ಶುಲ್ಕದ ಹಣ ಕಟ್ಟಿ ಕಣ್ಣೀರು ಹಾಕಿದ ವಿದ್ಯಾರ್ಥಿ, ಮಾಫಿ ಮಾಡಿ ಸಂತೈಸಿದ ಪಿಎಸ್ಐ

Viral News: ತ್ರಿಬಲ್‌ರೈಡಿಂಗ್‌ ವೇಳೆ ಸಿಕ್ಕಿಬಿದ್ದು ಕಾಲೇಜು ಶುಲ್ಕದ ಹಣ ಕಟ್ಟಿ ಕಣ್ಣೀರು ಹಾಕಿದ ವಿದ್ಯಾರ್ಥಿ, ಮಾಫಿ ಮಾಡಿ ಸಂತೈಸಿದ ಪಿಎಸ್ಐ

Humane police ಪೊಲೀಸರು( Police) ಕೆಲವೊಮ್ಮೆ ಕಠಿಣವಾಗಿ ವರ್ತಿಸುತ್ತಾರೆ. ಆದರೆ ಕಾನೂನಿನ ಕಟ್ಟಳೆಯ ನಡುವೆಯೂ ಮಾನವೀಯತೆ ಇದ್ದಾಗ ಅದನ್ನು ತೋರಿಸಿ ಮಾದರಿಯೂ ಆಗುತ್ತಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿ.

ಇಳಕಲ್‌ ನಗರದಲ್ಲಿ ವಿದ್ಯಾರ್ಥಿಯಿಂದ ಪಡೆದ ದಂಡ ವಾಪಾಸ್‌ ನೀಡಿದ ಪಿಎಸ್‌ಐ
ಇಳಕಲ್‌ ನಗರದಲ್ಲಿ ವಿದ್ಯಾರ್ಥಿಯಿಂದ ಪಡೆದ ದಂಡ ವಾಪಾಸ್‌ ನೀಡಿದ ಪಿಎಸ್‌ಐ

ಬಾಗಲಕೋಟೆ: ಆತ ಕಾಲೇಜು ವಿದ್ಯಾರ್ಥಿ, ಗುರುವಾರ ಬೆಳಿಗ್ಗೆ ಲಘುಬಗೆಯಲ್ಲಿ ಕಾಲೇಜಿಗೆ ಹೋಗುವ ಧಾವಂತದಲ್ಲಿದ್ದ. ನಗರದ ಮಧ್ಯ ಭಾಗದಲ್ಲಿ ತನ್ನದೇ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಮಾರ್ಗಮಧ್ಯೆದಲ್ಲೇ ಸ್ನೇಹಿತರಿಬ್ಬರು ಸಿಕ್ಕರು. ಕಾಲೇಜಿಗೆ ಹೊರಟಿದ್ದರಲ್ಲ. ಸ್ನೇಹಿತರ ಬೇಡಿಕೆಗೆ ಸ್ಪಂದಿಸಿ ಅವರನ್ನು ಕೂರಿಸಿಕೊಂಡು ಹೊರಟ. ಸ್ವಲ್ಪ ದೂರದಲ್ಲಿ ಹೋಗುತ್ತಿದ್ದಾಗ ಅಲ್ಲಿಯೇ ಪೊಲೀಸರು ನಿಂತಿದ್ದರು. ತ್ರಿಬಲ್‌ ರೈಡಿಂಗ್‌ಗೆ ಅವಕಾಶವಿಲ್ಲ ಎನ್ನುವುದು ತಿಳಿದಿದ್ದರೂ ಸ್ನೇಹಿತರನ್ನು ಕರೆದುಕೊಂಡು ಹೊರಟ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದ. ಅಲ್ಲಿದ್ದ ಸಬ್‌ಇನ್ಸ್‌ಪೆಕ್ಟರ್‌ ಆತನನ್ನು ಕರೆಯಿಸಿ ಏಕೆ ಹೀಗೆ ಮಾಡಿದೆ. ದಂಡ ಕಟ್ಟು ಎಂದರು. ಈ ವೇಳೆ ಆತನ ಪ್ರಾಮಾಣಿಕ ನಡೆ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಮನಸು ಕರಗಿಸಿತು. ಮುಂದೆ ಹೀಗೆ ತಪ್ಪು ಮಾಡಬೇಡ ಎಂದು ಬುದ್ದಿವಾದ ಹೇಳಿ ಕಳುಹಿಸಿದರು.

ಇದು ನಡೆದಿದ್ದು ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದಲ್ಲಿ. ಗುರುವಾರ ಅರ್ಧಗಂಟೆ ಕಾಲ ನಡೆದ ಬೆಳವಣಿಗೆಗಳನ್ನು ಗಮನಿಸಿದ ಸಾರ್ವಜನಿಕರು ವಿದ್ಯಾರ್ಥಿಯ ನಡವಳಿಕೆ, ಪಿಎಸ್‌ಐ ಅವರ ಮಾನವೀಯ ನಡೆಯ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು.

ಟ್ರಾಫಿಕ್ ಪೊಲೀಸರ ಶುಲ್ಕ ಪಾವತಿಸಲು ಹಣವಿಲ್ಲದೇ ಪರದಾಡಿ ಕಣ್ಣೀರು ಹಾಕಿದ ವಿದ್ಯಾರ್ಥಿಗೆ ಮಾಫಿ ಮಾಡಿ, ಹಿರಿಯ ಸಹೋದರಿಯ ಅಪ್ಪುಗೆ ನೀಡಿ ಸಂತೈಸಿದ ಮಹಿಳಾ ಪಿಎಸ್ ಐ ನಡೆ ಈಗ ಗಮನ ಸೆಳೆದಿದೆ.

ಬಾಗಲಕೋಟ ಜಿಲ್ಲೆಯ ಇಲಕಲ್ ನಗರದಲ್ಲಿ ತ್ರಿಬಲ್ ರೈಡಿಂಗ್ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ತಡೆಹಿಡಿದು ಮಹಿಳಾ ಪಿಎಸ್ ಐ ಎಸ್. ಆರ್. ನಾಯಕ ಎಂಬುವವರು ದಂಡ ಹಾಕಿದ್ದರು. ಆದರೆ ದಂಡ ಪಾವತಿಗೆ ಹಣವಿಲ್ಲದೇ ತನ್ನ ಕಾಲೇಜು ಶುಲ್ಕ ಪಾವತಿಗಾಗಿ ಇಟ್ಟುಕೊಂಡಿದ್ದ ಹಣ ನೀಡಿದ ಬಾಲಕನ ಪರಿಸ್ಥಿತಿಗೆ ಮರುಗಿ‌ ಮಹಿಳಾ ಪಿಎಸ್ ಐ ಆತನಿಗೆ ಕ್ಷಮಾಪಣೆ ಮಾಡಿದ್ದಾರೆ.

ಆತ ಕಾಲೇಜು ಶುಲ್ಕಕ್ಕಾಗಿ ಇಟ್ಟುಕೊಂಡಿದ್ದ ಹಣ ದಂಡವಾಗಿ ನೀಡುತ್ತಿರುವ ಬಗ್ಗೆ ಖಾತರಿ ಮಾಡಿಕೊಂಡು ಪಿಎಸ್ಐ ಮಮ್ಮಲ‌ ಮರುಗಿದ್ದು, ದಂಡದ ಹಣ ವಾಪಸ್ ಕೊಟ್ಟು, ಸಂತೈಸಿ ಕಳಿಸಿರುವ ವಿಡಿಯೋ ವೈರಲ್ ಆಗಿದೆ.

ಮಕ್ಕಳು, ಯುವಕರು, ನಾಗರಿಕರು ಟ್ರಾಫಿಕ್ ರೂಲ್ಸ್ ರೆಗ್ಯುಲೇಶನ್ ಮುರಿಯಬಾರದು, ಜೊತೆಗೆ ಪೊಲೀಸರು ಸಹ ಸಂದರ್ಭಕ್ಕುನುಸಾರವಾಗಿ ಜನತೆಯೊಂದಿಗೆ ಮಾನವೀಯತೆ ಮರೆಯಬೇಕು ಎಂಬ ಪಾಠವನ್ನು ವಿದ್ಯಾರ್ಥಿಗೆ ತಿಳಿ ಹೇಳಿದರು.

ನಾನು ಸ್ನೇಹಿತರ ಮನವಿ ಮೇರೆಗೆ ತ್ರಿಬಲ್‌ ರೈಡಿಂಗ್‌ ಮಾಡಿಕೊಂಡು ಹೊರಟೆ. ಇದು ಕಾನೂನಿಗೆ ವಿರುದ್ದ ಎನ್ನುವುದು ಗೊತ್ತಿತ್ತು. ಆದರೂ ಬೇಗನೇ ಕಾಲೇಜಿಗೆ ತಲುಪಬಹುದಲ್ಲ ಎಂದು ಈ ರೀತಿ ಮಾಡಿದೆ. ಆನಂತರ ದಂಡ ಕಟ್ಟಲು ಪೊಲೀಸರು ಹೇಳಿದೆ. ಕಾಲೇಜು ಶುಲ್ಕ ಕಟ್ಟಲು ಇಟ್ಟುಕೊಂಡಿದ್ದ ಹಣವನ್ನು ದಂಡವಾಗಿ ನೀಡಲು ಮುಂದಾದೆ. ಈ ಹಣದ ಮಹತ್ವವನ್ನು ಹೇಳಿ ಕಣ್ಣೀರು ಹಾಕಿ ಬಿಟ್ಟೆ. ತಾಯಿ ರೀತಿಯಲ್ಲಿಯೇ ನನ್ನನ್ನು ಸಂತೈಸಿ ಬುದ್ದಿವಾದವನ್ನು ಪಿಎಸ್‌ಐ ಮೇಡಂ ಹೇಳಿದರು. ಮುಂದೆ ಈರಿ ಮಾಡುವುದಿಲ್ಲ. ಸಂಚಾರ ನಿಯಮ ಪಾಲಿಸುವುದಾಗಿ ಪೊಲೀಸ್‌ ಅಧಿಕಾರಿಗಳಿಗೆ ಹೇಳಿ ಬಂದೆ ಎಂದು ವಿದ್ಯಾರ್ಥಿ ತನಗೆ ಆದ ಅನುಭವ ಹೇಳಿಕೊಂಡ.

ಎಲ್ಲೆಡೆ ಕಾನೂನು. ನಿಯಮ ಮುರಿಯವುದು ನಮ್ಮಲ್ಲಿ ಕಂಡು ಬರುತ್ತದೆ. ಸಂಚಾರ ದಂಡ ವಿಧಿಸುವ ಪ್ರಮಾಣವೂ ಏರಿಕೆಯಾಗಿದೆ. ಹೀಗಿದ್ದರೂ ಇಲಕಲ್‌ನಲ್ಲಿ ವಿದ್ಯಾರ್ಥಿ ತ್ರಿಬಲ್‌ ರೈಡಿಂಗ್‌ನಲ್ಲಿ ಬಂದದ್ದನ್ನು ಪೊಲೀಸರು ಹಿಡಿದರು. ದಂಡ ಕಟ್ಟಲು ಹೇಳಿದರು. ಆಗ ಅಲ್ಲಿ ನಡೆದದ್ದೇ ಬೇರೆ. ಪೊಲೀಸ್‌ ಅಧಿಕಾರಿ ಮೇಷ್ಟ್ರ ರೀತಿ ತಿಳಿ ಹೇಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

Whats_app_banner