Hassan Scandal: ವಾಟ್ಸ್ ಆಪ್ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ
ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದರೆ ಕ್ರಮ ಕೈಗೊಳ್ಳುವುದಾಗಿ ವಿಶೇಷ ತನಿಖಾ ತಂಡ ಎಚ್ಚರಿಸಿದೆ.

ಬೆಂಗಳೂರು: ಹಾಸನದಲ್ಲಿರುವ ನಡೆದಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಡಿಯೋ ಹರಿದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡ( SIT) ಗಂಭೀರ ಕ್ರಮ ತೆಗೆದುಕೊಂಡಿದ್ದು, ಸಂತ್ರಸ್ತೆಯರಿಗೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ತಾಣಗಳನ್ನು ಹಂಚುವಂತಿಲ್ಲ. ಇದರಲ್ಲೂ ವಾಟ್ಸ್ ಆಪ್ ( What's App) ಮೆಸೆಂಜ್ ಮೂಲ ಹಂಚುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದ್ದು, ಈ ರೀತಿ ಹಂಚುವವರ ವಿರುದ್ದ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಎಂದು ಎಸ್‌ಐಟಿ ತಂಡದ ಮುಖ್ಯಸ್ಥರಾಗಿರುವ ಸಿಐಡಿ ಅಪರ ಪೊಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಭಾನುವಾರ ರಾತ್ರಿಯೇ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿ.ಕೆ.ಸಿಂಗ್ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನು ಯಾರೇ ಆದರೂ ಸಾಮಾಜಿಕ ತಾಣಗಳಲ್ಲಿ ಹಂಚುವ ಹಾಗಿಲ್ಲ. ಅದರಲ್ಲೂ ವಾಟ್ಸ್ ಆಪ್ ಮೆಸಂಜರ್ ಆಪ್ ಮೂಲಕವೂ ಇದನ್ನು ಹಂಚಿಕೆ ಮಾಡಬಾರದು. ಮಾಹಿತಿ ತಂತ್ರಜ್ಞಾನ ಕಾಯಿದೆ 67( ಎ) ಕಾಯಿದೆ ಕಲಂ 228 ಎ(1 ), 292ಐಪಿಸಿ ಅಡಿಯಲ್ಲ ಶಿಕ್ಷಾರ್ಹ ಅಪರಾಧವಾಗಿದೆ. ಖಾಸಗಿ ಮೆಸೇಂಜಿಗ್ ಆಪ್‌ಗಳ ಮುಖಾಂತರ ಹಂಚುವುದನ್ನು ಪತ್ತೆ ಆಡಲು ಐಟಿ ತಂತ್ರಜ್ಞಾನದಡಿ ಸಾಧ್ಯವಿದೆ. ಹೀಗೆ ಹಂಚುವವರ ವಿರುದ್ದ ಕ್ರಮ ತೆಗೆದುಕೊಳ್ಳುವುದು ಖಚಿತ. ಇದು ಸಂತ್ರಸ್ತ್ರ ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಕುಂದು ಉಂಟು ಮಾಡುವ ಪ್ರಯತ್ನವಾಗಿದೆ. ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ
ಈ ಪ್ರಕರಣದಲ್ಲಿ ಸಂತ್ರಸ್ತ ವ್ಯಕ್ತಿ ಯಾರೇ ಇದ್ದರೂ ಈಗಾಗಲೇ ಆರಂಭಿಸಿರುವ ಸಹಾಯವಾಣಿ ಸಂಖ್ಯೆ6360938947ಗೆ ಬೆಳಿಗ್ಗೆ8ರಿಂದ ರಾತ್ರಿ 8ರವ ರೆಗೆ ಯಾವಾಗ ಬೇಕಾದರೂ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. ಅವರು ಎಸ್‌ಐಟಿಗೆ ಕಚೇರಿಗೆ ಬಾರದೇ ದೂರವಾಣಿಯಲ್ಲಿಯೇ ಮಾಹಿತಿ ನೀಡಿದರೆ ಸಾಕು. ಯಾವುದೇ ನೆರವು ಬೇಕಿದ್ದರೂ ಒದಗಿಸಲು ಎಸ್‌ಐಟಿ ಸಿದ್ದವಿದೆ ಎಂದು ಹೇಳಿದ್ದಾರೆ.
ಗುರುತು ಮಾಹಿತಿ ಬೇಡ
ಈ ಪ್ರಕರಣದಲ್ಲಿ ಯಾವುದೇ ಸಂತ್ರಸ್ಥರ ಗುರುತನ್ನು ಬಹಿರಂಗಪಡಿಸುವ ಕೆಲಸವನ್ನು ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು, ಇನ್ಯಾರೋ ಮಾಡಬಾರದು. ಇದನ್ನು ಮೀರಿಯೂ ಮಾಹಿತಿ ಬಹಿರಂಗಪಡಿಸಿದರೆ ಅಗತ್ಯ ಕಂಡು ಬಂದ ಪಕ್ಷದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ,
ಯಾವುದೇ ಲೈಂಗಿಕ ಹಿಂಸೆ, ಅತ್ಯಾಚಾರ ಪ್ರಕರಣಗಳಲ್ಲಿ ನಾಚಿಕೆಪಟ್ಟುಕೊಳ್ಳಬೇಕಾದ್ದು ಹಿಂಜರಿಯಬೇಕಾದ್ದು ಅವಮಾನ ಎಂದು ಭಾವಿಸಬೇಕಾಗಿಲ್ಲ. ಅಂತಹ ಪ್ರಕರಣಗಳಲ್ಲಿ ಅಪರಾಧವೆಸಗಿದ ವ್ಯಕ್ತಿಯೇ ಹೊರತು ಶೋಷಣೆಗೆ ಒಳಗಾದ ವ್ಯಕ್ತಿಯಲ್ಲ ಎಂದು ಅರಿಯಬೇಕು ಎಂದು ಬಿಕೆ ಸಿಂಗ್ ತಿಳಿಸಿದ್ದಾರೆ.
ಸೂಕ್ಷ್ಮ ಸಂವೇದನೆ ಇರಲಿ
ಇಂತಹ ಪ್ರಕರಣಗಳಲ್ಲಿ ಸೂಕ್ಷ್ಮಸಂವೇದನೆಯಿಂದ ವರ್ತಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅತಿಮುಖ್ಯವಾಗಿದೆ. ಈ ವಿಚಾರದಲ್ಲಿ ವಿಶೇಷ ತನಿಖಾ ತಂಡವೂ ಕೂಡ ಹೆಚ್ಚಿನ ಸಂವೇದನೆಯಿಂದಲೇ ನಡೆದುಕೊಳ್ಳಲಿದೆ. ಈಗಾಗಲೇ ಇದಕ್ಕೆ ಅಗತ್ಯ ಇರುವ ವೃತ್ತಿಪರ ಕೌನ್ಸೆಲರ್ ಗಳು, ವೈದ್ಯರು ಹಾಗೂ ಇಂತಹ ಕಾರ್ಯದಲ್ಲಿ ಅನುಭವ ಇರುವವರ ಸಂಸ್ಥೆಗಳ ನೆರವನ್ನು ಎಸ್‌ಐಟಿ ಪಡೆದುಕೊಂಡಿದೆ. ಸಾರ್ವಜನಿಕರೂ ಕೂಡ ಈ ವಿಚಾರದಲ್ಲಿ ಇದೇ ರೀತಿ ನಡೆದುಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
