Kannada News  /  Karnataka  /  Bailu Mudukere Mane House Warming: 300 Year Old House Renovation; House Warming On January 8 At Kandavara Kinnikambala Mangaluru
ಬೈಲುಮೂಡುಕರೆ ಮನೆತನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೆಡ್ಯೆ ಮಂಜುನಾಥ ಭಂಡಾರಿ ನವೀಕೃತ ಮನೆಯ ಗೃಹ ಪ್ರವೇಶದ ಕುರಿತ ಸುದ್ದಿಗೋಷ್ಠಿ ನಡೆಸಿದರು.
ಬೈಲುಮೂಡುಕರೆ ಮನೆತನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೆಡ್ಯೆ ಮಂಜುನಾಥ ಭಂಡಾರಿ ನವೀಕೃತ ಮನೆಯ ಗೃಹ ಪ್ರವೇಶದ ಕುರಿತ ಸುದ್ದಿಗೋಷ್ಠಿ ನಡೆಸಿದರು.

Bailu Mudukere Mane House Warming: 300 ವರ್ಷ ಹಳೆಯ ಮನೆ ನವೀಕರಣ; ಜ.8ಕ್ಕೆ ಗೃಹ ಪ್ರವೇಶದ ಸಂಭ್ರಮ

28 December 2022, 12:38 ISTHT Kannada Desk
28 December 2022, 12:38 IST

Bailu Mudukere House Warming: ಬೈಲು ಮೂಡುಕೆರೆ ಮನೆಗೆ 300 ವರ್ಷಗಳ ಇತಿಹಾಸ. ಜನವರಿ 8ಕ್ಕೆ ನವೀಕೃತ ಮನೆಯ ಗೃಹಪ್ರವೇಶದ ಸಂಭ್ರಮ. 

ಸುರತ್ಕಲ್: ಬೈಲು ಮೂಡುಕೆರೆ ಮನೆಗೆ 300 ವರ್ಷಗಳ ಇತಿಹಾಸವಿದೆ. ಈ ಮನೆಯ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಜನವರಿ 8ಕ್ಕೆ ಸಂಭ್ರಮದ ಗೃಹ ಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬೈಲುಮೂಡುಕರೆ ಮನೆತನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೆಡ್ಯೆ ಮಂಜುನಾಥ ಭಂಡಾರಿ ಬೈಲುಮೂಡುಕರೆ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೈಲುಮೂಡುಕರೆ ದಿ ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಜನವರಿ 8ರಂದು ಪೂರ್ವಾಹ್ನ 11.30ಕ್ಕೆ ಬೈಲುಮೂಡುಕರೆ ಮನೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ನ ಡಾ| ಎಂ. ಮೋಹನ್ ಆಳ್ವ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀ ದೇವಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಮಂಜುನಾಥ ಭಂಡಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶೆಡ್ಯೆ ಮಂಜುನಾಥ್ ಭಂಡಾರಿ ಬೈಲು ಮೂಡುಕೆರೆ, ಹರೀಶ್ ಶೆಟ್ಟಿ, ದೇವದಾಸ ನಾಯ್ಕ್,ಸತೀಶ್ ಆಳ್ವ, ಭುಜಂಗ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬೈಲು ಮೂಡುಕರೆ ಕುಟುಂಬದ ಹಿನ್ನೆಲೆ

ಬೈಲು ಮೂಡುಕೆರೆ ಮನೆಗೆ 300 ವರ್ಷ ಮೇಲ್ಪಟ್ಟ ಇತಿಹಾಸವಿದೆ. ಈ ಮನೆಯನ್ನು 17ನೇ ಶತಮಾನದ ಅಂತ್ಯದಲ್ಲಿ ನಿರ್ಮಿಸಿದ್ದಾಗಿ ತಿಳಿದುಬರುತ್ತದೆ. ಪ್ರಕೃತ ಭೂಮಿಗಳ ದಾಖಲೆಗಳನ್ನು ಪರಿಶೀಲಿಸಿದಾಗ ಮತ್ತು ಕುಟುಂಬಿಕರ ಸಂತತಿ ನಕ್ಷೆಯನ್ನು ಗಮನಿಸಿದಾಗ, ಸ್ಮರಣೆ ಮತ್ತು ಸ್ಪುರಣೆಗಳಿಂದ ತಿಳಿದು ಬಂದಂತೆ ಅಳಿಯ ಸಂತಾನ ಪದ್ಧತಿಯನ್ನು ಆಚರಿಸಿಕೊಂಡು ಬಂದ ಈ ಕುಟುಂಬದ ಹಿರಿಯ ವ್ಯಕ್ತಿ ತೌಡ ಶೆಟ್ಟಿ ಯಾನೆ ಕಾಂತಪ್ಪ ಶೆಟ್ಟಿ. ಇವರ ಸಹೋದರಿ ಲಕ್ಷ್ಮಿ ಸಂತಾನದವರಿಂದ ಈ ಕುಟುಂಬವು ಮುಂದುವರಿದಂತಿದೆ.

ಬಂಟ ಸಮಾಜದಲ್ಲಿ ಬೈಲು ಮೂಡುಕೆರೆ ಕುಟುಂಬಕ್ಕೆ ಪ್ರತಿಷ್ಠಿತ ಸ್ಥಾನವಿದೆ. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಈ ಕುಟುಂಬ ಸದಸ್ಯರು ಈಗ ಗಡಿನಾಡು ಕೇರಳದಿಂದ ಹಿಡಿದು ಉತ್ತರ ಬೊಂಬಾಯಿ ತನಕ ನೆಲೆಕಂಡುಕೊಂಡಿದ್ದಾರೆ.

ಬಂಟ ಸಮಾಜದ ಪ್ರತಿಷ್ಠಿತ ಮನೆತನಗಳಾಗಿದ್ದ ಕೊಡಿಯಾಲ್ ಗುತ್ತು, ಜಪ್ಪು ಗುಡ್ಡೆ ಗುತ್ತು, ಪುತ್ತಿಗೆ ಗುತ್ತು ಮುಂಡುದೆಗುತ್ತು, ಕೂರಿಯಾಳ, ಕುಳ, ಬೆಳ್ಳಿಪಾಡಿ, ಹಂದಾಡಿ ತೆಂಕುಮನೆ, ಅಮುಣಿಂಜೆ ಗುತ್ತು, ಭಾರಿಂಜೆ, ಮೂಡುಕರೆ ಗುತ್ತು, ಸೊಂತಾಡಿ ಮನೆತನ, ಕಂದಾವರ ಬಾಳಿಕೆಗಳೊಂದಿಗೆ ನೆಂಟಸ್ತಿಕೆ ಈ ಕುಟುಂಬಕ್ಕಿದೆ.

ಇದರಲ್ಲಿ ಮುಖ್ಯವಾಗಿ ಬೈಲು ಮಾಗಣೆಯಲ್ಲಿ ಹೆಸರು ಪಡೆದಿರುವ ಬೈಲ ಬಂಗೇರಣ್ಣ ಕುಲದ ಮನೆಗಳಾದ ಬೈಲು ಮೇಗಿನ ಮನೆ, ಹೊಸ ಮನೆಗಳಿಗೆ ಅಂದಿನಿಂದ ಇಂದಿನವರೆಗೂ ತಲೆತಲಾಂತರ ಎಂಬಂತೆ ಸಂಬಂಧವನ್ನು ಬೆಳೆಸಿಕೊಂಡು ಕರಾವಳಿಯ ಏಳು ಗ್ರಾಮಗಳಲ್ಲಿ ಸಂಪತ್ತನ್ನು ವೃದ್ಧಿಸಿ ಅಲ್ಲಲ್ಲಿ ನೆಲೆಗಳನ್ನು ಸ್ಥಾಪಿಸಿಕೊಂಡರು.

3 ಶತಮಾನಗಳ ಇತಿಹಾಸದ ಬೈಲು ಮೂಡುಕೆರೆ ಮನೆ ಹೇಗಿದೆ? ಇತಿಹಾಸ ಏನು? ಇಲ್ಲಿದೆ ಫೋಟೋ ವಿವರ

Bailu Mudukere Mane: 3 ಶತಮಾನಗಳ ಇತಿಹಾಸ ಇರುವ ಬೈಲು ಮೂಡುಕೆರೆ ಮನೆ ನವೀಕರಣಗೊಂಡಿದೆ. ಜನವರಿ 8ರಂದು ನವೀಕೃತ ಮನೆಯ ಗೃಹ ಪ್ರವೇಶ. ಏತಮೊಗರು ದೊಡ್ಡಮನೆ ಖ್ಯಾತಿಯ ಈ ಮನೆಯ ಇತಿಹಾಸದ ಕಡೆಗೊಂದು ಇಣುಕುನೋಟ ಇಲ್ಲಿದೆ. ಕ್ಲಿಕ್‌ ಮಾಡಿ.