Viral Video: ಬೆಂಗಳೂರು ಆಟೋ ರಿಕ್ಷಾ ಚಾಲಕನ ಬಂಧನಕ್ಕೆ ಕಾರಣವಾದ ಮಹಿಳೆ ಕರ್ನಾಟಕ ವಿರುದ್ದ ಅವಹೇಳನಕಾರಿ ಹೇಳಿಕೆಗೆ ಭಾರೀ ಆಕ್ರೋಶ-bangalore news after bangalore auto rikshaw driver arrest video of lady went viral derogatory comment on karnataka kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Viral Video: ಬೆಂಗಳೂರು ಆಟೋ ರಿಕ್ಷಾ ಚಾಲಕನ ಬಂಧನಕ್ಕೆ ಕಾರಣವಾದ ಮಹಿಳೆ ಕರ್ನಾಟಕ ವಿರುದ್ದ ಅವಹೇಳನಕಾರಿ ಹೇಳಿಕೆಗೆ ಭಾರೀ ಆಕ್ರೋಶ

Viral Video: ಬೆಂಗಳೂರು ಆಟೋ ರಿಕ್ಷಾ ಚಾಲಕನ ಬಂಧನಕ್ಕೆ ಕಾರಣವಾದ ಮಹಿಳೆ ಕರ್ನಾಟಕ ವಿರುದ್ದ ಅವಹೇಳನಕಾರಿ ಹೇಳಿಕೆಗೆ ಭಾರೀ ಆಕ್ರೋಶ

Bangalore News ಬೆಂಗಳೂರು ಆಟೋರಿಕ್ಷಾ ಚಾಲಕನ ವರ್ತನೆ ವಿರುದ್ದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೇ ವಿವಾದದಲ್ಲಿ ಸಿಲುಕಿದ ಯುವತಿ ಬಿಡುಗಡೆ ಮಾಡಿರುವ ವಿಡಿಯೋ ಇನ್ನಷ್ಟು ವಿವಾದ ಸೃಷ್ಟಿಸಿದೆ. ಆಕೆ ಏನು ಮಾತನಾಡಿದ್ದಾಳೆ ಎನ್ನುವ ವಿಡಿಯೋ ನೋಡಿ.

ಬೆಂಗಳೂರು ಆಟೋರಿಕ್ಷಾ ಚಾಲಕನ ವರ್ತನೆ ವಿರುದ್ದ ಸಿಡಿದೆದ್ದ ಯುವತಿ ಹೇಳಿಕೆ ಬಗ್ಗೆಯೇ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು ಆಟೋರಿಕ್ಷಾ ಚಾಲಕನ ವರ್ತನೆ ವಿರುದ್ದ ಸಿಡಿದೆದ್ದ ಯುವತಿ ಹೇಳಿಕೆ ಬಗ್ಗೆಯೇ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಂಗಳೂರು: ಮೂರು ದಿನದ ಹಿಂದೆ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಅದೂ ಮೊದಲೇ ಬುಕ್‌ ಮಾಡಿದ ಆಟೋ ರಿಕ್ಷಾ ರದ್ದು ಮಾಡಿದ್ದರಿಂದ ಚಾಲಕ ಆಕ್ರೋಶಗೊಂಡರೆ, ಇದನ್ನು ಪ್ರಶ್ನಿಸಿ ವಿಡಿಯೋ ಮಾಡಿದ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದರು. ಆಟೋ ಚಾಲಕನ ನಡವಳಿಕೆಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬಳಿಕ ಅದೇ ಉತ್ತರ ಭಾರತದ ಮಹಿಳೆ ಹಂಚಿಕೊಂಡಿರುವ ವಿಡಿಯೋ ಕೂಡ ಈಗ ಭಾರೀ ವೈರಲ್‌ ಆಗಿದೆ. ಅದೂ ಬೆಂಗಳೂರು ಕುರಿತು ಹಾಗೂ ಇಲ್ಲಿನ ನಡುವಳಿಕೆ ಕುರಿತು ಆಡಿರುವ ಮಾತುಗಳ ಜತೆಗೆ ನಮ್ಮ ತೆರಿಗೆಯಿಂದಲೇ ಬೆಂಗಳೂರು ನಡೆಯುತ್ತಿದೆ ಎನ್ನುವ ಅರ್ಥದಲ್ಲಿ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಮುನಿರಾಜು ಎನ್ನುವ ಆಟೋ ರಿಕ್ಷಾ ಚಾಲಕ ಮೂರು ದಿನದ ಹಿಂದೆ ಮಹಿಳಾ ಪ್ರಯಾಣಿಕರೊಬ್ಬರ ಜತೆಗೆ ಅಸಭ್ಯವಾಗಿ ವರ್ತಿಸಿದ ಬೆಳವಣಿಗೆ ನಡೆದಿತ್ತು. ಮೊದಲೇ ಬುಕ್ಕಿಂಗ್‌ ಆದ ಪ್ರಯಾಣ ರದ್ದು ಮಾಡಲಾಗಿತ್ತು. ಇದನ್ನು ಚಾಲಕ ಪ್ರಶ್ನಿಸಿದ್ದರು. ಪೆಟ್ರೋಲ್‌,ಗ್ಯಾಸ್ ದರವೂ ದುಬಾರಿಯಾಗಿದೆ.ಹೀಗೆ ಏಕಾಏಕಿ ರದ್ದು ಮಾಡಿದರೆ ನಾವು ಏನು ಮಾಡುವುದು ಎಂದು ಪ್ರಶ್ನಿಸಿದ್ದರು. ಕೊನೆಗೆ ಮಾತಿನ ಚಕಮಕಿ ನಡೆದಿತ್ತು. ಹಲ್ಲೆ ಮಾಡಿದ ಆರೋಪವೂ ಕೇಳಿ ಬಂದಿತ್ತು. ಚಾಲಕನನ್ನು ಬಂಧಿಸಿ ದಂಡ ವಿಧಿಸಿ ಬಿಡುಗಡೆ ಮಾಡಲಾಗಿತ್ತು.

ಇದಾದ ಬಳಿಕ ತೊಂದರೆಗೆ ಒಳಗಾಗಿದ್ದ ಮಹಿಳೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆಲವರಿಗೆ ಶಿಸ್ತು ಎನ್ನುವುದೇ ಗೊತ್ತಿಲ್ಲ. ಹೊರಗಿನವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದಿಲ್ಲ. ಬೆಂಗಳೂರಿಗೆ ಹೊರ ರಾಜ್ಯದಿಂದ ಬರುವವರು ಇಲ್ಲಿ ತೆರಿಗೆ ಪಾವತಿಸುವುದರಿಂದಲೇ ಅವರಿಗೆ ಊಟ ಸಿಗುತ್ತಿದೆ ಎನ್ನುವುದನ್ನು ಮರೆಯಬಾರದು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಇದನ್ನು ಹಲವಾರು ಶೇರ್‌ ಮಾಡಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ. ಇದು ಕರ್ನಾಟಕ ಮತ್ತು ಅದರ ಜನರ ಬಗ್ಗೆ ಅತ್ಯಂತ ಅವಹೇಳನಕಾರಿ ಹೇಳಿಕೆಯಾಗಿದೆ. ಅವರು ಕನ್ನಡಿಗರನ್ನು ಕೆಟ್ಟಪದಗಳಿಂದ ಎಂದು ಕರೆಯುತ್ತಿದ್ದಾರೆ ಮತ್ತು ಬೆಂಗಳೂರಿನ ಅಭಿವೃದ್ಧಿ ಉತ್ತರ ಭಾರತೀಯರಿಂದ ಮತ್ತು ಸ್ಥಳೀಯ ಜನರನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಅವರು ತಮ್ಮ ಊರಿನಲ್ಲಿಯೇ ಇದ್ದು ತಮ್ಮ ಸ್ವಂತ ಆರ್ಥಿಕತೆಯನ್ನು ಏಕೆ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇಂತಹ ಮಾತುಗಳನ್ನ ಕನ್ನಡಿಗರ ಕೇಳಲೇ ಬೇಕಾದ್ದು, ಎಂತಹಾ ಸ್ಥಿತಿ! ಅಂತಹ ಉದ್ದಾರ ಮಾಡುವ ತಾಕತ್ತು/ಯೋಗ್ಯತೆಯಿದ್ದರೆ ಈ ಕಮಂಗಿಗಳು ಯಾಕೆ ಅವರ ಊರು/ರಾಜ್ಯ ಬಿಟ್ಟು ಇಲ್ಲಿಗೆ ಯಾಕೆ ಬರುತ್ತಿದ್ದರು..ಈಗಲೂ ಹೋಗಿ ಅವರ ಊರು/ರಾಜ್ಯ ಉದ್ದಾರ ಮಾಡಿ ತೋರಿಸಲಿ....ಮೊದಲು ತೊಲಗಿ, ಅಲ್ಲೇ ನಿಮ್ಮ ವ್ಯವಹಾರ/ತರಕಾರಿ ಖರೀದಿ ಮಾಡಿ ನಿಮ್ಮ ಜನರ ಉದ್ದಾರ ಮಾಡಿ ಎಂದಯ ಯೋಗಿ ಎನ್ನುವವರು ಹೇಳಿದ್ದಾರೆ.

ಇಲ್ಲಿನ ಪಕೃತಿಯನ್ನ ಉತ್ತರದವರು ಬಂದು ಸೃಷ್ಟಿಸಿದ್ದಾ ? ಬದುಕುವ ನೆಲದ‌ಮೇಲೆ ಭಕ್ತಿ ಇಲ್ಲದಿದ್ದರೆ ನಿಮಗೆ ಮನುಷ್ಯರಿಗಿರುವ ಲಕ್ಷಣಗಳು ಯಾವೂ ಇಲ್ಲ.

ಪರವಾಗಿಲ್ಲ ,‌ನಿಮ್ಮ ಎಲ್ಲ‌ ಮೂಲಭೂತ ದಾಖಲೆಗಳನ್ನು ಕರ್ನಾಟಕದಲ್ಲಿ ಮಾಡಿಕೊಂಡಿದ್ದೀರಲ್ಲಾ?ಯಾವತ್ತಾದ್ರೂ ಮತ ಚಲಾಯಿಸಿದಿರಾ ? ಇಲ್ಲಿನ ಸಾರ್ವಜನಿಕ ಬಸ್ಗಳಲ್ಲಿ ಪ್ರಯಾಣ ಮಾಡಿದ್ದೀರ? ಎಂದು ಗಂಗರಾಜು ಎನ್ನುವವರು ಪ್ರಶ್ನಿಸಿದ್ದಾರೆ.

ಹಾಡ್ ಹಗಲಲ್ಲೆ ಕನ್ನಡದ ಮಾನನ ಜಾಗತಿಕ ಮಟ್ಟದಲ್ಲಿ ಬೀದಿ ಪಾಲ್ ಮಾಡಿರೋ ಈಕೆಗೆ ಯಾವ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಿದಿರಿ? ಎಂದು ಗೀತಾ ಗೌಡ ಎಂಬುವವರು ಪ್ರಶ್ನೆ ಮಾಡಿದ್ದಾರೆ.

ನಾಲಿಗೆ ಬಿಗಿಹಿಡಿದು ಮಾತಾಡಮ್ಮ ನಾಚ್ಕೆ ಆಗಲ್ವಾ ನಿನಗೆ ಈತರ ಮಾತಾಡೋದಕ್ಕೆ ಕರ್ನಾಟಕ ಬಿಟ್ಟು ತೊಲಗಿ ನೀವು ಎಂದು ವಿಜಯಕುಮಾರ್‌ ಎಂಬುವವರು ತರಾಟೆಗೆ ತೆಗೆದುಕೊಂಡಿದ್ದಾರೆ.

mysore-dasara_Entry_Point