ಕನ್ನಡ ಸುದ್ದಿ / ಕರ್ನಾಟಕ /
Bangalore Tunnel: ಬೆಂಗಳೂರಿನ ಮೊದಲ ಸುರಂಗ ಮಾರ್ಗ, ಸ್ಕೈಡೆಕ್ ಕಾಮಗಾರಿಗೆ ಸದ್ಯವೇ ಚಾಲನೆ, ಇದರ ವೆಚ್ಚ ಎಷ್ಟಿರಬಹುದು?
Bangalore Develpoment ಬೆಂಗಳೂರಿನ ಅಭಿವೃದ್ದಿಗೆ ಪೂರಕವಾಗಿ ಈ ಹಿಂದೆ ಘೋಷಿಸಲಾಗಿದ್ದ ಸುರಂಗ ಮಾರ್ಗ ಹಾಗೂ ಸ್ಕೈಡೆಕ್‌ಗೆ ಸಂಬಂಧಿಸಿದ ಕಾಮಗಾರಿಗಳಿಗೆ ಸದ್ಯವೇ ಚಾಲನೆ ಸಿಗಲಿದೆ.
ಬೆಂಗಳೂರಿನ ಸುರಂಗ ಮಾರ್ಗ ಹಾಗೂ ಸ್ಕೈಡೆಕ್ ಮಾರ್ಗ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.
ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ತಪ್ಪಿಸಿ ಸುಗಮ ಸಂಚಾರಕ್ಕೆ ಸಹಕಾರಿಯಾಗುವಂತ ಎರಡು ಪ್ರಮುಖ ಯೋಜನೆಗಳಿಗೆ ಕರ್ನಾಟಕ ಸರ್ಕಾರ ಚಾಲನೆ ನೀಡಲಿದೆ. ಕಳೆದ ವರ್ಷವೇ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್ ಅವರು ಘೋಷಣೆ ಮಾಡಿದಂತೆ ಎರಡು ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಸುಮಾರು 25 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರು ರಾಜ್ಯ ಸರ್ಕಾರವು ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳ ಮೊದಲ ಹಂತವನ್ನು ಪ್ರಾರಂಭಿಸಲಿದೆ. ಎಸ್ಟೀಮ್ ಮಾಲ್ನಿಂದ ಸಿಲ್ಕ್ ಬೋರ್ಡ್ ವರೆಗೆ 18.5 ಕಿ. ಮೀ. ಸುರಂಗ ಕಾರಿಡಾರ್ ಮತ್ತು ನೈಸ್ ರಸ್ತೆಯಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ಇದರಲ್ಲಿ ಸೇರಿವೆ.