ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಡ್ರಗ್ಸ್ ಹೆಸರಿನಲ್ಲಿ ಬೆದರಿಕೆ, ಅರೆನಗ್ನ ವಿಡಿಯೊ ಮಾಡಿ ವಕೀಲೆಗೆ ಕಿರುಕುಳ; 2 ಪ್ರಕರಣಗಳಲ್ಲಿ 2.50 ಕೋಟಿ ರೂ ವಂಚನೆ

Bangalore News: ಡ್ರಗ್ಸ್ ಹೆಸರಿನಲ್ಲಿ ಬೆದರಿಕೆ, ಅರೆನಗ್ನ ವಿಡಿಯೊ ಮಾಡಿ ವಕೀಲೆಗೆ ಕಿರುಕುಳ; 2 ಪ್ರಕರಣಗಳಲ್ಲಿ 2.50 ಕೋಟಿ ರೂ ವಂಚನೆ

ಬೆಂಗಳೂರಿನಲ್ಲಿ ಸೈಬರ್ ಕ್ರಿಮಿನಲ್‌ಗಳು ವಕೀಲೆಗೆ ವಂಚಿಸಿದ್ದಾರೆ. ಅರೆನಗ್ನ ವಿಡಿಯೊ ಮಾಡಿಸಿಕೊಂಡು ಕಿರುಕುಳ ನೀಡಿ 14 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಇಂಜಿನಿಯರ್‌ಗೆ 2.42 ಕೋಟಿ ರೂಪಾಯಿ ವಂಚಿಸಿದ್ದಾರೆ.

ಬೆಂಗಳೂರಿನ ಎರಡು ಪ್ರತ್ಯೇಕ ಪ್ರಕರಣಗಳು ಸೈಬರ್ ಕ್ರಿಮಿನಲ್‌ಗಳು ಬರೋಬ್ಬರಿ 2.50 ಕೋಟಿ ರೂಪಾಯಿ ವಂಚಿಸಿದ್ದಾರೆ.
ಬೆಂಗಳೂರಿನ ಎರಡು ಪ್ರತ್ಯೇಕ ಪ್ರಕರಣಗಳು ಸೈಬರ್ ಕ್ರಿಮಿನಲ್‌ಗಳು ಬರೋಬ್ಬರಿ 2.50 ಕೋಟಿ ರೂಪಾಯಿ ವಂಚಿಸಿದ್ದಾರೆ. (HT Print)

ಬೆಂಗಳೂರು: ಡ್ರಗ್ಸ್ , ನಕಲಿ ಬ್ಯಾಂಕ್ ಎಟಿಎಂ ಕಾರ್ಡ್‌ಗಳು ಮತ್ತು ನಕಲಿ ಪಾಸ್ ಪೋರ್ಟ್ ರವಾನೆ ಹೆಸರಿನಲ್ಲಿ ಎಂಜಿನಿಯರ್ ಒಬ್ಬರಿಗೆ 2.42 ಕೋಟಿ ರೂಪಾಯಿ ವಂಚಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮಹಿಳಾ ವಕೀಲರೊಬ್ಬರನ್ನು ಅರೆ ನಗ್ನ ವಿಡಿಯೊ ಮಾಡಿ ವಂಚಿಸಿರುವ ಎರಡು ಪ್ರತ್ಯೇಕ ಪ್ರಕರಣಗಳು ಬೆಂಗಳೂರಿನಲ್ಲಿ (Bangalore Cyber Crime) ವರದಿಯಾಗಿವೆ. ಫೆಡೆಕ್ಸ್ ಕೊರಿಯರ್ ಕಂಪನಿ ಹೆಸರಿನಲ್ಲಿ 29 ವರ್ಷದ ವಕೀಲೆಯೊಬ್ಬರನ್ನು ವಂಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ವಕೀಲೆಗೆ ಫೆಡೆಕ್ಸ್ ಕೊರಿಯರ್ ಕಂಪನಿ ಪ್ರತಿನಿಧಿ ಹೆಸರಿನಲ್ಲಿ ಕರೆ ಮಾಡಿದ ವಂಚಕ ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಕೊರಿಯರ್ ರವಾನೆಯಾಗುತ್ತಿದೆ. ಇದರಲ್ಲಿ ಡ್ರಗ್ಸ್ ಮತ್ತಿತರ ಮಾದಕ ವಸ್ತುಗಳಿವೆ. ನಿಮ್ಮ ವಿರುದ್ಧ ಪ್ರಕರಣ ದಾಖಲು ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು ಮುಂಬೈ ಸೈಬರ್ ಕ್ರೈಂ ಪೊಲೀಸರ ಜೊತೆ ಮಾತನಾಡಿ ಎಂದು ಕರೆಯನ್ನು ಮತ್ತೊಬ್ಬರಿಗೆ ವರ್ಗಾಯಿಸಿದ್ದ. ಸೈಬರ್ ಕ್ರೈಂ ಅಧಿಕಾರಿಯಂತೆ ಮಾತನಾಡಿದ ಆ ವಂಚಕ ಆಪ್ ವೊಂದನ್ನು ಕಳುಹಿಸಿ ಇನ್ ಸ್ಟಾಲ್ ಮಾಡಿಕೊಂಡು ಕರೆ ಮಾಡುವಂತೆ ಸೂಚಿಸಿದ್ದ. ಬೆದರಿದ ವಕೀಲೆ ಹಾಗೆಯೇ ಮಾಡಿದ್ದರು.

ನಿಮ್ಮ ಮೇಲೆ ನಿಗಾ ವಹಿಸಲು 24 ಗಂಟೆ ಕಾಲ ವಿಡಿಯೊ ಕಾಲ್ ಆನ್ ಆಗಿರಬೇಕು ಎಂದು ಹೇಳಿದ್ದ. ಇವರ ಮಾತನ್ನು ನಂಬಿದ ವಕೀಲೆ ಹಾಗೆಯೇ ಮಾಡಿದ್ದರು. ಎರಡನೇ ದಿನ ಕರೆ ಮಾಡಿದ ಆರೋಪಿ ಮಾದಕ ವಸ್ತು ಸೇವನೆ ಪರೀಕ್ಷೆ ನಡೆಸಬೇಕು. ಆದ್ದರಿಂದ ಅರೆನಗ್ನವಾಗಿ ಕ್ಯಾಮೆರಾ ಎದುರು ನಿಲ್ಲುವಂತೆ ಮತ್ತೆ ಬೆದರಿಕೆ ಒಡ್ಡಿದ್ದರು. ಇದಕ್ಕೂ ಒಪ್ಪಿದ್ದ ವಕೀಲೆ ಹಾಗೆಯೇ ಮಾಡಿದ್ದರು. ಈ ದೃಶ್ಯವನ್ನು ಆರೋಪಿ ವಿಡಿಯೊ ರೆಕಾರ್ಡ್ ಮಾಡಿದ್ದ. ಈ ವಿಡಿಯೊವನ್ನು ವಕೀಲೆಗೆ ಕಳುಹಿಸಿ ಹಣ ಕಳುಹಿಸುವಂತೆ ಬೆದರಿಕೆ ಹಾಕಿದ್ದ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದ. ಹಂತ ಹಂತವಾಗಿ ವಕೀಲೆ 14 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ವಕೀಲೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಎಂಜಿನಿಯರ್‌ 2.42 ಕೋಟಿ ರೂಪಾಯಿ ವಂಚನೆ

ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಎಂಜಿನಿಯರ್ ಒಬ್ಬರಿಗೆ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 2.42 ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಇವರಿಗೆ ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಕೊರಿಯರ್ ರವಾನೆಯಾಗುತ್ತಿದೆ. ಈ ಬಾಕ್ಸ್‌ನಲ್ಲಿ ಡ್ರಗ್ಸ್ , ನಕಲಿ ಬ್ಯಾಂಕ್ ಎಟಿಎಂ ಕಾರ್ಡ್‌ಗಳು ಮತ್ತು ನಕಲಿ ಪಾಸ್ ಪೋರ್ಟ್‌ಗಳಿವೆ. ನಿಮ್ಮ ವಿರುದ್ಧ ಪ್ರಕರಣ ದಾಖಲು ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಕೆಲವು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನಾವು ಕಳುಹಿಸುವ ಆಪ್ ಇನ್ ಸ್ಟಾಲ್ ಮಾಡಿಕೊಂಡು ಉತ್ತರ ನೀಡಬೇಕು. ಇಲ್ಲವಾದಲ್ಲಿ ಮನೆಗೆ ಬಂದು ಬಂಧಿಸುವುದಾಗಿ ಬೆದರಿಕೆ ಒಡ್ಡಿದ್ದರು. ಇವರ ಬೆದರಿಕೆಗೆ ಹೆದರಿದ ಎಂಜಿನಿಯರ್ ಆಪ್ ಇನ್ ಸ್ಟಾಲ್ ಮಾಡಿಕೊಂಡು ವಂಚನೆಗೊಳಗಾಗಿದ್ದಾರೆ.

ಸೈಬರ್ ಕ್ರಿಮಿನಲ್‌ಗಳು ಹೇಳಿದಂತೆ ಎಂಜಿನಿಯರ್ ಆಪ್ ಮೂಲಕ ವಿಡಿಯೊ ಕರೆ ಮಾಡಿದ್ದ ಆರೋಪಿಗಳು ಹಣ ನೀಡಿದರೆ ಎಫ್‌ಐಆರ್ ದಾಖಲಿಸುವುದಿಲ್ಲ. ಇಲ್ಲವಾದಲ್ಲಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದರು. ಇವರ ಮಾತನ್ನು ನಂಬಿದ ಎಂಜಿನಿಯರ್ ಆರೋಪಿಗಳು ಕಳುಹಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ರೂಪಾಯಿ 2.42 ಕೋಟಿ ವರ್ಗಾಯಿಸಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರ ಜೊತೆ ಚರ್ಚಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

IPL_Entry_Point