ಕನ್ನಡ ಸುದ್ದಿ  /  ಕರ್ನಾಟಕ  /  Bangalore Mango Fair: ಬೆಂಗಳೂರಲ್ಲಿ ಮೇ 23ರಿಂದ ಮಾವಿನ ಮೇಳ ಶುರು, ಈ ಬಾರಿ ಮೇಳದ ವಿಶೇಷ ಏನು

Bangalore Mango Fair: ಬೆಂಗಳೂರಲ್ಲಿ ಮೇ 23ರಿಂದ ಮಾವಿನ ಮೇಳ ಶುರು, ಈ ಬಾರಿ ಮೇಳದ ವಿಶೇಷ ಏನು

Mango Mela ಮಾವಿನ ಹಣ್ಣಿನ ಖರೀದಿಗೆ ಬೆಂಗಳೂರಿನ ಮಾವಿನ ಮೇಳ ಅವಕಾಶ ನೀಡಲಿದೆ. ಈ ಬಾರಿಯ ಮಾವು ಮೇಳಕ್ಕೆ ಸಿದ್ದತೆಗಳು ನಡೆದಿವೆ.

ಬೆಂಗಳೂರಿನ ಮಾವಿನ ಮೇಳ ಖರೀದಿಗೆ ಸಿದ್ದರಾಗಿ
ಬೆಂಗಳೂರಿನ ಮಾವಿನ ಮೇಳ ಖರೀದಿಗೆ ಸಿದ್ದರಾಗಿ

ಬೆಂಗಳೂರು: ಅಲ್ಲಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಈಗಾಗಲೇ ಎಲ್ಲೆಡೆ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಖರೀದಿ ಭರಾಟೆಯೂ ಜೋರಾಗಿದೆ. ಬಗೆಬಗೆಯ ಮಾವಿನಹಣ್ಣನ್ನು ಖರೀದಿಸಲು ಜನ ಆಸಕ್ತಿ ತೋರುತ್ತಿದ್ದಾರೆ. ಮಾವು ಮಾರಾಟದ ಅತಿ ದೊಡ್ಡ ಮಾರುಕಟ್ಟೆಯಾದ ಬೆಂಗಳೂರಿನಲ್ಲಿಯೂ ಮಾವಿನ ಘಮ ಘಮ ಕಾಣಸಿಗುತ್ತಿದೆ. ಈ ಬಾರಿ ಮಾವಿನ ಮೇಳವೂ ಬೆಂಗಳೂರಿನಲ್ಲಿ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮೇ 23ರಿಂದಲೇ ಲಾಲ್‌ ಬಾಗ್‌ ಉದ್ಯಾನವನದಲ್ಲಿ ಮಾವಿನ ಮೇಳ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ ( KSMDMCL) ಈಗಾಗಲೇ ಕರ್ನಾಟಕದ ನಾನಾ ಭಾಗದ ಮಾವು ಬೆಳೆಗಾರರು, ಮಾರಾಟಗಾರರು. ಸರಬರಾಜದಾರರು ಸೇರಿದಂತೆ ಎಲ್ಲಾ ವಲಯದವರೊಂದಿಗೆ ಸಭೆ ನಡೆಸಿದ್ದು ಮೇ 23ರಂದು ಮಾವಿನ ಮೇಳ ಆರಂಭಿಸಿ ಬೇಡಿಕೆ ಇರುವವವರೆಗೂ ಕೆಲ ದಿನಗಳ ಕಾಲ ಮುಂದುವರೆಸಲು ನಿರ್ಧರಿಸಿದೆ. ಕನಿಷ್ಠ ಮೂರು ವಾರವಾದರೂ ಮಾವಿನ ಮೇಳ ಬೆಂಗಳೂರಿನಲ್ಲಿ ಇರಲಿದೆ.

ಈ ಬಾರಿ ಮಾವಿನ ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನಲ್ಲಿ ಮಾತ್ರ ಹೆಚ್ಚು ಬೆಳೆಯುವ ಕರಿ ಇಷಾಡ್‌( Kari ishad) ತಳಿನ ಮಾವು ವಿಶೇಷ ಆಕರ್ಷಣೆಯಾಗಲಿದೆ. ಇದು ಬಲು ರುಚಿ ಮಾವಿನ ಹಣ್ಣು ಎಂದು ಗುರುತಿಸಿಕೊಂಡಿದ್ದು ಈಗಾಗಲೇ ಜಿಐ ಟ್ಯಾಗ್‌ ಕೂಡ ಪಡೆದುಕೊಂಡಿದೆ.

ಇದರೊಟ್ಟಿಗೆ ಇನ್ನೂ 50 ತಳಿಯ ಮಾವಿನ ಹಣ್ಣುಗಳು, 15 ತಳಿಯ ಹಲಸಿನ ಹಣ್ಣುಗಳು ಮೇಳದಲ್ಲಿ ಸಿಗಲಿವೆ. ಈಗಾಗಲೇ ಮಾವು ಮಾರಾಟಗಾರರು ತಾವು ಬೆಳೆದ ವಿಭಿನ್ನ ತಳಿಯ ಹಣ್ಣುಗಳನ್ನು ತರುವುದಾಗಿ ಹೇಳಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ತಮಿಳುನಾಡು ರಾಜ್ಯದಲ್ಲಿ ಬೆಳೆಯುವ ಹಣ್ಣುಗಳು ಮೇಳಕ್ಕೆ ಬರಬಹುದು.

ಮಾವು ಅಭಿವೃದ್ದಿ ಹಾಗೂ ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ಮಾತನಾಡಿ, ಈ ಬಾರಿ ಹೆಚ್ಚಿನ ಮಳಿಗೆಗಳೇನೂ ಇರುವುದಿಲ್ಲ. ಆದರೂ ಗುಣಮಟ್ಟದ ಹಣ್ಣುಗಳು ಮೇಳಕ್ಕೆ ಬರಲಿವೆ. ಕೊಪ್ಪಳದ ಕೇಸರ್‌, ಚಿತ್ರದುರ್ಗ ಹಾಗೂ ತುಮಕೂರಿನ ಬಾದಾಮಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಮೇಳದಲ್ಲಿ ಸಿಗಲಿದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ. ಬೆಂಗಳೂರು ಗ್ರಾಮಾಂತರ ಭಾಗದವರು ರಸಪೂರಿ ಹಾಗೂ ತೋತಾಪುರಿ ಮಾವನ್ನು ಮಾರುಕಟ್ಟೆಗೆ ತರಲಿದ್ದಾರೆ ಎಂದು ವಿವರಿಸಿದರು.

ಏಪ್ರಿಲ್‌ ತಿಂಗಳಿನಲ್ಲಿಯೇ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಗ್ರೌಂಡ್ಸ್‌ನಲ್ಲಿ ಮಾವು ಉತ್ಸವವನ್ನು ನಾಲ್ಕು ದಿನದ ಮಟ್ಟಿಗೆ ಆಯೋಜಿಸಲಾಗಿತ್ತು. ಆಗಲೂ ಹೆಚ್ಚಿನ ಜನ ಮಾವು ಖರೀದಿ ಮಾಡಿದ್ದರು. ಈ ಬಾರಿಯೂ ನೂರಕ್ಕೂ ಅಧಿಕ ರೈತರೊಂದಿಗೆ ಮೇಳ ನಡೆಸಲಾಗುತ್ತಿದೆ. ಇದಕ್ಕೂ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆಯಿದೆ.

ಕೋವಿಡ್‌ ಕಾರಣಕ್ಕೆ ಎರಡು ವರ್ಷ ಮಾವಿನ ಮೇ ನಡೆದಿರಲಿಲ್ಲ. ಎರಡು ವರ್ಷದ ಹಿಂದೆ ಮಾವಿನ ಮೇಲ ಬಂದಾಗ ಜನ ಹಣ್ಣು ಖರೀದಿಸಿದ್ದರು. ಕಳೆದ ವರ್ಷ ಮಾವಿನ ಫಸಲು ಕಡಿಮೆ ಇದ್ದ ಕಾರಣಕ್ಕೆ ಅಂತಹ ಗಮನವನ್ನು ಮಾವು ಮೇಳ ಸೆಳೆದಿರಲಿಲ್ಲ. ಕಳೆದ ವರ್ಷ ತಡವಾಗಿ ಮೇಳ ಆರಂಭಿಸಲಾಗಿತ್ತು. ರೈತರ ಬೇಡಿಕೆಯಂತೆ ಹೆಚ್ಚಿನ ಮಾವು ಖರೀದಿ ಕಾರಣಕ್ಕೆ ಜೂನ್‌ ಮೂರನೇ ವಾರದವರೆಗೂ ಬೆಂಗಳೂರು ಮಾವು ಮೇಳ ವಿಸ್ತರಣೆಯಾಗಿತ್ತು. ಈ ಬಾರಿ ಮೊದಲೇ ಮೇಳ ಶುರುವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ