ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಪೂರ್ವ ಮುಂಗಾರು ಚುರುಕು; ಬೆಂಗಳೂರಿನಲ್ಲಿ ನೀರಿನ ಸ್ಥಿತಿ ಈಗ ಹೇಗಿದೆ?

Bangalore News: ಪೂರ್ವ ಮುಂಗಾರು ಚುರುಕು; ಬೆಂಗಳೂರಿನಲ್ಲಿ ನೀರಿನ ಸ್ಥಿತಿ ಈಗ ಹೇಗಿದೆ?

ಬೆಂಗಳೂರಿನಲ್ಲಿ ಸದ್ಯ ನೀರಿನ ಸಮಸ್ಯೆ ಹೇಗಿದೆ.ಮಳೆಯಾದ ನಂತರ ಪರಿಸ್ಥಿತಿ ಸುಧಾರಿಸಿದೆಯೇ? ಇಲ್ಲಿದೆ ಮಾಹಿತಿವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿರುವ ಸೂಚನೆಯಿದೆ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿರುವ ಸೂಚನೆಯಿದೆ

ಬೆಂಗಳೂರು: ಬೆಂಗಳೂರಿನಲ್ಲಿ ಮಳೆಗಾಲ ಆರಂಭವಾಗಿದ್ದು ನೀರಿನ ಸಮಸ್ಯೆ ನಿಧಾನವಾಗಿ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿವೆ. ಉದ್ಯಾನ ನಗರಿಯ 1.4 ಕೋಟಿ ನಿವಾಸಿಗಳು ಕಳೆದ 3ತಿಂಗಳಿನಿಂದ ನೀರಿಗಾಗಿ ಹೋರಾಟವನ್ನೇ ನಡೆಸಿದ್ದರು. ಕಾವೇರಿ ನೀರು ಸಾಕಾಗುತ್ತಿರಲಿಲ್ಲ, ಬೋರ್‌ ವೆಲ್‌ ಗಳು ಬತ್ತಿ ಹೋಗಿದ್ದವು, ಟ್ಯಾಂಕರ್‌ ಗಳ ನೀರಿನ ಬೆಲೆ ಮೂರು ಪಟ್ಟು ಹೆಚ್ಚಳವಾಗಿ ನಾಗರೀಕರು ಬೆಂಗಳೂರನ್ನು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರಿಗೆ ಪ್ರತಿದಿನ 1860 ಮಿಲಿಯನ್‌ ಲೀಟರ್‌ ನೀರಿನ ಅವಶ್ಯಕತೆ ಇದ್ದು, ಮಾರ್ಚ್‌ ವೇಳೆಗೆ ಇನ್ನೂ 1500 ಮಿಲಿಯನ್‌ ಲೀಟರ್‌ ನೀರಿನ ಕೊರತೆ ಉಂಟಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಇದೀಗ ಕಳೆದ ಹತ್ತು ದಿನಗಳಿಂದ ದಿನ ಬಿಟ್ಟು ದಿನ ಬೆಂಗಳೂರಿನಲ್ಲಿ ಮಳೆಯಾಗುತಿದೆ. ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆಯಾಗುತ್ತಿದ್ದು ಇದೇ ರೀತಿ ಮಳೆಯಾಗುತಿದ್ದರೆಪರಿಸ್ಥಿತಿ ಸುಧಾರಿಸಬಹುದು ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಅದರಲ್ಲೂ ಐಟಿ ಕಂಪನಿಗಳೇ ಅಧಿಕವಾಗಿರುವ ಹೊರ ವರ್ತುಲ ರಸ್ತೆಯಲ್ಲಿ ಉತ್ತಮ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಮೂಲಗಳ ಪ್ರಕಾರ ಈ ತಿಂಗಳ 15-20 ದಿನಗಳ ಕಾಲ ಉತ್ತಮ ಮಳೆಯಾಗಲಿದೆ.

ಇಷ್ಟು ಪ್ರಮಾಣದ ಮಳೆಗೆ ಬೆಂಗಳೂರಿನ ನೀರಿನ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳುವಂತಿಲ್ಲ.

ಆದರೆ ಪರಿಸ್ಥಿತಿ ಸುದಾರಿಸುತ್ತಿದೆ ಎಂದಷ್ಟೇ ಹೇಳಬಹುದು. ಅಲ್ಲಲ್ಲಿ ಬೋರ್‌ ವೆಲ್‌ಗಳು ರೀ ಚಾರ್ಜ್‌ ಆಗಿವೆ. ಇದರಿಂದ ಕಾವೇರಿ ನೀರಿನ ಅವಲಂಬನೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಶೇ.ನೂರರಷ್ಟು ಬೋರ್‌ ವೆಲ್‌ ಗಳು ಸಂಪೂರ್ಣವಾಗಿ ರೀ ಚಾರ್ಜ್‌ ಆಗಿವೆ ಎಂದು ಹೇಳುವಂತಿಲ್ಲ. ನಗರದ ಶೇ.50 ಬೋರ್‌ ವೆಲ್‌ ಗಳು ಬತ್ತಿ ಹೋಗಿದ್ದು ಮೂರು ದಿನಗಳ ಮಳೆಗೆ ಮರುಪೂರಣ ಆಗಲಾರವು ಎಂದು ತಜ್ಞರು ಹೇಳುತ್ತಾರೆ.

ಕಾವೇರಿ ನೀರಿನ ಒಳ ಹರಿವು ಸುಧಾರಿಸಿದ್ದರೂ ಬೆಂಗಳೂರಿನಂತಹ ಬೃಹತ್‌ ನಗರಕ್ಕೆ ನೀರು ಪೂರೈಕೆಯಾಗುವಷ್ಟು ಮಳೆಯಾಗಿಲ್ಲ. ಇನ್ನೂ ಕಾವೇರಿ ನೀರನ್ನು 4-5 ದಿನಗಳಿಗೊಮ್ಮೆ ಬಿಡಲಾಗುತ್ತಿದೆ. ಅಲ್ಪ ಪ್ರಮಾಣದಲ್ಲಿ ಕೊಳವೆ ಬಾವಿಗಳು ರೀ ಚಾರ್ಜ್‌ ಆಗಿದ್ದು ವಾರಕ್ಕೊಮ್ಮೆ ಬೋರ್‌ ವೆಲ್‌ ಆನ್‌ ಮಾಡಬಹುದಾಗಿದೆ ಎಂದು ಕೆಲವು ಮನೆಗಳ ಮಾಲೀಕರು ಹೇಳುತ್ತಾರೆ. ಇದರಿಂದ ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆಯಾಗಿದೆ.

ಬಿಬಿಎಂಪಿಗೆ ದಶಕದ ಹಿಂದೆ ಸೇರ್ಪಡೆಯಾಗಿ ಅತಂತ್ರ ಸ್ಥಿತಿಯಲ್ಲಿದ್ದ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇನ್ನೂ ಸುಧಾರಿಸಿಲ್ಲ. ಈಗಲೂ ಟ್ಯಾಂಕರ್ ನೀರನ್ನೇ ಅವಲಂಬಿಸಿವೆ. ಈ ಪ್ರದೇಶಗಳ ಕೊಳವೆ ಬಾವಿಗಳು ಮರುಪೂರಣವಾಗಿದ್ದು ಸ್ಥಳೀಯ ಮಟ್ಟದಲ್ಲೇ ನೀರು ಲಭ್ಯವಾಗುತ್ತಿದೆ.

ಮೇ ತಿಂಗಳಲ್ಲಿ ಉಷ್ಣಾಂಶ ಕಡಿಮೆಯಾಗಿದೆ. ಬಿಸಲಿಲು ಕಡಿಮೆಯಾಗಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ 128.7 ಎಂ ಎಂ ಮಳೆಯಾಗುತ್ತದೆ. ಈ ವರ್ಷವೂ ಇದೇ ಪ್ರಮಾಣದಲ್ಲಿ ಮಳೆಯಾಗಬಹುದು ಎಂದು ಹೇಳಲಾಗುತ್ತಿದೆ.

ಮೇ ತಿಂಗಳ 2 ರಂದು ಬೆಂಗಳೂರಿನಲ್ಲಿ ಮೊದಲ ಮಳೆಯಾಗಿತ್ತು. ವರುಣಮಿತ್ರ ಆಪ್‌ ಪ್ರಕಾರ ಅಂದು ಗುರುವಾರ 4.3 ಮಿ.ಮೀ ಮಳೆ ದಾಖಲಾಗಿದೆ.ನಂತರ ಸುರಿದ ಮೂರು ದಿನಗಳ ಕಾಲ ಸುರಿದ ಮಳೆ ಬೆಂಗಳೂರಿಗೆ ತಂಪೆರದಿದೆ.

ಮಳೆಗಾಲ ಈಗಷ್ಟೇ ಆರಂಭವಾಗಿದೆ. ಕೇವಲ ನಾಲ್ಕು ದಿನಗಳ ಕಾಲ ಮಾತ್ರ ಬೆಂಗಳೂರಿನಲ್ಲಿ ಮಳೆಯಾಗಿದೆ. ಇನ್ನೂ ಒಂದು ವಾರ ಉತ್ತಮ ಮಳೆಯಾಗುವ ಲಕ್ಷಣಗಳಿವೆ.

ಬೆಂಗಳೂರಿನಲ್ಲಿ ಈ ವರ್ಷ ಶೇ.೪೦ ರಷ್ಟು ಮಳೆ ಕೊರತೆಯಾಗಿ ನಗರದ 11 ಸಾವಿರ ಬೋರ್‌ವೆಲ್‌ ಗಳಲ್ಲಿ ಶೇ.60 ರಷ್ಟು ಬತ್ತಿ ಹೋಗಿದ್ದವು. ಸತತ 5 ತಿಂಗಳ ಕಾಲ ಬೆಂಗಳೂರಿನಲ್ಲಿ ಒಂದು ಹನಿಯೂ ಮಳೆಯಾಗಿರಲಿಲ್ಲ. ಅದರಲ್ಲೂ ಹಲವು ದಶಕಗಳ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ಮಳೆಯೇ ಆಗಿರಲಿಲ್ಲ. ನೀರಿನ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಬೆಂಗಳೂರು ಜಲ ಮಂಡಳಿ ಹೈರಾಣಾಗಿತ್ತು. ಕಾವೇರಿ ನೀರನ್ನು ವಾಹನಗಳನ್ನು ತೊಳೆಯದಂತೆ ಆದೇಶ ಹೊರಡಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

(ವರದಿ:ಎಚ್.ಮಾರುತಿ, ಬೆಂಗಳೂರು)

IPL_Entry_Point

ವಿಭಾಗ