ಬಂಡೀಪುರದಲ್ಲಿ ಬೆಳಿಗ್ಗೆ ವಾಹನ ಸಂಚಾರ ಇದ್ದ ಮೇಲೆ ಮಧ್ಯರಾತ್ರಿಗೂ ಏಕೆ ಬೇಕು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರಶ್ನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬಂಡೀಪುರದಲ್ಲಿ ಬೆಳಿಗ್ಗೆ ವಾಹನ ಸಂಚಾರ ಇದ್ದ ಮೇಲೆ ಮಧ್ಯರಾತ್ರಿಗೂ ಏಕೆ ಬೇಕು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರಶ್ನೆ

ಬಂಡೀಪುರದಲ್ಲಿ ಬೆಳಿಗ್ಗೆ ವಾಹನ ಸಂಚಾರ ಇದ್ದ ಮೇಲೆ ಮಧ್ಯರಾತ್ರಿಗೂ ಏಕೆ ಬೇಕು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರಶ್ನೆ

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಮಾಡುವ ಪ್ರಯತ್ನಕ್ಕೆ ಬಲವಾದ ವಿರೋಧ ವ್ಯಕ್ತವಾಗಿದ್ದು, ಇದಕ್ಕೆ ಮೈಸೂರು ರಾಜವಂಶಸ್ಥರು ದನಿಗೂಡಿಸಿದ್ದಾರೆ.

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಪ್ರಯತ್ನದ ವಿರೋಧ ಹೋರಾಟಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ದನಿಗೂಡಿಸಿದ್ದಾರೆ.
ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಪ್ರಯತ್ನದ ವಿರೋಧ ಹೋರಾಟಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ದನಿಗೂಡಿಸಿದ್ದಾರೆ.

ಗುಂಡ್ಲುಪೇಟೆ: ಕರ್ನಾಟಕ ಹಾಗೂ ಕೇರಳ, ತಮಿಳುನಾಡಿನ ಭಾಗದ ಬಂಡೀಪುರ ಅರಣ್ಯದಲ್ಲಿ ದಶಕದಿಂದಲೂ ರಾತ್ರಿ ವೇಳೆ ವೇಳೆ ಸಂಚಾರ ನಿಷೇಧವಿದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಸಂಚಾರಕ್ಕೆ ಅವಕಾಶವಿದೆ. ಆದರೆ ರಾತ್ರಿ ಸಂಚಾರ ನಿಷೇಧ ತೆಗೆದು ಹಾಕಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ಕೇರಳದ ಭಾಗದಲ್ಲಿ ನಡೆದಿದೆ. ಆದರೆ ಕರ್ನಾಟಕ ಭಾಗದವರು ಮಾತ್ರವಲ್ಲದೇ ಕೇರಳ ಕಡೆಯ ಪರಿಸರಪ್ರೇಮಿಗಳು ಇದನ್ನು ಬಲವಾಗಿ ವಿರೋಧಿಸಿ ಹೋರಾಟವನ್ನೂ ನಡೆಸಿದ್ದಾರೆ. ಎಲ್ಲೆಡೆಯಿಂದಲೂ ಇದಕ್ಕೆ ವಿರೋಧವೇ ವ್ಯಕ್ತವಾಗುತ್ತಿದೆ. ವನ್ಯಜೀವಿಗಳು ರಾತ್ರಿಯಾದರೂ ಸಹಜವಾಗಿ ರಸ್ತೆ ದಾಟಲಿ. ಅವುಗಳ ಬದುಕಿಗೂ ಒಂದಷ್ಟು ಖಾಸಗಿತನ ಎನ್ನುವುದು ಬೇಕು ಎನ್ನುವುದು ಪರಿಸರ ಪ್ರಿಯರ ಅಭಿಪ್ರಾಯ. ಇದಕ್ಕೆ ಮೈಸೂರಿನ ರಾಜವಂಶಸ್ಥರಾಗಿರುವ ಪ್ರಮೋದಾದೇವಿ ಒಡೆಯರ್‌ ಅವರೂ ದನಿಗೂಡಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಿಂದ ಕೇರಳಕ್ಲೆ ರಾತ್ರಿ ಸಂಚಾರ ನಿಷೇಧವಿದ್ದು, ಯಾವುದೇ ಕಾರಣಕ್ಕೂ ತೆರವಾಗಬಾರದು. ಅಂತಹ ಚಿಂತನೆಗಳಿದ್ದರೆ ನನ್ನ ವಿರೋಧವಿದೆ ಎಂದು ರಾಜವಂಶ್ಥೆ ಪ್ರಮೋದಾದೇವಿ ಒಡೆಯರ್ ಪ್ರತಿಪಾದಿಸಿದರು.

ಈಗಾಗಲೇ ರಾತ್ರಿ ಒಂಬತ್ತು ಗಂಟೆಯವರೆಗೆ ವಾಹನಗಳ ಸಂಚಾರಕ್ಕೆ ಅವಕಾಶವಿದ್ದು ಬೆಳಿಗ್ಗೆಯಿಂದ ಸಂಜೆಯವರೆಗೆ ಅವಕಾಶವಿದ್ದ ಮೇಲೆ ಮಧ್ಯರಾತ್ರಿ ಯಾಕೆ ಅವಕಾಶ ಕೊಡಬೇಕು. ರಾತ್ರಿ ಒಂಬತ್ತುಗಂಟೆ ಆದ ಮೆಲೆ ಯಾರು ಓಡಾಡುತ್ತಾರೆ. ಇದರಿಂದ ಅರಣ್ಯ ಮತ್ತು ಪ್ರಾಣಿ ಸಂಕುಲಕ್ಕೆ ಸಮಸ್ಯೆಯಾಗುತ್ತದೆ‌. ಹಾಗಾಗಿ ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಮಾಡಬಾರದು, ನಿಷೇಧ ಮುಂದುವರೆಯಬೇಕು ಎನ್ನುವುದು ಅವರ ಸಲಹೆ.

ಕಳೆದ ಒಂದು ವರ್ಷದಿಂದ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಪ್ರಯತ್ನ ನಡೆದಿವೆ. ಅದರಲ್ಲೂ ಕೇರಳದಲ್ಲಿ ಲೋಕಸಭೆ ಚುನಾವಣೆ ನಡೆದಾಗಿನಿಂದಲೂ ಹೆಚ್ಚಿದೆ. ಕೇರಳದ ವಯನಾಡು ಸಂಸದರಾಗಿರುವ ಪ್ರಿಯಾಂಕ ಗಾಂಧಿ ಅವರು ಚುನಾವಣೆ ವೇಳೆ ಅಲ್ಲಿನ ಜನರಿಗೆ ರಾತ್ರಿ ವಾಹನ ಸಂಚಾರ ತೆರವುಗೊಳಿಸುವ ಭರವಸೆ ನೀಡಿದ್ದರು. ಇದಾದ ನಂತರ ಸಚಿವರು ನೀಡಿದ ಪ್ರತಿಕ್ರಿಯೆಗಳು ವಿವಾದ ಹುಟ್ಟು ಹಾಕಿವೆ. ಕರ್ನಾಟಕ ಭಾಗದವರಂತೂ ಪ್ರಬಲವಾಗಿಯೇ ಇದನ್ನು ವಿರೋಧಿಸಿದ್ದಾರೆ. ಈ ಭಾನುವಾರ ಬಂಡೀಪುರದಲ್ಲಿ ಭಾರೀ ಪ್ರತಿಭಟನೆಯನ್ನೇ ನಡೆಸಲಾಗಿತ್ತು. ಅಲ್ಲದೇ ಮೈಸೂರು ಹಾಗೂ ಕೊಡಗು ಸಂಸದರಾಗಿರುವ ಯದುವೀರ್‌ ಒಡೆಯರ್‌ ಅವರೂ ಕೂಡ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner