ಕನ್ನಡ ಸುದ್ದಿ  /  ಕರ್ನಾಟಕ  /  Trekking: ಹಿಮಾಚಲದ ಚಂದ್ರಕಾಣಿ ಪಾಸ್ 12500 ಅಡಿ ಎತ್ತರಕ್ಕೆ ಕರ್ನಾಟಕ ತಂಡದ ಚಾರಣ, ಸಂಸ್ಕೃತ ಧ್ವಜ ಏರಿಸಿದ ಖುಷಿ

Trekking: ಹಿಮಾಚಲದ ಚಂದ್ರಕಾಣಿ ಪಾಸ್ 12500 ಅಡಿ ಎತ್ತರಕ್ಕೆ ಕರ್ನಾಟಕ ತಂಡದ ಚಾರಣ, ಸಂಸ್ಕೃತ ಧ್ವಜ ಏರಿಸಿದ ಖುಷಿ

ಸಂಸ್ಕೃತ ಭಾಷೆಯ( Sanskrit ) ಹಿರಿಮೆ ಗರಿಮೆ ಸಾರುವ ನಿಟ್ಟಿನಲ್ಲಿ ಹಿಮಾಲಯಕ್ಕೆಚಾರಣ( Himalayan Trekking) ಹೋಗಿದ್ದ ಕರ್ನಾಟಕದ ತಂಡ ಬಾವುಟವನ್ನು ಹಾರಿಸಿದೆ.

ಸಂಸ್ಕೃತ ಬಾವುಟವನ್ನು ಹಿಮಾಲಯದಲ್ಲಿ ಹಾರಿಸಿದ ತಂಡ
ಸಂಸ್ಕೃತ ಬಾವುಟವನ್ನು ಹಿಮಾಲಯದಲ್ಲಿ ಹಾರಿಸಿದ ತಂಡ

ಬೆಂಗಳೂರು: ಹಿಮಾಲಯ ಚಾರಣ ಹಲವರ ಕನಸು. ನಾನಾ ಕ್ಷೇತ್ರದವರು ಹಿಮಾಲಯವನ್ನು ಏರುತ್ತಾರೆ. ತಮ್ಮ ಹಿಮಾಲಯದ ಚಾರಣ ನೆನಪಿಗೆ ಧ್ವಜವನ್ನು ಹಾರಿಸಿ ಬರುತ್ತಾರೆ. ಕರ್ನಾಟಕದಿಂದ ಹೊರಟಿದ್ದ ಈ ತಂಡಕ್ಕೂ ಹಿಮಾಲಯವನ್ನು ಏರಬೇಕು ಎನ್ನುವ ಆಸೆ ಇತ್ತು. ಜತೆಗೆ ಸಂಸ್ಕೃತ ಧ್ವಜವನ್ನು ಹಿಮಾಲಯದೆತ್ತರದಲ್ಲಿ ಹಾರುವಂತೆ ಮಾಡಬೇಕು. ಆ ಮೂಲಕ ಭಾರತದ ಭಾಷೆಯೇ ಆಗಿರುವ ಸಂಸ್ಕೃತಕ್ಕೆ ಗೌರವ ಸಲ್ಲಿಸಬೇಕು ಎನ್ನುವ ಬಯಕೆ ಇತ್ತು. ಅದನ್ನು ಈಡೇರಿಸಿತು ಕೂಡ ಈ ತಂಡ. ಕರ್ನಾಟಕದ ತಂಡಕ್ಕೆ ಇತರರೂ ಕೈ ಜೋಡಿಸಿ ಖುಷಿ ಪಟ್ಟರು. ಇಂತಹ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಹಿಮಾಚಲದ ಚಂದ್ರಕಾಣಿ ಪಾಸ್ 12500 ಅಡಿ ಎತ್ತರ ಪ್ರದೇಶ.

ಟ್ರೆಂಡಿಂಗ್​ ಸುದ್ದಿ

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ದೆಹಲಿ, ಸಂಸ್ಕೃತ ಭಾರತಿ ಶಿವಮೊಗ್ಗ, ಯೂತ್‌ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ, ಗೀರ್ವಾಣ ಭಾರತಿ ಶ್ರೀ ಆದಿಚುಂಚನಗಿರಿ ಘಟಕ, ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆದ ಚಾರಣ ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶದ ಚಂದ್ರಕಾಣಿ ಪಾಸ್ ನಲ್ಲಿ ಸಂಸ್ಕೃತ ಧ್ವಜಾರೋಹಣ ನೆರವೇರಿಸಲಾಯಿತು.

ಕೇಂದ್ರೀಯ ವಿಶ್ವವಿದ್ಯಾಲಯದ ಚಾರಣದ ಸಂಯೋಜನಾಧಿಕಾರಿ ಮನೋಜ್ ಮಿಶ್ರಹಾಗೂ ಚಾರಣದ ಮುಖ್ಯಸ್ಥರಾದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ನಗರದ ಸಾಹಸಿ ಅ.ನಾ.ವಿಜಯೇಂದ್ರ ರಾವ್ ಅವರು ಆಸಕ್ತ ಚಾರಣಿಗರೊಂದಿಗೆ ಹಿಮಾಲಯಕ್ಕೆ ಹೋಗುವ ತೀರ್ಮಾನ ಮಾಡಿದ್ದರು. ಇದಕ್ಕೆ ಜತೆಯಾದವರು ಕರ್ನಾಟಕದ 26ಜನರ ತಂಡ. ಚಾರಣಕ್ಕೆ ಸಾಥ್‌ ನೀಡಿದವರು 13 ರಾಜ್ಯಗಳಿಂದ ಕೇಂದ್ರೀಯ ವಿಶ್ವ ವಿದ್ಯಾನಿಲಯದ 25 ಜನ ವಿದ್ಯಾರ್ಥಿಗಳು14 ಜನ ಬಾಲಕಿಯರು, ಮಹಿಳೆಯರು ಸೇರಿದಂತೆ ಒಟ್ಟು 51 ಜನ ಸಂಸ್ಕೃತ ವಿದ್ಯಾರ್ಥಿಗಳು, ಸಂಸ್ಕೃತ ಪ್ರೇಮಿಗಳು ಚಾರಣದಲ್ಲಿದ್ದರು.

ಎಲ್ಲರೂ ಸೇರಿ ಕಳೆದ ವಾರವೇ ಚಾರಣ ಶುರು ಮಾಡಿದ್ದರು. ಐದು ದಿನಗಳಲ್ಲಿ ಸುಮಾರು 60 ಕಿಲೋಮೀಟರ್ ನಡೆಯುತ್ತಾ ಹೋದರು. ಕರ್ನಾಟಕದವರು ಹಾಗೂ ಬೇರೆ ಭಾಗಗಳಿಂದ ಬಂದವರು ಸೋಲಾಟಾಂಕಿ, ಮೌಂಟೇನಾಗ, ಉಬ್ಲತಾಜ್, ದೋರನಾಲ ಶಿಬಿರಗಳನ್ನು ದಾಟಿ 12500 ಅಡಿ ಎತ್ತರದಲ್ಲಿರುವ ಹಿಮಾಲಯದ ಚಂದ್ರಕಾಣಿ ಪಾಸ್‌ ಅನ್ನು ಶನಿವಾರ ಏರಿದರು. ಕರ್ನಾಟಕ ತಂಡದವರು ತೀರ್ಮಾನಿಸಿದಂತೆ ಸಂಸ್ಕೃತ ಧ್ವಜವನ್ನೂ ಏರಿಸಿ ಸಂಭ್ರಮಪಟ್ಟರು.

ಸಂಸ್ಕೃತ ಮೃತ ಭಾಷೆಯಲ್ಲ ಇದು ಅಮೃತ ಭಾಷೆ, ನಮ್ಮ ಋಷಿ ಮುನಿಗಳು ನಮಗಾಗಿ ನೀಡಿದ ಜ್ಞಾನದ ಕಣಜ. ಇಂತಹ ಸಮೃದ್ಧವಾದ ಭಾಷೆಯನ್ನು ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ಕಲಿಸುವಂತಹ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕೆಂದು ಆಶಯ ವ್ಯಕ್ತ ಪಡಿಸಿದರು. ಇತಿಹಾಸದಲ್ಲಿ ಭಾಷೆಯೊಂದರ ಪ್ರಚಾರಕ್ಕಾಗಿ ಇಂತಹ ಸಾಹಸ ಕಾರ್ಯ ಅಭಿನಂದನೀಯ. ಇಂತಹ ಅವಕಾಶ ಕಲ್ಪಿಸಿದ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರಿಗೆ ಧನ್ಯವಾದ ಎನ್ನುವುದು ತಂಡದಲ್ಲಿದ್ದ ಮೈಸೂರಿನ ಕೃಷ್ಣಕುಮಾರ್‌ ಅಭಿಮತ.

ದೇವತೆಗಳು ಹೇಗೆ ಹಿಮಾಲಯದಲ್ಲಿ ನೆಲಸಿರುವವರೊ ಹಾಗೇ ಭಾರತದ ಆತ್ಮದಲ್ಲಿ ಸಂಸ್ಕೃತ ನೆಲೆಸಿದೆ. ದೇವತಾತ್ಮ ಹಿಮಾಲಯವಾದರೆ ಭಾರತಾತ್ಮ ಸಂಸ್ಕೃತ ಎನ್ನುವ ಧ್ವಜದ ಘೋಷವಾಕ್ಯ ಅರ್ಥಪೂರ್ಣವಾಗಿದೆ. ಧ್ವಜದ ವಾಕ್ಯ ಸಾರ್ಥಕವಾಗಬೇಕಾದರೆ ಇಲ್ಲಿ ಆಗಮಿಸಿರುವ 14 ರಾಜ್ಯ ಪ್ರತಿನಿಧಿಗಳು ತಮ್ಮ ತಮ್ಮ ರಾಜ್ಯದಲ್ಲಿ ಸಂಸ್ಕೃತದ ಪ್ರಚಾರ ಕಾರ್ಯವನ್ನು ಕೈಗೊಳ್ಳಬೇಕು. ಸಂಸ್ಕೃತ ಭಾಷೆಯನ್ನು ನಾವು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವಂತಹ ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಸಂಸ್ಕೃತಕೊಸ್ಕರವಾಗಿಯೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕೃತ ಭಾರತಿ ಸದಾ ನಮಗೆ ಸಹಕಾರ ನೀಡುತ್ತದೆ ಇದರ ಸಹಕಾರ ಪಡೆದುಕೊಳ್ಳಿ ಎನ್ನುವುದು ಸಂಘಟನಕ ಸಲಹೆ.

ಚಾರಣದ ನಾಯಕರಾದ ಸುಂದರಲಾಲ್ ಪಾಂಡೆ, ನಾಗೇಂದ್ರ, ಆದಿತ್ಯಪ್ರಸಾದ್, ಉಮಾಮಹೇಶ್ವರ ಅವರು ಅನುಭವ ಹಂಚಿಕೊಂಡರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ವಿಭಾಗ