ಕನ್ನಡ ಸುದ್ದಿ  /  ಕರ್ನಾಟಕ  /  Airforce Job Mela: ಬೆಂಗಳೂರಿನ ಜಾಲಹಳ್ಳಿ ವಾಯು ಸೇನಾ ಕಚೇರಿಯಲ್ಲಿ ಜುಲೈ 19 ರಂದು ಉದ್ಯೋಗ ಮೇಳ

Airforce Job mela: ಬೆಂಗಳೂರಿನ ಜಾಲಹಳ್ಳಿ ವಾಯು ಸೇನಾ ಕಚೇರಿಯಲ್ಲಿ ಜುಲೈ 19 ರಂದು ಉದ್ಯೋಗ ಮೇಳ

Bangalore News ಬೆಂಗಳೂರಿನ ಜಾಲಹಳ್ಳಿಯ ವಾಯು ಸೇನಾ ಕೇಂದ್ರವು ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ.

ಬೆಂಗಳೂರಿನ ಜಾಲಹಳ್ಳಿ ವಾಯುಸೇನಾ ಕೇಂದ್ರದಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
ಬೆಂಗಳೂರಿನ ಜಾಲಹಳ್ಳಿ ವಾಯುಸೇನಾ ಕೇಂದ್ರದಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.

ಬೆಂಗಳೂರು: ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯು ಸೇನಾ( Air Force) ಕಚೇರಿಯಲ್ಲಿ ಉದ್ಯೋಗ ಮೇಳವನ್ನು 2024ರ ಜುಲೈ 19 ರಂದು ಹಮ್ಮಿಕೊಳ್ಳಲಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ಜನರಲ್‌ ರೀ ಸೆಟ್ಲ್‌ಮಂಟ್‌ ನಿರ್ದೇಶನಾಯಲವು ಬೆಂಗಳೂರಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 7ರಿಂದಲೇ ನೇರ ನೋಂದಣಿ ಆರಂಭವಾಗಲಿದೆ. ಮೂರು ಗಂಟೆಗಳ ಕಾಲ ನೋಂದಣಿ ಇರಲಿದ್ದು, ಆನಂತರ ನೇಮಕಾತಿ ಪ್ರಕ್ರಿಯೆಯೂ ಜಾಲಹಳ್ಳಿ ಪಶ್ಚಿಮದಲ್ಲಿರುವ ವಾಯು ಸೇನಾ ಕಚೇರಿಯ ಆವರಣದಲ್ಲಿ( ಎಂಟಿ ಕಾಂಪ್ಲೆಕ್ಸ್‌) ನಡೆಯಲಿದೆ.

ಈಗಾಗಲೇ ಸೇನೆಯಲ್ಲಿ ಕೆಲಸ ಮಾಡಿರುವ ಸೇನಾ ಸಿಬ್ಬಂದಿ( Ex-Servicemen)ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಬಹುದು. ಅವರಿಗೆ ವಿವಿಧ ಹುದ್ದೆಗಳಿಗೆ ನೇಮಕಲಾತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮೇಳದಲ್ಲಿ ಭಾಗಿಯಾಗಲು ಬಯಸುವ ಎಕ್ಸ್‌ ಸರ್ವೀಸ್‌ ಮೆನ್‌ಗಳು ಅಂದು ಇಎಸ್‌ಎಂ ಕಾರ್ಡ್‌, ಬಯೋ ಡೆಟಾದ ಐದು ಪ್ರತಿಗಳೊಂದಿಗೆ ಅಂದಿನ ಸಂದರ್ಶನಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಎಕ್ಸ್‌ ಸರ್ವೀಸ್‌ಮೆನ್‌ಗಳು ತಮ್ಮ ಶಿಕ್ಷಣ, ಕೌಶಲ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ಪ್ರಮುಖ ಸಾರ್ವಜನಿಕ ವಲಯದ ಉದ್ದಿಮೆಗಳು, ಕೈಗಾರಿಕೆಗಳು ಹಾಗೂ ಸಂಸ್ಥೆಗಳು,. ಕಾರ್ಪೋರೇಟ್‌ ಸಂಸ್ಥೆಗಳಿಗೆ ಇರುವ ಬೇಡಿಕೆಗೆ ಪೂರಕವಾಗಿ ಈ ಮೇಳದಲ್ಲಿ ಮಾಹಿತಿ ವಿನಿಮಯಗಳು ನಡೆಯಲಿವೆ. ಇದರಿಂದ ಈ ಕಂಪೆನಿಗಳಿಗೆ ಕೆಲಸಕ್ಕೆ ಸೇರುವ ಬಯಕೆ ಇದ್ದವರಿಗೆ, ಸುಲಭವಾಗಿ ಸೇರ್ಪಡೆಗೆ ಬೇಕಾದ ಮಾರ್ಗದರ್ಶನ, ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎನ್ನುವುದು ವಾಯು ಸೇನಾ ಅಧಿಕಾರಿಗಳು ನೀಡಿರುವ ವಿವರಣೆ.

ಇದಕ್ಕಾಗಿ ಆನ್‌ಲೈನ್‌ ಮೂಲಕವೂ ನೋಂದಣಿಗೆ ಅವಕಾಶ ನೀಡಲಾಗಿದ್ದು. ಆ ಮೂಲಕವೂ ಉದ್ಯೋಗ ಪಡೆಯಲು ಸುಲಭವಾಗಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಈ ಸಂದರ್ಶನ ಇರಲಿದ್ದು. ಪ್ರಮುಖ ಸಂಸ್ಥೆ, ಕಂಪೆನಿಗಳ ಪ್ರತಿನಿಧಿಗಳು ಹಾಜರಿದ್ದು ಬೇಕಾದ ಪ್ರಕ್ರಿಯೆ ಮುಗಿಸಲಿದ್ದಾರೆ. ಎಕ್ಸ್‌ ಸರ್ವೀಸನ್‌ ನೇಮಕಕ್ಕೆ ಪೂರಕವಾಗಿ ಯಾವುದೇ ಸಂಸ್ಥೆಯವರು ಅಂದು ಉದ್ಯೋಗ ಮೇಳದಲ್ಲಿ ಭಾಗಿಯಾಗಿ ತಮ್ಮ ಮಳಿಗೆ ಕೂಡ ತೆರೆಯಬಹುದು ಎಂದು ತಿಳಿಸಲಾಗಿದೆ.

ಈ ಕುರಿತಾದ ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರು, ಜನರಲ್‌ ಸೆಟ್ಲ್‌ಮೆಂಟ್‌ ನಿರ್ದೇಶನಾಲಯ, ಪಶ್ಚಿಮ ಬ್ಲಾಕ್‌ 4, ಆರ್‌ಕೆ ಪುರಂ, ದೆಹಲಿ110066 ಗೆ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 011 20862542 ಸಂಪರ್ಕಿಸಬಹುದು.

email seopadgr@desw.gov.in

web http://www.dgrindia.gov.in

ಅಥವಾ

ಡಿಆರ್‌ಝಡ್‌ ( ದಕ್ಷಿಣ) ಪುಣೆ ಕಚೇರಿಯನ್ನೂ ಸಂಪರ್ಕಿಸಬಹುದು,

020 26341217 ಗೆ ಕರೆ ಮಾಡಿ ಮಾತನಾಡಬಹುದು

ಇ ಮೇಲ್‌ ವಿಳಾಸ drzspne@desw.gov.in

ಮಾಹಿತಿಗಾಗಿ ಆರ್‌ಕೆ ಸಿಂಗ್‌-9742998194

ಆರ್.‌ ಕುಮಾರ್‌-8618387821