ಕನ್ನಡ ಸುದ್ದಿ  /  ಕರ್ನಾಟಕ  /  Agniveer Recruitment Rally: ಮಡಿಕೇರಿಯಲ್ಲಿ ಜೂನ್‌ 27 ರಿಂದ ಅಗ್ನಿವೀರ್‌ ನೇಮಕ ರ್‍ಯಾಲಿ, ಯಾರಿಗೆಲ್ಲಾ ಅವಕಾಶ

Agniveer RECRUITMENT RALLY: ಮಡಿಕೇರಿಯಲ್ಲಿ ಜೂನ್‌ 27 ರಿಂದ ಅಗ್ನಿವೀರ್‌ ನೇಮಕ ರ್‍ಯಾಲಿ, ಯಾರಿಗೆಲ್ಲಾ ಅವಕಾಶ

Kodagu News ಮಡಿಕೇರಿ ನಗರದಲ್ಲಿ ಅಗ್ನಿವೀರ್‌ ನೇಮಕಾತಿ ರ್‍ಯಾಲಿ ಜೂನ್‌ 27ರಿಂದ ಆರು ದಿನ ಕಾಲ ನಡೆಯಲಿದೆ.

ಮಡಿಕೇರಿಯಲ್ಲಿ ಅಗ್ನಿವೀರ್‌ ನೇಮಕ ರ್‍ಯಾಲಿ ನಡೆಯಲಿದೆ.
ಮಡಿಕೇರಿಯಲ್ಲಿ ಅಗ್ನಿವೀರ್‌ ನೇಮಕ ರ್‍ಯಾಲಿ ನಡೆಯಲಿದೆ.

ಬೆಂಗಳೂರು: ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಜೂನ್‌ 27 ರಿಂದ ಆರು ದಿನಗಳ ಕಾಲ ಅಗ್ನಿವೀರ್‌ ನೇಮಕಾತಿ ರ್‍ಯಾಲಿಯನ್ನು( AGNIVEER RECRUITMENT RALLY) ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿರುವ ಸೇನಾ ನೇಮಕಾತಿ ಕಚೇರಿಯು ಈ ರ್‍ಯಾಲಿಯನ್ನು ಆಯೋಜಿಸಿದೆ. ಮಡಿಕೇರಿಯಲ್ಲಿರುವ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ರ್‍ಯಾಲಿಯು ನಡೆಯಲಿದೆ. ಇದಕ್ಕಾಗಿ ಇಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ ಪಾಲ್ಗೊಳ್ಳುವವರಿಗೆ ಸೂಚನೆಗಳನ್ನೂ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಯಾರಿಗುಂಟು ಅವಕಾಶ

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CEE) ಯಶಸ್ವಿಯಾದ ನಂತರ ಅಭ್ಯರ್ಥಿಗಳಿಗೆ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿರುವವರ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

2024 ರ ಏಪ್ರಿಲ್ 22 ರಿಂದ 2024ರ ಮೇ 07 ರವರೆಗೆ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಆಫೀಸ್ ಅಸಿಸ್ಟೆಂಟ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮೆನ್ 10ನೇ ಪಾಸ್ ಮತ್ತು ಅಗ್ನಿವೀರ್ ಟ್ರೇಡ್ಸ್‌ಮೆನ್ 8ನೇ ಪಾಸ್ ವಿಭಾಗಗಳು/ಸೇನೆಯಲ್ಲಿನ ಅಭ್ಯರ್ಥಿಗಳ ಪ್ರವೇಶಕ್ಕಾಗಿ ಈಗ ರ್‍ಯಾಲಿ ನಡೆಸಲಾಗುತ್ತಿದೆ.

ರ್‍ಯಾಲಿಯನ್ನು ಸುಗಮವಾಗಿ ನಡೆಸಲು ಕೊಡಗಿನ ಸ್ಥಳೀಯ ಆಡಳಿತವು ಪೂರ್ವಭಾವಿಯಾಗಿ ಎಲ್ಲಾ ಅಗತ್ಯ ಸಹಾಯವನ್ನು ಒದಗಿಸುತ್ತಿದೆ. ರ್‍ಯಾಲಿಗೆ ಬರುವವರಿಗೆ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಮೆಮೋರಿಯಲ್ ಹಾಲ್ ನಲ್ಲಿ ಎಲ್ಲಾ ಹೊರ ಭಾಗಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.

ಪ್ರವೇಶ ಪತ್ರ ಪಡೆಯೋದು ಹೇಗೆ?

ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಪ್ರವೇಶ ಕಾರ್ಡ್‌ಗಳನ್ನು ಈಗಾಗಲೇ ಅವರ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗಿದೆ ಮತ್ತು ಅವರ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿ ಸಹ ಲಭ್ಯವಿದೆ.

ಕರ್ನಾಟಕ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಿಂದ ಆಯ್ಕೆಯಾದ ಪುರುಷ ಅಭ್ಯರ್ಥಿಗಳಿಗೆ ಮಾತ್ರ ರ್‍ಯಾಲಿಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ 2024 ರ ಮೂಲಕ ಸುಮಾರು 25000 ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ. ಇದರಡಿ ದೇಶದ ನಾನಾ ಭಾಗಗಳಲ್ಲಿ ಸೇನಾ ಅಗ್ನಿವೀರ್‌ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರ ಭಾಗವಾಗಿಯೇ ಸೈನಿಕರ ತವರು ಕೊಡಗಿನಲ್ಲಿ ರ್‍ಯಾಲಿ ಹಮ್ಮಿಕೊಂಡಿದೆ.

ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯು ಭಾರತೀಯ ಸಶಸ್ತ್ರ ಪಡೆಗಳಿಗೆ 17.5 ಮತ್ತು 21 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ