ಕನ್ನಡ ಸುದ್ದಿ  /  ಕರ್ನಾಟಕ  /  Ias Ips Transfer: ಕರ್ನಾಟಕ ವಾರ್ತಾ ಇಲಾಖೆ ಆಯುಕ್ತ ವರ್ಗ, ಹೇಮಂತ್‌ ನಿಂಬಾಳ್ಕರ್‌ ಮತ್ತೆ ನೇಮಕ

IAS IPS Transfer: ಕರ್ನಾಟಕ ವಾರ್ತಾ ಇಲಾಖೆ ಆಯುಕ್ತ ವರ್ಗ, ಹೇಮಂತ್‌ ನಿಂಬಾಳ್ಕರ್‌ ಮತ್ತೆ ನೇಮಕ

Transfer order ಲೋಕಸಭೆ ಚುನಾವಣೆ ವೇಳೆ ವರ್ಗಗೊಂಡಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರಿಗೆ ಹುದ್ದೆ ನೀಡಲಾಗಿದೆ.

ಐಪಿಎಸ್‌ ಹೇಮಂತ್‌ ನಿಂಬಾಳ್ಕರ್‌ ಹಾಗೂ ಐಎಎಸ್‌ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡಲಾಗಿದೆ.
ಐಪಿಎಸ್‌ ಹೇಮಂತ್‌ ನಿಂಬಾಳ್ಕರ್‌ ಹಾಗೂ ಐಎಎಸ್‌ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡಲಾಗಿದೆ.

ಬೆಂಗಳೂರು: ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರನ್ನು ಮರು ನಿಯೋಜನೆ ಮಾಡಿ ಕರ್ನಾಟಕ ಸರ್ಕಾರ ಆದೇಶಿಸಿದೆ. ಲೋಕಸಭೆ ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದ ಹೇಮಂತ್‌ ನಿಂಬಾಳ್ಕರ್‌ ಅವರು ಮೂರು ತಿಂಗಳಿನಿಂದಲೂ ಯಾವುದೇ ಹುದ್ದೆಯಲ್ಲಿ ಇರಲಿಲ್ಲ. ಈವರೆಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಅವರನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಶಾಖೆ ವಿಶೇಷ ಆಯುಕ್ತರನ್ನಾಗಿ ಮುಂದುವರೆಸಲಾಗಿದೆ. ಸುರಳ್ಕರ್‌ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರ ಹುದ್ದೆಯನ್ನೂ ಹೆಚ್ಚುವರಿಯಾಗಿ ನೀಡಿ ಕರ್ನಾಟಕ ಸರ್ಕಾರವೂ ಕಳೆದ ಮಾರ್ಚ್‌ನಲ್ಲಿ ಆದೇಶಿಸಿತ್ತು.

ಹೇಮಂತ್‌ ನಿಂಬಾಳ್ಕರ್‌ ಅವರು ಅಪರ ಪೊಲೀಸ್‌ ನಿರ್ದೇಶಕರ ಹುದ್ದೆಯ ಅಧಿಕಾರಿ. ಒಂದು ವರ್ಷದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿದ್ದರು. ಅವರ ಪತ್ನಿ ಡಾ.ಅಂಜಲಿ ನಿಂಬಾಳ್ಕರ್‌ ಅವರು ಕೆನರಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರಿಂದ ನಿಂಬಾಳ್ಕರ್‌ ಅವರನ್ನು ವರ್ಗ ಮಾಡಲಾಗಿತ್ತು.ಅವರಿಗೆ ಯಾವುದೇ ಹುದ್ದೆ ತೋರಿಸಿರಲಿಲ್ಲ. ಮೂರು ತಿಂಗಳಿನಿಂದ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿಯೇ ಇದ್ದರು. ಈಗ ಅವರನ್ನು ಮತ್ತೆ ಆಯುಕ್ತರಾಗಿ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿಯೂ ಮುಂದುವರೆದಿದ್ದು, ವಾರ್ತಾ ಇಲಾಖೆ ಆಯುಕ್ತರೂ ಆಗಿದ್ದ ವಿಕಾಸ ಸುರಳ್ಕರ್‌ ಅವರು ಬಿಬಿಎಂಪಿಯಲ್ಲಿಯೇ ಮುಂದುವರೆಯುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ