Breaking News: ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್‌ ರಾಮನಗರದಲ್ಲಿ ಆತ್ಮಹತ್ಯೆ, ಕರ್ನಾಟಕದಲ್ಲಿ ಹೆಚ್ಚಿದ ಪೊಲೀಸರ ಸಾವು-bangalore news bangalore ccb police inspector thimmegowda committed suicide in ramanagara police investigating ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್‌ ರಾಮನಗರದಲ್ಲಿ ಆತ್ಮಹತ್ಯೆ, ಕರ್ನಾಟಕದಲ್ಲಿ ಹೆಚ್ಚಿದ ಪೊಲೀಸರ ಸಾವು

Breaking News: ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್‌ ರಾಮನಗರದಲ್ಲಿ ಆತ್ಮಹತ್ಯೆ, ಕರ್ನಾಟಕದಲ್ಲಿ ಹೆಚ್ಚಿದ ಪೊಲೀಸರ ಸಾವು

Police death ಕರ್ನಾಟಕದ ಹಿರಿಯ ಪೊಲೀಸ್‌ ಅಧಿಕಾರಿ, ಬೆಂಗಳೂರು ಸಿಸಿಬಿಯಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದು ಕಾರಣ ತಿಳಿದು ಬಂದಿಲ್ಲ.

ಬೆಂಗಳೂರಿನ ಪೊಲೀಸ್‌ ಅಧಿಕಾರಿ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ಪೊಲೀಸ್‌ ಅಧಿಕಾರಿ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರು: ಯಾದಗಿರಿ ಪಟ್ಟಣ ಠಾಣೆಯ ಸಬ್‌ ಇನ್ಸ್‌ ಪೆಕ್ಟರ್‌ ಪರುಶರಾಮ್‌ ಅವರು ಅನುಮಾನಾಸ್ಪವಾಗಿ ಮೃತಪಟ್ಟು ಮೂರು ದಿನಗಳು ಕಳೆದು ತನಿಖೆ ಚುರುಕುಗೊಂಡಿರುವ ನಡುವೆ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಸಿಸಿಬಿಯಲ್ಲಿ ಇನ್ಸ್‌ ಪೆಕ್ಟರ್‌ ಆಗಿದ್ದ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾದವರು. ರಾಮನಗರ ಸಮೀಪದ ಬಿಡದಿಯಲ್ಲಿ ಅವರು ಆತ್ಮಹತ್ಯೆಮಾಡಿಕೊಂಡ ಸ್ಥಿತಿಯಲ್ಲಿ ದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. ತಿಮ್ಮೇಗೌಡ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಿಡದಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬಿಡದಿ ಸಮೀಪದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಿಡದಿ ಪೊಲೀಸರು ಬಂದು ಗಮನಿಸಿ ದೇಹವನ್ನು ಕೆಳಕ್ಕೆ ಇಳಿಸಿದ್ದರು. ಆನಂತರ ಮಾಹಿತಿ ಕಲೆ ಹಾಕಿದಾಗ ಮೃತಪಟ್ಟಿರುವುದು ಪೊಲೀಸ್‌ ಅಧಿಕಾರಿ ಎನ್ನುವುದು ತಿಳಿಯಿತು. ಅವರು ಎರಡು ದಶಕದಿಂದ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ರಾಮನಗರ ಸಹಿತ ನಾನಾ ಕಡೆ ಕೆಲಸ ಮಾಡಿದ್ದು, ಸದ್ಯ ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಅವರನ್ನು ಬೆಂಗಳೂರಿನ ಸಿಸಿಬಿ ವಿಭಾಗಕ್ಕೆ ವರ್ಗ ಮಾಡಲಾಗಿತ್ತು. ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಗೆ ದೇಹವನ್ನು ಕಳುಹಿಸಲಾಗಿದೆ.

ತಿಮ್ಮೇಗೌಡ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ದೂರು ದಾಖಲಿಸಿಕೊಂಡು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಕುಟುಂಬದವರು ಹಾಗೂ ಪೊಲೀಸ್‌ ಇಲಾಖೆಯವಲ್ಲಿರುವ ಅವರ ಪರಿಚಯಸ್ಥರಿಂದಲೂ ವಿವರ ಸಂಗ್ರಹಿಸಲಾಗುತ್ತಿದೆ. ತನಿಖೆ ನಂತರ ನಿಖರ ಕಾರಣ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನದ ಹಿಂದೆಯಷ್ಟೇ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರನ ಕಿರುಕುಳ ತಾಳಲಾರದೇ ಪೊಲೀಸ್‌ ಅಧಿಕಾರಿ ಪರುಶುರಾಂ ಮೃತಪಟ್ಟಿರುವ ಪ್ರಕರಣ ದಾಖಲಾಗಿತ್ತು. ಎರಡು ದಿನದ ಹಿಂದೆಯಷ್ಟೇ ಈ ಘಟನೆ ನಡೆದಿತ್ತು. ಈಗ ಮತ್ತೊಬ್ಬ ಅಧಿಕಾರಿ ಸಾವಿಗೀಡಾಗಿರುವುದು ಚರ್ಚೆಗೆ ಈಡು ಮಾಡಿದೆ. ಪೊಲೀಸ್‌ ಇಲಾಖೆಯಲ್ಲಿನ ಕೆಲ ಒತ್ತಡಗಳಿಂದ ಹೀಗೆ ಆಗುತ್ತಿರಬಹುದೇ ಎನ್ನುವ ಚರ್ಚೆಗಳು ನಡೆದಿವೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.