Bangalore News: ಬೆಂಗಳೂರು ಗೃಹ ಬಳಕೆ ಬೋರ್ ವೆಲ್ ನೀರು ಮಾರಾಟ ಮಾಡದಿರಿ, ಮಾರಿದ ಮನೆ ಮಾಲೀಕರಿಗೆ ನೊಟೀಸ್‌-bangalore news bangalore water board issued notice to house owners sell borewell water mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಗೃಹ ಬಳಕೆ ಬೋರ್ ವೆಲ್ ನೀರು ಮಾರಾಟ ಮಾಡದಿರಿ, ಮಾರಿದ ಮನೆ ಮಾಲೀಕರಿಗೆ ನೊಟೀಸ್‌

Bangalore News: ಬೆಂಗಳೂರು ಗೃಹ ಬಳಕೆ ಬೋರ್ ವೆಲ್ ನೀರು ಮಾರಾಟ ಮಾಡದಿರಿ, ಮಾರಿದ ಮನೆ ಮಾಲೀಕರಿಗೆ ನೊಟೀಸ್‌

water issue ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಗೃಹ ಬಳಕೆ ಬೋರ್‌ವೆಲ್‌ ಪಡೆದವರು ಟ್ಯಾಂಕರ್‌ಗಳಿಗೆ ಮಾರಾಟ ಮಾಡದಂತೆ ಸೂಚಿಸಲಾಗಿದೆ.ವರದಿ: ಎಚ್. ಮಾರುತಿ ಬೆಂಗಳೂರು

ಮನೆ ಮಾಲೀಕರು ಬೋರ್‌ವೆಲ್‌ ನೀರು ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ.
ಮನೆ ಮಾಲೀಕರು ಬೋರ್‌ವೆಲ್‌ ನೀರು ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಈ ಸಮಸ್ಯೆ ಹೆಚ್ಚಲು ವಾಟರ್ ಟ್ಯಾಂಕರ್ ಮಾಫಿಯಾ ಕಾರಣ ಎಂಬ ಬಲವಾದ ನಂಬಿಕೆ ಇದೆ. ಮತ್ತೊಂದು ಕಡೆ ಗೃಹ ಬಳಕೆಗಾಗಿ ಕೊರೆಸಿರುವ ಬೋರ್ ವೆಲ್ ಗಳ ಮಾಲೀಕರು ಟ್ಯಾಂಕರ್ ಗಳಿಗೆ ನೀರು ತುಂಬಿಸಲು ಅವಕಾಶ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೀತಿ ಟ್ಯಾಂಕರ್ ಗಳಿಗೆ ನೀರು ತುಂಬಿಸಲು ಅವಕಾಶ ನೀಡಿರುವ 200 ಕ್ಕೂ ವಾಸದ ಮನೆಗಳ ಮಾಲೀಕರಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೋಟಿಸ್ ನೀಡಿದೆ.

ಗೃಹ ಬಳಕೆ ನೀರು ಮಾರಾಟ ಅಪರಾಧ

ವಾಣಿಜ್ಯ ಉದ್ದೇಶಗಳಿಗೆ ನೀರು ತುಂಬಿಸಲು ಅವಕಾಶ ನೀಡಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಕೈಗಾರಿಕೆಗಳು ಮತ್ತು ವಾಣಿಜ್ಯ ಉದ್ದೇಶ ಗಳಿಗೆ ನೀರು ತುಂಬಿಸಲು ಅವಕಾಶ ನೀಡಿರುವ ಇಂತಹ ಸ್ಥಳಗಳನ್ನು ಗುರುತಿಸಿದ್ದು, 200 ಮಂದಿಗೆ ನೋಟಿಸ್ ನೀಡಲಾಗಿದೆ. ಇವರು ಗೃಹ ಬಳಕೆಗೆ ಅನುಮತಿ ಪಡೆದಿದ್ದು ಇದೀಗ ವಾಣಿಜ್ಯ ಬಳಕೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅಪರಾಧವಾಗುತ್ತದೆ.ಗೃಹ ಬಳಕೆಗೆ ಬೋರ್ ಕೊರೆಸಲು ಅನುಮತಿ ಪಡೆದು ಈ ಬೋರ್ ವೆಲ್ ಗಳ ನೀರನ್ನು ವಾಣಿಜ್ಯ ಬಳಕೆಗೆ ಮಾರಾಟ ಮಾಡುವಂತಿಲ್ಲ. ಹೀಗೆ ಮಾರಾಟ ಮಾಡುವವರಿಗೆ ದಂಡ ವಿಧಿಸಿ ಸಂಪರ್ಕವನ್ನೂ ಕಡಿತ ಮಾಡುವ ಸಾಧ್ಯತೆಯು ಇದೆ.

ಜಲ ಮಂಡಳಿ ಹೇಳೋದೇನು

ಇತ್ತೀಚೆಗೆ ಜಲ ಮಂಡಳಿ ಬೋರ್ ವೆಲ್ ಕೋರೆಸಲು ಅನುಮತಿ ಪಡೆದಿರುವ ಆಸ್ತಿಗಳ ಸಮೀಕ್ಷೆ ನಡೆಸಿದೆ. ಗೃಹ ಬಳಕೆಗೆ ಬೋರ್ ಕೊರೆಸಲು ಅನುಮತಿ ಪಡೆದು ವಾಣಿಜ್ಯ ಬಳಕೆಗೆ ಮಾರಾಟ ಮಾಡುವಂತಿಲ್ಲ. ಈ ನಿಯಂತ್ರಣದ ಹೊರತಾಗಿಯೂ ನಿಯಮವನ್ನು ಉಲ್ಲಂಘಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕಾಗಿ

ಗೃಹ ಬಳಕೆದಾರರು ಟ್ಯಾಂಕರ್ ಗಳ ಮಾಲೀಕರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಈ ರೀತಿ ನೀರು ಮಾರಾಟ ಮಾಡುತ್ತಿರುವ ಗೃಹ ಬಳಕೆದಾರರಿಗೆ ದಂಡ ವಿಧಿಸಲಾಗುತ್ತದೆ.

ನಗರದಲ್ಲಿರುವ ಸಾರ್ವಜನಿಕ ಬೋರ್ ವೆಲ್ ಗಳನ್ನು ಬಿಬಿಎಂಪಿ ಇಲ್ಲವೆ ಬಿ ಡಬ್ಲ್ಯೂ ಎಸ್ ಎಸ್ ಬಿ ನಿಗಾ ವಹಿಸುತ್ತಿವೆ. ಈ ಬೋರ್ ಗಳ ನೀರನ್ನು ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತಿದೆ.

ಈ ಸಾರ್ವಜನಿಕ ಬೋರ್ ವೆಲ್ ಗಳ ನೀರನ್ನು ಖಾಸಗಿ ಟ್ಯಾಂಕರ್ ಗಳು ಸಂಗ್ರಹಿಸುವಂತಿಲ್ಲ. ಬದಲಾಗಿ ಅವರ ನೀರಿನ ಸಂಗ್ರಹವನ್ನು ಅವರೇ ಮಾಡಿಕೊಳ್ಳಬೇಕು. ಒಂದು ವೇಳೆ ಬಿಬಿಎಂಪಿ ಇಲ್ಲವೆ ಬಿ ಡಬ್ಲ್ಯೂ ಎಸ್ ಎಸ್ ಬಿ ಉಚಿತವಾಗಿ ಟ್ಯಾಂಕರ್ ನೀರು ಸರಬರಾಜು ಮಾಡಲು ಬಯಸಿದರೆ ಆಗ ಮಾತ್ರ ಖಾಸಗಿ ಟ್ಯಾಂಕರ್ ಗಳು ನೀರು ತುಂಬಿಸಬಹುದಾಗಿದೆ.

ಹೊರ ಬೋರೆವೆಲ್‌ಗೆ ಅವಕಾಶ

ಪ್ರಸ್ತುತ, ಬಿ ಡಬ್ಲ್ಯೂ ಎಸ್ ಎಸ್ ಬಿ 10.84 ಮನೆಗಳಿಗೆ ನೀರು ಸರಬರಾಜು ಮಾಡುತ್ತಿದೆ.

ಬಿ ಡಬ್ಲ್ಯೂ ಎಸ್ ಎಸ್ ಬಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ದೇಶಗಳಿಗೆ 11,000 ಬೋರ್ ವೆಲ್ ಗಳಿವೆ. ಜೊತೆಗೆ 4.5 ಲಕ್ಷ ಖಾಸಗಿ ಬೋರ್ ವೆಲ್ ಗಳಿದ್ದು, ಕಾವೇರಿ ಮತ್ತು ಖಾಸಗಿ ಮೂಲಗಳಿಂದ ನೀರು ಸಂಗ್ರಹಿಸುತ್ತಿದೆ.

ಮಳೆಯ ಕೊರತೆಯಿಂದ ಸಾರ್ವಜನಿಕ ಮತ್ತು ಖಾಸಗಿ ಬೋರ್ ವೆಲ್ ಗಳು ಬತ್ತಿ ಹೋಗಿವೆ. ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದ್ದು, ಹೆಚ್ಚೆಂದರೆ ಒಂದು ತಿಂಗಳಿಗೆ ಸಾಕಾಗಬಹುದು. ಅಗತ್ಯ ಬಿದ್ದರೆ ಹೊಸ ಬೋರ್ ವೆಲ್ ಗಳನ್ನು ಕೊರೆಸಲು ಬಿಬಿಎಂಪಿ ಸಿದ್ಧವಾಗಿದೆ.

ಮುಂದಿನ 90 ದಿನಗಳಿಗೆ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿಟ್ಟು ಕೊಂಡಿದ್ದೇವೆ. ಬಿಬಿಎಂಪಿ ಅಲ್ಪಾವಧಿಯ ಕ್ರಮಗಳನ್ನು ಕೈಗೊಂಡರೆ ಬಿ ಡಬ್ಲ್ಯೂ ಎಸ್ ಎಸ್ ಬಿ ದೀರ್ಘಾವಧಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ.

ಬಿಬಿಎಂಪಿ ಮತ್ತು ಜಲ ಮಂಡಳಿ ಕಾರ್ಯ ವೈಖರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾನೂನು ಕಟ್ಟಳೆಗಳನ್ನು ಬೋಧನೆ ಮಾಡುವುದನ್ನು ಬಿಟ್ಟು ನೀರು ಒದಗಿಸಲು ಅಗ್ರಹಪಡಿಸಿದ್ದಾರೆ.

ವರದಿ: ಎಚ್. ಮಾರುತಿ ಬೆಂಗಳೂರು