ಕನ್ನಡ ಸುದ್ದಿ  /  ಕರ್ನಾಟಕ  /  Bagalkote Election Result: ಬಾಗಲಕೋಟೆಯಲ್ಲಿ ಪಿಸಿ ಗದ್ದಿಗೌಡರ್‌ಗೆ ಗೆಲುವಿನ ಗದ್ದುಗೆ, ಸಂಯುಕ್ತ ಶಿವಾನಂದ್‌ಗೆ ಸೋಲು

Bagalkote Election Result: ಬಾಗಲಕೋಟೆಯಲ್ಲಿ ಪಿಸಿ ಗದ್ದಿಗೌಡರ್‌ಗೆ ಗೆಲುವಿನ ಗದ್ದುಗೆ, ಸಂಯುಕ್ತ ಶಿವಾನಂದ್‌ಗೆ ಸೋಲು

ಬಾಗಲಕೋಟೆ ಲೋಕಸಭಾ ಚುನಾವಣಾ ಫಲಿತಾಂಶ 2024: ಸತತ ಐದು ಬಾರಿ ಗೆದ್ದಿರುವ ಬಿಜೆಪಿಯ ಪಿಸಿ ಗದ್ದಿಗೌಡರ ಈ ಬಾರಿಯೂ ಕಾಂಗ್ರೆಸ್‌ನ ಸಂಯುಕ್ತ ಶಿವಾನಂದ ಪಾಟೀಲ್‌ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. Bagalkote Lok Sabha MP Election 2024 Result.

ಬಾಗಲಕೋಟೆ ಲೋಕಸಭಾ ಚುನಾವಣಾ ಫಲಿತಾಂಶ 2024
ಬಾಗಲಕೋಟೆ ಲೋಕಸಭಾ ಚುನಾವಣಾ ಫಲಿತಾಂಶ 2024

ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಇದೇ ಸಮಯದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಫಲಿತಾಂಶವು ದೇಶದ ಗಮನ ಸೆಳೆದಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಆರಂಭದಲ್ಲಿ ಹತ್ತು ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯಬೇರಿ ದಾಖಲಿಸಿತ್ತು. ಕಾಂಗ್ರೆಸ್‌ನ ಭದ್ರಕೋಟೆಯಾಗಿ ಬಾಗಲಕೋಟೆ ಹೆಸರು ಮಾಡಿತ್ತು. ಆದರೆ, ಕಳದ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಬಿಜೆಪಿ ಪಾಲಾಗಿತ್ತು. ಇದೀಗ ಬಿಜೆಪಿಯ ಭದ್ರಕೋಟೆಯೆಂದೇ ಬಿಂಬಿತವಾಗಿರುವ ಇಲ್ಲಿ ಸತತ ಐದು ಬಾರಿ ಗೆದ್ದಿರುವ ಬಿಜೆಪಿಯ ಪಿಸಿ ಗದ್ದಿಗೌಡರ (PC Gaddigoudar) ಮತ್ತು ಕಾಂಗ್ರೆಸ್‌ನ ಸಂಯುಕ್ತ ಶಿವಾನಂದ ಪಾಟೀಲ್‌ (Samyukta Shivanand Patil) ನಡುವಿನ ಲೋಕಸಭಾ ಚುನಾವಣಾ ಹಣಾಹಣಿ ನಡೆದಿದೆ. ಪಿಸಿ ಗದ್ದಿ ಗೌಡರ ಇಲ್ಲಿ ಸತತ ನಾಲ್ಕು ಬಾರಿ ಗೆದ್ದಿದ್ದಾರೆ. ಈ ಬಾರಿ ಸೋತರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಗದ್ದಿಗೌಡರ ಘೋಷಿಸಿದ್ದರು. ಇದೀಗ ಲೋಕಸಭಾ ಚುನಾವಣೆಯ ಮತಎಣಿಕೆ ನಡೆಯುವ ಸಂದರ್ಭದಲ್ಲಿ ಮುನ್ನಡೆ, ಹಿನ್ನಡೆಯ ನಡುವೆ ಅಂತಿಮ ಫಲಿತಾಂಶ ತಿಳಿದುಬಂದಿದೆ.

ಟ್ರೆಂಡಿಂಗ್​ ಸುದ್ದಿ

ಬಾಗಲಕೋಟೆ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಬಾಗಲಕೋಟೆ ಲೋಕಸಭಾ ಕ್ಷೇತ್ರ

ಸಂಯುಕ್ತ ಶಿವಾನಂದ ಪಾಟೀಲ್‌(ಕಾಂಗ್ರೆಸ್‌): ಸೋಲು

ಪಿಸಿ ಗದ್ದಿಗೌಡರ (ಬಿಜೆಪಿ): ಗೆಲುವು

ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಪಿಸಿ ಗದ್ದಿಗೌಡರ ಪರಿಚಯ

14ನೇ ಲೋಕಸಭಾ ಅಂದರೆ 2004-09ರಲ್ಲಿ ಪ್ರಥಮ ಬಾರಿ ಸಂಸದರಾಗಿ ಆಯ್ಕೆಯಾದರು. ನಂತರ 2009 ರಲ್ಲಿ ಪುನಃ ಸಂಸದರಾಗಿ ಆಯ್ಕೆಯಾದರು. ನಂತರ ನಡೆದ 2014ನೇ ಸಾಲಿನಲ್ಲಿಯೂ ವಿಜಯಶಾಲಿಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾದಿಸಿದರು. ನಂತರ 2019ರ ಚುನಾವಣೆಯಲ್ಲಿಯೂ ಬಿಜೆಪಿಯಿಂದ ಮರು ಆಯ್ಕೆಯಾಗಿ ಒಟ್ಟು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಪಿ.ಸಿ. ಗದ್ದಿಗೌಡರ ಅವರ ಹೆಸರಿಲ್ಲಿದೆ. ಇವರ ಸಂಪೂರ್ಣ ಪ್ರೊಫೈಲ್‌ ಇಲ್ಲಿದೆ ಓದಿ.

ಚುನಾವಣಾ ಕಣ: ಬಾಗಲಕೋಟೆ ಲೋಕಸಭಾ ಕ್ಷೇತ್ರ

ಬಾಗಲಕೋಟೆ ಲೋಕಸಭಾ ಕ್ಷೇತ್ರವು ದೇಶದ ಗಮನ ಸೆಳೆದ ಕ್ಷೇತ್ರ. 1980ರಲ್ಲಿ ಇಲ್ಲಿ ವಿರೇಂದ್ರ ಪಾಟೀಲ ಗೆಲುವು ಪಡೆದರು. 1991ರಲ್ಲಿ ಜನತಾ ದಳದಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಸ್ಪರ್ಧಿಸಿ ಸೋತಿದ್ದರು. ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡರ ಗೆಲುವು ಪಡೆದಿದ್ದರು. ವಿರೇಂದ್ರ ಪಾಟೀಲ, ಸಿದ್ದು ನ್ಯಾಮಗೌಡರು ಕೇಂದ್ರದಲ್ಲಿ ಸಚಿವರಾಗಿದ್ದರು. ಈ ಕ್ಷೇತ್ರದಲ್ಲಿ ಲಿಂಗಾಯತ ಸಮಾಜ ಪ್ರಾಬಲ್ಯ ಪಡೆದಿದೆ. ಹದಿನಾರು ಬಾರಿ ವೀರಶೈವ ಲಿಂಗಾಯತರೇ ಇಲ್ಲಿ ಆಯೆಕಯಾಗಿದ್ದು, ಒಂದು ಬಾರಿ ಕುರುಬ ಸಮಾಜದವರು ಆಯ್ಕೆಯಾಗಿದ್ದರು.

ಟಿ20 ವರ್ಲ್ಡ್‌ಕಪ್ 2024