ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime News: ಸಹಪಾಠಿ ಬಳಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಆರೋಪ; 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ

Bengaluru Crime News: ಸಹಪಾಠಿ ಬಳಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಆರೋಪ; 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ

10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನಾಲ್ವರು ವಯಸ್ಕ ಸಹಚರರ ಸಹಾಯ ಪಡೆದು ಸಹಪಾಠಿಯಿಂದ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ, ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಹಪಾಠಿ ಬಳಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಆರೋಪದಲ್ಲಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಹಪಾಠಿ ಬಳಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಆರೋಪದಲ್ಲಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಸಹಪಾಠಿಯಿಂದಲೇ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ದೋಚುತ್ತಿದ್ದ ಆರೋಪದ ಮೇಲೆ 10 ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಬಾಲಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಹದಿಹರೆಯದವರು ನಾಲ್ಕು ವಯಸ್ಕ ಸಹಚರರ ಸಹಾಯದಿಂದ ಕೆಲವು ಚಿನ್ನದ ಆಭರಣಗಳನ್ನು ಮಾರಾಟ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಏನಿದು ಪ್ರಕರಣ? ಪೋಷಕರ ನಿರ್ಲಕ್ಷ್ಯವೇ ಮಕ್ಕಳ ಈ ಸ್ಥಿತಿಗೆ ಕಾರಣವಾಯ್ತಾ?

ವರದಿಯ ಪ್ರಕಾರ, ಸುಲಿಗೆಗೆ ಒಳಗಾದ ವಿದ್ಯಾರ್ಥಿಯ ತಂದೆ ತನ್ನ ಮನೆಯಲ್ಲಿ ಚಿನ್ನದ ಆಭರಣಗಳು ಕಾಣೆಯಾಗಿರುವುದನ್ನು ಗಮನಿಸಿ ಎರಡು ವಾರಗಳ ಹಿಂದೆ ಆರ್ ಆರ್ ನಗರ ಪೊಲೀಸರನ್ನು ಸಂಪರ್ಕಿಸಿದ್ದರು. ತನ್ನ ಮಗನಿಗೆ ಆನ್‌ಲೈನ್ ಆಟಗಳನ್ನು ಆಡುವ ಅಭ್ಯಾಸವಿದೆ. ಅವನ ಇಬ್ಬರು ಸಹಪಾಠಿಗಳು ಅವನ ಚಟುವಟಿಕೆಗಳನ್ನು ಸೋರಿಕೆ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

"ಆರಂಭದಲ್ಲಿ, ನನ್ನ ಮಗನ ಸಹಪಾಠಿಗಳು ಹಣಕ್ಕೆ ಬೇಡಿಕೆ ಇಟ್ಟರು, ಆದರೆ ಅವನ ಬಳಿ ಏನೂ ಇಲ್ಲ ಎಂದು ಹೇಳಿದಾಗ, ಅವರು ಮನೆಯಲ್ಲಿನ ಚಿನ್ನಾಭರಣ ಕದಿಯಲು ಹೇಳಿದ್ದಾರೆ. ನಂತರ ನನ್ನ ಮಗ ಮನೆಯಿಂದ ಚಿನ್ನದ ಆಭರಣಗಳನ್ನು ಕದಿಯಲು ಪ್ರಾರಂಭಿಸಿದ್ದಾರೆ. ಕೆಲವು ದಿನಗಳ ನಂತರ ಮನೆಯಲ್ಲಿ ಕೆಲವು ಚಿನ್ನದ ಆಭರಣಗಳು ಕಾಣೆಯಾಗಿರುವುದು ಕುಟುಂಬದವರ ಗಮನಕ್ಕೆ ಬಂದಿದೆ. ಬಳಿಕ ಮನೆಯಲ್ಲಿ ಇರುವವರನ್ನು ಕೇಳಿದಾಗ ಮಗ ತನ್ನ ಇಬ್ಬರು ಸಹಪಾಠಿಗಳಿಗೆ ನೀಡಲು ಅವುಗಳನ್ನು ಕದ್ದಿದ್ದಾನೆ" ಎಂದು ವಿದ್ಯಾರ್ಥಿಯ ತಂದೆ ನಡೆದ ಘಟನೆಯನ್ನು ಪೊಲೀಸರ ಮುಂದೆ ವಿವರಿಸಿದ್ದಾರೆ.

ಸದ್ಯ ಬಂಧಿತ ಇಬ್ಬರು ಆರೋಪಿಗಳಿಂದ 300 ಗ್ರಾಂ ಚಿನ್ನಾಭರಣ ಹಾಗೂ 23 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ವಜ್ರದ ಹಾರವನ್ನು ಪೊಲೀಸರು ಇನ್ನೂ ವಶಪಡಿಸಿಕೊಳ್ಳಬೇಕಾಗಿದೆ. ಕೆಂಗೇರಿಯಲ್ಲಿ ಚಿನ್ನದ ಅಂಗಡಿ ನಡೆಸುತ್ತಿರುವ ವಯಸ್ಕ ಸಹಚರರೊಬ್ಬರ ಸಹಾಯದಿಂದ ಇವರಿಬ್ಬರು ಸುಲಿಗೆ ಮಾಡಿದ ಆಭರಣಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಈ ಬಗ್ಗೆ ಮಾತನಾಡಿ, ಹದಿಹರೆಯದವರ ಪೋಷಕರು ಮೊಬೈಲ್ ಫೋನ್‌ಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. "ದಯವಿಟ್ಟು ನಿಮ್ಮ ಮಕ್ಕಳು ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಲು ಬಿಡಬೇಡಿ ಏಕೆಂದರೆ ಅವು ತೀವ್ರ ಹಾನಿಗೆ ಕಾರಣವಾಗಬಹುದು" ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದರು.

IPL_Entry_Point