Bangalore News: ಬೆಂಗಳೂರು ಯುಆರ್‌ ರಾವ್‌ ಉಪಗ್ರಹ ಕೇಂದ್ರದಲ್ಲಿ ಆಗಸ್ಟ್‌ 10 , 11ರಂದು ಮುಕ್ತ ದಿನ, ಏನೆಲ್ಲಾ ನೋಡಬಹುದು-bangalore news bangalore ur rao satellite centre organizing open day with different activity on august 10 and 11 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಯುಆರ್‌ ರಾವ್‌ ಉಪಗ್ರಹ ಕೇಂದ್ರದಲ್ಲಿ ಆಗಸ್ಟ್‌ 10 , 11ರಂದು ಮುಕ್ತ ದಿನ, ಏನೆಲ್ಲಾ ನೋಡಬಹುದು

Bangalore News: ಬೆಂಗಳೂರು ಯುಆರ್‌ ರಾವ್‌ ಉಪಗ್ರಹ ಕೇಂದ್ರದಲ್ಲಿ ಆಗಸ್ಟ್‌ 10 , 11ರಂದು ಮುಕ್ತ ದಿನ, ಏನೆಲ್ಲಾ ನೋಡಬಹುದು

ISRO Activities ಬೆಂಗಳೂರಿನ ಯುಆರ್‌ ರಾವ್‌ ಉಪಗ್ರಹ ಕೇಂದ್ರದಲ್ಲಿ (Bangalore UR Rao Satellite Centre)ಆಗಸ್ಟ್‌ 10 ಮತ್ತು 11ರಂದು ಮುಕ್ತ ದಿನವಿದ್ದು, ವೀಕ್ಷಣೆಗೆ ಅವಕಾಶವಿದೆ.

ಬೆಂಗಳೂರಿನ ಯುಆರ್‌ ರಾವ್‌ ಉಪಗ್ರಹ ಕೇಂದ್ರದಲ್ಲಿ ಎರಡು ದಿನ ಮುಕ್ತ ದಿನ ಚಟುವಟಿಕೆ ಇರಲಿದೆ.
ಬೆಂಗಳೂರಿನ ಯುಆರ್‌ ರಾವ್‌ ಉಪಗ್ರಹ ಕೇಂದ್ರದಲ್ಲಿ ಎರಡು ದಿನ ಮುಕ್ತ ದಿನ ಚಟುವಟಿಕೆ ಇರಲಿದೆ.

ಬೆಂಗಳೂರು:ಚಂದಯಾನ-3 ಮಿಷನ್‌ನ ಯಶಸ್ಸಿನ ಸ್ಮರಣಾರ್ಥ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲು ಬೆಂಗಳೂರಿನಲ್ಲಿರುವ ಯುಆರ್ ರಾವ್ ಉಪಗ್ರಹ ಕೇಂದ್ರವು ಸೆಂಟರ್(UR Rao Satellite Centre) ಆಗಸ್ಟ್ 10 ಮತ್ತು 11 ರಂದು ಮುಕ್ತ ದಿನವನ್ನಾಗಿ(Open Day) ಆಯೋಜಿಸುತ್ತಿದೆ.ಆಗಸ್ಟ್ 23, 2023 ರಂದು ವಿಕ್ರಮ್ ಲ್ಯಾಂಡರ್ ಇಳಿದ ದಿನ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲ್ಮೈಯಲ್ಲಿ ನಿಯೋಜಿಸಲಾಯಿತು.  ಮುಕ್ತ ದಿನವು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಹೊಂದಿಸಲಾಗಿದೆ ಮತ್ತು ನೋಂದಾಯಿತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದು ಯುಆರ್‌ ರಾವ್‌ ಉಪಗ್ರಹ ಕೇಂದ್ರ ತಿಳಿಸಿದೆ.

ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಅರಿವನ್ನು ಜನಸಾಮಾನ್ಯರಿಗೆ ಮೂಡಿಸುವುದು ಹಾಗೂ ಅದರ ಮಹತ್ವದವನ್ನು ತಿಳಿಸಿಕೊಡುವುದು. ಯುವ ಸಮುದಾಯವನ್ನು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ವೃತ್ತಿಜೀವನಕ್ಕೆ ಆಕರ್ಷಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎನ್ನುವುದು ಉಪಕೇಂದ್ರದ ಮುಖ್ಯಸ್ಥ ಎಂ.ಶಂಕರನ್‌ ಅವರ ಅಭಿಪ್ರಾಯ.

ಎರಡೂ ದಿನವೂ ವಿಜ್ಞಾನದ ಕುರಿತು, ಬಾಹ್ಯಾಕಾಶದ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚೆ, ಸಂವಾದಗಳು ನಾನಾ ಚಟುವಟಿಕೆಗಳು ಇರಲಿವೆ. ಆನ್‌ಲೈನ್‌ ಮೂಲಕ ನಾನಾ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ. ಅದರಲ್ಲೂ ಭಾಗಿಯಾಗಬಹುದು. ಇದಲ್ಲದೇ ಭಾರತದ ಬಾಹ್ಯಾಕಾಶ ಸಾಧನೆಯನ್ನು ವಿವರಿಸುವ ವಸ್ತು ಪ್ರದರ್ಶನವೂ ಎರಡು ದಿನಗಳ ವಿಶೇಷ ಆಕರ್ಷಣೆಯಾಗಿರಲಿದೆ.

ನೋಂದಣಿ ಹೇಗೆ

ನೀವು ಯುಆರ್‌ ರಾವ್‌ ಉಪಗ್ರಹ ಕೇಂದ್ರದ ವೆಬ್‌ಸೈಟ್‌ ಪ್ರವೇಶಿಸಿದರೆ ಅಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮುಕ್ತ ದಿನ ಎನ್ನುವ ಬ್ಲಿಂಕ್‌ ಬರಲಿದೆ. ಅಲ್ಲಿ ಕ್ಲಿಕ್‌ ಮಾಡಿದರೆ ನೋಂದಣಿ ಮಾಡಿಸಿಕೊಳ್ಳಬಹುದು. ಈ ಲಿಂಕ್‌ ಮೂಲಕವೂ https://apps.ursc.gov.in/nspd2024/ ನೋಂದಣಿಗೆ ಅವಕಾಶವಿದೆ

ಇಲ್ಲಿ ಸಂಪರ್ಕಿಸಿ

ಸಾರ್ವಜನಿಕ ಸಂಪರ್ಕ ಅಧಿಕಾರಿ

ಯು ಆರ್ ರಾವ್ ಉಪಗ್ರಹ ಕೇಂದ್ರ

ಹಳೆ ವಿಮಾನ ನಿಲ್ದಾಣ ರಸ್ತೆ, ವಿಮಾನಪುರ ಅಂಚೆ

ಬೆಂಗಳೂರು 560017

ದೂರವಾಣಿ ಸಂಖ್ಯೆಗಳು 080-25084383

ಫ್ಯಾಕ್ಸ್‌: 080-25084477

ಇ ಮೇಲ್‌: pro@ursc.gov.in

ಕೇಂದ್ರದ ಪರಿಚಯ

ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ವಿಮಾನಪುರದಲ್ಲಿರುವ ಯು ಆರ್ ರಾವ್ ಉಪಗ್ರಹ ಕೇಂದ್ರವು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು ಉಪಗ್ರಹ ತಂತ್ರಜ್ಞಾನದಲ್ಲಿ ಮುಂಚುಣಿಯಲ್ಲಿರುವ ಕೇಂದ್ರ . ಎಲ್ಲ ಭಾರತೀಯ ಉಪಗ್ರಹಗಳ ವಿನ್ಯಾಸ, ತಯಾರಿಕೆ, ಜೋಡಣೆ, ಪರೀಕ್ಷಣೆ ಹಾಗೂ ಉಡಾವಾಣಾ ಪೂರ್ವ ಹಾಗೂ ಉಡಾವಣೆ ನಂತರದ ಕಾರ್ಯಯೋಜನೆಗಳು ಈ ಕೇಂದ್ರದ ಮುಖ್ಯ ಕಾರ್ಯಗಳಾಗಿವೆ.

ಇದರೊಂದಿಗೆ ನವನವೀನ ಉಪಗ್ರಹ ತಂತ್ರಜ್ಞಾನಗಳ ಕುರಿತಾಗಿ ಸಂಶೋಧನಾ ಕಾರ್ಯಕ್ರಮಗಳೂ ಈ ಕೇಂದ್ರದಲ್ಲಿ ನಡೆಯುತ್ತಿವೆ. ಭಾರತವನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉತ್ತುಂಗಕ್ಕೆರಿಸುವುದು ಈ ಸಂಸ್ಥೆಯ ಉದ್ದೇಶ.

ಇದುವರೆಗೂ 100ಕ್ಕೂ ಹೆಚ್ಚು ಉಪಗ್ರಹಗಳನ್ನು ತಯಾರಿಸಿರುವುದು ಈ ಸಂಸ್ಥೆಯ ಹೆಗ್ಗಳಿಕೆ, ಇವುಗಳಲ್ಲಿ ಸಂಪರ್ಕ, ದೂರಸಂವೇದಿ ಉಪಗ್ರಹಗಳಲ್ಲದೆ ವೈಜ್ಞಾನಿಕ ಪ್ರಯೋಗಗಳಿಗೆ ಮೀಸಲಾದ ಉಪಗ್ರಹಗಳೂ ಸೇರಿವೆ ಎನ್ನುವುದು ಕೇಂದ್ರದ ವಿವರಣೆ.