Bangalore News: ಬಿಡಿಎ ಹಗರಣ, ಮಹಿಳಾ ಅಧಿಕಾರಿ ರಕ್ಷಣೆಗೆ ಲಂಚ ಪಡೆದಿದ್ದ ಹೆಡ್‌ ಕಾನ್‌ ಸ್ಟೇಬಲ್‌ ಅಮಾನತು
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬಿಡಿಎ ಹಗರಣ, ಮಹಿಳಾ ಅಧಿಕಾರಿ ರಕ್ಷಣೆಗೆ ಲಂಚ ಪಡೆದಿದ್ದ ಹೆಡ್‌ ಕಾನ್‌ ಸ್ಟೇಬಲ್‌ ಅಮಾನತು

Bangalore News: ಬಿಡಿಎ ಹಗರಣ, ಮಹಿಳಾ ಅಧಿಕಾರಿ ರಕ್ಷಣೆಗೆ ಲಂಚ ಪಡೆದಿದ್ದ ಹೆಡ್‌ ಕಾನ್‌ ಸ್ಟೇಬಲ್‌ ಅಮಾನತು

Crime News ಬಿಡಿಎ( BDA) ಮಹಿಳಾ ಅಧಿಕಾರಿಯನ್ನು ಪ್ರಕರಣದಿಂದ ರಕ್ಷಿಸಲು ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಸಿಸಿಬಿ ಪೊಲೀಸ್‌ ಮುಖ್ಯ ಪೇದೆ ಅಮಾನತುಪಡಿಸಲಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರು ಸಿಸಿಬಿ ಪೊಲೀಸ್‌ ಮುಖ್ಯ ಪೇದೆ ಅಮಾನತುಪಡಿಸಲಾಗಿದೆ.
ಬೆಂಗಳೂರು ಸಿಸಿಬಿ ಪೊಲೀಸ್‌ ಮುಖ್ಯ ಪೇದೆ ಅಮಾನತುಪಡಿಸಲಾಗಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಂಚಿಕೆ ಅಕ್ರಮ ಹಗರಣದ ಆರೋಪಿಯನ್ನು ರಕ್ಷಣೆ ಮಾಡಲು ಲಂಚ ಪಡೆದಿದ್ದ ಕೇಂದ್ರ ಆರ್ಥಿಕ ವಿಭಾಗದ (ಸಿಸಿಬಿ) ಹೆಡ್‌ ಕಾನ್‌ ಸ್ಟೇಬಲ್‌ ಯತೀಶ್‌ ಎಂಬುವರನ್ನು ಅಮಾನತು ಮಾಡಲಾಗಿದೆ. ಈ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸುಮಾರು 55 ಲಕ್ಷ ರೂ. ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ಈ ಪ್ರಕರಣದ ಸಮಗ್ರ ತನಿಖೆಗೆ ಸಿಸಿಬಿ ಹೆಚ್ಚುವರಿ ಪೊಲೀಸ್‌ ಅಯುಕ್ತ ಚಂದ್ರಗುಪ್ತ ಅವರು ಆದೇಶ ಹೊರಡಿಸಿದ್ದಾರೆ.

ಬಿಡಿಎ ನಿವೇಶನ ಹಂಚಿಕೆ ಅಕ್ರಮ ಮತ್ತು ಭ್ರಷ್ಟಾಚಾರ ಕುರಿತು ಶೇಷಾದ್ರಿಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಬಿ 2022ರಿಂದ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಅಕ್ರಮದಲ್ಲಿ ಬಿಡಿಎ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಶಾಮೀಲಾಗಿರುವುದು ಕಂಡು ಬಂದಿತ್ತು. ಮಹಿಳಾ ಅಧಿಕಾರಿಯೊಬ್ಬರಿಗೆ ಬಂಧನ ಬೀತಿಯೂ ಎದುರಾಗಿತ್ತು ಎಂದು ತಿಳಿದು ಬಂದಿದೆ. ತನಿಖೆಯ ಭಾಗವಾಗಿದ್ದ ಯತೀಶ್‌ ಈ ಪ್ರಕರಣದ ಮಾಹಿತಿಯನ್ನು ನೀಡಲು ಮತ್ತು ಮಹಿಳಾ ಅಧಿಕಾರಿಯನ್ನು ರಕ್ಷಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಧಿಕಾರಿಯು ಮೊದಲ ಕಂತಿನ ಹಣವನ್ನು ನೀಡಿದ್ದರು. ಕಾನ್ ಸ್ಟೇಬಲ್‌ ಯತೀಶ್‌ ಲಂಚದ ಹಣವನ್ನು ಪಡೆದುಕೊಂಡಿದ್ದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಇವರನ್ನು ಅಮಾನತ್ತು ಮಾಡಲಾಗಿದೆ ಎಂದು ಸಿಸಿಬಿ ತಿಳಿಸಿದೆ.

ತಾಯಿ ಮಗ ಆತ್ಮಹತ್ಯೆ

ಖಿನ್ನತೆಯಿಂದ ಬಳಲುತ್ತಿದ್ದ ತಾಯಿ ಮತ್ತು ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಯಲಹಂಕದ ಆರ್‌ ಎನ್‌ ಝೆಡ್‌ ಅಪಾರ್ಟ್‌ ಮೆಂಟ್‌ ನಲ್ಲಿ ನಡೆದಿದೆ. 43 ವರ್ಷದ ರಮ್ಯಾ ಶ್ರೀಧರ್‌ ಮತ್ತು 23 ವರ್ಷದ ಭಾರ್ಗವ್‌ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಯಲಹಂಕ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಇವರು ಜುಲೈ 9ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದರೂ ಶುಕ್ರವಾರ ಬೆಳಕಿಗೆ ಬಂದಿದೆ.ಪೂರ್ವಭಾವಿ ತನಿಖೆಯ ಪ್ರಕಾರ ಹಲವು ತಿಂಗಳ ಹಿಂದೆಯಷ್ಟೇ ರಮ್ಯಾ ಅವರ ಪತಿ ಶ್ರೀಧರ್‌ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಈ ಕಾರಣದಿಂದ ತಾಯಿ ಮಗ ಇಬ್ಬರೂ ಖಿನ್ನತೆಗೊಳಗಾಗಿದ್ದರು. ಇದೇ ಕಾರಣಕ್ಕೆ ಆತ್ಮಹ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ರಮ್ಯಾ ಅವರು ವೃತ್ತಿಯಿಂದ ಸಾಫ್ಟ್‌ ವೇರ್‌ ಇಂಜಿನಿಯರ್‌ ಶ್ರೀಧರ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಯಲಹಂಕದಲ್ಲಿ ವಾಸಿಸುತ್ತಿದ್ದರು. ಇವರ ಪುತ್ರಿ ಪಿಜಿಯಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಮೃತಪಟ್ಟ ನಂತರ ರಮ್ಯಾ ಅವರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಮನೆ ಬಾಡಿಗೆ ಮತ್ತು ಇಬ್ಬರು ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸಲು ಕಷ್ಟಪಡುತ್ತಿದ್ದರು ಇದರಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ಪಿಜಿಯಲ್ಲಿದ್ದ ರಮ್ಯಾ ಅವರ ಪುತ್ರಿ ಎರಡು ದಿನಗಳಿಗೊಮ್ಮೆ ತಾಯಿಗೆ ಕರೆ ಮಾಡಿಮಾತನಾಡುತ್ತಿದ್ದರು. ಜುಲೈ 9ರಂದು ಕರೆ ಮಾಡಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಆಗ ತಾನೇ ತಾಯಿ ಮತ್ತು ಸಹೋದರನನ್ನು ಸಮಾಧಾನಪಡಿಸಿದ್ದೆ. ತಂದೆ ಮೃತಪಟ್ಟ ಬಳಿಕ ತಾಯಿ ಕುಗ್ಗಿಹೋಗಿದ್ದರು. ಜೀವನ ನರ್ವಹಣೆ ಕಷ್ಟವಾಗಿತ್ತು ಎಂದು ತಿಳಿಸಿದ್ದಾರೆ.

ಜುಲೈ 13ರಂದು ಶುಕ್ರವಾರ ಸಂಜೆ ಪುತ್ರಿ ಮನೆಗೆ ಬಂದು ಬೆಲ್‌ ಮಾಡಿದಾಗ ಬಾಗಿಲು ತೆರೆಯಲಿಲ್ಲ. ಅನುಮಾನ ಬಂದು ಬಾಗಿಲು ಒಡೆದಾಗ ತಾಯಿ ಮತ್ತು ಸಹೋದರ ಆತ್ಮಹತ್ಯೆಮಾಡಿಕೊಂಡಿರುವುದು ಕಂಡು ಬಂದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡು ಎರಡು ದಿನಗಳಾಗಿವೆ ಎಂದು ಶಂಕಿಸಿದ್ದರು. ಮೃತದೇಹಗಳು ಆಗಲೇ ಕೊಳೆಯಲು ಆರಂಭಿಸಿದ್ದವು. ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹಗಳನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಎಚ್‌.ಮಾರುತಿ, ಬೆಂಗಳೂರು

Whats_app_banner