Indian Railways: ಬೆಂಗಳೂರಿನಿಂದ ಹೊರಡುವ ವಿಶೇಷ ರೈಲುಗಳ ಸೇವೆ ಮುಂದುವರಿಕೆ, ಬೀರೂರಿನಲ್ಲಿ ಬಿಕಾನೇರ್‌ ರೈಲು ನಿಲುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಬೆಂಗಳೂರಿನಿಂದ ಹೊರಡುವ ವಿಶೇಷ ರೈಲುಗಳ ಸೇವೆ ಮುಂದುವರಿಕೆ, ಬೀರೂರಿನಲ್ಲಿ ಬಿಕಾನೇರ್‌ ರೈಲು ನಿಲುಗಡೆ

Indian Railways: ಬೆಂಗಳೂರಿನಿಂದ ಹೊರಡುವ ವಿಶೇಷ ರೈಲುಗಳ ಸೇವೆ ಮುಂದುವರಿಕೆ, ಬೀರೂರಿನಲ್ಲಿ ಬಿಕಾನೇರ್‌ ರೈಲು ನಿಲುಗಡೆ

ಭಾರತೀಯ ರೈಲ್ವೆಯು ಕೆಲವು ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿದೆ. ಕೆಲವು ನಿಲ್ದಾಣಗಳಲ್ಲಿ ನಿಲುಗಡೆಯ ಸೇವೆಯನ್ನೂ ಮುಂದುವರಿಸಿದೆ.

ಭಾರತೀಯ ರೈಲ್ವೆ ಬೆಂಗಳೂರು ರೈಲುಗಳ ಕುರಿತು ಮಾಹಿತಿ ನೀಡಿದೆ.
ಭಾರತೀಯ ರೈಲ್ವೆ ಬೆಂಗಳೂರು ರೈಲುಗಳ ಕುರಿತು ಮಾಹಿತಿ ನೀಡಿದೆ.

ಬೆಂಗಳೂರು: ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳು ಬೇರೆ ಬೇರೆ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಬೇಸಿಗೆಯಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಕಾರಣಕ್ಕೆ ಪ್ರಮುಖ ರೈಲುಗಳು ಬೀರೂರು ಹಾಗೂ ರಾಮಗಿರಿಯಲ್ಲಿ ನಿಲುಗಡೆಯಾಗುವ ರೈಲುಗಳ ಅವಧಿಯನ್ನು ಮುಂದುವರೆಸಲಾಗಿದೆ. ಈ ಕುರಿತು ಭಾರತೀಯ ರೈಲ್ವೆಯ ನೈರುತ್ಯ ವಿಭಾಗವು ರೈಲುಗಳ ನಿಲುಗಡೆ ಮುಂದುವರೆಸುವ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ. ಇದಲ್ಲದೇ ಈಗಾಗಲೇ ಬೆಂಗಳೂರಿನಿಂದ ವಿವಿಧ ನಗರಗಳಿಗೆ ಸಂಚರಿಸುತ್ತಿರುವ ವಿಶೇಷ ರೈಲುಗಳ ಸಂಚಾರವನ್ನೂ ಕೂಡ ಮುಂದುವರೆಸಲಾಗಿದೆ ಎಂದು ರೈಲ್ವೆ ವಿಭಾಗದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ಯಶವಂತಪುರ-ಬಿಕಾನೇರ್ ನಿಲ್ದಾಣಗಳ ನಡುವೆ ವಾರಕ್ಕೆರಡು ಸಲ ಸಂಚರಿಸುವ ರೈಲು ಸಂಖ್ಯೆ 16587/16588 ಯಶವಂತಪುರ-ಬಿಕಾನೇರ್-ಯಶವಂತಪುರ ಎಕ್ಸ್ ಪ್ರೆಸ್ ರೈಲುಗಳಿಗೆ ಬೀರೂರು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಏಪ್ರಿಲ್ 1 ರಿಂದ ಜೂನ್ 30, 2024 ರವರೆಗೆ ಇನ್ನೂ ಮೂರು ತಿಂಗಳ ಕಾಲ ಮುಂದುವರಿಯಲಿದೆ.

ಬೆಳಗಾವಿ-ಮೈಸೂರು ನಿಲ್ದಾಣಗಳ ನಡುವೆ ಪ್ರತಿನಿತ್ಯ ಸಂಚರಿಸುವ ವಿಶ್ವಮಾನವ (ರೈ.ಸಂಖ್ಯೆ 17325/17326) ಎಕ್ಸ್ ಪ್ರೆಸ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ (ರೈ.ಸಂಖ್ಯೆ 17391/17392) ಎಕ್ಸ್ ಪ್ರೆಸ್ ರೈಲುಗಳನ್ನು ರಾಮಗಿರಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಮಾರ್ಚ್ 31 ರಿಂದ ಸೆಪ್ಟೆಂಬರ್ 30, 2024 ರವರೆಗೆ ಅಂದರೆ ಆರು ತಿಂಗಳ ಕಾಲ ಮುಂದುವರಿಸಲಾಗುತ್ತಿದೆ.

ವಿಶೇಷ ರೈಲುಗಳ ಸಂಚಾರ ಮುಂದುವರಿಕೆ

ಬೇಸಿಗೆ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತೆರವುಗೊಳಿಸಲು ರೈಲು ಸಂಖ್ಯೆ 07153/07154 ನರಸಾಪುರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು-ನರಸಾಪುರ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ಮುಂದುವರಿಸಲು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.

1. ರೈಲು ಸಂಖ್ಯೆ 07153 ನರಸಾಪುರ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 5 ರಿಂದ 26, 2024 ರವರೆಗೆ ಪ್ರತಿ ಶುಕ್ರವಾರ ಚಲಿಸಲಿದೆ. ಈ ಮೊದಲು ಮಾರ್ಚ್ 29, 2024 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.

2. ರೈಲು ಸಂಖ್ಯೆ 07154 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ನರಸಾಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 6 ರಿಂದ 27, 2024 ರವರೆಗೆ ಪ್ರತಿ ಶನಿವಾರ ತನ್ನ ಸೇವೆಯನ್ನು ಮುಂದುವರಿಸಲಿದೆ. ಈ ಮೊದಲು ಮಾರ್ಚ್ 30, 2024 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.

Whats_app_banner