ಬೆಂಗಳೂರಿನಲ್ಲಿ ಆಟೆೋಗೆ ಡಿಕ್ಕಿ ಆರೋಪ: ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಗಾಜು ಒಡೆದು ಆಟೋ ಚಾಲಕರ ಪುಂಡಾಟ; ವಿಡಿಯೊ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಆಟೆೋಗೆ ಡಿಕ್ಕಿ ಆರೋಪ: ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಗಾಜು ಒಡೆದು ಆಟೋ ಚಾಲಕರ ಪುಂಡಾಟ; ವಿಡಿಯೊ ನೋಡಿ

ಬೆಂಗಳೂರಿನಲ್ಲಿ ಆಟೆೋಗೆ ಡಿಕ್ಕಿ ಆರೋಪ: ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಗಾಜು ಒಡೆದು ಆಟೋ ಚಾಲಕರ ಪುಂಡಾಟ; ವಿಡಿಯೊ ನೋಡಿ

ಆಟೋಗೆ ಡಿಕ್ಕಿ ಹೊಡೆದಿದ್ದಾರೆಂದು ಆರೋಪಿಸಿ ಆಟೋ ಚಾಲಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಕಿಟಕಿ ಗಾಜು ಪುಡಿ ಪುಡಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಡಿಯೋ ನೋಡಿ.

ಆಟೋಗೆ ಡಿಕ್ಕಿ ಹೊಡೆದಿದ್ದಾರೆಂದು ಆಟೋ ಚಾಲಕರು ಕಾರಿನ ಗಾಜು ಒಡೆದು ಪುಂಡಾಟ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆಟೋಗೆ ಡಿಕ್ಕಿ ಹೊಡೆದಿದ್ದಾರೆಂದು ಆಟೋ ಚಾಲಕರು ಕಾರಿನ ಗಾಜು ಒಡೆದು ಪುಂಡಾಟ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲ ಆಟೋ ಚಾಲಕರು ದುರ್ವರ್ತನೆ ತೋರುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ, ಆಟೋಗೆ ಗುದ್ದಿದ್ದಾರೆಂದು ಆಟೋ ಚಾಲಕರು ಕಾರೊಂದರ ಗಾಜು ಒಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟೀಮ್-ಬಿಎಚ್‌ಪಿ ಅನ್ನೋ ಪುಟದಲ್ಲಿ ಘಟನೆಯ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ತನ್ನ ಗುರುತನ್ನು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಈ ಪುಟದಲ್ಲಿ, ತನ್ನ ಕಾರನ್ನು ಆಟೋ ರಿಕ್ಷಾ ಚಾಲಕರು ಧ್ವಂಸಗೊಳಿಸಿದ್ದಾರೆ ಎಂದುಬರೆದುಕೊಂಡಿದ್ದಾರೆ. ಬೆಂಗಳೂರಿನ ಈಜಿಪುರ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಕಾರು ಚಾಲಕ ವಿವರಿಸಿದ್ದಾನೆ.

ತುರ್ತು ಕೆಲಸವಿದ್ದ ಕಾರಣ ಕಾರನ್ನ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಚಲಾಯಿಸುತ್ತಿದ್ದೆ. ಸ್ವಲ್ಪ ಆತುರದಿಂದ ಕೆಲವು ಕಾರುಗಳನ್ನು ಹಿಂದಿಕ್ಕಿ ಚಲಾಯಿಸಿದ್ದನ್ನು ಹೊರತುಪಡಿಸಿದರೆ, ತಾನೇನೂ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಸಿಗ್ನಲ್‌ನಲ್ಲಿ, ಎರಡು ಆಟೋಗಳು ನನ್ನನ್ನು ಹಾದುಹೋಗಲು ಬಿಡಲಿಲ್ಲ. ಅಲ್ಲದೆ, ಆಟೋರಿಕ್ಷಾ ಚಾಲಕರು ತನ್ನನ್ನು ಬೆದರಿಸಿ ನನ್ನ ಫೋಕ್ಸ್‌ವ್ಯಾಗನ್ ಕಾರನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಕೊನೆಗೂ ಕಾರನ್ನು ನಿಲ್ಲಿಸುವಲ್ಲಿ ಅವರು ಯಶಸ್ವಿಯಾದರು. ಆದರೆ, ತನ್ನ ಕಾರಿಗೆ ಹಾನಿ ಮಾಡಿದರು ಎಂದು ಬೇಸರ ಹೊರಹಾಕಿದ್ದಾರೆ.

ಆಟೋ ಚಾಲಕರು ತನ್ನ ಕಾರಿನ ಗಾಜಿನ ಕಿಟಕಿಯನ್ನು ಹೇಗೆ ಒಡೆದುಹಾಕಿದರು ಎಂಬ ದೃಶ್ಯವನ್ನು ಡ್ಯಾಶ್ ಕ್ಯಾಮೆರಾ ರೆಕಾರ್ಡ್ ಮಾಡಿದೆ. 56 ಸೆಕೆಂಡ್‌ಗಳ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಾರಿನ ಹೊರಗೆ ಆಕ್ರೋಶಭರಿತರಾಗಿ ನಿಂತಿರುವುದನ್ನು ತೋರಿಸುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಕಾರಿನ ಕಿಟಕಿ ಗಾಜು ಒಡೆದು ಚೂರು ಚೂರಾಗಿ ಬಿದ್ದಿದೆ. ಅಲ್ಲದೆ ಕಾರಿನ ಚಾಲಕನನ್ನು ವ್ಯಕ್ತಿಯೊಬ್ಬ ಕೋಪದಿಂದ ಪ್ರಶ್ನಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ತನ್ನ ಗುರುತನ್ನು ಹೇಳಲು ಇಚ್ಛಿಸದ ಕಾರು ಚಾಲಕ, ತನ್ನ ಕಾರಿನ ಗ್ಲಾಸ್ ಅನ್ನು ಏಕಾಏಕಿ ಧ್ವಂಸಗೊಳಿಸಿದ್ದರಿಂದ ತನ್ನ ಕಿವಿ ಮತ್ತು ಕೈಗಳಿಗೆ ಗಾಯವಾಗಿದೆ ಎಂದು ಬರೆದಿದ್ದಾರೆ. ಈ ವಿಡಿಯೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ನಂತರ 2.21 ಲಕ್ಷ ವೀಕ್ಷಣೆಗಳನ್ನು ಪಡೆದಿದೆ. ವಿಡಿಯೋ ವೈರಲ್ ಆದ ನಂತರ ಬೆಂಗಳೂರು ಪೊಲೀಸರು ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ.

ಆಟೋ ಚಾಲಕರ ಕೃತ್ಯಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ; ಕ್ರಮಕ್ಕೆ ಒತ್ತಾಯ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಆಘಾತಕಾರಿ... ಇದಕ್ಕಾಗಿಯೇ ನಾವೆಲ್ಲರೂ ಡ್ಯಾಶ್‌ಕ್ಯಾಮ್ ಹೊಂದಿರಬೇಕು. ಕಾರು ಚಾಲಕ ಏನು ಮಾಡುತ್ತಿದ್ದಾನೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಕಾರು ಆಟೋಗೆ ಡಿಕ್ಕಿ ಹೊಡೆದಿದೆ ಎಂದು ಆಟೋ ಚಾಲಕ ಹೇಳುತ್ತಿದ್ದಾನೆ. ಅದು ನಿಜವಾಗಿದ್ದರೆ, ಕಾರು ಚಾಲಕನನ್ನು ಗುರುತಿಸಬೇಕು. ಆತ ತಪ್ಪಿತಸ್ಥನೋ ಅಲ್ಲವೋ ಎಂಬುದನ್ನು ಪೊಲೀಸರು ಸಾಬೀತುಪಡಿಸಬೇಕು. ಆದರೆ ಆಟೋ ಚಾಲಕ ಕಾರಿಗೆ ಹಾನಿ ಮಾಡಿ ನಿಂದಿಸುತ್ತಿರುವುದು ಸರಿಯಲ್ಲ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಕಾರಿಗೆ ಹಾನಿ ಮಾಡಿದ ಆಟೋ ಚಾಲಕನಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕೆಂದು ಥರ್ಡ್‌ಐ ಎಂಬ ಎಕ್ಸ್‌ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಆಟೋ ಚಾಲಕರನ್ನು ನಂಬಬೇಕಾ ಅಂತ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪ್ರಯಾಣಿಕರೊಬ್ಬರು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಅದು ಎಲೆಕ್ಟ್ರಿಕ್ ದ್ವಿಚಕ್ರವಾಹನವಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಆಟೋ ಚಾಲಕರು, ಬೈಕ್ ಸವಾರನಿಗೆ ಬೈದು ಸ್ಥಳದಿಂದ ಹೋಗುವಂತೆ ಎಚ್ಚರಿಕೆ ನೀಡಿದ್ದರು.

ರಾಜ್ಯದಲ್ಲಿ ಎಲೆಕ್ಟ್ರಿಕ್ ಟ್ಯಾಕ್ಸಿ ವಾಹನ ನಿಷೇಧವಿರುವುದನ್ನು ಅರಿತ ಪ್ರಯಾಣಿಕ ಸುಮ್ಮನಾಗಿದ್ದರು. ಬಳಿಕ ಮತ್ತೊಂದು ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದರು. ಈ ಬಾರಿ ಪೆಟ್ರೋಲ್ ದ್ವಿಚಕ್ರ ವಾಹನ ಪ್ರಯಾಣಿಕನನ್ನು ಕರೆದೊಯ್ಯಲು ಸ್ಥಳಕ್ಕೆ ಧಾವಿಸಿತು. ಆಗಲೂ ಇದನ್ನು ಗಮನಿಸಿದ ಆಟೋಚಾಲಕರು ಬೈಕ್ ಸವಾರನಿಗೆ ನಿಂದಿಸಿದ್ದಲ್ಲದೆ, ಹೊಡೆಯಲು ಮುಂದಾಗಿದ್ದರು. ಅಲ್ಲದೆ, ಪ್ರಯಾಣಿಕನನ್ನು ಕರೆದೊಯ್ಯದಂತೆ ತಾಕೀತು ಮಾಡಿದ್ದರು. ಈ ಘಟನೆಯಿಂದ ನೊಂದಿದ್ದ ಪ್ರಯಾಣಿಕ ಆಟೋ ಚಾಲಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದರು. ಇದೀಗ, ಆಟೋ ಚಾಲಕರು ಕಾರನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಇದರಲ್ಲಿ ತಪ್ಪು ಯಾರದ್ದು ಎಂಬುದನ್ನು ಪೊಲೀಸರು

ಸ್ಪಷ್ಟಪಡಿಸಬೇಕಿದೆ.

Whats_app_banner