ಕನ್ನಡ ಸುದ್ದಿ  /  Karnataka  /  Bangalore News Bangalore Water Board Planning 3 Months And Year Separate Plans For Sufficient Surplus Water Policy Mrt

Bangalore water crisis: ಬೆಂಗಳೂರಲ್ಲಿ ನೀರು ಉಳಿತಾಯಕ್ಕೆ 3 ತಿಂಗಳ ಡೆಡ್‌ಲೈನ್‌ ನಿಗದಿಪಡಿಸಿದ ಜಲಮಂಡಳಿ, ಏನದು ಸೂತ್ರಗಳು

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಭವಿಷ್ಯದಲ್ಲೂ ಆಗದಂತೆ ಜಲಮಂಡಳಿ ತಾತ್ಕಾಲಿಕ ಹಾಗೂ ಧೀರ್ಘ ನೆಲೆಯ ಪರಿಹಾರದ ಯೋಜನೆ ರೂಪಿಸುತ್ತಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನ ನೀರಿನ ಸಮಸ್ಯೆಯನ್ನು ನೀಗಿಸಲು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌ ಯೋಜನೆ ರೂಪಿಸಿದ್ದಾರೆ.
ಬೆಂಗಳೂರಿನ ನೀರಿನ ಸಮಸ್ಯೆಯನ್ನು ನೀಗಿಸಲು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌ ಯೋಜನೆ ರೂಪಿಸಿದ್ದಾರೆ.

ಬೆಂಗಳೂರು: ಬೇಸಿಗೆ ಬವಣೆಯಿಂದ ಬಳಲುತ್ತಿರುವ ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಗಂಭೀರ ಪ್ರಯತ್ನಗಳು ನಡೆದಿವೆ. ಒಂದು ಕಡೆ ನೀರು ಕೊಡುವುದು ಮುಖ್ಯವಾದರೂ, ಇರುವ ನೀರನ್ನು ಹೇಗೆ ಉಳಿಸಿಕೊಳ್ಳಬಹುದು. ನೀರಿನ ಸಂರಕ್ಷಣೆಯಲ್ಲಿ ಬೆಂಗಳೂರಿನ ಪ್ರತೀ ನಾಗರೀಕನ ಪಾತ್ರ ಏನಿದೆ ಎನ್ನುವುದರ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವೂ ಶುರುವಾಗಲಿದೆ. ಇದಕ್ಕಾಗಿ ಜುಲೈ 1 ರ ಒಳಗಾಗಿ ಬೆಂಗಳೂರು ನೀರಿನಲ್ಲಿ ಸ್ವಾವಲಂಬಿಯಾಗಲಿದೆ.

ಇದೇ ಹಿನ್ನೆಲೆಯಲ್ಲಿ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಮಳೆ ನೀರು ಮರುಪೂರಣದಂತಹ ಮೂರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅಭಿಯಾನವನ್ನು ರೂಪಿಸಿಕೊಂಡಿದೆ. ಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌ ಅವರು ಅಧಿಕಾರಿಗಳು, ತಜ್ಞರ ಸಹಕಾರದೊಂದಿಗೆ ಬೆಂಗಳೂರಿನ ನೀರಿನ ಬವಣೆಯನ್ನು ಭವಿಷ್ಯದಲ್ಲೂ ನೀಗಿಸುವ ನಿಟ್ಟಿನಲ್ಲಿಯೇ ಯೋಜಿಸುತ್ತಿದ್ದಾರೆ.

ಏನಿದು ಯೋಜನೆ

ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿಸಲು ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ 1300 ಎಂ.ಎಲ್.ಡಿ ನೀರನ್ನು ಬಳಸಿಕೊಂಡು ಈಗಾಗಲೇ 14 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಕೆರೆಗಳನ್ನು ತುಂಬಿಸುವುದು ನಮ್ಮ ಉದ್ದೇಶವಾಗಿದೆ.

ನಗರದ ಶೇ.40 ನೀರಿನ ಬೇಡಿಕೆಯನ್ನ ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿದ್ದೇವೆ. 1300 ಎಂ.ಎಲ್.ಡಿ ನೀರನ್ನು ಬಳಸಿಕೊಂಡು ಈಗಾಗಲೇ 14 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ. ಇನ್ನು ಹೆಚ್ಚಿನ ಕೆರೆಗಳನ್ನು ತುಂಬಿಸುವುದು ನಮ್ಮ ಆದ್ಯತೆಯಾಗಿದೆ. ಅದಲ್ಲದೇ, ನಮ್ಮ ವ್ಯಾಪ್ತಿಯಲ್ಲಿರುವ ಬತ್ತಿಹೋಗಿರುವ ಕೊಳವೆ ಬಾವಿಗಳನ್ನ ಬಳಸಿಕೊಂಡು ಅಂತರ್ಜಲ ಮತ್ತು ಮಳೆ ನೀರು ಮರುಪೂರಣಕ್ಕೆ ಆದ್ಯತೆಯನ್ನು ನೀಡಿದ್ದೇವೆ. ನಾವು ಉಪಯೋಗಿಸುತ್ತಿರುವಷ್ಟು ಅಂತರ್ಜಲವನ್ನು ಮರುಪೂರಣಗೊಳಿಸಬೇಕು. ಇದಕ್ಕಾಗಿ ಪ್ರತಿಯೊಂದು ಹೊಸ ಕೊಳವೆ ಬಾವಿಯನ್ನು ಕೊರೆಯುವಾಗ 2 ಇಂಗುಗುಂಡಿಗಳನ್ನು ನಿರ್ಮಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಒಟ್ಟಿನಲ್ಲಿ ಜುಲೈ 1 2024 ರ ಒಳಗಾಗಿ ಬೆಂಗಳೂರಿನಲ್ಲಿ ಅಗತ್ಯದಷ್ಟ ನೀರು ಸಿಗುವಂತೆ ಮಾಡುವುದು ಹಾಗೂ ಜುಲೈ 2026 ರ ಒಳಗಾಗಿ ಬೆಂಗಳೂರನ್ನ ವಾಟರ್‌ ಸರ್‌ಪ್ಲಸ್‌ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅಧ್ಯಕ್ಷರು ಘೋಷಿಸಿದ್ದಾರೆ.

ನೀರಿನ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ದಂಡ ವಿಧಿಸುವ ಅಭಿಯಾನವನ್ನು ಪ್ರಾರಂಭಿಸಲು ಜಲಮಂಡಳಿ ನಿರ್ಧರಿಸಿದೆ. ಸ್ವಚ್ಚತಾ ಕಾರ್ಯಗಳಿಗೆ ಬಳಸಲು ಏಪ್ರಿಲ್‌ 1 ರಿಂದ ಹೋಟೇಲ್‌ಗಳಿಗೆ ರಿಯಾಯತಿ ದರದಲ್ಲಿ ಸಂಸ್ಕರಿಸಿದ ನೀರು ಸರಬರಾಜು ಮಾಡಲು ಜಲಮಂಡಳಿ ತೀರ್ಮಾನಿಸಿದೆ. ಅಗತ್ಯವಿರುವ ಹೋಟೇಲ್‌ ಗಳಿಗೆ ರಿಯಾಯಿತಿ ದರದಲ್ಲಿ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲು ನಿರ್ಧರಿಸಿದೆ. ಈ ಸಂಬಂಧ ಜಲಮಂಡಳಿ ಹೋಟೆಲ್ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.

ಅಧ್ಯಕ್ಷರು ಹೇಳೋದೇನು

ಕಾವೇರಿ ನೀರು ಮತ್ತು ಕೊಳವೆ ಬಾವಿಗಳ ಮೂಲಕ ಲಭ್ಯವಾಗುತ್ತಿರುವ ಶುದ್ದ ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುತ್ತಿದ್ದೇವೆ. ಈ ನೀರನ್ನು ದುರ್ಬಳಕೆ ಮಾಡಬಾರದು ಮತ್ತು ಹಿತಮಿತವಾಗಿ ಬಳಸಬೇಕು.

ಆಸ್ಪತ್ರೆ ಸೇರಿದಂತೆ ಬಲ್ಕ್‌ ಯೂಸರ್ಸ್‌ ಗಳಿಗೆ ಹಂತ ಹಂತವಾಗಿ ಶೇ. 20 ರಷ್ಟು ಕಾವೇರಿ ನೀರನ್ನು ಕಡಿತಗೊಳಿಸಲಾಗುತ್ತಿದೆ ಸ್ವಚ್ಚತೆ ಹಾಗೂ ಮತ್ತಿತರ ಅವಶ್ಯಕತೆಗಳಿಗೆ ರಿಯಾಯಿತಿ ದರದಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿದ ನೀರನ್ನು ಒದಗಿಸುತ್ತಿದ್ದೇವೆ. ಈಗಾಗಲೇ 49 ಸಂಸ್ಥೆಗಳು ಸಂಸ್ಕರಿಸಿದ ನೀರನ್ನು ಬಳಸುತ್ತಿವೆ. 1300 ಎಂಎಲ್‌ಡಿ ಯಷ್ಟು ಸಂಸ್ಕರಿಸಿದ ನೀರು ಲಭ್ಯವಿದ್ದು ಅನ್ಯ ಉದ್ದೇಶಗಳಿಗೆ ಬಳಸಲು ಕೈಗಾರಿಕೆ ಮತ್ತು, ವಾಣಿಜ್ಯ ಸಂಸ್ಥೆಗಳಿಗೆ ಪೂರೈಕೆ ಮಾಡಲು ಜಲಮಂಡಳಿ ಸಿದ್ಧವಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

(ವರದಿ: ಎಚ್‌.ಮಾರುತಿ, ಬೆಂಗಳೂರು)

ವಿಭಾಗ