20 ವರ್ಷಗಳ ಹಿಂದೆ ಶಸ್ತ್ರ ಚಿಕಿತ್ಸೆ ಮಾಡುವಾಗ ಹೊಟ್ಟೆಯಲ್ಲಿ ಸೂಜಿ ಬಿಟ್ಟಿದ್ದ ಆಸ್ಪತ್ರೆ, ಇಬ್ಬರು ವೈದ್ಯರಿಗೆ ದಂಡ ವಿಧಿಸಿದ ಗ್ರಾಹಕರ ವೇದಿಕೆ
Consumer Court ಬೆಂಗಳೂರಿನ ಗ್ರಾಹಕರ ವೇದಿಕೆಯು ನಿರ್ಲಕ್ಷ್ಯ ವಹಿಸಿದ ವೈದ್ಯರಿಗೆ ದಂಡ ವಿಧಿಸಿ ಆದೇಶ ಹೊರಡಿಸಿದೆವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: 20 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಹೊಟ್ಟೆಯಲ್ಲೇ 3.2 ಸೆ.ಮೀ ಸೂಜಿಯನ್ನು ಹೊಟ್ಟೆಯಲ್ಲೇ ಬಿಟ್ಟು ಮಹಿಳೆಯೊಬ್ಬರು ಸತತ 6 ವರ್ಷಗಳ ಕಾಲ ನಿರಂತರ ಹೊಟ್ಟೆ ನೋವು, ಬೆನ್ನು ನೋವು ಹಾಗೂ ಆಘಾತಕ್ಕೆ ಒಳಗಾಗಗಿದ್ದರು. ಹೀಗೆ ನರಳಿದ್ದ 47 ವರ್ಷದ ಪದ್ಮಾವತಿ ಅವರಿಗೆ 5 ಲಕ್ಷೂ ಪರಿಹಾರ ನೀಡುವಂತೆ ರಾಜ್ಯ ಗ್ರಾಹಕ ವ್ಯವಹಾರಗಳ ಆಯೋಗ ಅದೇಶ ಹೊರಡಿಸಿದೆ.
ಕನಕಪುರ ರಸ್ತೆಯಲ್ಲಿರುವ ದೀಪಕ್ ಆಸ್ಪತ್ರೆಗೆ ಈ ದಂಡ ವಿಧಿಸಲಾಗಿದ್ದು, ಈ ಶಸ್ಸ್ತ್ರ ಚಿಕಿತ್ಸೆ ನಡೆಸಿದ್ದ ಇಬ್ಬರು ವೈದ್ಯರಾದ ಡಾ. ಶಿವಕುಮಾರ್ ಮತ್ತು ಡಾ. ಎಚ್.ನಾಗರಾಜ್ ಅವರು, ಪದ್ಮಾವತಿ ಅವರಿಗೆ ತಲಾ 50 ಸಾವಿರ ರೂ.ಗಳನ್ನು ನ್ಯಾಯಾಲಯದ ವೆಚ್ಚಕ್ಕಾಗಿ ಪರಿಹಾರ ನೀಡಬೇಕೆಂದು ತಿಳಿಸಿದೆ.
ಪದ್ಮಾವತಿ ಅವರು 2004 ಸೆ.29 ರಂದು ದೀಪಕ್ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ನಂತರ ಅನೇಕ ವರ್ಷಗಳ ಕಾಲ ಅವರು ನಿರಂತರ ಹೊಟ್ಟೆ ನೋವು ಮತ್ತು ಬೆನ್ನು ನೋವಿನಿಂದ ಬಳಲುತಿದ್ದರು. ಇದೇ ಆಸ್ಪತ್ರೆಯಲ್ಲಿ ಎರಡು ಬಾರಿ ಚಿಕಿತ್ಸೆಗಾಗಿ ದಾಖಲಾಗಿದ್ದರು. 2010ರಲ್ಲಿ ಬೇರೊಂದು ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿಸಿದಾಗ ಪದ್ಮಾವತಿ ಅವರ ಹೊಟ್ಟೆ ಹಾಗೂ ಬೆನ್ನು ಮೂಳೆ ನಡುವೆ ಈ ಸೂಜಿ ಪತ್ತೆಯಾಗಿತ್ತು. ಮೂರನೇ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ 3.2 ಸೆ.ಮೀ. ಉದ್ದದ ಈ ಸೂಜಿಯನ್ನು ಹೊರತೆಗೆಯಲಾಗಿತ್ತು.
ಅದೇ ವರ್ಷ ಅವರು ನ್ಯಾಯಕ್ಕಾಗಿ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ದೀಪಕ್ ಆಸ್ಪತ್ರೆ ಮತ್ತು ಶಸ್ತ್ರ ಚಿಕಿತ್ಸೆ ನಡೆಸಿದ್ದ ಇಬ್ಬರು ವೈದ್ಯರು ಇದೊಂದು ಕಟ್ಟುಕತೆಯಾಗಿದ್ದು, ದೂರು ದಾಖಲಿಸಲು 7 ವರ್ಷ ಕಾದಿದ್ದಾದರೂ ಏಕೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಎಲ್ಲ ಆಯಾಮಗಳಿಂದಲೂ ವಿಚಾರಣೆ ನಡೆಸಿದ ನ್ಯಾಯಾಲಯ ಆಸ್ಪತ್ರೆ ಮತ್ತು ವೈದ್ಯರ ನಿರ್ಲಕ್ಷ್ಯದಿಂದಲೇ ಅವರು ತೊಂದರೆ ಅನುಭವಿಸಬೇಕಾಗಿ ಬಂದಿದೆ. ಆದ್ದರಿಂದ ಆಸ್ಪತ್ರೆ ಮತ್ತು ಇಬ್ಬರು ವೈದ್ಯರು ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿದೆ.
ಕುಖ್ಯಾತ ಭೂ ವಂಚಕ ಜಾನ್ ಮೋಸಸ್ ವಿರುದ್ಧ ಕೋಕಾ ಕಾಯ್ದೆ ಜಾರಿ
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ನೂರಾರು ಸಾರ್ವಜನಿಕರ ಆಸ್ತಿಗಳನ್ನು ಕಬಳಿಸುತ್ತಿದ್ದ ಕುಖ್ಯಾತ ವಂಚಕ ಜಾನ್ ಮೋಸಸ್ ಹಾಗೂ ಆತನ ಸಹಚರರ ವಿರುದ್ಧ ಸಿಐಡಿ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧಗಳನಿಯಂತ್ರಣ ಕಾಯಿದೆ- 2000 (KCOCA)ಅನ್ನು ದಾಖಲಿಸಲಾಗಿದೆ. ಈತ ನಕಲಿ ವ್ಯಕ್ತಿಗಳನ್ನು ಸೃಷ್ಠಿಸಿ ಅವರಿಂದ ವಿವಿಧ ನ್ಯಾಯಾಲಯಗಳಲ್ಲಿ ದಾವೆಗಳನ್ನುಹೂಡಿಸಿ ಕೋರ್ಟ್ ಗಳಿಂದ ಆದೇಶ ಪಡೆದು ಅಮಾಯಾಕರ ಆಸ್ತಿಗಳನ್ನು ಕಬಳಿಸುತ್ತಿದ್ದ. ಈತನಿಂದ ನೂರಾರು ಮಂದಿ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಘು ವ್ಯವಹಾರಗಳ ನ್ಯಾಯಾಲಯದ ರಿಜಿಸ್ಟ್ರಾರ್ ರವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2020 ಡಿಸೆಂಬರ್ 7 ರಂದು ಪ್ರಕರಣ ದಾಖಲು ಮಾಡಿದ್ದರು.
ಈ ದೂರಿನನ್ವಯ ಜಾನ್ ಮೋಸಸ್ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿ ಘಟಕಕ್ಕೆ ವಹಿಸಲಾಗಿತ್ತು. ತನಿಖೆ ನಡೆಯುವ ಸಂದರ್ಭದಲ್ಲಿ ಇದೇ ರೀತಿಯ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಈ ಎಲ್ಲಾ ಪ್ರಕರಣಗಳಲ್ಲಿ ಜಾನ್ ಹಾಗೂ ಆತನ ಸಹಚರರ ಅಕ್ರಮ ಚಟುವಟಿಕೆಗಳು ಸಾಬೀತಾಗಿದ್ದವು. ಈ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಂಡ ಸಿಐಡಿ 51 ಪ್ರಕರಣಗಳತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ.
ಅಮಾಯಕರನ್ನು ಬೆದರಿಸಿ ಅವರಿಂದ ಕೋಟ್ಯಂತರ ರೂಪಾಯಿ ಹಣವನ್ನು ಪಡೆದು ಮೋಸ ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ. ಈ ತಂಡದ ವಿರುದ್ಧ ಕೋಕಾ ಅಡಿಯಲ್ಲಿ ಡಿವೈಎಸ್ ಪಿ ಪುನೀತ್‌ಕುಮಾರ್ ಆರ್. ಮತ್ತು ಪೊಲೀಸ್ ಇನ್ಸೆಪೆಕ್ಟರ್ ವಿ. ಶಿವಕುಮಾರ್ ತನಿಖೆ ಕೈಗೊಂಡಿದ್ದರು. ಸಧ್ಯ ಜಾನ್‌ಮೋಸಸ್ ನನ್ನು ಬಂಧಿಸಿ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ವರದಿ: ಎಚ್. ಮಾರುತಿ, ಬೆಂಗಳೂರು
