Bangalore News: ಬೆಂಗಳೂರಲ್ಲಿ ಮತ್ತೆ ರಿಯಲ್‌ ಎಸ್ಟೇಟ್‌ಗೆ ಶುಕ್ರದೆಸೆ, ಮುಂಬೈನ ಕಂಪೆನಿಗಳ ವಿಸ್ತರಣೆ ಲೆಕ್ಕಾಚಾರ, ಯಾವೆಲ್ಲಾ ಸಂಸ್ಥೆಗಳಿವೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಮತ್ತೆ ರಿಯಲ್‌ ಎಸ್ಟೇಟ್‌ಗೆ ಶುಕ್ರದೆಸೆ, ಮುಂಬೈನ ಕಂಪೆನಿಗಳ ವಿಸ್ತರಣೆ ಲೆಕ್ಕಾಚಾರ, ಯಾವೆಲ್ಲಾ ಸಂಸ್ಥೆಗಳಿವೆ

Bangalore News: ಬೆಂಗಳೂರಲ್ಲಿ ಮತ್ತೆ ರಿಯಲ್‌ ಎಸ್ಟೇಟ್‌ಗೆ ಶುಕ್ರದೆಸೆ, ಮುಂಬೈನ ಕಂಪೆನಿಗಳ ವಿಸ್ತರಣೆ ಲೆಕ್ಕಾಚಾರ, ಯಾವೆಲ್ಲಾ ಸಂಸ್ಥೆಗಳಿವೆ

Bangalore Market ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಈಗಾಗಲೇ ಸಾಕಷ್ಟು ಬೆಳೆದಿದೆ. ಬೆಂಗಳೂರಿನ ಜತೆಗೆ ಹೊರಗಡೆಯಿಂದಲೂ ಉದ್ಯಮಿಗಳು ಇಲ್ಲಿಗೆ ಬಂದಿದ್ದಾರೆ. ಮುಂಬೈನಿಂದಲೂ ಇನ್ನಷ್ಟು ಕಂಪೆನಿಗಳು ಬೆಂಗಳೂರಿನಲ್ಲಿ ವಿಸ್ತರಣೆ ಯೋಜನೆ ಹೊಂದಿವೆ.

ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಲ್‌ ವಲಯ ಪ್ರಗತಿ ಕಂಡಿದೆ.
ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಲ್‌ ವಲಯ ಪ್ರಗತಿ ಕಂಡಿದೆ.

ಬೆಂಗಳೂರು: ಬೆಂಗಳೂರು ರಿಯಲ್‌ ಎಸ್ಟೇಟ್‌ ಉದ್ಯಮ ನಿಧಾನವಾಗಿ ಬೆಳೆಯುತ್ತಿದೆ. ಮುಂಬೈ ಸೇರಿದಂತೆ ನಾನಾ ಭಾಗಗಳದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಬೆಂಗಳೂರಿನ ಉದ್ಯಮದ ಮೇಲೆ ಕಣ್ಣಿಟ್ಟು ತಮ್ಮ ವಹಿವಾಟು ವಿಸ್ತರಣೆ ಮಾಡುತ್ತಿದ್ಧಾರೆ. ದೆಹಲಿ, ಮುಂಬೈ ನಂತರ ಪ್ರಮುಖ ರಿಯಲ್‌ ಎಸ್ಟೇಟ್‌ ನಗರಿಯಾಗಿ ಬೆಂಗಳೂರು ಕೂಡ ಬೆಳೆಯುತ್ತಿದೆ. ಹೊಸ ಹೊಸ ಉದ್ಯಮಿದಾರರು, ದೊಡ್ಡ ಕಂಪೆನಿಗಳು ಬೆಂಗಳೂರಿನತ್ತ ಚಿತ್ತ ಹರಿಸುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ವಲಯ ಇನ್ನಷ್ಟು ಬೆಳೆಯುವ ವಿಶ್ವಾಸವನ್ನು ಉದ್ಯಮ ಹೊಂದಿದೆ. ಮುಂಬೈ ಹಾಗೂ ದೆಹಲಿಯಲ್ಲಿರುವಷ್ಟು ಅಲ್ಲದೇ ಇರದೇ ಇದ್ದರೂ ಈಗಾಗಲೇ ಪ್ರಗತಿಯಲ್ಲಿರುವ ರಿಯಲ್‌ ಎಸ್ಟೇಟ್‌ ವಲಯ ವಿಸ್ತರಣೆಯಾಗಬಹುದು ಎನ್ನುವ ಅಂದಾಜವನ್ನು ಇಟ್ಟುಕೊಳ್ಳಲಾಗಿದೆ.

ಕಳೆದ ದಶಕದಲ್ಲಿ, ಮುಂಬೈ ಮತ್ತು ಬೆಂಗಳೂರಿನ ಕನಿಷ್ಠ ಅರ್ಧ ಡಜನ್ ರಿಯಲ್ ಎಸ್ಟೇಟ್ ಡೆವಲಪರ್ ಗಳು ಎರಡೂ ನಗರಗಳಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಿದ್ದಾರೆ. ಬೆಂಗಳೂರು ಮೂಲದ ಪ್ರೆಸ್ಟೀಜ್ ಗ್ರೂಪ್, ಪುರವಂಕರ ಮತ್ತು ದೆಹಲಿ ಮೂಲದ ಡಿಎಲ್ಎಫ್ನಂತಹ ಹಲವಾರು ಸಂಸ್ಥೆಗಳು ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಪ್ರವೇಶಿಸಿವೆ ಅಥವಾ ತಮ್ಮ ಪ್ರವೇಶವನ್ನು ಘೋಷಿಸಿವೆ. ಅದೇ ರೀತಿ ಮುಂಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಲೋಧಾ ಮತ್ತು ಗೋದ್ರೇಜ್ ಕೂಡ ಬೆಂಗಳೂರಿಗೆ ಕಾಲಿಟ್ಟಿವೆ. ಹೀಗೆ ವಿಸ್ತರಣೆಯಾಗುವ ಪ್ರಮಾಣ ಈಗ ಮತ್ತೆ ಹೆಚ್ಚುತ್ತಿದೆ. ಈಗಾಗಲೇ ತಮ್ಮ ಮಾರುಕಟ್ಟೆಯನ್ನು ಹೊಂದಿರುವ ಕಂಪೆನಿಗಳು ಇನ್ನಷ್ಟು ವಿಸ್ತರಣೆಗೆ ಮುಂದಾದರೆ, ಹೊಸ ಉದ್ಯಮಿದಾರು ಬೆಂಗಳೂರು ಸುರಕ್ಷಿತ ಹಾಗೂ ಹೂಡಿಕೆ ಸ್ನೇಹಿತ ನಗರ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮುಂದೆ ಬರುತ್ತಿದ್ದಾರೆ.

ಬೆಂಗಳೂರು ಕಡೆ ಆಕರ್ಷಣೆ ಏಕೆ?

ಕಳೆದ ದಶಕದಲ್ಲಿ, ಗೋದ್ರೆಜ್ ಪ್ರಾಪರ್ಟೀಸ್ ನಿಂದ ಟಾಟಾ ಹೌಸಿಂಗ್ ಮತ್ತು ಮಹೀಂದ್ರಾ ಲೈಫ್ ಸ್ಪೇಸ್ ಗಳವರೆಗೆ ಮುಂಬೈನ ಹಲವಾರು ಪ್ರಮುಖ ಕಂಪೆನಿಗಳು ಉದ್ಯಾನ ನಗರಿಗೆ ಯಶಸ್ವಿ ಪ್ರವೇಶಗಳನ್ನು ಮಾಡಿ ವಹಿವಾಟು ವಿಸ್ತರಿಸಿವೆ. ಇದೇ ಕಂಪೆನಿಗಳು ನಿಯಮಿತವಾಗಿ ವಹಿವಾಟು ವಿಸ್ತರಿಸುತ್ತಲೇ ಇವೆ. ಇತ್ತೀಚಿನ ಉದಾಹರಣೆಯಲ್ಲಿ, ಲೋಧಾ ಕಂಪೆನಿ ಕೂಡ ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಎರಡು ಐಷಾರಾಮಿ ವಸತಿ ಯೋಜನೆಗಳೊಂದಿಗೆ ಬೆಂಗಳೂರಿಗೆ ಕಾಲಿಟ್ಟಿದ್ದಾರೆ.

ಸಮಗ್ರ ರಿಯಲ್ ಎಸ್ಟೇಟ್ ಪ್ಲಾಟ್ ಫಾರ್ಮ್ ಸ್ಕ್ವೇರ್ ಯಾರ್ಡ್ಸ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಗೋದ್ರೆಜ್ ಪ್ರಾಪರ್ಟೀಸ್ ವಿವಿಧ ವಿಭಾಗಗಳಲ್ಲಿ 30 ಕ್ಕೂ ಹೆಚ್ಚು ಯೋಜನೆಗಳೊಂದಿಗೆ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಂಡಿದೆ. ಮತ್ತೊಂದೆಡೆ, ಟಾಟಾ ಹೌಸಿಂಗ್ ನಗರದಲ್ಲಿ ಇದುವರೆಗೆ ಒಂಬತ್ತು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. 2015 ರಲ್ಲಿ ಬೆಂಗಳೂರಿಗೆ ಪ್ರವೇಶಿಸಿದ ಮಹೀಂದ್ರಾ ಲೈಫ್ ಸ್ಪೇಸ್ ನಾಲ್ಕು ವಸತಿ ಯೋಜನೆಗಳನ್ನು ಪ್ರಾರಂಭಿಸಿ ಯಶಸ್ವಿ ಕೂಡ ಆಗಿದೆ.

ಬಹು-ನಗರ ಅಥವಾ ರಾಷ್ಟ್ರಿಯ ಮಟ್ಟದಲ್ಲಿ ವಹಿವಾಟು ವಿಸ್ತರಿಸಲು ಬಯಸುವ ಮುಂಬೈ ಕೇಂದ್ರಿತ ಡೆವಲಪರ್ ಗಳ ಮುಖ್ಯ ಆಯ್ಕೆ ಬೆಂಗಳೂರು. ಎಚ್ ಟಿ ಡಿಜಿಟಲ್ ನೊಂದಿಗೆ ಮಾತನಾಡಿದ ಉದ್ಯಮ ತಜ್ಞರು, ಭೂಮಿಯ ಲಭ್ಯತೆ ಮತ್ತು ಹೂಡಿಕೆ ಆಯ್ಕೆಗೆ ಬೇಕಾದ ಪೂರಕ ವಾತಾವರಣದ ಕಾರಣಕ್ಕೆ ಬೆಂಗಳೂರು ಮಾರುಕಟ್ಟೆ ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ.

ದೇಶದ ಅತಿದೊಡ್ಡ ವಾಣಿಜ್ಯ ಮಾರುಕಟ್ಟೆಯಾಗಿರುವ ಬೆಂಗಳೂರಿಗೆ ಸಾಕಷ್ಟು ಬೇಡಿಕೆ ಇದೆ. ಅಲ್ಲಿಯೇ ಇತರ ಡೆವಲಪರ್ ಗಳ ಆಸಕ್ತಿ ನಗರಕ್ಕೆ ಸ್ಥಳಾಂತರಗೊಂಡಿದೆ. ಹಲವರು ಇಲ್ಲಿ ತಮ್ಮ ವಹಿವಾಟು ವಿಸ್ತರಿಸಿದ್ದಾರೆ. ಇನ್ನೂ ಹಲವರು ವಿಸ್ತರಣೆಗೆ ಮುಂದಾಗುತ್ತಿದ್ದಾರೆ.ಅಲ್ಲದೆ, ನಿರ್ಮಾಣ ವೆಚ್ಚವು ನಗರದಿಂದ ನಗರಕ್ಕೆ ಹೆಚ್ಚು ಬದಲಾಗುವುದಿಲ್ಲವಾದ್ದರಿಂದ, ಮುಂಬೈಗೆ ಹೋಲಿಸಿದರೆ ಅಗ್ಗದ ಭೂಮಿಯ ಬೆಲೆಗಳು ಡೆವಲಪರ್ಗಳಿಗೆ ಬೆಂಗಳೂರಿನಲ್ಲಿ ಲಾಭಾಂಶವನ್ನು ಸಮತೋಲನಗೊಳಿಸಲು ಸಹಾಯ ಮಾಡುವ ನಿರೀಕ್ಷೆ ಇದೆ ಎನ್ನುವುದು ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಇಂಡಿಯಾದ ಬೆಂಗಳೂರು ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಶಂತನು ಮಜುಂದಾರ್ ವಿವರಣೆ.

ಹಲವು ಸಂಸ್ಥೆಗಳ ವಹಿವಾಟು

2024 ರ ಮೊದಲ ತ್ರೈಮಾಸಿಕದಲ್ಲಿ ಶೇ. 4.45 ರಷ್ಟು ಅತಿ ಹೆಚ್ಚು ಬಾಡಿಗೆ ರಿಯಲ್‌ ಎಸ್ಟೇಟ್‌ ನಲ್ಲಿ ಆದಾಯ ಪಡೆದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ; ಶೇ.4.15ರಷ್ಟು ಪಾಲು ಹೊಂದಿರುವ ಮುಂಬೈ ಎರಡನೇ ಸ್ಥಾನದಲ್ಲಿದ್ದು , ಅನುಭವಿ ಹೋಮ್ ಬ್ರಾಂಡ್ ಗಳಾದ ಶೋಭಾ, ಪುರವಂಕರ, ಪ್ರಾವಿಡೆಂಟ್ ಹೌಸಿಂಗ್, ಆರ್ ಎಂಝಡ್ ಮತ್ತು ಬ್ರಿಗೇಡ್ ನಂತಹ ಪ್ರಮುಖುರ ಉಪಸ್ಥಿತಿಯೊಂದಿಗೆ, ಬೆಂಗಳೂರಿನ ಬುದ್ದಿವಂತ ಹಾಗೂ ಹೂಡಿಕೆ ಸ್ನೇಹಿತ ಗ್ರಾಹಕರನ್ನು ಸೆಳೆಯಲು ಭಾರಿ ಸ್ಪರ್ಧೆ ಇನ್ನಷ್ಟು ಸ್ಪರ್ಧೆಯೂ ಆಗಬಹುದು ತಜ್ಞರು ಹೇಳಿದ್ದಾರೆ.

ಬೆಂಗಳೂರು ಒಂದು ದೊಡ್ಡ ಮಾರುಕಟ್ಟೆ. ಗ್ರೇಡ್ ಎ ಜಾಗದಲ್ಲಿ ಕನಿಷ್ಠ 17-18 ಸ್ಥಾಪಿತ ಆಪರೇಟರ್ ಗಳಿವೆ. ಬೆಂಗಳೂರಿಗೆ ಬಂದ ಅನೇಕ ಡೆವಲಪರ್ಗಳು ತಮ್ಮ ಮೊದಲ 1-2 ಯೋಜನೆಗಳೊಂದಿಗೆ ಕಷ್ಟಪಡುತ್ತಿದ್ದಾರೆ. ಏಕೆಂದರೆ ಗ್ರಾಹಕರ ವಿಶ್ವಾಸವನ್ನು ಗೆಲ್ಲಲು ಅವರ ಯಶಸ್ಸಿನ ಹಾದಿಯೂ ಮುಖ್ಯವಾಗುತ್ತದೆ. ಈ ಕಾರಣದಿಂದಲೇ ಹೊರಗಿನಿಂದ ಬರುವ ದೊಡ್ಡ ಸಂಸ್ಥೆಗಳು ಸಹಜವಾಗಿಯೇ ಹೂಡಿಕೆ ಮಾಡಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತವೆ. ಇದರಿಂದ ವಹಿವಾಟು ವಿಸ್ತರಣೆಗೊಳ್ಳಲಿದೆ ಎನ್ನುತ್ತಾರೆ ಮಜುಂದಾರ್.

ಬೆಂಗಳೂರು ಮೂಲದ ಪುರವಂಕರ ಲಿಮಿಟೆಡ್ 2017 ರಲ್ಲಿ ಪುಣೆ ಮಾರುಕಟ್ಟೆಗೆ ಮತ್ತು 2021 ರಲ್ಲಿ ಮುಂಬೈ ಮಾರುಕಟ್ಟೆಗೆ ಪ್ರವೇಶಿಸಿತು. ಕಂಪನಿಯು ಕೆಲವು ವರ್ಷಗಳಿಂದ ಮುಂಬೈ ಮತ್ತು ಪುಣೆ ಎರಡರಲ್ಲೂ ವಿಸ್ತರಣಾ ಮೋಡ್ ನಲ್ಲಿದೆ. ಬೆಂಗಳೂರಿಲ್ಲಿ ಕೂಡ ಹಲವಾರು ಯಶಸ್ವಿ ಯೋಜನೆಗಳನ್ನು ಪುರವಂಕರ ಜಾರಿಗೊಳಿಸಿದೆ.

ಅದೇ ರೀತಿ ಬೆಂಗಳೂರು ಮೂಲದ ಡೆವಲಪರ್ ಪ್ರೆಸ್ಟೀಜ್ ಗ್ರೂಪ್ 2024ರ ಹಣಕಾಸು ವರ್ಷದಲ್ಲಿ 37 ಯೋಜನೆಗಳನ್ನು ಹೊಂದಿದೆ. ಈ ಏಳು ಯೋಜನೆಗಳು ಮುಂಬೈನಲ್ಲಿ, 20 ಬೆಂಗಳೂರಿನಲ್ಲಿವೆ ಮತ್ತು ಉಳಿದವು ಹೈದರಾಬಾದ್, ಕ್ಯಾಲಿಕಟ್, ಮಂಗಳೂರು, ಕೊಚ್ಚಿ, ಊಟಿಯಂತಹ ನಗರಗಳಲ್ಲಿವೆ ಎಂದು ಕಂಪನಿಯ ಹೂಡಿಕೆದಾರರ ಪ್ರಸ್ತುತಿ ತಿಳಿಸಿದೆ. ಕಂಪನಿಯು 30 ಯೋಜನೆಗಳು ಜಾರಿ ಹಂತದಲ್ಲಿವೆ ಅದರಲ್ಲಿ ಮೂರು ಮುಂಬೈನಲ್ಲಿ ಮತ್ತು 17 ಬೆಂಗಳೂರಿನಲ್ಲಿವೆ ಎಂದು ಎಂದು ಹೆಸರು ಹೇಳಲು ಬಯಸದ ಮುಂಬೈ ಮೂಲದ ಡೆವಲಪರ್ ಎಚ್ಟಿ ಡಿಜಿಟಲ್‌ಗೆ ತಿಳಿಸಿದರು.

Whats_app_banner