ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿಗೆ ಮತ್ತೆ ಬಾಂಬ್ ಬೆದರಿಕೆಯ ಕಾಟ; ಈ ಬಾರಿ ಸ್ಟಾರ್ ಹೋಟೆಲ್ ಗೆ ಬಾಂಬ್ ಇಟ್ಟಿರುವ ಇ ಮೇಲ್ ಬೆದರಿಕೆ ಸಂದೇಶ

Bangalore News: ಬೆಂಗಳೂರಿಗೆ ಮತ್ತೆ ಬಾಂಬ್ ಬೆದರಿಕೆಯ ಕಾಟ; ಈ ಬಾರಿ ಸ್ಟಾರ್ ಹೋಟೆಲ್ ಗೆ ಬಾಂಬ್ ಇಟ್ಟಿರುವ ಇ ಮೇಲ್ ಬೆದರಿಕೆ ಸಂದೇಶ

ಬಾಂಬ್‌ ಬೆದರಿಕೆ ಇಮೇಲ್‌ಗಳು( Bomb threat e mails) ಬೆಂಗಳೂರಿಗೆ ಸತತವಾಗಿ ಬರುತ್ತಿವೆ. ಈ ಬಾರಿ ಸ್ಟಾರ್‌ ಹೊಟೇಲ್‌ಗೆ ಬಂದಿದೆ.ವರದಿ: ಎಚ್.ಮಾರುತಿ, ಬೆಂಗಳೂರು

ಬೆಂಗಳೂರಿನ ಸ್ಟಾರ್‌ ಹೊಟೇಲ್‌ ಗೆ ಬಾಂಬ್‌ ಬೆದರಿಕೆಯ ಇ ಮೇಲ್‌ ಬಂದಿದೆ.
ಬೆಂಗಳೂರಿನ ಸ್ಟಾರ್‌ ಹೊಟೇಲ್‌ ಗೆ ಬಾಂಬ್‌ ಬೆದರಿಕೆಯ ಇ ಮೇಲ್‌ ಬಂದಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿರುವುದು ಪೊಲೀಸರು ಮತ್ತು ಜನ ಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ. ಬಾಂಬ್ ಇಟ್ಟಿರುವ ಬೆದರಿಕೆಯ ಇಮೇಲ್ ಗಳು ಇದುವರೆಗೂ ಶಾಲೆಗಳಿಗೆ ಬರುತ್ತಿದ್ದವು. ಇದೀಗ ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನ ಪಂಚತಾರಾ ಹೋಟೆಲ್ ಗಳಿಗೆ ಈ ಪಿಡುಗು ವ್ಯಾಪಿಸಿದೆ. ಇಂದು ಬೆಂಗಳೂರಿನ ಮೂರು ಪಂಚತಾರಾ ಹೋಟೆಲ್ ಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಒಟೇರಾ ಹೋಟೆಲ್ ಸೇರಿದಂತೆ ಮೂರು ಹೋಟೆಲ್‌ಗಳಿಗೆ ಗುರುವಾರ ನಡುರಾತ್ರಿ 2 ಗಂಟೆ ಸುಮಾರಿಗೆ ಇಮೇಲ್‌ ಬಂದಿದೆ. ಕೂಡಲೇ ಹೋಟೆಲ್ ಸಿಬ್ಬಂದಿ ಮೇಲ್ ಪರಿಶೀಲನೆ ಮಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಬಾಂಬ್ ಸ್ಕ್ಯಾಡ್‍ಗಳು ಪರಿಶೀಲನೆ ನಡೆಸಿವೆ. ಆದರೆ ಯಾವುದೇ ಸ್ಫೋಟಕ ವಸ್ತು ದೊರೆತಿಲ್ಲ ಇದೊಂದು ಹುಸಿಬಾಂಬ್‌ ಬೆದರಿಕೆ ಎಂದು ಪೊಲೀಸರು ಹೇಳಿದ್ದಾರೆ.

ಶಾಲೆಗೆ ಸರಣಿ ಬಾಂಬ್‌ ಬೆದರಿಕೆ

ಈ ಹಿಂದೆ ಏಕ ಕಾಲಕ್ಕೆ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಗಳು ಬಂದಿದ್ದವು. ಈ ವೇಳೆ ಗಾಬರಿಗೊಂಡಿದ್ದ ಶಾಲಾ ಆಡಳಿತ ಮಂಡಳಿಗಳು ಮಕ್ಕಳು ಮತ್ತು ಪೋಷಕರು ತೀವ್ರ ಭಯಗೊಂಡಿದ್ದವು.

ಇತ್ತೀಚೆಗೆ ಮೇ 13ರಂದು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಬಾಂಬ್ ಬೆದರಿಕೆಯ ಮೇಲ್ ಬಂದಿತ್ತು. ಮರುದಿನ ಬೆಂಗಳೂರು ದವ ರಕ್ಷಿಣ ತಾಲೂಕು ವ್ಯಾಪ್ತಿಯ ಕಗ್ಗಲಿಪುರದ ಕನಕಪುರ ರಸ್ತೆಯಲ್ಲಿರುವ ಈಡಿಫೈ ಶಾಲೆ, ಚಿತ್ರಕೂಟ ಸ್ಕೂಲ್, ಗಂಗೋತ್ರಿ ಇಂಟರ್ ನ್ಯಾಷನಲ್ ಸ್ಕೂಲ್ ಗಳಿಗೆ ಬಾಂಬ್ ಬೆದರಿಕೆಯ ಸಂದೇಶಗಳು ಬಂದಿದ್ದವು. ಪರಿಶೀಲನೆ ನಡೆಸಿದ ನಂತರ ಈ ಎಲ್ಲ ಇ ಮೇಲ್ ಗಳು ಹುಸಿ ಎನ್ನುವುದು ಸಾಬೀತಾಗಿತ್ತು.

ಹೊಟೇಲ್‌ ಗುರಿ

ಏಪ್ರಿಲ್ ತಿಂಗಳಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್‌ಎಂಟಿ ಮೈದಾನ ಹತ್ತಿರದಲ್ಲಿರುವ ಕದಂಬ ಹೋಟೆಲ್ ಸುತ್ತಮುತ್ತ ಬಾಂಬ್ ಇರಿಸಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿತ್ತು. ಪರಿಶೀಲನೆ ನಂತರ ಹುಸಿ ಬೆದರಿಕೆ ಪತ್ರ ಎಂದು ತಿಳಿದುಬಂದಿತ್ತು.

2024 ರಲ್ಲಿ ಈ ರೀತಿಯ ಬಾಂಬ್ ಬೆದರಿಕೆಯ ಮೇಲ್ ಮತ್ತು ಪತ್ರಗಳನ್ನು ಕುರಿತು 20ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಎಲ್ಲಿಂದ ಇಂತಹ ಬೆದರಿಕೆಗಳು ಬರುತ್ತಿವೆ ಎನ್ನುವುದು ತಿಳಿಯದೆ ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ.

ಏಪ್ರಿಲ್ ತಿಂಗಳಲ್ಲಿ ಬೆಂಗಳೂರು ದೆಹಲಿ ಜೈಪುರ, ಸೇರಿದಂತೆ ಅನೇಕ ನಗರಗಳ ಶಾಲೆ ಕಾಲೇಜು ಹೋಟೆಲ್ ಗಳಿಗೆ ಬಾಂಬ್ ಬೆದರಿಕೆಯ ಮೇಲ್ ಗಳು ಬಂದಿವೆ

ಬೀಬಲ್.ಕಾಂ ವಿಳಾಸ ದಿಂದ ಕಳೆದ ವರ್ಷ ಡಿಸೆಂಬರ್ 1 ರಂದು ಬೆಂಗಳೂರಿನ 68 ಶಾಲೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ಗಳು ಬಂದಿದ್ದವು.

(ವರದಿ: ಎಚ್. ಮಾರುತಿ, ಬೆಂಗಳೂರು)

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024

ವಿಭಾಗ