Bangalore Cold weather: ಬೆಂಗಳೂರಿನಲ್ಲಿ ಚಳಿಯೋ ಚಳಿ; ಇನ್ನೂ ಒಂದು ವಾರ ಇದೇ ವಾತಾವರಣ, ಏನಿರಬಹುದು ಕಾರಣ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Cold Weather: ಬೆಂಗಳೂರಿನಲ್ಲಿ ಚಳಿಯೋ ಚಳಿ; ಇನ್ನೂ ಒಂದು ವಾರ ಇದೇ ವಾತಾವರಣ, ಏನಿರಬಹುದು ಕಾರಣ

Bangalore Cold weather: ಬೆಂಗಳೂರಿನಲ್ಲಿ ಚಳಿಯೋ ಚಳಿ; ಇನ್ನೂ ಒಂದು ವಾರ ಇದೇ ವಾತಾವರಣ, ಏನಿರಬಹುದು ಕಾರಣ

Bengaluru cold weather ಬೆಂಗಳೂರಿನಲ್ಲಿ ಉಷ್ಣಾಂಶ ಕುಸಿದು ಚಳಿಯ ವಾತಾವರಣ ಹೆಚ್ಚಾಗಿದೆ. ಏನಿರಬಹುದು ಕಾರಣ.. ಇಲ್ಲಿದೆ ಮಾಹಿತಿ

ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ ಇಳಿಕೆಯಿಂದ ಚಳಿಯ ವಾತಾವರಣ ಅಧಿಕವಾಗಿದೆ.
ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ ಇಳಿಕೆಯಿಂದ ಚಳಿಯ ವಾತಾವರಣ ಅಧಿಕವಾಗಿದೆ.

ಬೆಂಗಳೂರು: ಧನುರ್‌ ಮಾಸದ ಆಗಮನದ ನಂತರ ಬೆಂಗಳೂರಿನಲ್ಲಿ ಏಕಾಏಕಿ ಹವಾಮಾನದಲ್ಲಿ ಕುಸಿತ ಕಂಡು ಬಂದು ಜನ ಚಳಿಯಿಂದ ನಡುಗುವಂತಾಗಿದೆ. ತಮಿಳುನಾಡಿನಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯ ಪರಿಣಾಮವೂ ಬೆಂಗಳೂರಿಯ ಚಳಿ ಹೆಚ್ಚಳದ ಹಿಂದೆ ಇರಬಹುದೇ ಎನ್ನುವ ಚರ್ಚೆಗಳು ನಡೆದಿವೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಆರಂಭವಾಗುವ ಮೋಡ ಕುಸಿದ ಹಾಗೂ ಮಂಜು ಕವಿದ ವಾತಾವರಣ ಮಧ್ಯಾಹ್ನವರೆಗೂ ಮುಂದುವರಿಯುತ್ತಿದೆ. ಭಾರೀ ಚಳಿಯ ಪರಿಣಾಮವಾಗಿ ಜನ ಕಾಫಿ ಇಲ್ಲವೇ ಬಾಯಿ ರುಚಿ ತಣಿಸುವ ತಿಂಡಿಗಳಿಗೆ ಮೊರೆ ಹೋಗುವುದು ಕಂಡು ಬಂದಿದೆ.

ಕುಸಿದ ಉಷ್ಣಾಂಶ

ಬೆಂಗಳೂರಿನಲ್ಲಿ ಡಿಸೆಂಬರ್ ತಿಂಗಳು ಆಹ್ಲಾದಕರವಾಗಿ ಆರಂಭವಾಗಿತ್ತು. ಆದರೆ ಒಂದು ವಾರದಿಂದ ಚಳಿಯ ವಾತಾವರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ್ತಷ್ಟು ದಿನಗಳು ಇದೇ ವಾತಾವರಣ ಮುಂದುವರೆಯುವ ಸಾಧ್ಯತೆಗಳಿವೆ.

ನಗರದ ಗರಿಷ್ಠ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ 3 ಡಿಗ್ರಿ ಕಡಿಮೆ ಇದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ತಾಪಮಾನ 26.9 ಡಿಗ್ರಿ ಸೆಲ್ಷಿಯಸ್ ನಷ್ಟಿರುತ್ತದೆ. ಆದರೆ ಈಗ ತಾಪಮಾನ 23.6ರ ಆಸುಪಾಸಿನಲ್ಲಿದೆ. ಜೊತಗೆ ಮಂಜು ಮುಸುಕಿರುತ್ತದೆ.

ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಷಿಯಸ್ ನಷ್ಟಿದ್ದು, ಸಾಮಾನ್ಯ ಕನಿಷ್ಠ ತಪಮಾನಕ್ಕಿಂತ (ಶೇ.16.3ಡಿಗ್ರಿ) 3ಡಿಗ್ರಿ ಸೆಲ್ಷಿಯಸ್ ನಷ್ಟು ಹೆಚ್ಚಾಗಿದೆ. ಇದರಿಂದ ಬೆಚ್ಚಗಿನ ರಾತ್ರಿ ಮತ್ತು ಬೆಳಗು ಹಾಗೂ ಹಗಲು ಚಳಿಯ ವಾತಾವರಣ ಮೂಡಲು ಕಾರಣವಾಗಿದೆ.

ತಮಿಳುನಾಡು ಪರಿಣಾಮ

ನೆರೆಯ ತಮಿಳುನಾಡಿನಲ್ಲಿ ಅನಿರೀಕ್ಷಿತ ಮಳೆ ಬೀಳುತ್ತಿರುವುದೂ ತಾಪಮಾನ ಏರುಪೇರಾಗಲು ಕಾರಣವಾಗಿದೆ. ರಾಜ್ಯದ ದಕ್ಷಿಣ ಒಳಭಾಗ ಮತ್ತು ಉತ್ತರದ ಕೆಲವು ಒಳಭಾಗಗಳಲ್ಲಿ ಹವಾಮಾನ

ವೈಪರೀತ್ಯಕ್ಕೆ ಕಾರಣವಾಗಿದೆ. ನಗರದ ಅನೇಕ ಭಾಗಗಳಲ್ಲಿ ಸೂರ್ಯನ ಬೆಳಕು ಎನ್ನುವುದು ಕಣ್ಮರೆಯಾಗಿದೆ.

ಗಾಳಿಯು ಗಂಟೆಗೆ 30 ಕಿ.ಮೀ. ವೇಗದಲ್ಲಿ ಬೀಸುತ್ತಿರುವುದರಿಂದ ಮೋಡಕಟ್ಟಿದ ಆಕಾಶ ಕಂಡು ಬರುತ್ತಿದೆ ಮತ್ತು ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯುತ್ತಿಲ್ಲ.ಆದರೂ ಕನಿಷ್ಠ ತಾಪಮಾನ 14ಡಿಗ್ರಿ ಸೆಲ್ಷಿಯಸ್ ಗೆ ಕುಸಿಯುವುದಿಲ್ಲವಾದ್ದರಿಂದ ಗಂಭೀರ ಎನ್ನುವಷ್ಟು ಚಳಿ ಕಾಣಿಸುವುದಿಲ್ಲ ಎಂದು ಅಂದಾಜು ಮಾಡಲಾಗಿದೆ. ವೃದ್ಧರು ಮತ್ತು ಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ತಡರಾತ್ರಿ ಮತ್ತು ಬೆಳಗಿನ ಹೊತ್ತು ತುಂಬಾ ಚಳಿ ಇರುತ್ತದೆ. ಹಗಲು ಹೊತ್ತು ಬೆಚ್ಚಗಿನ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಮೋಡ ಕಟ್ಟಿದ ವಾತಾವರಣವೇ ಮುಂದುವರೆಯಲಿದ್ದು, ರಾತ್ರಿ ತಾಪಮಾನ ಒಂದು ಎರಡು ಡಿಗ್ರಿಯಷ್ಟು ಕುಸಿಯಲಿದೆ ಎಂದು ಅಂದಾಜು ಮಾಡಲಾಗಿದೆ.

ಬೆಂಗಳೂರಿನಲ್ಲಿ ಈ ವಾರದ ಹವಾಮಾನ ಹೀಗಿರಲಿದೆ:

ಈ ವಾರದಲ್ಲಿ ಗರಿಷ್ಠ ತಾಪಮಾನ 26.9 ಡಿಗ್ರಿ ಸೆಲ್ಷಿಯಸ್ ನಷ್ಟು ಮತ್ತು ರಾತ್ರಿ ತಾಪಮಾನ 16.4 ಡಿಗ್ರಿ ಸೆಲ್ಷಿಯಸ್‌ನಷ್ಟು ಇರಲಿದೆ. ಡಿಸೆಂಬರ್ 22 ರಿಂದ ರಾತ್ರಿ ತಾಪಮಾನ 16 ಡಿಗ್ರಿಗೆ ತಲುಪಬಹುದು ಮತ್ತು ಕ್ರಿಸ್ ಮಸ್ ವೇಳೆಗೆ 15 ಡಿಗ್ರಿಗೆ ಕುಸಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಾಗೆಯೇ ಹಗಲಿನ ತಾಪಮಾನ 25 ಡಿಗ್ರಿಯಿಂದ 27 ಡಿಗ್ರಿಗೆ ಹೆಚ್ಚಳವಾಗಬಹುದು.

ಬಂಗಾಳಕೊಲ್ಲಿಯಿಂದ ಬೀಸುವ ಗಾಳಿಯ ಪರಿಣಾಮದಿಂದ ಬೆಂಗಳೂರಿನಲ್ಲಿ ಈ ಚಳಿಯ ವಾತಾವರಣ ಉಂಟಾಗಿದೆ. ಇದರಿಂದ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯುವುದಿಲ್ಲವಾದರೂ ಕೆಲವು ದಿನಗಳ ಮಟ್ಟಿಗೆ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಡುತ್ತಾರೆ.

ಕರಾವಳಿ ಮತ್ತು ದಕ್ಷಿಣ ಒಳಭಾಗದಲ್ಲಿ ಅಲ್ಲಲ್ಲಿ ಚದುರಿದ ಅಥವಾ ತುಂತುರು ಮಳೆಯಾಗುವ ಸಂಭವವಿದೆ. ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಮಂಡ್ಯದಲ್ಲಿ ತುಂತುರು ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner