Bangalore Crime: ಖಾಸಗಿ ಕ್ಷಣಗಳಿಗೆ ಅಡ್ಡಿಪಡಿಸಿದ್ದಕ್ಕೆ ಸಿಟ್ಟು; ತನ್ನ ಪ್ರಿಯತಮೆಯ 3 ವರ್ಷದ ಮಗನನ್ನು ಕೊಂದ ಆರೋಪಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಖಾಸಗಿ ಕ್ಷಣಗಳಿಗೆ ಅಡ್ಡಿಪಡಿಸಿದ್ದಕ್ಕೆ ಸಿಟ್ಟು; ತನ್ನ ಪ್ರಿಯತಮೆಯ 3 ವರ್ಷದ ಮಗನನ್ನು ಕೊಂದ ಆರೋಪಿ ಬಂಧನ

Bangalore Crime: ಖಾಸಗಿ ಕ್ಷಣಗಳಿಗೆ ಅಡ್ಡಿಪಡಿಸಿದ್ದಕ್ಕೆ ಸಿಟ್ಟು; ತನ್ನ ಪ್ರಿಯತಮೆಯ 3 ವರ್ಷದ ಮಗನನ್ನು ಕೊಂದ ಆರೋಪಿ ಬಂಧನ

ತನ್ನ ಸಂಬಂಧದಲ್ಲಿ ಮಗು ಹಸ್ತಕ್ಷೇಪ ಮಾಡುತ್ತಿದೆ ಎಂದು ಸಿಟ್ಟಿಗೆದ್ದ ವ್ಯಕ್ತಿಯೊರ್ವ ತನ್ನ ಪ್ರಿಯತಮೆಯ 3 ವರ್ಷದ ಮಗನನ್ನ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಖಾಸಗಿ ಕ್ಷಣಗಳಿಗೆ ಅಡ್ಡಿಪಡಿಸಿದ್ದಕ್ಕೆ ಸಿಟ್ಟು; ತನ್ನ ಪ್ರಿಯತಮೆಯ 3 ವರ್ಷದ ಮಗನನ್ನು ಕೊಂದ ಆರೋಪಿ ಬಂಧನ
ಖಾಸಗಿ ಕ್ಷಣಗಳಿಗೆ ಅಡ್ಡಿಪಡಿಸಿದ್ದಕ್ಕೆ ಸಿಟ್ಟು; ತನ್ನ ಪ್ರಿಯತಮೆಯ 3 ವರ್ಷದ ಮಗನನ್ನು ಕೊಂದ ಆರೋಪಿ ಬಂಧನ

ಬೆಂಗಳೂರು: ಖಾಸಗಿ ಕ್ಷಣಗಳನ್ನು ಕಳೆಯುವಾಗ ಮಗು ಅಡ್ಡಿಪಡಿಸುತ್ತಿದ್ದಾನೆ ಎಂಬ ಕಾರಣಕ್ಕೆ ಪ್ರಿಯತಮೆಯ 3 ವರ್ಷದ ಬಾಲಕನನ್ನು ವ್ಯಕ್ತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಕೃತ್ಯವೆಸಗಿದ ಆರೋಪಿಯನ್ನು ಬೊಮ್ಮನಹಳ್ಳಿ ನಿವಾಸಿ ಮೈಕೆಲ್ ರಾಜ್ (30) ಎಂದು ಗುರುತಿಸಲಾಗಿದೆ. ಸಂಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ರೂಪೇನ ಅಗ್ರಹಾರದ ಎನ್‌ಜಿಆರ್ ಲೇಔಟ್‌ನ ವಿರಾಟ್ ನಗರ ನಿವಾಸಿ ಅಶ್ವಿನ್ (3) ಮೃತ ದುರ್ದೈವಿ. ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿಗಳು ಜುಲೈ 6 ರಂದು ಅಶ್ವಿನ್ ಮೇಲೆ ಎರಡು ಬಾರಿ ಹಲ್ಲೆ ನಡೆಸಿದ್ದಾರೆ. ಮಗು ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ (Bengaluru Crime).

ಮೃತ ಅಶ್ವಿನ್ ಅವರ ತಾಯಿ ರಮ್ಯಾ ಕುಮಾರಿ ಅವರು ಆರು ವರ್ಷಗಳ ಹಿಂದೆ ತನ್ನ ಅಕ್ಕನ ಪತಿ ಸತೀಶ್ ಅವರನ್ನು ಮದುವೆಯಾಗಿದ್ದರು. ವೈವಾಹಿಕ ಸಮಸ್ಯೆಗಳ ಕಾರಣದಿಂದ ರಮ್ಯಾ ಕೆಲವು ವರ್ಷಗಳ ಹಿಂದೆ ಸತೀಶ್ ಅವರಿಂದ ಬೇರೆಯಾಗಿ ರೂಪೇನ ಅಗ್ರಹಾರದಲ್ಲಿರುವ ತನ್ನ ಹೆತ್ತವರ ಮನೆಗೆ ವಾಪಸ್ ಬಂದಿದ್ದಾರೆ. ಇವರ ಮನೆಯ ಸಮೀಪದಲ್ಲೇ ಇಬ್ಬರು ಮಕ್ಕಳ ತಂದೆಯಾದ ಮೈಕೆಲ್ ರಾಜ್ ದ್ವಿಚಕ್ರ ವಾಹನ ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ರಾಜ್ ಅವರ ಗ್ಯಾರೇಜ್ ಮತ್ತು ರಮ್ಯಾ ಅವರ ಪೋಷಕರ ಮನೆ ಮುಂದೆಯೇ ಇತ್ತು. ಇಬ್ಬರ ನಡುವೆ ಪ್ರೀತಿಯಾಗಿದ್ದು, ಒಂದು ವರ್ಷದ ಹಿಂದೆ ಎನ್‌ಜಿಆರ್ ಲೇಔಟ್‌ನಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದು ಸಂಬಂಧವನ್ನು ಪ್ರಾರಂಭಿಸಿದ್ದರು.

ಜುಲೈ 6 ರಂದು ಸಂಜೆ ರಮ್ಯಾ ಲೈಟ್ ಬಲ್ಬ್ ಖರೀದಿಸಲು ಹೊರಗೆ ಹೋಗಿ ಬಂದಾಗ ಅಶ್ವಿನ್ ಮುಖದ ಮೇಲೆ ಗಾಯಗಳು ಕಂಡುಬಂದಿವೆ. ಆರೋಪಿ ರಾಜ್ ಮಗುವಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆ ರಾತ್ರಿ, ಅಶ್ವಿನ್ ಸ್ನಾನಗೃಹವನ್ನು ಬಳಸಲು ಎಚ್ಚರಗೊಂಡು ನೆಲದ ಮೇಲೆ ಉಳಿದಿದ್ದ ಜೋಳವನ್ನು ತಿಂದಿದ್ದಾನೆ. ಇದರಿಂದ ಕೋಪಗೊಂಡ ರಾಜ್ ಮತ್ತೆ ಮಗುವಿಗೆ ಮತ್ತೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವರದಿಯಾಗಿದೆ.

ಸ್ವಲ್ಪ ಸಮಯದ ನಂತರ ಬಾಲಕನಿಗೆ ಅಪಸ್ಮಾರ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ರಮ್ಯಾ ಮತ್ತು ರಾಜ್ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜುಲೈ 7 ರಂದು ನಿಮ್ಹಾನ್ಸ್‌ಗೆ ಶಿಫ್ಟ್ ಮಾಡಿದ್ದಾರೆ. ಆದರೆ ಜುಲೈ 8 ರಂದು ಮಗು ಮೃತಪಟ್ಟಿದ್ದಾನೆ. ರಾಜ್ ಮಗುವಿನ ತಲೆಯನ್ನು ಗೋಡೆಗೆ ಹೊಡೆದಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಪೊಲೀಸರು ಆರೋಪಿ ಮೈಕೆಲ್ ರಾಜ್‌ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)