Bangalore Cyber crime:ಬಾಯ್‌ಫ್ರೆಂಡ್ ಮೊಬೈಲ್‌ನಲ್ಲಿತ್ತು ತನ್ನದೂ ಸೇರಿ 13 ಸಾವಿರ ಬೆತ್ತಲೆ ಫೋಟೋ: ಬೆಂಗಳೂರಲ್ಲಿ ಸೈಬರ್ ದೂರು
Bangalore cyber crime ಸ್ನೇಹಿತನೊಬ್ಬನ ಜತೆಗೆ ಸಲುಗೆಯಿಂದ ಇದ್ದ ಯುವತಿ ತನ್ನದೇ ಬೆತ್ತಲೆ ಫೋಟೋಗಳನ್ನು ಮೊಬೈಲ್‌ನಲ್ಲಿ ನೋಡಿದ್ದಾರೆ. ಈ ಕುರಿತು ಯುವತಿ ಕೆಲಸ ಮಾಡುವ ಬೆಂಗಳೂರಿನ ಕಂಪೆನಿ ಕಾನೂನು ಅಧಿಕಾರಿ ಸೈಬರ್ ಠಾಣೆಯಲ್ಲಿ( Bangalore cyber police) ದೂರು ದಾಖಲಿಸಿದ್ದಾರೆ.
ಬೆಂಗಳೂರು: ಯುವತಿಯರೇ ಹುಷಾರು, ಅತಿಯಾದ ಸಲುಗೆಯೂ ಕೆಲವೊಮ್ಮೆ ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಅದೂ ತಂತ್ರಜ್ಞಾನದ ಈ ಕಾಲದಲ್ಲಿ ಕೊಂಚ ಎಚ್ಚರ ತಪ್ಪಿದರೂ ತೊಂದರೆ ಕಟ್ಟಿಟ್ಟಬುತ್ತಿ.
ಇಂತಹುದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದನ್ನು ಕಂಡ ಯುವತಿಯೂ ಶಾಕ್. ಈಗ ಈ ಪ್ರಕರಣ ಬೆಂಗಳೂರು ಸೈಬರ್ ಠಾಣೆ ಮೆಟ್ಟಿಲೇರಿದೆ.
ಆಕೆ ಬೆಂಗಳೂರಿನ ಬಿಪಿಒ ಕಂಪೆನಿಯೊಂದರ ಉದ್ಯೋಗಿ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಸ್ನೇಹ ಸಲುಗೆ ಇತ್ತು. ಆನಂತರ ಅದು ದೈಹಿಕ ಸಂಬಂಧಕ್ಕೂ ತಿರುಗಿತ್ತು. ನಾಲ್ಕು ತಿಂಗಳ ಕಾಲ ಇಬ್ಬರೂ ಜತೆಯಾಗಿಯೇ ಖುಷಿ ಅನುಭವಿಸಿದ್ದರು. ಈ ವೇಳೆ ಆತ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ. ಅದನ್ನು ಡಿಲೀಟ್ ಮಾಡುವುದಾಗಿಯೂ ಆತ ಮಾತು ನೀಡಿದ್ದ. ಆದರೆ ಆಗಿದ್ದೇ ಬೇರೆ.
ವಾರದ ಹಿಂದೆ ಯುವತಿ ಆತನಿಗೆ ಗೊತ್ತಾಗದ ಹಾಗೆ ಮೊಬೈಲ್ ತಗೆದುಕೊಂಡು ನೋಡಿದಾಗ ಅಲ್ಲಿ ಶಾಕ್ ಕಾದಿತ್ತು. ತನ್ನ ಅದೆಷ್ಟೋ ಬೆತ್ತಲೆ ಫೋಟೋಗಳು ಮೊಬೈಲ್‌ನಲ್ಲಿದ್ದುದನ್ನು ಕಂಡು ಆಕೆಗೆ ಆಶ್ಚರ್ಯವಾಯಿತು. ಅಷ್ಟೇ ಅದರಲ್ಲಿ ಬರೋಬ್ಬರಿ 13,000 ಸಾವಿರ ಬೆತ್ತಲೇ ಫೋಟೋಗಳು ಇದ್ದವು. ಬೇರೆ ಬೇರೆ ಯುವತಿಯರ ಫೋಟೋಗಳು ಅವಾಗಿದ್ದವು. ಆತನನ್ನು ಪ್ರಶ್ನಿಸಿದರೆ ಉತ್ತರವೂ ಇರಲಿಲ್ಲ. ಏನೇನೋ ಹಾರಿಕೆ ಉತ್ತರ ನೀಡಿದರೂ ಆಕೆ ನಂಬಲಿಲ್ಲ.
ಕೊನೆಗೆ ಯುವತಿ ತನ್ನ ಕಂಪೆನಿ ಕಾನೂನು ಅಧಿಕಾರಿ ಗಮನಕ್ಕೆ ತಂದು ನಡೆದ ಘಟಯನ್ನೆಲ್ಲಾ ವಿವರಿಸಿದ್ದರು. ಮುಂದೆ ಆಗುವ ಅನಾಹುತಕ್ಕೂ ಮುನ್ನವೇ ತನ್ನನ್ನು ರಕ್ಷಿಸುವಂತೆ ಆಕೆ ಕೋರಿಕೊಂಡಿದ್ದರು.
ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಕಂಪೆನಿಯ ಕಾನೂನು ಅಧಿಕಾರಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಆದಿತ್ಯ ಸಂತೋಷ್ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.