ಕನ್ನಡ ಸುದ್ದಿ  /  ಕರ್ನಾಟಕ  /  Bangalore Uber: ಬೆಂಗಳೂರು ಉಬರ್‌ ಚಾಲಕನ ಮಿತಿ ಮೀರಿದ ಮಾತು, ಅಂತರಾಷ್ಟ್ರೀಯ ಕಲಾವಿದೆ ದೂರಿಗೆ ಸ್ಪಂದಿಸಿ ಕ್ಷಮೆ ಯಾಚಿಸಿದ ಸಂಸ್ಥೆ

Bangalore Uber: ಬೆಂಗಳೂರು ಉಬರ್‌ ಚಾಲಕನ ಮಿತಿ ಮೀರಿದ ಮಾತು, ಅಂತರಾಷ್ಟ್ರೀಯ ಕಲಾವಿದೆ ದೂರಿಗೆ ಸ್ಪಂದಿಸಿ ಕ್ಷಮೆ ಯಾಚಿಸಿದ ಸಂಸ್ಥೆ

Uber Service ಉಬರ್‌ ಆಪ್‌ ಆಧರಿತ ಕಾರು ಸೇವೆಯನ್ನು ಬಳಸಿಕೊಂಡ ಕಲಾವಿದರೊಬ್ಬರು ಬೆಂಗಳೂರಿನಲ್ಲಿ ಅನುಭವಿಸಿದ ಕಿರಿಕಿರಿ ಇದು. ಈ ಕುರಿತು ಉಬರ್‌ ಕ್ಷಮೆ ಯಾಚಿಸಿ ಚಾಲಕನಿಗೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಉಬರ್‌ ಸೇವೆ
ಬೆಂಗಳೂರಿನಲ್ಲಿ ಉಬರ್‌ ಸೇವೆ

ಬೆಂಗಳೂರು: ಆಕೆ ಅಂತರಾಷ್ಟ್ರೀಯ ಕಲಾವಿದೆ. ಆಗಾಗ ವಿಶ್ವದ ನಾನಾ ಭಾಗಗಳಿಗೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಕಲಾವಿದೆ ಹೊರಗೆ ಹೋಗುವವರು ಇದ್ದರು. ಇದಕ್ಕಾಗಿ ಉಬರ್‌( Uber) ಬುಕ್‌ ಮಾಡಿಕೊಂಡಿದ್ದರು. ವಾಹನ ಚಾಲಕ ನಿಗದಿತ ಸಮಯಕ್ಕೆ ಬಂದು ಕರೆದುಕೊಂಡು ಹೊರಟ. ಆದರೆ ಸಮಸ್ಯೆ ಶುರುವಾಗಿದ್ದೇ ಅಲ್ಲಿ. ಚಾಲಕ ಮಾರ್ಗದುದ್ದಕ್ಕೂ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಇದ್ದ. ಕಲಾವಿದೆ ತಿಳಿ ಹೇಳಿದರೂ ಕೇಳಲಿಲ್ಲ. ಕೊನೆಗೆ ತಲೆ ಚಿಟ್ಟು ಹಿಡಿದ ಆಕೆ ಉಬರ್‌ ಸಂಸ್ಥೆಗೆ ದೂರು ನೀಡಿಯೂ ಆಯಿತು.ಸಾಮಾಜಿಕ ಮಾಧ್ಯಮದಲ್ಲೂ ಉಬರ್‌ ಚಾಲಕನ ನಡವಳಿಕೆ ಪ್ರಸ್ತಾಸಿದ್ದೂ ಆಯಿತು. ಎಚ್ಚೆತ್ತ ಉಬರ್‌ ಸಂಸ್ಥೆ ಈಗ ಕ್ಷಮೆ ಕೇಳಿದೆ. ಅಲ್ಲದೇ ಚಾಲಕರಿಗೆ ಎಚ್ಚರಿಕೆ ವಹಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬೆಂಗಳೂರು ನೆಲೆಸಿರುವ ಮಲೆಷಿಯಾ ಮೂಲಕದ ಪೇಸ್ಟ್ರಿ ಕಲಾವಿದೆ ಜೂನಿ ಟಾನ್(Joonie Tan) ಅವರು ಉಬರ್‌ ಆಪ್‌ ಮೂಲಕ ಕ್ಯಾಬ್‌ ಬುಕಲ್‌ ಮಾಡಿಕೊಂಡಿದ್ದರು. ಕಾರಿನಲ್ಲಿ ಹೊರಟ ಕೆಲವೇ ಕ್ಷಣಗಳಲ್ಲಿ ಚಾಲಕ ಮೊಬೈಲ್‌ನಲ್ಲಿ ಮಾತನಾಡತೊಡಗಿದ. ಕಾರಿನಲ್ಲಿ ಕುಳಿತು ಏನನ್ನೋ ಮಾಡುತ್ತಿದ್ದ ಜೂನಿ ಅವರಿಗೆ ಇದು ಸರಿ ಬರಲಿಲ್ಲ. ಚಾಲಕನಿಗೆ ನಿಧಾನವಾಗಿ ಮಾತನಾಡುವಂತೆ ಸೂಚಿಸಿದರು. ಆದರೂ ಚಾಲಕ ನಿರಂತರವಾಗಿ ಮಾತನಾಡುತ್ತಲೇ ಇದ್ದ. ಈ ಬಗ್ಗೆ ಮತ್ತೊಮ್ಮೆ ಮನವಿ ಮಾಡಿದರೂ ಆತ ಬದಲಾಗಲೇ ಇಲ್ಲ. ಮಾರ್ಗದುದ್ದಕ್ಕೂ ಮಾತನಾಡಿದ ಪರಿಯಿಂದ ಆಕೆಗೆ ಬೇಸರವಾಯಿತು,

ಟ್ರೆಂಡಿಂಗ್​ ಸುದ್ದಿ

ಮೂಲತಃ ಮಲೇಷ್ಯಾದವರಾದ ಜೂನಿ ಟಾನ್ ಬೆಂಗಳೂರಿನ ಲಾವೊನ್ ಕೆಫೆಯಲ್ಲಿ ಜನಪ್ರಿಯ ಪೇಸ್ಟ್ರಿ ಕಲಾವಿದೆ ಮತ್ತು ಬಾಣಸಿಗರಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 50,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಕೂಡಲೇ ಜೂನಿ ಅವರು ಇನ್ಸ್ಟಾದಲ್ಲಿ ಪೋಸ್ಟ್‌ ಒಂದನ್ನು ಮಾಡಿ ಉಬರ್‌ ಚಾಲಕನ ವರ್ತನೆಯನ್ನು ಬಿಡಿಸಿಟ್ಟಿದ್ದಾರೆ.

ಕ್ಯಾಬ್ ಸವಾರಿಗಳು ಹೆಚ್ಚಾಗಿ ಹೊರಗಿನ ಶಬ್ದದಿಂದ ತಪ್ಪಿಸಿಕೊಳ್ಳಬಹುದು, ಗ್ರಾಹಕರು ತಮ್ಮ ನಿಗದಿತ ಸ್ಥಾನವನ್ನು ತಲುಪುವ ನಡುವೆ ಸ್ವಲ್ಪ ಶಾಂತಿಯನ್ನು ಈ ಪ್ರಯಾಣ ಅನುವು ಮಾಡಿಕೊಡುತ್ತದೆ. ಆದರೆ, ತಮಗೆ ಬುಧವಾರ ಉಬರ್ ಚಾಲಕನ "ತಡೆರಹಿತ ಮಾತು" ನಿಂದ ತಲೆನೋವು ಬಂದ ನಂತರ ಪ್ರಯಾಣವು ಅಹಿತಕರ ಅನುಭವವಾಗಿ ಮಾರ್ಪಟ್ಟಿತು ಎಂದು ಜೂನಿ ಹೇಳಿಕೊಂಡಿದ್ದರು. ಉಬರ್ ಡ್ರೈವರ್‌ ಅವರು ಈಗ ನಿರಂತರವಾಗಿ ಮಾತನಾಡುವುದರಿಂದ ನನಗೆ ತಲೆನೋವು ಬರುತ್ತಿದೆ. ಕ್ಯಾಬ್ ಅಗ್ರಿಗೇಟರ್ ಚಾಲಕರು ಫೋನ್ ನಲ್ಲಿ ಇರುವುದನ್ನು ನಿಷೇಧಿಸುವ ನಿಯಮವನ್ನು ಹೊಂದಿದೆಯೇ ಎಂದು ಪ್ರಶ್ನೆ ಮಾಡಿದ್ದರು.

ಇದನ್ನು ಗಮನಿಸಿದ ಹಲವರು ಚಾಲಕನ ನಡೆ ಟೀಕಿಸಿದ್ದರು. ಉಬರ್‌ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಚಾಲಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಬೇಕೂ ಜೂನಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದರು.

ಕೂಡಲೇ ಕರೆ ಇದಕ್ಕೆ ಕ್ಷಮೆ ಕೇಳಿ ಪೋಸ್ಟ್‌ ಹಾಕಿದ ಉಬರ್‌ ಆನಂತರ ಜೂನಿ ಅವರಿಗೆ ಕರೆ ಕೂಡ ಮಾಡಿ ಕ್ಷಮೆ ಯಾಚಿಸಿತು.

ಅಪಾಯಕಾರಿ ಚಾಲನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಉಬರ್ ಪಾಲುದಾರರು ಎಲ್ಲಾ ಪ್ರವಾಸಗಳಲ್ಲಿ ಉನ್ನತ ಗುಣಮಟ್ಟದ ವೃತ್ತಿಪರ ಸೇವೆಯನ್ನು ಕಾಪಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಉಬರ್ ಗುರುವಾರ ಹೇಳಿದೆ. ಈ ಸಂಬಂಧ ಚಾಲಕರಿಗೂ ಸೂಚನೆಗಳನ್ನು ನೀಡಲಾಗಿದೆ. ಇಂತಹ ಚಾಲಕರೊಂದಿಗೆ ನಿಮಗೆ ಸೇವೆ ನೀಡದಿರಲು ಎಚ್ಚರವಹಿಸುತ್ತೇವೆ ಎಂದೂ ಹೇಳಿಕೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಉಬರ್ ತನ್ನನ್ನು ಸಂಪರ್ಕಿಸಿದೆ ಎಂದು ಜೂನಿ ಗುರುವಾರ ಬಹಿರಂಗಪಡಿಸಿದ್ದಾರೆ. ಕಂಪನಿಯು ಈ ವಿಷಯವನ್ನು ಗಮನಿಸಿ ಕ್ಷಮೆಯಾಚಿಸಿತು. ಮುನ್ನೆಚ್ಚರಿಕೆ ವಹಿಸುವುದಾಗಿ ಕೂಡ ಹೇಳಿದೆ ಎಂದು ತಿಳಿಸಿದ್ದಾರೆ.