Bangalore News: ಬೆಂಗಳೂರಿಗೆ 2 ಸುರಂಗ ಮಾರ್ಗ, ಕಾರಿಡಾರ್‌ ಬೇಕು, 36,950 ಕೋಟಿ ರೂ. ಕೊಡಿ; ಪ್ರಧಾನಿಗೆ ಮನವಿ ಸಲ್ಲಿಸಿದ ಡಿಕೆಶಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿಗೆ 2 ಸುರಂಗ ಮಾರ್ಗ, ಕಾರಿಡಾರ್‌ ಬೇಕು, 36,950 ಕೋಟಿ ರೂ. ಕೊಡಿ; ಪ್ರಧಾನಿಗೆ ಮನವಿ ಸಲ್ಲಿಸಿದ ಡಿಕೆಶಿ

Bangalore News: ಬೆಂಗಳೂರಿಗೆ 2 ಸುರಂಗ ಮಾರ್ಗ, ಕಾರಿಡಾರ್‌ ಬೇಕು, 36,950 ಕೋಟಿ ರೂ. ಕೊಡಿ; ಪ್ರಧಾನಿಗೆ ಮನವಿ ಸಲ್ಲಿಸಿದ ಡಿಕೆಶಿ

Dks Meets pm modi ಬೆಂಗಳೂರಿನ ಅಭಿವೃದ್ದಿ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.

ಪ್ರಧಾನಿ ಮೋದಿ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ ಮಾಡಿದರು.
ಪ್ರಧಾನಿ ಮೋದಿ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ ಮಾಡಿದರು.

ಬೆಂಗಳೂರು: ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬೆಂಗಳೂರಿನ ಅಭಿವೃದ್ದಿಯ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದಾರೆ. ಬೆಂಗಳೂರಿನ ಜನ ಹಾಗೂ ಸಂಚಾರ ದಟ್ಟಣೆ ಹಾಗೂ ಮುಂದಿನ ದಶಕಗಳನ್ನು ಗುರಿಯಾಗಿಟ್ಟುಕೊಂಡು ಕೆಲವು ಯೋಜನೆಗಳನ್ನು ಕರ್ನಾಟಕ ಸರ್ಕಾರ ರೂಪಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರದ ನೆರವು ಬೇಕೇ ಬೇಕು. ಅಂತರಾಷ್ಟ್ರಿಯ ಮಟ್ಟದಲ್ಲಿ ಪ್ರಮುಖ ಐಟಿ ನಗರಿಯಾಗಿ ಹಾಗೂ ಉದ್ಯಾನ ನಗರಿಯಾಗಿಯೂ ತನ್ನದೇ ಹಿರಿಮೆ ಹೊಂದಿರುವ ಬೆಂಗಳೂರು ಅಭಿವೃದ್ದಿಗೆ ಅನುದಾನ ಒದಗಿಸಬೇಕು ಎಂದು ಡಿಕೆ ಶಿವಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರಧಾನಿ, ಈ ಕುರಿತು ನಗರಾಭಿವೃದ್ದಿ ಹಾಗೂ ಇತರೆ ಇಲಾಖೆಗಳಿಗೆ ನಿರ್ದೇಶನ ನೀಡುವುದಾಗಿಯೂ ಅಭಯ ನೀಡಿದ್ದಾರೆ.

ಡಿಕೆಶಿ ಬೆಂಗಳೂರು ಮಾಸ್ಟರ್‌ ಪ್ಲಾನ್‌
 

  • ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಎರಡು ನಗರ ಸುರಂಗಗಳು ಮತ್ತು ಎರಡು ಎಲಿವೇಟೆಡ್ ಕಾರಿಡಾರ್‌ಗಳು ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ 36,950 ಕೋಟಿ ರೂ. ವೆಚ್ಚವಾಗಲಿದೆ
  • ಈಗಾಗಲೇ ತಜ್ಞರು ಹಾಗೂ ಏಜೆನ್ಸಿಗಳೂ ನೀಡಿರುವ ಕಾರ್ಯಸಾಧ್ಯತಾ ಅಧ್ಯಯನ ವರದಿಗಳಲ್ಲೂ ಎರಡು ನಗರ ಸುರಂಗಗಳು ಮತ್ತು ಎರಡು ಎತ್ತರದ ಕಾರಿಡಾರ್‌ ಗಳ ನಿರ್ಮಾಣ ಅಗತ್ಯವಾಗಿದೆ ಎಂದು ಸೂಚಿಸಿವೆ.
  • ಸುರಂಗ ರಸ್ತೆಗಳಿಗೆ 36,000 ಕೋಟಿ ರೂ, ಹಾಗೂ ಬೆಂಗಳೂರಿನ ಎಲಿವೇಟೆಡ್ ಕಾರಿಡಾರ್ ಗಳಿಗೆ 950 ಕೋಟಿ ರೂ.ಬೇಕು
  • ಕೇಂದ್ರ ಬಜೆಟ್‌ನಿಂದ ಕರ್ನಾಟಕ ಸರ್ಕಾರಕ್ಕೆ ಅಗತ್ಯಅನುದಾನ ಹಂಚಿಕೆ ಮಾಡುವ ಮೂಲಕ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿಮ್ಮ ಬೆಂಬಲ ಅತ್ಯಗತ್ಯವಾಗಿದೆ.
  • ಇದನ್ನೂ ಓದಿರಿ: Bangalore potholes: ಬೆಂಗಳೂರಿನಲ್ಲಿ ಗುಂಡಿ ಕಂಡು ಬಂದರೆ ಆ್ಯಪ್‌ಗೆ ಅಪ್ಲೋಡ್‌ ಮಾಡಿ, ಬಿಬಿಎಂಪಿಯನ್ನು ಎಚ್ಚರಿಸಿ, ಯಾವುದೀ ಆ್ಯಪ್‌
  • ಹೊಸೂರಿನಿಂದ ಬಳ್ಳಾರಿ ರಸ್ತೆ ಮತ್ತು ಕೆ. ಆರ್. ಪುರದಿಂದ ಮೈಸೂರು ರಸ್ತೆಗೆ ರಾಷ್ಟ್ರೀಯ ಹೆದ್ದಾರಿ-7 ಅನ್ನು ಸಂಪರ್ಕಿಸಲು ನಗರ ಸುರಂಗಗಳು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ ಎಂದು ಕಾರ್ಯಸಾಧ್ಯತಾ ಅಧ್ಯಯನಗಳು ಸ್ಪಷ್ಟವಾಗಿ ಹೇಳಿವೆ.ಈ ವಿಧಾನವು ನೆಲದ ಮಟ್ಟದಲ್ಲಿ ಸಂಚಾರ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಭೂಸ್ವಾಧೀನದ ವೆಚ್ಚವನ್ನು ಕಡಿಮೆ ಮಾಡುತ್ತದೆ.
  • ಮೆಟ್ರೋ ಎರಡನೇ ಹಂತವು ಭಾಗಶಃ ಕಾರ್ಯನಿರ್ವಹಿಸುತ್ತಿದ್ದು. ಮೂರನೇ ಹಂತಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಿದೆ. ಇದಕ್ಕೆ ಅನುತಿ ನೀಡಿ
  • ಮೆಟ್ರೋ ಮಾರ್ಗ ಹಾಗೂ ಮೇಲ್ಸೇತುವೆ ಇರುವಂತಹ ಡಬ್ಬಲ್‌ ಡೆಕ್ಕರ್‌ ಯೋಜನೆಗೆ ಕೇಂದ್ರ ಅನುಮತಿ ಕೊಡಿ

ಇದನ್ನೂ ಓದಿರಿ: ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುದಾನ ಕಡಿತ; 16 ಸಾವಿರ ಕೋಟಿ ಯೋಜನೆಗೆ ದಕ್ಕಿದ್ದು 350 ಕೋಟಿ -Bengaluru Suburban Rail

  • ಬೆಂಗಳೂರಿಗೆ ಮುಂದಿನ ವರ್ಷಗಳ ಗುರಿ ಇಟ್ಟುಕೊಂಡು 73 ಕಿ.ಮಿ ಫೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸಬೇಕಾಗಿದೆ. ಇದಕ್ಕಾಗಿ 27 ಸಾವಿರ ಕೋಟಿ ರೂ. ಬೇಕಾಗಬಹುದು, ಇದರಲ್ಲಿ ಭೂಸ್ವಾಧೀನಕ್ಕೆ 21 ಕೋಟಿ ರೂ. ಹಾಗೂ 6 ಸಾವಿರ ಕೋಟಿ ರೂ. ನಿರ್ಮಾಣ ವೆಚ್ಚಕ್ಕೆ ಬೇಕಾಗಬಹುದು. ಇದಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ ಅನುದಾನ ಮೀಸಲಿಡಿ.
  • ಬೆಂಗಳೂರು ಹಾಗೂ ಸುತ್ತಮುತ್ತಲಿನ ನೀರಿನ ಮೂಲಗಳ ಅಭಿವೃದ್ದಿಗೆ 15 ನೇಹಣಕಾಸು ಆಯೋಗದ ಶಿಫಾರಸ್ಸಿನಂತೆ ಸುಮಾರು 6 ಸಾವಿರ ಕೋಟಿ ರೂ. ರಾಜ್ಯದ ಪಾಲಿನ ಅನುದಾನಗಳನ್ನು ಬಿಡುಗಡೆ ಮಾಡಬೇಕು.

 

Whats_app_banner