ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್‌ಗೆ ಸಿಎಂ, ಡಿಸಿಎಂ ಕಾರಣ: ವಕೀಲ ದೇವರಾಜೇಗೌಡ ಸ್ಪೋಟಕ ಮಾಹಿತಿ

Hassan Scandal: ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್‌ಗೆ ಸಿಎಂ, ಡಿಸಿಎಂ ಕಾರಣ: ವಕೀಲ ದೇವರಾಜೇಗೌಡ ಸ್ಪೋಟಕ ಮಾಹಿತಿ

ಒಂದು ವಾರದಿಂದ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸದ್ದು ಮಾಡಿರುವ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಹಾಸನದ ವಕೀಲ ದೇವರಾಜೇಗೌಡ ಮಾತನಾಡಿದ್ದು ವಿಡಿಯೋ ಬಿಡುಗಡೆಗೆ ಕಾಂಗ್ರೆಸ್‌ ಕಾರಣ ಎಂದು ಆರೋಪಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಪ್ರಕರಣ ಕುರಿತು ಮಾತನಾಡಿದ ವಕೀಲ ದೇವರಾಜೇ ಗೌಡ
ಪ್ರಜ್ವಲ್‌ ರೇವಣ್ಣ ಪ್ರಕರಣ ಕುರಿತು ಮಾತನಾಡಿದ ವಕೀಲ ದೇವರಾಜೇ ಗೌಡ

ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ದೇಶದಲ್ಲೂ ಸಂಚಲನ ಮೂಡಿಸಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದ ತನಿಖೆ ಚುರುಕುಗೊಂಡಿರುವ ನಡುವೆ ಈ ಪ್ರಕರಣದ ಕುರಿತು ನಿರಂತರವಾಗಿ ಮಾತನಾಡುತ್ತಲೇ ಇರುವ ಹಾಸನದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಅಶ್ಲೀಲ ಪೆನ್‌ಡ್ರೈವ್‌ ಬಿಡುಗಡೆಯ ಹಿಂದೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಾತ್ರವಿದೆ. ನನಗೆ ಆಮಿಷವೊಡ್ಡಿ ಪೆನ್‌ಡ್ರೈವ್‌ ಬಿಡುಗಡೆಗೆ ಪ್ರಯತ್ನಿಸಿದರು. ಇಡೀ ಪ್ರಕರಣದ ಹಿಂದಿನ ಕಥಾನಾಯಕ ಕಾಂಗ್ರೆಸ್‌ ಸರ್ಕಾರ ಎಂದು ಆರೋಪಿಸಿದ್ದಾರೆ. ಅಲ್ಲದೇ ಇದಕ್ಕೆ ಸಂಬಂಧಿಸಿ ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ದೇವರಾಜೇಗೌಡ ಅವರು ಇಡೀ ಪ್ರಕರಣದ ಕುರಿತು ವಿವರವಾಗಿಯೇ ಮಾತನಾಡಿದರು.

ದೇವರಾಜೇಗೌಡರ ಆರೋಪ ಏನು

ಅಶ್ಲೀಲ ವಿಡಿಯೋ ಹರಿಬಿಟ್ಟ ರೂವಾರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು. ಇಡೀ ಪೆನ್ ಡ್ರೈವ್ ಬಿಡುಗಡೆ ಹಿಂದೆ ಇರುವ ಕಥಾ ನಾಯಕ ಕಾಂಗ್ರೆಸ್ ಸರ್ಕಾರ. ನನಗೆ ಮೂರು ದಿನಗಳ ಹಿಂದೆ ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್ ಕರೆ ಮಾಡಿದ್ದರು. ಲೋಕಸಭೆ ಚುನಾವಣೆ ಮುಗಿದ ಮೇಲೆ ನನಗೆ ಕ್ಯಾಬಿನೇಟ್ ದರ್ಜೆಯ ಹುದ್ದೆ ಆಫರ್ ಕೊಟ್ಟರು. ಇದಲ್ಲದೇ ವಿಡಿಯೋ ಪ್ರಕರಣದಲ್ಲಿ ಬೆಂಬಲಿಗರ ಕೈಯಲ್ಲಿ ಆಫರ್ ನೀಡಿದ್ರು. ಡಿಸಿಎಂ ಅವರು ಮಾತಕತೆಗೆ ಕೆಲ ಬೆಂಬಲಿಗರನ್ನ ನನ್ನ ಬಳಿ ಕಳುಹಿಸಿದ್ದರು.ನನ್ನ ಹೋರಾಟ ಏನಿದ್ದರೂ ಹಾಸನದ ಪ್ರಭಾವಿ ರಾಜಕಾರಣಿ ವಿರುದ್ದ. ಆದರೆ ವಾಮ ಮಾರ್ಗದ ಹೋರಾಟ ನಡೆಸಲು ನನ್ನನ್ನು ಬಳಸಿಕೊಳ್ಳಲು ಯತ್ನಿಸಿದರು. ನಾನು ಅದ್ಯಾವುದಕ್ಕೂ ಒಪ್ಪಲಿಲ್ಲ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಪೊಲೀಸರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ಯಾರನ್ನು ಆರೋಪಿ ಮಾಡಬೇಕೆಂದು ಸೂಚಿಸಿದ್ದಾರೆ. ಡಿಕೆಶಿ ಗರಡಿಯಲ್ಲೇ ಬೆಳೆದವನು ನಾನು. ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕುವುದಾರೇ ಹಾಕಿ. ನಾನೇ ನನ್ನ ಮನೆ ವಿಳಾಸ ಕೊಡುತ್ತೇನೆ. ಈ ಬಗ್ಗೆ ಸಿಎಂ ಡಿಸಿಎಂಗೆ ನೇರ ಸವಾಲು ಹಾಕುತ್ತೇನೆ ಎಂದರು.

ಶಿವರಾಮೇಗೌಡ ಸಂಧಾನ

ಪ್ರಜ್ವಲ್ ರೇವಣ್ಣನ ಕಾರು ಚಾಲಕನಾಗಿದ್ದ ಕಾರ್ತಿಕ್ ನ ಬಳಿ ಇದ್ದ ವಿಡಿಯೋ ನೀಡುವಂತೆ ಹಾಗೂ ಅಶ್ಲೀಲ ವಿಡಿಯೋದ ಪೆನ್‌ಡ್ರೈವ್ ಹಂಚಿಕೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರದೊಂದಿಗೆ ನೀನೂ ಕೈ ಜೋಡಿಸಬೇಕು ಮಂಡ್ಯದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರನ್ನು ನನ್ನ ಬಳಿಯಲ್ಲಿ ಮಧ್ಯವರ್ತಿಯಾಗಿ ಕಳುಹಿಸಿದ್ದರು.ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಬೇಕು. ನೀನು ಸರ್ಕಾರದ ಪರವಾಗಿ ಇರು. ಮುಂದೆ ಒಳ್ಳೆಯದಯು ಆಗಲಿದೆ. ನೀವು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿಕ್ಕೆ ಹೋಗಬೇಡ ಎಂದು ಶಿವರಾಮೇಗೌಡ ಅವರು ಕೋರಿಕೊಂಡರು. ನಾನು ಇದ್ಯಾವುದಕ್ಕೂ ಒಪ್ಪಿಲ್ಲ ಎಂದು ದೇವರಾಜೇಗೌಡ ತಿಳಿಸಿದರು.

ನನ್ನ ವಿರುದ್ದವೇ ಪ್ರಕರಣದ ಪಿತೂರಿ

ಹಾಸನದ ಈ ಇಡೀ ಪ್ರಕರಣದಲ್ಲಿ ಯಾರನ್ನ ಆರೋಪಿಯನ್ನಾಗಿ ಮಾಡಬೇಕು, ಯಾರನ್ನು ಇದರಲ್ಲಿ ಸೇರಿಸಬೇಕು ಎನ್ನುವುದನ್ನು ತಿಳಿಸಲಾಗುತ್ತಿದೆ. ಇದರಲ್ಲಿ ನನ್ನನ್ನು ಬಳಸಿಕೊಳ್ಳುವ ಪ್ರಯತ್ನವೂ ಆಯಿತು. ಈಗ ನನ್ನನ್ನೇ ಮೊದಲ ಆರೋಪಿಯಾಗಿ ಮಾಡುವ ಪ್ರಯತ್ನವೂ ನಡೆದಿದೆ. ಇದಕ್ಕೆ ನಾನು ಹೆದರುವುದಿಲ್ಲ. ಈಗ ಕಾಂಗ್ರೆಸ್‌ ನಾಯಕರೇ ಸಂತ್ರಸ್ತರಿಗೆ ಹಣ ಕೊಟ್ಟುಅವರನ್ನು ಕರೆದುಕೊಂಡು ಬರುತ್ತಿದ್ದಾರೆ. ಬೆಂಗಳೂರಿನ ಹೋಟೆಲ್ ‌ನಲ್ಲಿ ಎಷ್ಟು ಗಂಟೆ ಮಾತನಾಡಿದ್ದಾರೆ ಅನ್ನೋದನ್ನು ಸಿಸಿಟಿವಿಯಲ್ಲಿ ಗಮನಿಸಿದರೆ ಗೊತ್ತಾಗಲಿದೆ ಎಂದು ಒತ್ತಾಯಿಸಿದರು.

ಮೋದಿಗೆ ಕೆಟ್ಟ ಹೆಸರು ತರುವ ಪ್ರಯತ್ನ

ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋದ ಪೆನ್‌ಡ್ರೈವ್ ಪ್ರಕರಣವನ್ನು ಬಳಕೆ ಮಾಡಿಕೊಂಡು ಲೋಕಸಭಾ ಚುನಾವಣೆಯ ಮತದಾನಕ್ಕೆ 3 ದಿನ ಇರುವಾಗ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಪ್ಪು ಮಸಿ ಬಳಿಯಲೆಂದು ಇದನ್ನು ಮಾಡಲಾಗಿದೆ. ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆರೋಪಿಸಿದರು.

IPL_Entry_Point