ಬೆಂಗಳೂರು ಸಾಹಿತ್ಯೋತ್ಸವ 2024: ಡಿಸೆಂಬರ್ 14-15ರಂದು ಲಿಟರೇಚರ್ ಫೆಸ್ಟಿವಲ್, ಯಾರೆಲ್ಲ ಬರ್ತಾರೆ? ಈ ಬಾರಿ ಏನಿದೆ ವಿಶೇಷ
Bangalore Literature Festival: ಸಾಹಿತ್ಯಾಸಕ್ತರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಬೆಂಗಳೂರು ಸಾಹಿತ್ಯ ಉತ್ಸವ ಇದೇ ಡಿಸೆಂಬರ್ 14 ಮತ್ತು 15ರಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನಡೆಯಲಿದೆ. ಈ ಸಾಹಿತ್ಯೋತ್ಸವದಲ್ಲಿ ಕನ್ನಡ ಸೇರಿದಂತೆ ವಿವಿಧ ಭಾಷೆಯ ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ.
![ಬೆಂಗಳೂರು ಸಾಹಿತ್ಯೋತ್ಸವ 2024: ಡಿಸೆಂಬರ್ 14-15ರಂದು ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ಬೆಂಗಳೂರು ಸಾಹಿತ್ಯೋತ್ಸವ 2024: ಡಿಸೆಂಬರ್ 14-15ರಂದು ಬೆಂಗಳೂರು ಲಿಟರೇಚರ್ ಫೆಸ್ಟಿವಲ್](https://images.hindustantimes.com/kannada/img/2024/12/10/550x309/Bangalore_literature_Festival_1733833672256_1733833676862.png)
Bangalore Literature Festival: ಸಾಹಿತ್ಯಾಸಕ್ತರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಬೆಂಗಳೂರು ಸಾಹಿತ್ಯ ಉತ್ಸವ ಇದೇ ಡಿಸೆಂಬರ್ 14 ಮತ್ತು 15ರಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನಡೆಯಲಿದೆ. ಈ ಸಾಹಿತ್ಯೋತ್ಸವದಲ್ಲಿ ಕನ್ನಡ ಸೇರಿದಂತೆ ವಿವಿಧ ಭಾಷೆಯ ಲೇಖಕರು, ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ. ವಿಜ್ಞಾನ ಮತ್ತು ಕಥೆ, ಕವನ ಮತ್ತು ಹಾಡು, ಬರಹಗಾರರು ದೇಶ ಮತ್ತು ಪ್ರಪಂಚದಾದ್ಯಂತದ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಈ ಸಾಹಿತ್ಯೋತ್ಸವದಲ್ಲಿ ಆಗುತ್ತದೆ. ಬೆಂಗಳೂರು ಲಿಟರೇಚರ್ ಫೆಸ್ಟಿವಲ್‌ನಲ್ಲಿ ಸಾಹಿತ್ಯ, ಕಲೆ, ಸಂಗೀತ, ಸ್ತ್ರೀವಾದ, ಸಿನಿಮಾ, ತಂತ್ರಜ್ಞಾನ,ಕಥೆ, ಕವಿತೆ, ವಿಚಾರ ಮಂಡನೆ, ಚರ್ಚೆ, ಸಂವಾದ, ಗೋಷ್ಠಿಗಳು ನಡೆಯಲಿವೆ.
ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ವೆಂಕಿ ರಾಮಕೃಷ್ಣನ್ ಮತ್ತು ಅಭಿಜಿತ್ ಬ್ಯಾನರ್ಜಿ ಈ ವರ್ಷದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಬೂಕರ್ ಪ್ರಶಸ್ತಿ ವಿಜೇತ ಕಿರಣ್ ದೇಸಾಯಿ ಕೂಡ ಮೊದಲ ಬಾರಿಗೆ ಬೆಂಗಳೂರು ಸಾಹಿತ್ಯೋತ್ವಕ್ಕೆ ಬರಲಿದ್ದಾರೆ. ಮಲಯಾಳಂ ನಟಿ ಪಾರ್ವತಿ ತಿರುವೋತು ಅವರ ಕಲೆಯ ಬಗ್ಗೆ ಮಾತನಾಡಲಿದ್ದಾರೆ. ಇಳಾ ಅರುಣ್ ಮತ್ತು ಎಲ್ ಸುಬ್ರಮಣ್ಯಂ ತಮ್ಮ ಕಥೆಗಳ ಕುರಿತು ಮಾತನಾಡಲಿದ್ದಾರೆ. ಆಸ್ಟ್ರೇಲಿಯ, ಸ್ಪೇನ್ ಮತ್ತು ಡೊಮಿನಿಕನ್ ರಿಪಬ್ಲಿಕ್‌ನ ರಾಯಭಾರಿಗಳು ಸಹ ಉತ್ಸವಕ್ಕೆ ಆಗಮಿಸಲಿದ್ದಾರೆ.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕನ್ನಡದ ಕಂಪೂ ಇರಲಿದೆ. ವನಮಾಲ ವಿಶ್ವನಾಥ್, ಸುಮಾ ಅಯ್ಯರಹಳ್ಳಿ, ಮಧು ವೈಎನ್, ಶಾಂತಿ ಕೆ ಅಪ್ಪಣ್ಣ, ಪ್ರಶಾಂತ್ ಪಂಡಿತ್, ಅಬ್ದುಲ್ ರಶೀದ್, ಮಲ್ಲಮ್ಮ ಸರಸ್ವತಿ ಜುಲೇಖಾ ಬೇಗಂ, ದೀಪಾ ಬಸ್ತಿ , ಬಾನು ಮಸ್ತಕ್, ಟಿಎನ್ ಸೀತಾರಾಮ್ ಮತ್ತು ಜೋಗಿ ಮುಂತಾದ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು ಬೆಂಗಳೂರು ಲಿಟರೇಚರ್ ಫೆಸ್ಟಿವಲ್‌ಗೆ ಮೆರುಗು ತರಲಿದ್ದಾರೆ.
ಯಾವಾಗ: ಡಿಸೆಂಬರ್ 14-15
ಎಲ್ಲಿ?: ಹೋಟೆಲ್ ಲಲಿತ್ ಅಶೋಕ್, ಬೆಂಗಳೂರು
ಸಮಯ: ಬೆಳಗ್ಗೆ 9 ಗಂಟೆಯಿಂದ 7.30 ಗಂಟೆಯವರೆಗೆ.
ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ?
ಅಭಿಜಿತ್ ಬ್ಯಾನರ್ಜಿ, ಅರುಣಾ ರಾಯ್, ಬಿ ಜಯಮೋಹನ್, ಚೇತನ್ ಭಗತ್, ಇಡಿ ಸ್ಮಿತ್, ಇಲಾ ಅರುಣ್, ಇರೆನೊಸೆನ್ ಒಕೊಂಜಿ, ಜಯಂತ್ ಕಾಯ್ಕಿಣಿ, ಕಿರಣ್ ದೇಸಾಯಿ, ಎಲ್ ಸುಬ್ರಹ್ಮಣ್ಯಮ್, ಲಾವಣ್ಯ ಲಕ್ಷ್ಮಿ ನಾರಾಯಣ್, ಎಂ ಮುಕುಂದನ್, ಮೀನಾಕ್ಷಿ ಜನ್, ಮುಕೇಶ್ ಬನ್ಸಾಲ್, ನಮಿತಾ ಗೋಖಲೆ, ಗುಯೆನ್ ಪಾನ್ ಕ್ಯೂ ಮೈ, ಪಾರ್ವತಿ ತಿರುವೊಟ್ಟು, ರಾಜ್‌ದೀಪ್ ಸರ್‌ದೇಸಾಯಿ, ರಾಜೆನ್ ಮಹ್ರಾ, ರಾಮ್ ಮಾಧವ್, ರೋಮೆಶ್ ಗುಣೆಶೇಕೆರ, ಸೈಮನ್ ಸಿಂಗ್, ಶ್ರೀ ಎಂ, ಸುಧಾ ಮೂರ್ತಿ, ಸುನಿಲ್‌ಅಮೃತ್, ಉಪಮನ್ಯು ಚಟರ್ಜಿ. ವೆಂಕಿ ರಾಮಕೃಷ್ಣನ್, ವಿಲಿಯಮ್ ದಾರ್ಲಿಂಪಲ್ ಮುಂತಾದವರು ಭಾಗವಹಿಸಲಿದ್ದಾರೆ.
ಕನ್ನಡ ಕಲರವ
- ಡಿಸೆಂಬರ್ 14ರಂದು ಮಧ್ಯಾಹ್ನ 12 ಗಂಟೆಗೆ Bride in the Hills: A Kuvempu Classic- ವನಮಾಲ ವಿಶ್ವನಾಥ- ಗೀತಾ ಹರಹರಣ್
- ಮಧ್ಯಾಹ್ನ 12: 30 ಗಂಟೆಗೆ ಮಹಾ ಸಂಗ್ರಾಮಿ- ಎಸ್‌ಆರ್ ಹೀರೇಮಠ್- ಟಿಆರ್ ಚಂದ್ರಶೇಖರ್
- ಮಧ್ಯಾಹ್ನ 2 ಗಂಟೆಗೆ ಹೊಸ ಬರಹ: ಕನ್ನಡ ರೈಟಿಂಗ್ ಟುಡೇ- ಕುಸುಮಾ ಅಯ್ಯರಹಳ್ಳಿ, ಮಧು ವೈಎನ್, ಶಾಂತಿ ಕೆ ಅಪ್ಪಣ್ಣ (ಗೀತಾ ವಸಂತ್ ಜತೆಗೆ)
- ಮಧ್ಯಾಹ್ನ 3 ಗಂಟೆಗೆ: ಹಸೀನಾ ಮತ್ತು ಇತರೆ ಕಥೆಗಳು: ದೀಪಾ ಬಸ್ತಿ ಜತೆಗೆ ಬಾನು ಮಸ್ತಕ್
- ಸಂಜೆ 4 30 ಗಂಟೆಗೆ: ಕನ್ನಡ ನಿಘಂಟುಗಳ ಜಗತ್ತು ಎಂಬ ವಿಷಯದ ಕುರಿತು ಪ್ರಶಾಂತ್ ಪಂಡಿತ್ ಮತ್ತು ಪಂಜು ಗಂಗೂಲಿ ಮಾತನಾಡಲಿದ್ದಾರೆ.
- ಸಂಜೆ 5 ಗಂಟೆಗೆ: ರಂಗನಟಿಯ ಜೀವನರಂಗ ಕುರಿತ ಗೋಷ್ಠಿ ಅಬ್ದುಲ್ ರಶೀದ್ ಜತೆಗೆ ಮಲ್ಲಮ್ಮ ಸರಸ್ವತಿ ಜುಲೇಖಾ ಬೇಗಂ.
- ಸಂಜೆ 6 15 ಗಂಟೆಗೆ ನೆನಪಿನ ಪುಟಗಳು: Television, Tales and Turning Points ಎಂಬ ಗೋಷ್ಠಿಯನ್ನು ಟಿಎನ್ ಸೀತಾರಾಮ್ ಮತ್ತು ಜೋಗಿ ನಡೆಸಿಕೊಡಲಿದ್ದಾರೆ.
ಬೆಂಗಳೂರು ಸಾಹಿತ್ಯೋತ್ಸವದ ಸಂಪೂರ್ಣ ಕಾರ್ಯಕ್ರಮದ ಪಟ್ಟಿ, ನೋಂದಣಿ ಸೇರಿದಂತೆ ಸಂಪೂರ್ಣ ವಿವರ ಪಡೆಯಲು ಭೇಟಿ ನೀಡಬೇಕಾದ ಲಿಂಕ್: bangaloreliteraturefestival.org
![Whats_app_banner Whats_app_banner](https://kannada.hindustantimes.com/static-content/1y/wBanner.png)