Dengue in Bangalore:ಬೆಂಗಳೂರಿನಲ್ಲಿ 5 ವರ್ಷದ ಬಾಲಕಿ ಡೆಂಗ್ಯೂಗೆ ಬಲಿ, ಮುನ್ನೆಚ್ಚರಿಕೆ ವಹಿಸಿದ ಬಿಬಿಎಂಪಿ
ಕನ್ನಡ ಸುದ್ದಿ  /  ಕರ್ನಾಟಕ  /  Dengue In Bangalore:ಬೆಂಗಳೂರಿನಲ್ಲಿ 5 ವರ್ಷದ ಬಾಲಕಿ ಡೆಂಗ್ಯೂಗೆ ಬಲಿ, ಮುನ್ನೆಚ್ಚರಿಕೆ ವಹಿಸಿದ ಬಿಬಿಎಂಪಿ

Dengue in Bangalore:ಬೆಂಗಳೂರಿನಲ್ಲಿ 5 ವರ್ಷದ ಬಾಲಕಿ ಡೆಂಗ್ಯೂಗೆ ಬಲಿ, ಮುನ್ನೆಚ್ಚರಿಕೆ ವಹಿಸಿದ ಬಿಬಿಎಂಪಿ

Bangalore News ಬೆಂಗಳೂರಿನಲ್ಲಿ ಡೆಂಗ್ಯೂ ಕಾರಣದಿಂದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಬೆಂಗಳೂರಿನಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ.
ಬೆಂಗಳೂರಿನಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ.

ಬೆಂಗಳೂರು: ಐದು ವರ್ಷದ ಬಾಲಕಿಗೆ ಡೆಂಗ್ಯೂನಿಂದ ಮೃತಪಟ್ಟಿರುವುದು ಬೆಂಗಳೂರಿನಲ್ಲಿ ವರದಿಯಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ತಪಾಸಣೆಗೆ ಒಳಪಡಿಸಿದಾಗ ಆಕೆಗೆ ಡೆಂಗ್ಯೂ ಲಕ್ಷಣ ಇರುವುದು ಕಂಡು ಬಂದಿತ್ತು. ಆನಂತರ ವರದಿ ಬಂದಾಗ ಇದು ಡೆಂಗ್ಯೂ ಎನ್ನುವುದೂ ಖಚಿತವಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಮಳೆಗಾಲದಲ್ಲಿ ಡೆಂಗ್ಯೂವಿನ ಮೊದಲನೇ ಪ್ರಕರಣ. ಇದು ತಿಳಿಯುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಸುಲ್ತಾನ್‌ಪೇಟೆ ವ್ಯಾಪ್ತಿಯ ಜಾಲಿ ಮೊಹಲ್ಲಾದ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಸುಲ್ತಾನ್‌ ಪೇಟೆಯ ಜಾಲಿ ಮೊಹಲ್ಲಾದ ನಿವಾಸಿ ಐದು ವರ್ಷದ ಕಾಜಲ್‌ಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿತ್ತು. ಶೀತ, ಕೆಮ್ಮು, ಬೇಧಿ ಹಾಗೂ ಮೈಕೈ ನೋವು ಕೂಡ ಇತ್ತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಎರಡು ದಿನದವರೆಗೆ ಆಕೆಗೆ ಡೆಂಗ್ಯೂ ಇರುವುದು ಪತ್ತೆಯಾಗಿತ್ತು. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮೃತಪಟ್ಟಿದ್ದಳು.

ಮೊದಲು ಜ್ವರದ ಕಾರಣಕ್ಕೆ ಚಿಕಿತ್ಸೆ ಪಡೆದಿದ್ದ ಬಾಲಕಿಯನ್ನು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಾಲ್ಕು ದಿನದ ಚಿಕಿತ್ಸೆ ನಂತರವೂ ಆಕೆ ಚೇತರಿಸಿಕೊಳ್ಳಲಿಲ್ಲ. ಗುರುವಾರ ಆಕೆ ಮೃತಪಟ್ಟಿದ್ದಾಳೆ. ಆಕೆಗೆ ಡೆಂಗ್ಯೂ ಮೊದಲು ಕಂಡು ಬಂದಿರಲಿಲ್ಲ. ಆದರೆ ಡೆಂಗ್ಯೂ ಮಾದರಿಯ ಕಾಯಿಲೆಯಿಂದ ಆಕೆ ಮೃತಪಟ್ಟಿರುವುದು ವರದಿಯಿಂದ ದೃಢಪಟ್ಟಿದೆ ಎಂದು ಪಶ್ಚಿಮ ವಲಯ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಮನೋರಂಜನ್‌ ಹೆಗಡೆ ಮಾಹಿತಿ ನೀಡಿದ್ದಾರೆ.

ಆದರೆ ಕಾಜಲ್‌ ಕುಟುಂಬಸ್ಥರು ಮಾತ್ರ ಡೆಂಗ್ಯೂವಿನಿಂದಲೇ ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ವೈದ್ಯರು ಪಾರದರ್ಶಕವಾಗಿ ನಮಗೆ ಏನನ್ನೂ ತಿಳಿಸಿಲ್ಲ. ಯಾವುದನ್ನೂ ನಮಗೆ ಹೇಳದೇ ಹಲವಾರು ವಿಷಯ ಮರೆ ಮಾಚಿದ್ದಾರೆ. ಮೊದಲು ಮಗಳು ಆರೋಗ್ಯವಾಗಿಯೇ ಇದ್ದಳು. ಆನಂತರ ಆರೋಗ್ಯದಲ್ಲಿ ವ್ಯತ್ಯಯವಾಯಿತು. ಆನಂತರ ಕಿಡ್ನಿ ಹಾಗೂ ಲಿವರ್‌ ವೈಫಲ್ಯದಿಂದ ಸಮಸ್ಯೆಯಾಗಿದೆ ಎಂದು ಹೇಳಿದರು. ಆನಂತರ ಮಗಳು ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಎಂದು ಕಾಜಲ್‌ ತಾಯ ದಿವ್ಯ ಆರೋಪಿಸಿದರು.

ಬಿಬಿಎಂಪಿಯ ಹಲವು ಭಾಗದಲ್ಲಿ ಕಸ ನಿರ್ವಹಣೆ ಸರಿಯಾಗಿಲ್ಲ. ಅಲ್ಲಲ್ಲಿ ಕಸ ಎಸೆಯಲಾಗುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಿ ಜನ ತೊಂದರೆ ಅನುಭವಿಸುವಂಆಗಿದೆ. ಮಕ್ಕಳು ಹೆಚ್ಚು ಬಾಧಿತರಾಗುತ್ತಿದ್ದಾರೆ. ಕೊಳಚೆ ಪ್ರದೇಶ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಿಬಿಎಂಪಿ ಈ ನಿಟ್ಟಿನಲ್ಲಿ ಯೋಚಿಸಬೇಕು. ಕಸವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎನ್ನುವುದು ಸುಲ್ತಾನ್‌ ಪೇಟೆ ಭಾಗದ ನಿವಾಸಿಗಳ ಆಗ್ರಹ.

ಈ ಕುರಿತು ಮಾತನಾಡಿರುವ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಸೈಯದ್‌ ಸಿರಾಜುದ್ದೀನ್‌ ಮದನಿ, ಬೆಂಗಳೂರಿನ ಹಲವು ಪ್ರದೇಶದಲ್ಲಿ ಡೆಂಗ್ಯೂ ಸಮೀಕ್ಷೆಯನ್ನು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲಾ ಆರೋಗ್ಯ ಕೇಂದ್ರ ಹಾಗೂ ಸುತ್ತಮುತ್ತಲಿನ ಪರಿಸರ ಚೆನ್ನಾಗಿಯೇ ಇಟ್ಟುಕೊಳ್ಳಲಾಗಿದೆ.ಸಣ್ಣಪುಟ್ಟ ಸಮಸ್ಯೆ ಇದ್ದರೆ ಸರಿಪಡಿಸಲಾಗುತ್ತದೆ. ಜನ ಮಾತ್ರ ಆತಂಕಕ್ಕೆ ಒಳಗಾಗದೇ ಅನಾರೋಗ್ಯ ಪೀಡಿತರಾದರೆ ವೈದ್ಯರಲ್ಲಿ ತೋರಿಸಿಕೊಳ್ಳಬೇಕು ಎನ್ನುವುದು ಸಲಹೆ ನೀಡುತ್ತಾರೆ.

Whats_app_banner