Bangalore Crime: ಬೆಂಗಳೂರಿನಲ್ಲಿ ಅತ್ಯಾಚಾರ ಯತ್ನಕ್ಕೆ ಸಿಲುಕಿದ ಯುವತಿ ವಿರುದ್ದವೇ ದೂರು,ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು
Bangalore Crime ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಬೈಕ್ ಸವಾರನ ಅತ್ಯಾಚಾರ ಯತ್ನದಿಂದ ಬದುಕುಳಿದ 21 ವರ್ಷದ ಕಾಲೇಜು ವಿದ್ಯಾರ್ಥಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಮೂರು ದಿನದ ಹಿಂದೆ ಕುಡಿದ ಮತ್ತಿನಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಆರೋಪದ ಮೇಲೆ ಬೈಕ್ ಸವಾರನ ಅತ್ಯಾಚಾರ ಯತ್ನದಿಂದ ಬದುಕುಳಿದ 21 ವರ್ಷದ ಕಾಲೇಜು ವಿದ್ಯಾರ್ಥಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.ಆಟೋ ಚಾಲಕ ನೀಡಿದ ದೂರಿನ ಆಧಾರದ ಮೇಲೆ 21 ವರ್ಷದ ವಿದ್ಯಾರ್ಥಿನಿ ಮತ್ತು ಆಕೆಯ ಪುರುಷ ಸ್ನೇಹಿತನ ವಿರುದ್ಧ ಬಿಎನ್ಎಸ್ ಸೆಕ್ಷನ್ 281 (ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ) ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಆಡುಗೋಡಿ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ತಿಳಿಸಿದ್ದಾರೆ.
ದೂರಿನ ಪ್ರಕಾರ, ಸೇನಾಧಿಕಾರಿಯ ಮಗಳು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದಳು. ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದಾಳೆ. ಘಟನೆ ನಡೆದ ಕೂಡಲೇ ಆರೋಪಿಗಳು ನಿಲ್ಲಲಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ನಾವು ವಿದ್ಯಾರ್ಥಿನಿಗೆ ನೋಟಿಸ್ ನೀಡುತ್ತೇವೆ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ತಿಳಿಸಲಾಗಿದೆ.
ಆಗಸ್ಟ್ 18 ರಂದು ಕೋರಮಂಗಲದ ಪಬ್‌ನಲ್ಲಿ ನಡೆದ ಪಾರ್ಟಿಯಿಂದ ಯುವತಿ ಮತ್ತು ಆಕೆಯ ಸ್ನೇಹಿತ ಬೈಕ್‌ನಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆ ತನ್ನ ಸ್ನೇಹಿತನೊಂದಿಗೆ ಕುಡಿದ ಅಮಲಿನಲ್ಲಿ ಕಾರನ್ನು ಓಡಿಸುತ್ತಿದ್ದಳು. ಮಂಗಳಾ ಜಂಕ್ಷನ್ ಬಳಿ ಯುವತಿ ಎರಡು ಕಾರುಗಳು ಮತ್ತು ಒಂದು ಬೈಕ್ ಸಹಿತ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾಳೆ. ಡಿಕ್ಕಿಯ ಹೊರತಾಗಿಯೂ, ಅವಳು ನಿಲ್ಲಿಸದೆ ಫೋರಂ ಮಾಲ್ ಕಡೆಗೆ ಚಾಲನೆ ಮಾಡುವುದನ್ನು ಮುಂದುವರಿಸಿದಳು ಎಂದು ದೂರಿನಲ್ಲಿ ವಿವರಿಸಲಾಗಿದೆ.
ವಾಹನಕ್ಕೆ ಡಿಕ್ಕಿ ಹೊಡೆದ ಆಟೋ ಚಾಲಕ ಆಕೆಯ ಕಾರನ್ನು ಹಿಂಬಾಲಿಸಿ ಅಂತಿಮವಾಗಿ ಮಾಲ್ ಬಳಿ ನಿಂತಾಗ ಅವಳನ್ನು ಎದುರಿಸಿದ. ಇದು ಆಟೋ ಚಾಲಕರೊಂದಿಗೆ ಘರ್ಷಣೆಗೆ ಕಾರಣವಾಯಿತು. ಯುವತಿ ಭಯದಿಂದ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಲು ಪ್ರೇರೇಪಿಸಿದರು. ನಂತರ ವಾಹನವನ್ನು ಘಟನಾ ಸ್ಥಳದಲ್ಲಿ ಬಿಟ್ಟು, ಪರಿಸ್ಥಿತಿಯನ್ನು ನಿಭಾಯಿಸಲು ತನ್ನ ಸ್ನೇಹಿತನಿಗೆ ತಿಳಿಸಿ ಅಲ್ಲಿಂದ ಹೊರಟು ಹೋದಳು. ನಾವು ಆಕೆಯನ್ನು ಹಿಡಿಯಲು ಆಗಲಿಲ್ಲ ಎನ್ನುವುದು ದೂರಿನ ಸಾರಾಂಶ.
ಚಾಲಕನೊಂದಿಗಿನ ವಿವಾದ ಮುಂದುವರೆದ ನಡುವೆಯೇ ಸ್ನೇಹಿತ ಯುವತಿಯನ್ನು ಹುಡುಕಲು ಪ್ರಾರಂಭಿಸಿದ. ಅವಳು ದಾರಿಹೋಕನಿಂದ ಸವಾರಿ ಪಡೆಯಲು ಪ್ರಯತ್ನಿಸುತ್ತಿರುವುದು ಆತನಿಗೆ ತಿಳಿಯಿತು. ಅವಳು ತನ್ನ ಫೋನ್ ಅನ್ನು ಹತ್ತಿರದ ಪಬ್ ನಲ್ಲಿ ಬಿಟ್ಟು ಬಂದಿದ್ದರಿಂದ ಸಂಪರ್ಕ ಸಾಧ್ಯವಾಗಲಿಲ್ಲ. ಆನಂತರ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿಯಿದೆ. ಈ ವೇಳೆ ನಮ್ಮ ಮೇಲೆ ಉದ್ದೇಶಪೂರ್ವಕವಾಗಿಯೇ ದಾಳಿ ಮಾಡಲಾಗಿದೆ. ಈ ವೇಳೆ ನಮ್ಮ ವಾಹನಗಳು ಜಖಂಗೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.