Bangalore News: ಬೆಂಗಳೂರು ವಿಮಾನ ನಿಲ್ದಾಣದಿಂದ ಉಬರ್‌, ಓಲಾ ಪಿಕಪ್‌ ದರ ದುಬಾರಿ, ಶೇ. 40 ರವರೆಗೆ ಏರಿಕೆ-bangalore news bangalore airport cab rides expensive as app based cab operators uber ola raise pick up charges kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ವಿಮಾನ ನಿಲ್ದಾಣದಿಂದ ಉಬರ್‌, ಓಲಾ ಪಿಕಪ್‌ ದರ ದುಬಾರಿ, ಶೇ. 40 ರವರೆಗೆ ಏರಿಕೆ

Bangalore News: ಬೆಂಗಳೂರು ವಿಮಾನ ನಿಲ್ದಾಣದಿಂದ ಉಬರ್‌, ಓಲಾ ಪಿಕಪ್‌ ದರ ದುಬಾರಿ, ಶೇ. 40 ರವರೆಗೆ ಏರಿಕೆ

Bangalore Airport News ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ( KIA)ದ ಆಪ್‌ ಆಧರಿತ ಪಿಕಪ್‌ ವಾಹನಗಳ ದರದಲ್ಲಿ ಏರಿಕೆಯಾಗಿದೆ.

ಬೆಂಗಳೂರಿನ ವಿಮಾನ ನಿಲ್ದಾಣದ ಉಬರ್‌ ಸಹಿತ ಆಪ್‌ ಆಧರಿತ ವಾಹನ ಸೇವೆಗಳ ಪಿಕಪ್‌ ದರ ಹೆಚ್ಚಾಗಿದೆ.
ಬೆಂಗಳೂರಿನ ವಿಮಾನ ನಿಲ್ದಾಣದ ಉಬರ್‌ ಸಹಿತ ಆಪ್‌ ಆಧರಿತ ವಾಹನ ಸೇವೆಗಳ ಪಿಕಪ್‌ ದರ ಹೆಚ್ಚಾಗಿದೆ. (india Times)

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣಕ್ಕೆ ಆಪ್‌ ಆಧರಿತ ವಾಹನಗಳ ಸೇವೆ ಬಳಕೆ ಇನ್ನು ಮುಂದೆ ದುಬಾರಿಯಾಗಬಹುದು. ಏಕೆಂದರೆ ವಿಮಾನ ನಿಲ್ದಾಣಕ್ಕೆ ಸೇವೆ ನೀಡುವ ಪ್ರಮುಖ ಆಪ್‌ ಆಧರಿತ ಉಬರ್( Uber) ಮತ್ತು ಓಲಾ(ola) ಸೇರಿದಂತೆ ಕ್ಯಾಬ್ ಆಪರೇಟರ್‌ಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಿಕ್ ಅಪ್ ಶುಲ್ಕವನ್ನು ಶೇ. 40 ರವರೆಗೆ ಹೆಚ್ಚಿಸಿವೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (KIA) ನಿರ್ವಹಿಸುವ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL)) ತನ್ನ ರಿಯಾಯಿತಿ ಒಪ್ಪಂದದ ನವೀಕರಣದ ಭಾಗವಾಗಿ ಶುಲ್ಕವನ್ನು (ಪ್ರತಿ ಸವಾರಿಗೆ ಪಿಕ್-ಅಪ್ ಶುಲ್ಕ) ಹೆಚ್ಚಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮನೀ ಕಂಟ್ರೋಲ್‌ ವರದಿ ಮಾಡಿದೆ.

ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳಾದ ಉಬರ್ ಮತ್ತು ಓಲಾ ತಮ್ಮ ಪಿಕ್-ಅಪ್ ಶುಲ್ಕವನ್ನು ಹೆಚ್ಚಿಸಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಿಂದ ಕ್ಯಾಬ್ ರೈಡ್‌ಗಳು ಈಗ ಮತ್ತಷ್ಟು ದುಬಾರಿಯಾಗಿದೆ. ಪಿಕ್‌ ದರವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಶೇಕಡಾ 22-40 ರಷ್ಟು ಏರಿಸಿರುವುದರಿಂದ ನಾವೂ ಅನಿವಾರ್ಯವಾಗಿ ಹೆಚ್ಚಿಸಬೇಕಾಗಿದೆ ಎಂದು ಪ್ರಯಾಣಿಕರಿಗೆ ಈ ಸೇವೆಗಳ ಚಾಲಕರು ಹೇಳುತ್ತಿದ್ದಾರೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ನಿರ್ವಹಿಸುವ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ತನ್ನ ರಿಯಾಯಿತಿ ಒಪ್ಪಂದದ ನವೀಕರಣದ ಭಾಗವಾಗಿ ಶುಲ್ಕವನ್ನು (ಪ್ರತಿ ಸವಾರಿಗೆ ಪಿಕ್-ಅಪ್ ಶುಲ್ಕ) ಹೆಚ್ಚಿಸಿದ ಬಳಿಕವೇ ಈ ನಿರ್ಧಾರ ಆಗಿದೆ. ನಮಗೆ ಹೊರೆಯಾಗುವುದರಿಂದ ಅದನ್ನು ಪ್ರಯಾಣಿಕರಿಂದ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ನೀಡಲಾಗುತ್ತಿದೆ.

ಉಬರ್‌ ನ ವಿಮಾನ ನಿಲ್ದಾಣದ ಪಿಕಪ್ (ಟರ್ಮಿನಲ್ 1) ಪ್ರತಿ ರೈಡ್ ಶುಲ್ಕ 187.62 ರಿಂದ 260.78 ಕ್ಕೆ ಏರಿಕೆಯಾಗಿದೆ/ ಅದೇ ರೀತಿ, ಪ್ರತಿ ಟ್ರಿಪ್‌ಗೆ ಓಲಾ 'ಟ್ರಾನ್ಸ್‌ಪೋರ್ಟ್ ಹಬ್ ಚಾರ್ಜ್' ರೂ 172 ರಿಂದ ರೂ 215 ಕ್ಕೆ ಏರಿದೆ. ಬ್ಲೂಸ್ಮಾರ್ಟ್ ಪ್ರತಿ ಟ್ರಿಪ್‌ಗೆ ರೂ 218 ರಿಂದ ಶುಲ್ಕವನ್ನು ಹೆಚ್ಚಿಸಲಾಗಿದೆ ಎನ್ನಲಾಗುತ್ತಿದೆ.

ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಕ್ಯಾಬ್ ಪಿಕ್-ಅಪ್ ಶುಲ್ಕಗಳು ಟರ್ಮಿನಲ್ 1 ಗಿಂತ ಹೆಚ್ಚಾಗಿದೆ. ಉದಾಹರಣೆಗೆ, ಉಬರ್‌ನ ಪಿಕ್-ಅಪ್ ಶುಲ್ಕವು ಟರ್ಮಿನಲ್ 1 ನಲ್ಲಿ 23 ಪ್ರತಿಶತ ಮತ್ತು ಟರ್ಮಿನಲ್ 2 ನಲ್ಲಿ 40 ಪ್ರತಿಶತದಷ್ಟು ಹೆಚ್ಚಾಗಿದೆ. ಎರಡೂ ಅಗ್ರಿಗೇಟರ್‌ಗಳಿಗೆ ಪಿಕ್-ಅಪ್ ಶುಲ್ಕದಲ್ಲಿನ ಹೆಚ್ಚಳವು ಶೇ 22 ಮತ್ತು ಶೇ 40 ನಡುವೆ ಬದಲಾಗುತ್ತದೆ ಎನ್ನುತ್ತವೆ ಮೂಲಗಳು.

ಈ ಕುರಿತು ಉಬರ್‌, ಓಲಾ ಸಹಿತ ಯಾವುದೇ ಪ್ರತಿನಿಧಿಗಳೂ ದರ ಏರಿಕೆ ಕುರಿತ ಬೆಳವಣಿಗೆ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.