ಬೆಂಗಳೂರಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ, ಮೂವರು ಯುವಕರಿಂದ ದೂರು; ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಪೊಲೀಸರು
ಜೈಶ್ರೀರಾಮ್ ಕೂಗಿದರು ಎನ್ನುವ ಕಾರಣಕ್ಕೆ ಮೂವರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು:ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಕೊಂಡು ನಮ್ಮ ಪಾಡಿಗೆ ನಾವು ಕಾರಿನಲ್ಲಿ ಹೋಗುತ್ತಿದ್ದಾಗ ಮುಸ್ಲಿಂ ಯುವಕರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂವರು ಮುಸ್ಲಿಂ ಯುವಕರು ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹಕಾರ ನಗರದ ಪವನ್ ಕುಮಾರ್, ವಿನಾಯಕ ಮತ್ತು ರಾಹುಲ್ ದೂರು ನೀಡಿದ ಯುವಕರು.
ಈ ಪ್ರಕರಣವನ್ನು ಚಿತ್ರಿಸಿಕೊಂಡಿರುವ ವಿಡಿಯೋ ದಾಖಲೆಯನ್ನು ಯುವಕರು ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ
ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಯಾರು ಎನ್ನುವುದು ತಿಳಿದು ಬಂದಿದ್ದು, ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದೂ ಹೇಳಿದ್ದಾರೆ.
ಬೈಕ್ ಖರೀದಿಸಲು ಮಧ್ಯಾಹ್ನ 3.30ರ ವೇಳೆಗೆ ನಮ್ಮದೇ ಕಾರಿನಲ್ಲಿ ಕೆ.ಜಿ ಹಳ್ಳಿಯಿಂದ ಎಂ.ಎಸ್.ಪಾಳ್ಯಕ್ಕೇ ಹೋಗುತ್ತಿದ್ದೆವು. ನಮ್ಮ ಪಾಡಿಗೆ ನಾವು ಕಾರಿನಲ್ಲಿ ಶ್ರೀರಾಮನ ಭಾವಚಿತ್ರ ಹಾಕಿಕೊಂಡು ಜೈಶ್ರೀರಾಮ್ ಎಂದು ಘೋಷಣೆ ಕೂಗಿಕೊಂಡು ಹೋಗುತ್ತಿದ್ದೆವು. ಆಗ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ನಮ್ಮ ಕಾರನ್ನು ಅಡ್ಡಗಟ್ಟಿ ಈ ಘೋಷಣೆ ಕೂಗದಂತೆ ಬೆದರಿಕೆ ಹಾಕಿ ಅಲ್ಲಾ ಹು ಅಕ್ಬರ್ ಎಂದು ಕೂಗುವಂತೆ ಬಲವಂತ ಮಾಡಿದರು. ನಾವು ಈ ರೀತಿ ಕೂಗುವುದಿಲ್ಲ ಎಂದು ಹೇಳಿದಾಗ ಮತ್ತೊಬ್ಬರನ್ನು ಕರೆದು ನಮ್ಮ ಮೇಲೆ ಹಲ್ಲೆ ನಡೆಸಿ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನಮ್ಮ ಜೊತೆಗಿದ್ದ ರಾಹುಲ್ ಎಂಬುವರ ತಲೆಗೆ ಪೆಟ್ಟು ಬಿದ್ದಿದ್ದು, ಮೂಗಿನ ಮೂಳೆ ಮುರಿದಿದೆ. ಮತ್ತೊಬ್ಬರ ತಲೆಗೆ ಪೆಟ್ಟು ಬಿದ್ದಿದೆ. ಅವರಿಂದ ಕಷ್ಟಪಟ್ಟು ತಪ್ಪಿಸಿಕೊಂಡು ಬಂದಿದ್ದೇವೆ ಎಂದು ಪವನ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಿದ್ಯಾರಣ್ಯಪುರ ಪೋಲಿಸರು ಹೇಳಿದ್ದಾರೆ.
(ವರದಿ: ಎಚ್.ಮಾರುತಿ.ಬೆಂಗಳೂರು)
