ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಪ್ರಜ್ವಲ್‌ ಬೆಂಗಳೂರಿಗೆ ವಾಪಾಸ್‌ ಆಗುತ್ತಿಲ್ಲ ಯಾಕೆ, ವಿಳಂಬದ ಹಿಂದಿನ ತಂತ್ರವೇನು?

Hassan Scandal: ಪ್ರಜ್ವಲ್‌ ಬೆಂಗಳೂರಿಗೆ ವಾಪಾಸ್‌ ಆಗುತ್ತಿಲ್ಲ ಯಾಕೆ, ವಿಳಂಬದ ಹಿಂದಿನ ತಂತ್ರವೇನು?

ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಆರೋಪದ ಪ್ರಕರಣಗಳಲ್ಲಿ ಎಸ್‌ಐಟಿ ಬಂಧನದ ಭಯದಿಂದ ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿರುವ ಹಿಂದೆ ಇರುವ ಕಾರಣಗಳಾದರೂ ಏನು? ಇಲ್ಲಿದೆ ವಿವರಣೆ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಭಾರತದ ಭೇಟಿ ವಿಳಂಬಕ್ಕೆ ಕಾರಣವೇನು
ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಭಾರತದ ಭೇಟಿ ವಿಳಂಬಕ್ಕೆ ಕಾರಣವೇನು

ಬೆಂಗಳೂರು: ಹಾಸನದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಕರಣ ಎದುರಿಸುತ್ತಿರುವ ಜೆಡಿಎಸ್‌ ಯುವ ನಾಯಕ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಿ 20 ದಿನಗಳು ಕಳೆದರೂ ಬೆಂಗಳೂರಿಗೆ ಹಿಂದಿರುಗುತ್ತಿಲ್ಲ ಏಕೆ. ಬಂಧನದ ಭೀತಿ ಅವರನ್ನು ಕಾಡುತ್ತಿದೆಯೇ ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ವಿಳಂಬ ಮಾಡುತಿದ್ದಾರೆಯೇ> ಜೂನ್‌ 4ರ ಫಲಿತಾಂಶ ನೋಡಿಕೊಂಡು ಆನಂತರವೇ ಅವರು ಭಾರತಕ್ಕೆ ಮರಳುತ್ತಾರೆಯೇ? ವಿಳಂಬ ಮಾಡುತ್ತಿರುವ ಹಿಂದೆ ಇರುವ ತಂತ್ರವಾದರೂ ಏನು? ಎಷ್ಟೇ ವಿಳಂಬ ಮಾಡಿದರೂ ಪ್ರಜ್ವಲ್‌ ಬಂಧನಕ್ಕೆ ಒಳಗಾಗಿ ತನಿಖೆ ಎದುರಿಸಲೇಬೇಕು. ವಿಳಂಬ ಮಾಡುವುದರಿಂದ ಆಗುವ ಪ್ರಯೋಜನವೇನಾದರೂ ಏನು? ಇಂತಹ ಹತ್ತಾರು ಪ್ರಶ್ನೆಗಳು ರಾಜಕೀಯ ನೇತಾರರನ್ನು ಮಾತ್ರವಲ್ಲ. ಸಾಮಾನ್ಯ ಜನರನ್ನೂ ಕಾಡುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಹೀಗಿರಬಹುದು ಕಾರಣ

  • ಈಗಾಗಲೇ ದೇಶ ಬಿಟ್ಟು 19 ದಿನಗಳು ಕಳೆದು ಹೋಗಿವೆ. ಭಾರತಕ್ಕೆ ಹೋದರೆ ತತ್‌ ಕ್ಷಣವೇ ಬಂಧನ, ಜೈಲು ಇತರೆ ಕಾನೂನಿನ ತೊಡಕು ಎದುರಿಸಬೇಕು. ಅದರ ಬದಲು ಇನ್ನಷ್ಟು ದಿನ ಇಲ್ಲಿಯೇ ಇದ್ದು ಬಿಡೋಣ, ವಿದೇಶದ ಯಾವುದೇ ಸ್ಥಳದಲ್ಲಿ ಇರಲು ಯಾವುದೇ ಅಡ್ಡಿಯಾಗುವುದಿಲ್ಲ ಎನ್ನುವ ಲೆಕ್ಕಾಚಾರವೂ ಇರಬಬಹುದು.
  • ಬೆಂಗಳೂರಿಗೆ ತೆರಳಿದ ತಕ್ಷಣವೇ ಬಂಧನಕ್ಕೆ ಒಳಗಾಗಿ ನಾನಾ ರೀತಿಯ ವಿಚಾರಣೆ, ಸ್ಥಳ ಮಹಜರು, ಸಾಕ್ಷಿಗಳ ಸಂಗ್ರಹದಂತಹ ಪ್ರಕ್ರಿಯೆಗಳನ್ನು ಎದುರಿಸಬೇಕು. ಇದನ್ನು ಇನ್ನಷ್ಟು ನಿಧಾನ ಮಾಡಿದರಾಯಿತು ಎನ್ನುವ ತಂತ್ರವೂ ಅಡಗಿರಬಹುದು.
  • ಈಗಾಗಲೇ ಬಂಧನಕ್ಕಾಗಿ ಬ್ಲೂಕಾರ್ನರ್‌ ನೊಟೀಸ್‌ ಅನ್ನು ಜಾರಿಗೊಳಿಸಲಾಗಿದೆ. ಒಂದೆರಡು ದಿನದಲ್ಲಿ ರೆಡ್‌ ಕಾರ್ನರ್‌ ನೊಟೀಸ್‌ ಜಾರಿಗೊಳಿಸಿ ಬಂಧನ ಪ್ರಕ್ರಿಯೆ ಚುರುಕುಗೊಳಿಸಬಹುದು. ಇದರಿಂದ ಬಂಧನಕ್ಕೆ ಅಡ್ಡಿಯಾಗದು ಎನ್ನುವ ದೂರಾಲೋಚನೆಯೂ ಇರಬಹುದು.
  • ಜೂನ್‌ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಬರಲಿದೆ. ಅಲ್ಲಿಯವರೆಗೂ ವಿದೇಶದಲ್ಲಿಯೇ ಇದ್ದು ಫಲಿತಾಂಶ ನೋಡಿಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿರಿ: Prajwal Revanna: ಪ್ರಜ್ವಲ್‌ ರೇವಣ್ಣ ಬಂಧಿಸಿ ಕರೆ ತನ್ನಿ; ಸಿಎಂಗೆ ಪತ್ರ ಬರೆದ ಕರ್ನಾಟಕದ ಚಿಂತಕರು, ಸಾಹಿತಿಗಳು

  • ಫಲಿತಾಂಶ ತಮ್ಮ ಪರವಾಗಿ ಬಂದು ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಮರಳಿದರೆ ಆನಂತರ ಏನು ಮಾಡಬೇಕು ಎನ್ನುವ ಅವಕಾಶವೂ ಸಿಗಲಿದೆ ಎನ್ನುವ ತಂತ್ರವೂ ಇರಬಹುದು.
  • ಈಗಾಗಲೇ ಈ ವಿಚಾರ ಸಾಕಷ್ಟು ರಾಜಕೀಯ ಕೆಸರೆರಚಾಟಕ್ಕೂ ದಾರಿ ಮಾಡಿಕೊಟ್ಟಿದೆ. ತಂದೆ ರೇವಣ್ಣ ಅವರು ಬಂಧನದಿಂದ ಬಿಡುಗಡೆಯಾಗಿದ್ದಾರೆ. ಈ ವಿಚಾರ ಇನ್ನಷ್ಟು ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟು ಯಾರ ಪಾತ್ರ ಇದರ ಹಿಂದೆ ಎನ್ನುವುದನ್ನು ಬಯಲು ಮಾಡುವ ಉದ್ದೇಶವೂ ಇರಬಹುದು.
  • ಅತ್ಯಾಚಾರ ಪ್ರಕರಣ ಈಗಾಗಲೇ ದಾಖಲಾಗಿದ್ದರೂ ಪೆನ್‌ಡ್ರೈವ್‌ ಬಿಡುಗಡೆ ಮಾಡಿದವರ ವಿರುದ್ದವೂ ಈಗಾಗಲೇ ಪ್ರಕರಣ ದಾಖಲಾಗಿ ಕೆಲವರು ಬಂಧನಕ್ಕೆ ಒಳಗಾಗಿದ್ದಾರೆ. ಇನ್ನೂ ಹಲವರು ಇದರಲ್ಲಿ ಸಿಲುಕಬಹುದು. ಈ ಬೆಳವಣಿಗೆಗಳು ತಮ್ಮ ವಿರುದ್ದದ ಪಿತೂರಿ ಆರೋಪಗಳಿಗೆ ಪೂರಕ ಆಗಬಹುದು ಎನ್ನುವ ಅಂಶವೂ ಇದ್ದಿರಬಹುದು.
  • ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕರ್ನಾಟಕದಲ್ಲಿ ಸರ್ಕಾರ ಬಿದ್ದು ಹೋಗಬಹುದು. ಬಿಜೆಪಿ ಸರ್ಕಾರ ರಚನೆಯಾಗಬಹುದು ಎನ್ನುವ ರಾಜಕೀಯ ಹೇಳಿಕೆಗಳೂ ಹೊರ ಬೀಳುತ್ತಿವೆ. ಹಾಗೇನಾದರೂ ಆದರೆ ಇಡೀ ಪ್ರಕರಣವೂ ಶಕ್ತಿ ಕಳೆದುಕೊಳ್ಳಬಹುದು ಎಂದ ಕಾರಣವೂ ಆಗಿರಬಹುದು.

ಇದನ್ನೂ ಓದಿರಿ: ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಆಶ್ಲೀಲ ವಿಡಿಯೋ ಕೇಸ್ ಏನಾಯಿತು, ಇದುವರೆಗಿನ 10 ವಿದ್ಯಮಾನ

  • ಎಸ್‌ಐಟಿ ತಂಡ ತಮ್ಮ ವಿರುದ್ದ ದಾಖಲಾದ ಪ್ರಕರಣಗಳ ಮೇಲೆ ಏನೇನೂ ಸಾಕ್ಷಿ ಸಂಗ್ರಹಿಸಬಹುದು. ‌ತಮ್ಮನ್ನು ಇನ್ನಷ್ಟು ಸಿಲುಕಿಸಲು ಏನು ಮಾಡಬಹುದು. ಇದಕ್ಕೆ ನಮ್ಮ ಉತ್ತರ ಹೇಗಿರಬೇಕು.ಕಾನೂನು ರೀತಿಯಲ್ಲಿ ಎದುರಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಚರ್ಚೆ ಮಾಡಿ ಎದುರಾಳಿಗಳಿಗೆ ಉತ್ತರ ನೀಡಲು ಬಂಧನದ ಬದಲು ಇನ್ನಷ್ಟು ದಿನ ದೂಡಲೂಬಹುದು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point