ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಭಾರತೀಯ ಸೇನೆ ಕಾರ್ಯಾಗಾರದಲ್ಲಿ 72 ಅಪ್ರೆಂಟಿಸ್‌ ಹುದ್ದೆಗೆ ನೇಮಕ, ಫೆಬ್ರವರಿ 20ರೊಳಗೆ ಅರ್ಜಿ ಸಲ್ಲಿಸಿ

ಬೆಂಗಳೂರಿನ ಭಾರತೀಯ ಸೇನೆ ಕಾರ್ಯಾಗಾರದಲ್ಲಿ 72 ಅಪ್ರೆಂಟಿಸ್‌ ಹುದ್ದೆಗೆ ನೇಮಕ, ಫೆಬ್ರವರಿ 20ರೊಳಗೆ ಅರ್ಜಿ ಸಲ್ಲಿಸಿ

ಬೆಂಗಳೂರಿನ ಹಲಸೂರಿನಲ್ಲಿರುವ ಭಾರತೀಯ ಸೇನಾ ಕಾರ್ಯಾಗಾರದಲ್ಲಿ ಐಟಿಐ ಉತ್ತೀರ್ಣರಾದವರಿಗೆ ಅಪ್ರೆಂಟಿಷಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರಿನ ಹಲಸೂರಿನಲ್ಲಿರುವ ಭೂಸೇನಾ ಕಾರ್ಯಾಗಾರದಲ್ಲಿ ಉದ್ಯೋಗ ಅವಕಾಶವಿದೆ.
ಬೆಂಗಳೂರಿನ ಹಲಸೂರಿನಲ್ಲಿರುವ ಭೂಸೇನಾ ಕಾರ್ಯಾಗಾರದಲ್ಲಿ ಉದ್ಯೋಗ ಅವಕಾಶವಿದೆ.

ಬೆಂಗಳೂರು: ಬೆಂಗಳೂರಿನ ಹಲಸೂರು ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ಸೇನೆಯ ಕಾರ್ಯಾಗಾರ(Army Base Workshop, Bengaluru ) ದಲ್ಲಿ ಉದ್ಯೋಗಾವಕಾಶವಿದೆ. ಅದರಲ್ಲೂ ಐಟಿಐ ಮುಗಿಸಿದ ಕೌಶಲ್ಯ ಆಧರಿತ ಕೆಲಸಗಾರರಿಗೆ ಉದ್ಯೋಗ ಅವಕಾಶವಿದ್ದು ಇದಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಐಟಿಐನಲ್ಲಿ ಉತ್ತೀರ್ಣರಾದವರು ಒಟ್ಟು ಒಂಬತ್ತು ಹುದ್ದೆಗಳಿಗೆ ಅವರ ತರಬೇತಿ ಆಧರಿಸಿ ಅರ್ಜಿ ಸಲ್ಲಿಸಬಹುದು.

2024ರ ಏಪ್ರಿಲ್‌ 1 ರಿಂದ ಅಪ್ರೆಂಟಿಶಿಪ್‌ ಆರಂಭವಾಗಲಿದೆ. ಒಂದು ವರ್ಷದ ಅವಧಿಗೆ ಈ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಅರ್ಜಿ ಸಲ್ಲಿಕೆ ಹೀಗೆ

ಐಟಿಐ ಜತೆಗೆ ರಾಷ್ಟ್ರೀಯ ಕೌನ್ಸಿಲ್‌ನ ವೃತ್ತಿಪರ ತರಬೇತಿ ಮುಗಿಸಿರುವವರು(NCVT) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. www.apprenticeshipindia.gov.in ಈ ವೆಬ್‌ಸೈಟ್‌ ಮೂಲಕವೇ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಸೂಕ್ತ ಮಾಹಿತಿಯನ್ನು ಅಭ್ಯರ್ಥಿಗಳಿಗೆ ಇದರಲ್ಲಿ ನೀಡಲಾಗಿದೆ.

ಫೆಬ್ರವರಿ 20ರೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಅದಕ್ಕೆ ಸೂಕ್ತ ದಾಖಲೆಗಳು, ಮಾಹಿತಿಯನ್ನು ಈ ಸಮಯದೊಳಗೆ ಸಲ್ಲಿಸಬೇಕು. ಒಟ್ಟು ಒಂಬತ್ತು ಹುದ್ದೆಗಳಲ್ಲಿ ನಿಗದಿತ ವೇತನವನ್ನು ಒಂದು ವರ್ಷದ ಅವಧಿಗೆ ನೀಡಲಾಗುತ್ತದೆ.

ಮೀಸಲು ಸೌಲಭ್ಯ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅತೀ ಹಿಂದುಳಿದ ಅಭ್ಯರ್ಥಿಗಳಿಗೆ ಅಪ್ರೆಂಟಿಷಿಪ್‌ ಕಾಯಿದೆ ಅಡಿ ಸೂಕ್ತ ಪ್ರಾತಿನಿಧ್ಯವೂ ಸಿಗಲಿದೆ.

ಅರ್ಜಿ ಸಲ್ಲಿಸಲು ಸಮಸ್ಯೆಯಾಗುವವರು, ಬೆಂಗಳೂರಿನಲ್ಲಿ ಸೇನಾ ಕಚೇರಿಯನ್ನು ಬೆಳಿಗ್ಗೆ08.30 ರಿಂದ ಮಧ್ಯಾಹ್ನ 3.30 ರ ಒಳಗೆ ದೂರವಾಣಿ ಸಂಖ್ಯೆ 080 25583665ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

ಯಾವ ಹುದ್ದೆ ಎಷ್ಟು ಸ್ಥಾನ

  • ಫಿಟ್ಟರ್‌ 08
  • ಟರ್ನರ್‌ 02
  • ಮೆಕಾನಿಸ್ಟ್‌ 18
  • ಮೆಕಾನಿಸ್ಟ್‌ ಗ್ರೈಂಡರ್‌ 02
  • ಮೆಕಾನಿಕ್‌ ಮೆಷಿನ್‌ ಟೂಲ್‌ ಮೇಂಟೇನೆನ್ಸ್‌04
  • ಎಲೆಕ್ಟ್ರಿಷಿಯನ್‌ 07
  • ಟೂಲ್‌ ಅಂಡ್‌ ಡ ಮೇಕರ್‌ 17
  • ವೆಲ್ಡರ್‌ 08
  • ಶೀಟ್‌ ಮೆಟಲ್‌ ವರ್ಕರ್‌ 06

ಟಿ20 ವರ್ಲ್ಡ್‌ಕಪ್ 2024