ಬೆಂಗಳೂರಲ್ಲಿ ಬಿಎಲ್‌ಆರ್‌ ಹಬ್ಬಕ್ಕೆ ತಯಾರಿ, 500 ಕಲಾವಿದರಿಂದ 16 ದಿನ ನಿರಂತರ ಕಾರ್ಯಕ್ರಮ, ನವೆಂಬರ್‌ 30ಕ್ಕೆ ಚಾಲನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಬಿಎಲ್‌ಆರ್‌ ಹಬ್ಬಕ್ಕೆ ತಯಾರಿ, 500 ಕಲಾವಿದರಿಂದ 16 ದಿನ ನಿರಂತರ ಕಾರ್ಯಕ್ರಮ, ನವೆಂಬರ್‌ 30ಕ್ಕೆ ಚಾಲನೆ

ಬೆಂಗಳೂರಲ್ಲಿ ಬಿಎಲ್‌ಆರ್‌ ಹಬ್ಬಕ್ಕೆ ತಯಾರಿ, 500 ಕಲಾವಿದರಿಂದ 16 ದಿನ ನಿರಂತರ ಕಾರ್ಯಕ್ರಮ, ನವೆಂಬರ್‌ 30ಕ್ಕೆ ಚಾಲನೆ

ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ ಸಾಂಸ್ಕೃತಿಕ ಕಲರವಕ್ಕೆ ವೇದಿಕೆಯಾಗಿರುವ ಬಿಎಲ್‌ಆರ್‌ ಹಬ್ಬ 2024 ನವೆಂಬರ್‌ 30ರಂದು ಚಾಲನೆಗೊಳ್ಳಲಿದೆ. ಈ ವರ್ಷ ಏನೇನು ಚಟುವಟಿಕೆ ಇವೆ.

 ಬಿಎಲ್‌ಆರ್‌ ಹಬ್ಬ 2024 ಈ  ತಿಂಗಳ 30ರಂದು ಚಾಲನೆಗೊಳ್ಳಲಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.
ಬಿಎಲ್‌ಆರ್‌ ಹಬ್ಬ 2024 ಈ ತಿಂಗಳ 30ರಂದು ಚಾಲನೆಗೊಳ್ಳಲಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರು: ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ವತಿಯಿಂದ ಆಯೋಜಿಸಲಾಗಿರುವ ಬಹುನಿರೀಕ್ಷಿತ ಬಿಎಲ್‌ಆರ್‌ಹಬ್ಬವು ಇದೇ ನವೆಂಬರ್‌ 30 ರಿಂದ ಆರಂಭವಾಗಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರಿಂದ "ನಮ್ಮ ಜಾತ್ರೆ" ಉದ್ಘಾಟನಾ ಸಮಾರಂಭದ ಮೂಲಕ ಅದ್ಧೂರಿ ಚಾಲನೆ ದೊರೆಯಲಿದೆ. ನವೆಂಬರ್‌ 30ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗ "ಬಿಎಲ್‌ಆರ್‌ ಹಬ್ಬ"ದ ಭಾಗವಾಗಿ ನಡೆಯಲಿರುವ "ನಮ್ಮ ಜಾತ್ರೆ"ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಈ ಮೂಲಕ ಕರ್ನಾಟಕದ ಶ್ರೀಮಂತ ಪರಂಪರೆ, ಕಲೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ. ಅಂದು ರಾಜ್ಯಾದ್ಯಂತ 50 ವೈವಿಧ್ಯಮಯ ಜಾನಪದ ನೃತ್ಯ ತಂಡಗಳಿಂದ 500 ಕ್ಕೂ ಹೆಚ್ಚು ಜಾನಪದ ನೃತ್ಯಗಾರರ ಸಮ್ಮೋಹನಗೊಳಿಸುವ ಪ್ರದರ್ಶನದೊಂದಿಗೆ ಉತ್ಸವ ಪ್ರಾರಂಭಗೊಳ್ಳಲಿದೆ. ವಿಶೇಷವಾಗಿ ಸಂಯೋಜಿಸಿದ ಸಂಗೀತಕ್ಕೆ ಹೊಂದಿಸಲಾದ ಈ ಪ್ರದರ್ಶನಗಳು ರಾಜ್ಯದ ನೃತ್ಯ ಪ್ರಕಾರಗಳ ಶ್ರೀಮಂತ ವೈವಿಧ್ಯತೆಯ ರೂಪಗಳನ್ನು ಅನಾವರಣಗೊಳಿಸಲಿವೆ.

ವಿಧಾನಸೌಧದ ಭವ್ಯವಾದ ಮೆಟ್ಟಿಲುಗಳ ಮೇಲೆ ಈ ದೃಶ್ಯವನ್ನು ವೀಕ್ಷಿಸಲು ಸಾಂಸ್ಕೃತಿಕ ಪ್ರಿಯರನ್ನು ಆಹ್ವಾನಿಸಲಾಗಿದ್ದು, ನಮ್ಮ ಪರಂಪರೆ, ಆಚರಣೆಗಳನ್ನು ಕಣ್ತುಂಬಿಸಿಕೊಳ್ಳಲು ಅವಕಾಶ ನೀಡಲಿದೆ.

ಅರ್ಧ ಕಿ.ಮಿ ಮೆರವಣಿಗೆ

ಉದ್ಘಾಟನೆ ಹಾಗೂ ಕಲಾ ಪ್ರದರ್ಶನ ಬಳಿಕ ಅರ್ಧ ಕಿಲೋಮೀಟರ್ ಉದ್ದದ ಭವ್ಯ ಮೆರವಣಿಗೆಯ ನಡೆಯಲಿದೆ. ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಅತ್ಯುನ್ನತ ಅಂಶಗಳನ್ನು ಈ ಮೆರವಣಿಗೆ ವೇಳೆ ಪ್ರರ್ಶಿಸಲಾಗುತ್ತದೆ. ಮೆರವಣಿಗೆಯುದ್ದಕ್ಕೂ ರೋಮಾಂಚಕ ನೃತ್ಯಗಾರರು, ಗಾಯಕರು, ಎತ್ತಿನ ಬಂಡಿಗಳು ಮತ್ತು ಹೂವಿನ ಪಲ್ಲಕ್ಕಿಕ್ಕೆ ಸಾಗಲಿದೆ. ಈ ಮೆರವಣಿಗೆಯ ಮತ್ತೊಂದು ವಿಶೇಷತೆಯೆಂದರೆ ಕರ್ನಾಟಕದ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಲ್ಲಿಸಲಾಗಿದೆ.

ಭವ್ಯವಾದ ಮೆರವಣಿಗೆಯು ಬೆಂಗಳೂರಿನ ಹೃದಯಭಾಗದಲ್ಲಿ ಸಂಚರಿಸಿ ಎಂ.ಜಿ. ರಸ್ತೆಯಲ್ಲಿ ಮುಕ್ತಾಯಗೊಳ್ಳಲಿದೆ. ರಾತ್ರಿ 10 ಗಂಟೆವರೆಗೂ ಜಾನಪದ ಸಂಗೀತ ಮತ್ತು ನೃತ್ಯದ ನೇರ ಪ್ರದರ್ಶನಗಳೊಂದಿಗೆ ಮೆಟ್ರೋ ರಂಗೋಲಿ ಬೌಲೆವಾರ್ಡ್‌ವರೆಗೂ ನಡೆಯಲಿದೆ.

ಸಂಘಟಕರು ಹೇಳೋದೇನು

ಬಿಎಲ್‌ಆರ್ ಹಬ್ಬಾದ ಮುಖ್ಯ ಸಂಚಾಲಕ ವಿ. ರವಿಚಂದರ್ ಮಾತನಾಡಿ, “ಬಿಎಲ್‌ಆರ್ ಹಬ್ಬ ಕೇವಲ ಒಂದು ಹಬ್ಬವಲ್ಲ, ಇದು ಬೆಂಗಳೂರಿನ ಸಾರವನ್ನು ಹಿಡಿದಿಟ್ಟುಕೊಳ್ಳುವ ಚಳುವಳಿಯಾಗಿದೆ. ನಮ್ಮ ಜಾತ್ರೆಯ ಮೂಲಕ, ಅಭಿವೃದ್ಧಿ ಹೊಂದುತ್ತಿರುವ ನಗರದ ಆಳವಾದ ಬೇರೂರಿರುವ ಸಂಪ್ರದಾಯಗಳ ಮೇಲೆ ಬೆಳಕನ್ನು ಚೆಲ್ಲುವ ಗುರಿ ಹೊಂದಿದ್ದೇವೆ. ನಮ್ಮೊಂದಿಗೆ ಸಹಕರಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾವು ಕೃತಜ್ಞರಾಗಿರುತ್ತೇವೆ, ಹಬ್ಬಕ್ಕೆ ಈ ಅದ್ಭುತವಾದ ಚಾಲನೆ ನಾವು ಆಭಾರಿಯಾಗಿದ್ದೇವೆ ಎಂದು ಹೇಳಿದರು.

ಅನ್‌ಬಾಕ್ಸಿಂಗ್‌ಬಿಎಲ್‌ಆರ್‌ ಫೌಂಡೇಶನ್ ಸಿಇಒ ಮಾಲಿನಿ ಗೋಯಲ್‌ ಮಾತನಾಡಿ, ಬಿಎಲ್‌ಆರ್ ಹಬ್ಬಾದ ಮೂಲಕ, ರಾಜ್ಯದ ಪರಂಪರೆ, ಶ್ರೀಮಂತ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ನಾಗರಿಕರಿಗೆ ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಮ್ಮ ಜಾತ್ರೆ ನಡೆಸುತ್ತಿರುವುದು ಇದಕ್ಕೆ ಇನ್ನಷ್ಟು ಪ್ರೋತ್ಸಹ ನೀಡಿದಂತೆ ಎಂದರು.

ಮಾಹಿತಿ ಇಲ್ಲಿ ಪಡೆಯಿರಿ

ಇನ್ನು, ಈ ಕಾರ್ಯಕ್ರಮವು ಆಧುನಿಕತೆಯೊಂದಿಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಾಮರಸ್ಯದಿಂದ ಸಂಯೋಜಿಸುವ ನಗರವಾಗಿ ಬೆಂಗಳೂರನ್ನು ಬೆಳೆಸಲು ಕಲ್ಪನೆ ಹೊಂದಿದೆ. ನವೆಂಬರ್ 30 ರಂದು ಸಂಜೆ 5 ಗಂಟೆಗೆ ನಮ್ಮ ಜಾತ್ರೆಯೊಂದಿಗೆ ಬಿಎಲ್‌ ಆರ್ ಹಬ್ಬ ಉದ್ಘಾಟನೆ ನಡೆಯಲಿದ್ದು, ಪ್ರತಿಯೊಬ್ಬರು ಪಾಲ್ಗೊಳ್ಳಬಹುದು. 16 ದಿನಗಳ ಬಿಎಲ್‌ ಆರ್ ಹಬ್ಬದ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಪ್ರತಿದಿನದ ಕಾರ್ಯಕ್ರಮಗಳ ವಿವರವನ್ನು https://blrhubba.in ವೆಬ್‌ಸೈಟ್ ನಲ್ಲಿ ನೇರವಾಗಿ ತಮ್ಮ ನೆಚ್ಚಿನ ಚಟುವಟಿಕೆಗಳನ್ನು ಬುಕ್ ಮಾಡಬಹುದು, ಬಿಎಲ್‌ ಆರ್ ಹಬ್ಬ ಬ್ಯಾನರ್ ಅಡಿಯಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಉಚಿತ ಮತ್ತು ಎಲ್ಲರಿಗೂ ಮುಕ್ತವಾಗಿವೆ. ಬಿಎಲ್‌ಆರ್‌ ಹಬ್ಬಾ ಫೆಸ್ಟಿವಲ್ ಪ್ರಾಯೋಜಕರಲ್ಲಿ ಗೋ ನೇಟಿವ್, ಝೆರೋಧಾ, ಮಣಿಪಾಲ್ ಫೌಂಡೇಶನ್ ಮತ್ತು ಪ್ರೆಸ್ಟೀಜ್ ಗ್ರೂಪ್, ಗೀತಾಂಜಲಿ ವಿಕ್ರಮ್ ಕಿರ್ಲೋಸ್ಕರ್, ಪ್ರೊಸಸ್ ಮತ್ತು ಕ್ವೆಸ್ ಕಾರ್ಪೊರೇಷನ್ ಸೇರಿವೆ.

Whats_app_banner