Bangalore Crime: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಅಪಹರಣ ಪ್ರಕರಣ; 5 ಕೋಟಿ ರೂ.ಗೆ ಬೇಡಿಕೆ, 48 ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಅಪಹರಣ ಪ್ರಕರಣ; 5 ಕೋಟಿ ರೂ.ಗೆ ಬೇಡಿಕೆ, 48 ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು

Bangalore Crime: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಅಪಹರಣ ಪ್ರಕರಣ; 5 ಕೋಟಿ ರೂ.ಗೆ ಬೇಡಿಕೆ, 48 ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು

Kidnap News ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಭಾರೀ ಹಣಕ್ಕೆ ಬೇಡಿಕೆಯಿಟ್ಟಿದ್ದವರನ್ನು ಬಂಧಿಸಲಾಗಿದೆ.ವರದಿ: ಎಚ್‌. ಮಾರುತಿ, ಬೆಂಗಳೂರು

ಬೆಂಗಳೂರು ಪೊಲೀಸರು ಅಪಹರಣ ಪ್ರಕರಣ ಬೇಧಿಸಿದ್ದಾರೆ.
ಬೆಂಗಳೂರು ಪೊಲೀಸರು ಅಪಹರಣ ಪ್ರಕರಣ ಬೇಧಿಸಿದ್ದಾರೆ.

ಬೆಂಗಳೂರು: ಹಣಕ್ಕಾಗಿ ಷೇರು ಮಾರುಕಟ್ಟೆ ಹೂಡಿಕೆದಾರರೊಬ್ಬರನ್ನು ನಡುರಾತ್ರಿ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಸದಾ ಗಿಜಿಗುಡುತ್ತಿರುವ ರಾಜ್ಯ ರಾಜಧಾನಿಯ ಎಂಜಿ ರಸ್ತೆಯಲ್ಲಿ ಇವರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡು ಅಪಹರಣಕಾರರು 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹೂಡಿಕೆದಾರ ಐಷಾರಾಮಿ ಜೀವನ ನಡೆಸುತ್ತಿದ್ದರು. ಇದನ್ನು ಗಮನಿಸಿಯೇ ಇವರನ್ನು ಅಪಹರಿಸಿದ್ದ ಇಬ್ಬರನ್ನು ಬಂಧಿಸಲಾಗಿದ್ದು ಈ ಪ್ರಕರಣದಲ್ಲಿ ಭಾಗಿಯಾದ ಇನ್ನೂ ಕೆಲವರಿಗಾಗಿ ಪೋಲಿಸರು ಶೋಧ ನಡೆಸಿದ್ದಾರೆ. ಈ ಪ್ರಕರಣ ಜೂನ್ 16 ರಂದು ನಡೆದಿದ್ದರೂ ಭಾನುವಾರ ಬೆಳಕಿಗೆ ಬಂದಿದೆ.

ಬೆಂಗಳೂರು ನಗರದಲ್ಲಿ ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರು ನಗರ ಅತ್ಯಂತ ಸುರಕ್ಷತೆ ಹೊಂದಿರುವ ನಗರ. ಜೈಹಿಂದ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಅಪಹರಣದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಹಂಚಿಕೊಂಡಿದ್ದಾರೆ. ಎಂ ಜಿ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿದ್ದರೂ ಹತ್ತು ಮಂದಿ ಅಜ್ಮೀರ್ ರಾಜು ಅವರನ್ನು ವಾಹನದೊಳಗೆ ತಳ್ಳಿ ಪರಾರಿಯಾಗಿರುವ ದೃಶ್ಯ ಇದಾಗಿದೆ.

ಅಜ್ಮೀರ್ ರಾಜು ಅವರು ಐಷಾರಾಮಿ ಜೀವನ ನಡೆಸುತ್ತಿದ್ದು, ಲಕ್ಷುರಿ ಕಾರುಗಳ ಒಡೆಯರಾಗಿದ್ದಾರೆ. ಕ್ರಿಕೆಟ್ ಆಟಗಾರರ ಜೊತೆ ಸಂಬಂಧ ಹೊಂದಿದ್ದು, ವಿದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇವರು 6-7 ತಿಂಗಳಿಂದ ಎಂ ಜಿ ರಸ್ತೆಯ ಹೋಟೆಲ್ ನಲ್ಲಿ ವಾಸವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ರಾಜು ಅವರ ಜೀವನಶೈಲಿ ಗಮನಿಸಿಯೇ ಅಪಹರಣದ ಸೂತ್ರಧಾರ ಅಪಹರಣಕ್ಕೆ ಸಂಚು ರೂಪಿಸಿದ್ದ.

ಜೂನ್ 16 ರಂದು ರಾತ್ರಿ ರಾಜು ತಮ್ಮ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದರು. ಇವರನ್ನು ಅಪಹರಣಕಾರ ಕಾರಿನಲ್ಲಿ ಹಿಂಬಾಲಿಸುತ್ತಿದ್ದ. ಇದನ್ನು ಗಮನಿಸಿದ ರಾಜು ಅವರು ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಮ್ಮನ್ನು ಹಿಂಬಾಲಿಸುತ್ತಿದ್ದ ಕಾರಿನತ್ತ ತೆರಳಿದ್ದರು.

ಆಗ ಅಪಹರಣಕಾರರು ರಾಜು ಅವರನ್ನು ಕಾರಿನೊಳಗೆ ದಬ್ಬಿ ಬಾಗಿಲು ಹಾಕಿಕೊಂಡು ತೆಲಂಗಾಣದತ್ತ ಪ್ರಯಾಣ ಬೆಳೆಸಿದ್ದರು. ಅಲ್ಲಿ ಅವರನ್ನು ತೋಟದ ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿ 5 ಕೋಟಿ ರೂಪಾಯಿ ಮತ್ತು ಬಿಟ್ ಕಾಯಿನ್ ಗೆ ಬೇಡಿಕೆ ಇರಿಸಿದ್ದರು. ರಾಜು ಅವರ ಸ್ನೇಹಿತ ನೀಡಿದ ದೂರಿನ ಅನ್ವಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಸ್ವತಃ ಅಪಹರಣಕ್ಕೊಳಗಾಗಿದ್ದ ಅಜ್ಮೀರ್ ರಾಜು ಎಕ್ಸ್ ನಲ್ಲಿ ಅಪಹರಣ ಕುರಿತು ಬರೆದುಕೊಂಡಿದ್ದು ತಮ್ಮನ್ನು ರಕ್ಷಿಸಿದ ಬೆಂಗಳೂರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಜೂನ್ 16 ರಂದು ನಡುರಾತ್ರಿ ಎಂಜಿ ರಸ್ತೆಯಲ್ಲಿ ಅಪಹರಣಕಾರರು ನನ್ನನ್ನು ಅಪಹರಿಸಿ ತೆಲಂಗಾಣದ ದಟ್ಟ ಅರಣ್ಯದ ತೋಟದ ಮನೆಗೆ ಕರೆದೊಯ್ದಿದ್ದರು. 48 ಗಂಟೆಯೊಳಗೆ ಪೊಲೀಸರು ಅರಣ್ಯದಲ್ಲಿ ನನ್ನನ್ನು ಇರಿಸಿಕೊಂಡಿದ್ದ ಸ್ಥಳವನ್ನು ಪತ್ತೆ ಮಾಡಿ ನನ್ನ ಜೀವವನ್ನು ಉಳಿದಿದ್ದಾರೆ ಎಂದು ತಿಳಿಸಿದ್ದಾರೆ.

ನಗರದ ಪೊಲೀಸರು ನನಗೆ ಮರುಜನ್ಮ ನೀಡಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ. ವಿಶೇಷವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಹಲಸೂರು ಅಪರಾಧ ವಿಭಾಗದ ಡಿಸಿಪಿ ಮಧು ಅವರಿಗೂ ಧನ್ಯವಾದಗಳು ಎಂದಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

 

 

Whats_app_banner