ಕನ್ನಡ ಸುದ್ದಿ  /  Karnataka  /  Bangalore Coimbatore Bangalore Vande Bharat Express Train Running Timings Changing From March 11 Kub

Vande Bharat Express:ಕೊಯಮತ್ತೂರು- ಬೆಂಗಳೂರು ವಂದೇ ಭಾರತ್‌ ರೈಲು ಸಮಯದಲ್ಲಿ ಬದಲಾವಣೆ, ಮಾರ್ಚ್‌ 11ರಿಂದ ಜಾರಿ

ಬೆಂಗಳೂರು ಹಾಗೂ ಕೊಯಮತ್ತೂರು ನಡುವೆ ಸಂಚರಿಸುವ ವಂದೇ ಭಾರತ್‌ ರೈಲು ಸಂಚಾರದ ಸಮಯವನ್ನು ಬದಲಾವಣೆ ಮಾಡಲಾಗಿದೆ.

ಕೊಯಮತ್ತೂರು ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾಗಲಿದೆ.
ಕೊಯಮತ್ತೂರು ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾಗಲಿದೆ.

ಬೆಂಗಳೂರು: ತಮಿಳುನಾಡಿನ ಕೊಯಮತ್ತೂರು ಹಾಗೂ ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮಾರ್ಚ್‌ 11ರಿಂದಲೇ ಹೊಸ ಸಂಚಾರ ಸಮಯ ಜಾರಿಗೆ ಬರಲಿದ. ಈ ಸಂಬಂಧ ದೆಹಲಿಯಲ್ಲಿ ನಡೆದ ಸಭೆಯಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಸಮಯ ಬದಲಾವಣೆ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ ಎಂದು ದಕ್ಷಿಣ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೊಯಮತ್ತೂರಿನಿಂದ ಹೊರಡು ಸಮಯ, ಬೆಂಗಳೂರು ತಲುಪಿ ಇಲ್ಲಿಂದ ಹೊರಡುವ ಹಾಗೂ ಕೊಯಮತ್ತೂರು ತಲುಪುವ ಸಮಯದಲ್ಲಿ ಹೊಂದಾಣಿಕೆ ಆಗುತ್ತಿರಲಿಲ್ಲ. ಇದರಲ್ಲಿ ಬದಲಾವಣೆ ಆಗಬೇಕು. ಕೊಯಮತ್ತೂರಿನಿಂದ ತಡವಾಗಿ ಹೊರಡಬೇಕು. ಬೆಂಗಳೂರಿನಿಂದಲೂ ಕೂಡ ಹೊರಡುವ ಸಮಯ ಬದಲಾಯಿಸಬೇಕು ಎನ್ನುವ ಒತ್ತಾಯಗಳು ಪ್ರಯಾಣಿಕರಿಂದ ಕೇಳಿ ಬಂದಿದ್ದವು. ಈ ಕಾರಣದಿಂದ ಸಮಯ ಬದಲಾವಣೆ ಮಾಡಲಾಗಿದೆ.

ಈ ಸಮಯ ಬದಲಾವಣೆಯಿಂದ ಕೊಯಮತ್ತೂರಿನಿಂದ ಹೊರಡುವವರು ಹಾಗೂ ಬೆಂಗಳೂರಿಗೆ ಬರುವವರಿಗೂ ಸಹಕಾರಿಯಾಗಲಿದೆ.ನಡುವಿನ ನಗರಗಳಿಂದ ಸಂಚರಿಸುವವರಿಗೆ ಉಪಯೋಗವಾಘಲಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ (ರೈಲು ಗಾಡಿ ಸಂಖ್ಯೆ20642) ಕೊಯಮತ್ತೂರಿನಿಂದ ಬೆಳಿಗ್ಗೆ 5ಕ್ಕೆ ಹೊರಡುತ್ತಿದೆ. ಮಾರ್ಚ್‌ 11ರಿಂದ ಇದು 2 ಗಂಟೆ 25 ನಿಮಿಷ ತಡವಾಗಿ ಹೊರಡಲಿದೆ. ಅಂದರೆ ಬೆಳಿಗ್ಗೆ 7:25 ಕ್ಕೆ ಕೊಯಮತ್ತೂರು ಬಿಡಲಿದೆ. ಬೆಳಿಗ್ಗೆ 11:30ಕ್ಕೆ ಬೆಂಗಳೂರಿಗೆ ಬರುತ್ತಿತ್ತು. ಇನ್ನು ಮುಂದೆ ಮಧ್ಯಾಹ್ನ 1:50ಕ್ಕೆ ಬೆಂಗಳೂರಿಗೆ ತಲುಪಲಿದೆ. ಅದೇ ರೀತಿ ಬೆಂಗಳೂರಿನಿಂದ ಈಗಲೂ ಮಧ್ಯಾಹ್ನ 1:40ಕ್ಕೆ ವಂದೇ ಭಾರತ್‌ ರೈಲು ಕೊಯಮತ್ತೂರು ಕಡೆಗೆ ಹೊರಡುತ್ತಿದೆ. ಇದು ಇನ್ನು ಮುಂದೆ ಮಧ್ಯಾಹ್ನ 2:20ಕ್ಕೆ ಹೊರಡಲಿದೆ. ರಾತ್ರಿ 8ಕ್ಕೆ ಬೆಂಗಳೂರು ತಲುಪುತ್ತಿದ್ದ ರೈಲು ಇನ್ನು ಮುಂದೆ ರಾತ್ರಿ 8:45ಕ್ಕೆ ಕೊಯಮತ್ತೂರು ತಲುಪಲಿದೆ.

ಕೊಯಮತ್ತೂರಿನಿಂದ ಹೊರಡುವ ರೈಲು ತಿರುಪ್ಪೂರು, ಈರೋಡ್‌, ಧರ್ಮಪುರಿ, ಹೊಸೂರು ಮಾರ್ಗದಲ್ಲಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡುವ ಈ ರೈಲು ಹೊಸೂರು, ಧರ್ಮಪುರಿ, ಈರೋಡ್‌, ತಿರುಪ್ಪೂರ್‌ಗಳಲ್ಲಿ ನಿಲ್ಲಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಕೊಯಮತ್ತೂರು ರೈಲು ಟಿಕೆಟ್‌ ದರವು ಚೇರ್‌ ಕಾರ್‌ಗೆ ಒಬ್ಬರಿಗೆ 1400 ರೂ. ಇದೆ. ಅದೇ ರೀತಿ ಎಕ್ಸಿಕ್ಯುಟಿವ್‌ ಕಾರ್‌ ಟಿಕೆಟ್‌ ದರ 2,355ರೂ. ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.