Bangalore News: ಬೆಂಗಳೂರಲ್ಲಿ ವಾಯು ವಿಹಾರಿ ಮಹಿಳೆಗೆ ಮುತ್ತಿಕ್ಕಿದ್ದ ಚಾಲಕ ಸೆರೆ, ಸಿಸಿಟಿವಿಯಿಂದ ಪ್ರಕರಣ ಬಯಲು , ಪೊಲೀಸರು ಸಸ್ಪೆಂಡ್‌-bangalore news bengaluru woman groped by cab driver in morning walk accused arrested with cctv footage police suspended ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ವಾಯು ವಿಹಾರಿ ಮಹಿಳೆಗೆ ಮುತ್ತಿಕ್ಕಿದ್ದ ಚಾಲಕ ಸೆರೆ, ಸಿಸಿಟಿವಿಯಿಂದ ಪ್ರಕರಣ ಬಯಲು , ಪೊಲೀಸರು ಸಸ್ಪೆಂಡ್‌

Bangalore News: ಬೆಂಗಳೂರಲ್ಲಿ ವಾಯು ವಿಹಾರಿ ಮಹಿಳೆಗೆ ಮುತ್ತಿಕ್ಕಿದ್ದ ಚಾಲಕ ಸೆರೆ, ಸಿಸಿಟಿವಿಯಿಂದ ಪ್ರಕರಣ ಬಯಲು , ಪೊಲೀಸರು ಸಸ್ಪೆಂಡ್‌

Bangalore Crime ವಾಯುವಿಹಾರಕ್ಕೆಂದು ಬೆಳಗಿನಜಾವ ಹೊರಟಿದ್ದ ಮಹಿಳೆಗೆ ಮುತ್ತಿಕ್ಕಿ ಪರಾರಿಯಾಗಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಸಿಸಿಟಿವಿ ಫೂಟೇಜ್‌ ಆಧರಿಸಿ ಬಂಧಿಸಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಸಾರ್ವಜನಿಕವಾಇ ಮಹಿಳೆಗೆ ಮುತ್ತಿಕ್ಕಿದ ಕ್ಯಾಬ್‌ ಚಾಲಕನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಸಾರ್ವಜನಿಕವಾಇ ಮಹಿಳೆಗೆ ಮುತ್ತಿಕ್ಕಿದ ಕ್ಯಾಬ್‌ ಚಾಲಕನ್ನು ಬಂಧಿಸಲಾಗಿದೆ.

ಬೆಂಗಳೂರು: ಮನೆಯ ಸಮೀಪವೇ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ತಬ್ಬಿಕೊಂಡು ಮುತ್ತಿಕ್ಕಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 25 ವರ್ಷದ ಕ್ಯಾಬ್‌ ಚಾಲಕ ಸುರೇಶ್‌ ಎಂದು ಗುರುತಿಸಲಾಗಿದೆ. ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೃಷ್ಣಾ ನಗರದಲ್ಲಿ ಮುಂಜಾನೆ 5.15ರ ವೇಳೆಗೆ ಮಹಿಳೆಯೊಬ್ಬರು ವಾಯು ವಿಹಾರ ನಡೆಸುತ್ತಿದ್ದರು. ಆಗ ಅಲ್ಲಿಗೆ ಆಗಮಿಸಿದ ಕೊತ್ತನೂರು ದಿಣ್ಣೆಯ ನಿವಾಸಿ ಸುರೇಶ್‌ ಮಹಿಳೆಯನ್ನು ಹಿಂಬಾಲಿಸಿ ತಬ್ಬಿಕೊಂಡು ಮುತ್ತಿಟ್ಟು ಪರಾರಿಯಾಗಿದ್ದ.

ಈ ಘಟನೆಯ ನಂತರ ಭಯಭೀತರಾಗಿದ್ದ ಮಹಿಳೆಯು ದೂರು ನೀಡುವ ಪ್ರಯತ್ನ ಮಾಡಿರಲಿಲ್ಲ. ಆದರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲಿ ಹರಿದಾಡುವ ಮೂಲಕ ಬೆಳಕಿಗೆ ಬಂದಿತ್ತು. ಭಾನುವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದರು. ನಂತರ ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಪೊಲೀಸರ ಸೂಚನೆಯಂತೆ ಮಹಿಳೆಯೂ ದೂರು ನೀಡಿದ್ದರು. ಇದೀಗ ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ಪೊಲೀಸರು ಸುರೇಶ್‌ ನನ್ನು ಬಂಧಿಸಿದ್ದಾರೆ. ಪ್ರಕರಣದ ಮಾಹಿತಿ ಇದ್ದರೂ ಮಹಿಳೆಯಿಂದ ದೂರು ಪಡೆಯದೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಠಾಣೆಯ ಸಹಾಯಕ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಇಬ್ಬರು ಪೊಲೀಸರನ್ನು ಡಿಸಿಪಿ ಲೊಕೇಶ್‌ ಜಗಲಾಸರ್‌ ಅಮಾನತು ಮಾಡಿದ್ದಾರೆ.

6ನೇ ಮಹಡಿಯಿಂದ ಜಿಗಿದು ನರ್ಸಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಧನ್ವಂತರಿ ನರ್ಸಿಂಗ್‌ ಕಾಲೇಜಿನ 2ನೇ ವರ್ಷದ ಬಿಎಸ್‌ ಸಿ ನರ್ಸಿಂಗ್ ವಿದ್ಯಾರ್ಥಿನಿ ಜಿ.ಅತುಲ್ಯ ವಸತಿ ನಿಲಯದ ಆರನೇ

ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ರಾಜ್ಯದ ಅತುಲ್ಯ ಒಂದೂವರೆ ತಿಂಗಳ ಹಿಂದೆಯಷ್ಟೇ ಕಾಲೇಜಿಗೆ ಪ್ರವೇಶ ಪಡೆದಿದ್ದರು. ಆದರೆ ಕಾಲೇಜು ಮತ್ತು ಕಾಲೇಜಿನ ವಾತಾವರಣ ಇವರಿಗೆ ಇಷ್ಟವಾಗಿರಲಿಲ್ಲ. ಮರಳಿ ತನ್ನನ್ನು ಊರಿಗೆ ಕರೆದೊಯ್ಯುವಂತೆ ತಾಯಿಗೆ ಮೊಬೈಲ್‌ ಕರೆ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದರು.

ಕಾಲೇಜಿಗೆ ಹಣ ಕಟ್ಟಲಾಗಿದೆ. ಸ್ವಲ್ಪ ದಿನ ಕಳೆದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಅತುಲ್ಯ ಅವರ ತಾಯಿ ಸಮಾಧಾನ ಮಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಅತುಲ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತಹೇಹವನ್ನು ಅವರ ಕುಟುಂಬದವರಿಗೆ ಒಪ್ಪಿಸಲಾಗಿದೆ.

ಲಾರಿ ಡಿಕ್ಕಿ ಭದ್ರತಾ ಸಿಬ್ಬಂದಿ ಸಾವು

ಶಿವರಾಮ ಕಾರಂತ ಬಡಾವಣೆಯ ಸೆಕ್ಟರ್‌ 5ರಲ್ಲಿ ನಡೆಯುತ್ತಿದ್ದ ಕಾಮಗಾರಿ ಪ್ರದೇಶದಲ್ಲಿ ಪೈಪ್‌ ಗಳನ್ನು ಇಳಿಸಿ ಲಾರಿಯನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಭದ್ರತಾ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಬಾಣಾವರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಹಾರದ 49 ವರ್ಷದ ರಮಾನಾಥ್‌ ಸಿಂಗ್‌ ಮೃತ ಭದ್ರತಾ ಸಿಬ್ಬಂದಿ ಎಂದು ತಿಳಿದು ಬಂದಿದೆ. ಬೆಳಗ್ಗೆ 7.30ರ ವೇಳೆಗೆ ಪೈಪ್‌ ಗಳನ್ನು ಇಳಿಸಿ ಚಾಲಕ ಲಾರಿಯನ್ನು ರಿವರ್ಸ್‌ ತೆಗೆದುಕೊಳ್ಳುತ್ತಿದ್ದಾಗ ರಮಾನಾಥ್‌ ಸಿಂಗ್‌ ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್‌,ಮಾರುತಿ, ಬೆಂಗಳೂರು)