ಸಮಸ್ಯೆ ಹೇಳ್ಕೊಂಡು ಅಪ್ಪಿ ತಪ್ಪಿಯೂ ಇಂದು ಬೆಂಗಳೂರು ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಬೇಡಿ; ಕಾರಣ ಇದು
ಕನ್ನಡ ಸುದ್ದಿ  /  ಕರ್ನಾಟಕ  /  ಸಮಸ್ಯೆ ಹೇಳ್ಕೊಂಡು ಅಪ್ಪಿ ತಪ್ಪಿಯೂ ಇಂದು ಬೆಂಗಳೂರು ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಬೇಡಿ; ಕಾರಣ ಇದು

ಸಮಸ್ಯೆ ಹೇಳ್ಕೊಂಡು ಅಪ್ಪಿ ತಪ್ಪಿಯೂ ಇಂದು ಬೆಂಗಳೂರು ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಬೇಡಿ; ಕಾರಣ ಇದು

ಬೆಂಗಳೂರು ಜಲಮಂಡಳಿಯ ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1916ಗೆ ಇಂದು (ನವೆಂಬರ್ 17) ಸಮಸ್ಯೆ ಹೇಳ್ಕೊಂಡು ಅಪ್ಪಿ ತಪ್ಪಿಯೂ ಇಂದು ಬೆಂಗಳೂರು ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಬೇಡಿ. ಕರೆ ಮಾಡಿದರೆ ನಿರಾಸೆ ಖಚಿತ. ಕಾರಣ ಹೀಗಿದೆ ನೋಡಿ.

ಸಮಸ್ಯೆ ಹೇಳ್ಕೊಂಡು ಅಪ್ಪಿ ತಪ್ಪಿಯೂ ಇಂದು ಬೆಂಗಳೂರು ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಬೇಡಿ. (ಸಾಂಕೇತಿಕ ಚಿತ್ರ)
ಸಮಸ್ಯೆ ಹೇಳ್ಕೊಂಡು ಅಪ್ಪಿ ತಪ್ಪಿಯೂ ಇಂದು ಬೆಂಗಳೂರು ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಬೇಡಿ. (ಸಾಂಕೇತಿಕ ಚಿತ್ರ)

ಬೆಂಗಳೂರು : ಬೆಂಗಳೂರು ಜಲಮಂಡಳಿಯ (24/7) ದೂರು ನಿರ್ವಹಣಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1916 ಅನ್ನು ನವೆಂಬರ್ 17 ರಂದು ತಾತ್ಕಾಲಿಕವಾಗಿ ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ. ಆದ್ದರಿಂದ ನೀರು ಬರುತ್ತಿಲ್ಲ ಎಂದೋ, ಇನ್ನೇನೋ ಸಮಸ್ಯೆ ಇದೆ ಅಂತ ಹೇಳ್ಕೊಂಡು ಇಂದು (ನವೆಂಬರ್ 17) ಅಪ್ಪಿ ತಪ್ಪಿಯೂ ಬೆಂಗಳೂರು ಜಲ ಮಂಡಳಿ ಸಹಾಯವಾಣಿ ಸಂಖ್ಯೆ 1916ಕ್ಕೆ ಕರೆ ಮಾಡಬೇಡಿ. ಮಾಡಿದ್ರೆ ನಿರಾಸೆ ಖಚಿತ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸರ್ವರ್‌ನ ವಾರ್ಷಿಕ ನಿರ್ವಹಣೆಯನ್ನು ಕೈಗೊಳ್ಳುತ್ತಿರುವ ಕಾರಣ ನವೆಂಬರ್ 17ರಂದು ಬೆಳಿಗ್ಗೆ 06 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ತಾತ್ಕಾಲಿಕವಾಗಿ 1916 ಟೋಲ್ ಫ್ರೀ ಸಂಖ್ಯೆಯು ಕಾರ್ಯನಿರ್ವಹಿಸುವುದಿಲ್ಲ ಎಂದು ಬೆಂಗಳೂರು ಜಲ ಮಂಡಳಿ ತಿಳಿಸಿದೆ.

ಕರ್ನಾಟಕ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಅಧಿಸೂಚನೆ

ಸಂಶೋಧನಾ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಜಾರಿಗೊಳಿಸಲಾದ ವಿವಿಧ ಯೋಜನೆಗಳ ಪರಿಣಾಮಕಾರಿ ಮೌಲ್ಯಮಾಪನಗಳನ್ನು ಕೈಗೊಳ್ಳಲು ಕೆಎಂಇಎಯೊಂದಿಗೆ ನೋಂದಾಯಿಸಲು, ಕರ್ನಾಟಕ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಅರ್ಹ ಸಂಸ್ಥೆಗಳು, ರಾಜ್ಯ ವಿಶ್ವವಿದ್ಯಾನಿಲಯಗಳಿಂದ ಆಸಕ್ತಿಯ ಅಭಿವ್ಯಕ್ತಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ನವೆಂಬರ್ 30 ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸಬೇಕು. ಅರ್ಹತಾ ಮಾನದಂಡಗಳ ವಿವರಗಳು, ಅಗತ್ಯವಿರುವ ದಾಖಲೆ ಸಲ್ಲಿಕೆ ವಿವರಗಳು ಇತ್ಯಾದಿಗಳನ್ನು ಒಳಗೊಂಡಿರುವ ವಿವರವಾದ ಅಧಿಸೂಚನೆ ಮತ್ತು ಇಒಲ್ ದಾಖಲೆಯನ್ನು ವೆಬ್‍ಸೈಟ್ www.kmea.karnataka.gov.in ನಿಂದ ಡೌನ್‍ಲೋಡ್ ಮಾಡಬಹುದು ಎಂದು ಕೆಎಂಇಎ ತಿಳಿಸಿದೆ.

ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ

2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್‌ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ 100 ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಯಾವುದೇ ಫೆಲೋಶಿಪ್ ಪಡೆಯದಿದ್ದಲ್ಲಿ ಮಾಸಿಕ 25,000 ರೂಪಾಯಿ ಶಿಷ್ಯವೇತನ ನೀಡಲಾಗುವುದೆಂದು ಘೋಷಿಸಲಾಗಿದ್ದು, ಸದರಿ ಯೋಜನೆಯಡಿ ಶಿಷ್ಯವೇತನ ಪಡೆಯಲು ಇಚ್ಛಿಸುವವರು ತಮ್ಮ ಜಿಲ್ಲಾ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು / ಉಪ ನಿರ್ದೇಶಕರು, / ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ / ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಅರ್ಜಿಯ ನಮೂನೆಯನ್ನು ಪಡೆದು, ಡಿಸೆಂಬರ್ 14 ರೊಳಗಾಗಿ ಆಯಾ ಜಿಲ್ಲಾಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು / ಉಪ ನಿರ್ದೇಶಕರು / ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ / ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರವರ ಕಚೇರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಂ.34, 1ನೇ ಮಹಡಿ, ಲೋಟಸ್ ಟವರ್ಸ್ ರೇಸ್‍ಕೋರ್ಸ್ ರಸ್ತೆ, ಬೆಂಗಳೂರು ದೂರವಾಣಿ ಸಂಖ್ಯೆ: 080-22261787 / 789 ಇವರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಲೈಬ್ರರಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಗ್ರಂಥಾಲಯದಲ್ಲಿ 2024-25ನೇ ಸಾಲಿಗೆ ಒಂದು ವರ್ಷದ “ಲೈಬ್ರರಿ ಅಪ್ರೆಂಟಿಸ್ ತರಬೇತುದಾರರಿಗೆ” ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಅಥವಾ ಕರ್ನಾಟಕ ಸರ್ಕಾರ ತಾಂತ್ರಿಕ ನಿರ್ದೇಶನಾಲಯದ ಅಡಿಯಲ್ಲಿ ಡಿಪ್ಲೊಮಾ ಇನ್ ಲೈಬ್ರರಿ ಸೈನ್ಸ್ (ದ್ವಿತೀಯ ಪಿಯುಸಿ ನಂತರದ ಎರಡು ವರ್ಷದ ಕೋರ್ಸ್) ನಲ್ಲಿ ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗಿರುವ ಆಸಕ್ತರು, ಅವರ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ವಿದ್ಯಾರ್ಹತೆ ಮತ್ತು ಜಾತಿ ಮತ್ತಿತರ ಸ್ವವಿವರಗಳನ್ನೊಳಗೊಂಡ ಅರ್ಜಿಯ ನಮೂನೆಯನ್ನು ವಿಶ್ವವಿದ್ಯಾನಿಲಯದ ಜಾಲತಾಣ www.bcu.ac.in ದಿಂದ ಡೌನ್‍ಲೌಡ್ ಮಾಡಿಕೊಂಡು ಭರ್ತಿ ಮಾಡಿ, ಸ್ವ-ದೃಢೀಕರಿಸಿ ವಿಶ್ವವಿದ್ಯಾನಿಲಯದ ಕುಲಸಚಿವರು, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು- 560 001 ಇವರಿಗೆ ನವೆಂಬರ್ 26 ಸಂಜೆ 5.00 ಗಂಟೆಯ ಒಳಗಾಗಿ ಸಲ್ಲಿಸಬಹುದು. ಸಂದರ್ಶನದ ದಿನಾಂಕದಂದು ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು. ಶೈಕ್ಷಣಿಕ ವರ್ಷ 2024-25ನೇ ಸಾಲಿನಲ್ಲಿ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಈಗಾಗಲೇ 2023-24ನೇ ಸಾಲಿನಲ್ಲಿ “ಅಪ್ರೆಂಟಿಸ್”ಗಳಾಗಿ ತರಬೇತಿ ಪಡೆದಿರುವ ಹಾಗೂ ಅದರ ಹಿಂದಿನ ವರ್ಷಗಳಲ್ಲಿ ತರಬೇತಿ ಪಡೆದುಕೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ತರಬೇತಿ ಅವಧಿಯಲ್ಲಿ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಪಡೆದ ಅಭ್ಯರ್ಥಿಗೆ 17,000 ರೂಪಾಯಿ ಶಿಷ್ಯವೇತನವನ್ನು ನೀಡಲಾಗುವುದು. ವಿಶ್ವವಿದ್ಯಾನಿಲಯಕ್ಕೆ 03 ಜನ ಲೈಬ್ರರಿ ಅಪ್ರೆಂಟಿಸ್ ಟ್ರೈನಿಗಳ ಅಗತ್ಯವಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.

Whats_app_banner