ಕರ್ನಾಟಕ ಬಜೆಟ್‌ 2024: ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ, ಇಲ್ಲಿದೆ ಮಾರ್ಗ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಜೆಟ್‌ 2024: ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ, ಇಲ್ಲಿದೆ ಮಾರ್ಗ

ಕರ್ನಾಟಕ ಬಜೆಟ್‌ 2024: ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ, ಇಲ್ಲಿದೆ ಮಾರ್ಗ

Budget Pdf: ಬಜೆಟ್‌ ಮಂಡಿಸಿದರೂ ವಿವರ ಒಮ್ಮೆ ಕಣ್ಣಾಡಿಸಿದರೆ ಸಮಾಧಾನ. ಬಜೆಟ್‌ ಪ್ರತಿ ಸುಧೀರ್ಘವಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಪಿಡಿಎಫ್‌ ರೂಪದಲ್ಲಿ ಅದನ್ನು ಪಡೆಯಲು ಅವಕಾಶವಿದೆ. ಕರ್ನಾಟಕ ಬಜೆಟ್‌ 2024ನ ಪ್ರತಿ ಬಜೆಟ್‌ ಮಂಡನೆ ಶುರುವಾದ ಕೆಲವು ಹೊತ್ತಿನಲ್ಲಿ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಸಿಗಲಿದೆ. ಅದನ್ನು ಹೀಗೆ ಪಡೆಯಿರಿ..

ಕರ್ನಾಟಕ ಬಜೆಟ್‌ 2024 ಪ್ರತಿಯನ್ನು ಡೌನ್‌ ಮಾಡಿಕೊಳ್ಳಲು ಇಲ್ಲಿದೆ ಮಾರ್ಗ
ಕರ್ನಾಟಕ ಬಜೆಟ್‌ 2024 ಪ್ರತಿಯನ್ನು ಡೌನ್‌ ಮಾಡಿಕೊಳ್ಳಲು ಇಲ್ಲಿದೆ ಮಾರ್ಗ

ಬೆಂಗಳೂರು: ಕರ್ನಾಟಕ ಬಜೆಟ್‌ 2024 ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ಸಿದ್ದರಾಮಯ್ಯ ಅವರು ಮುಂದಿನ ಸಾಲಿನ ಆಯವ್ಯಯವನ್ನು ಮಂಡಿಸುವರು. ಬಜೆಟ್‌ ನ ಸಂಪೂರ್ಣ ವಿವರ, ಇಲಾಖೆವಾರು ನೀಡಿರುವ ಅನುದಾನ. ಕಾರ್ಯಕ್ರಮ. ಜಿಲ್ಲಾವಾರು ನೀಡಿರುವ ಯೋಜನೆಗಳ ವಿವರ ಬೇಕು ಎಂದರೆ ನೀವು ಅಧಿಕೃತವಾಗಿ ಪಿಡಿಎಫ್‌ ಅನ್ನು ಪಡೆದುಕೊಳ್ಳಬಹುದು. ಇದಕ್ಕಾಗಿಯೇ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಹಾಗೂ ಹಣಕಾಸು ಇಲಾಖೆಯ ಮೂಲಕವೇ ಪಿಡಿಎಫ್‌ ಪ್ರತಿಯನ್ನು ಪಡೆದುಕೊಳ್ಳಬಹುದು. ಇದಕ್ಕೆ ಸುಲಭವಾದ ಮಾರ್ಗವೂ ಇಲ್ಲಿದೆ.

  • ಕರ್ನಾಟಕ ಬಜೆಟ್‌ 2024 ಬಜೆಟ್‌ ಪ್ರತಿಯನ್ನು ನಿಮ್ಮ ಮೊಬೈಲ್‌ ಫೋನ್‌ ಇಲ್ಲವೇ ಡೆಸ್ಕ್‌ ಟಾಪ್‌ ಮೂಲಕವೂ ಪಡೆಯಬಹುದು.
  • ಇದಕ್ಕೆ ಮೊದಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಪ್ರವೇಶಿಸಬೇಕು. ಇದಕ್ಕಾಗಿ ನೀವು https://www.karnataka.gov.in/ ಎಂದು ಟೈಪ್‌ ಮಾಡಬೇಕು.
  • ಆಗ ಮುಖ್ಯಪುಟ ತೆರೆದುಕೊಳ್ಳುತ್ತದೆ. ಮುಖ್ಯ ಪುಟದಲ್ಲಿ 'ಸರ್ಕಾರ' ಎಂಬ ಆಯ್ಕೆ ಕಾಣಲಿದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ 'ಇಲಾಖೆಗಳು' ಎಂಬ ವಿಭಾಗ ಕಾಣಸಿಗಲಿದೆ. ಅದರ ಮೇಲೆ ಕ್ಲಿಕ್‌ ಮಾಡಬೇಕು.
  • ಇಲಾಖೆಗಳು ವಿಭಾಗದ ಮೇಲೆ ಕ್ಲಿಕ್‌ ಮಾಡಿದಾಗ ಸರ್ಕಾರದ ನಾನಾ ಇಲಾಖೆಗಳು ಹಾಗೂ ನಿಗಮ ಮಂಡಳಿಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ನೀವು 'ಹಣಕಾಸು ಇಲಾಖೆ' ಮೇಲೆ ಕ್ಲಿಕ್‌ ಮಾಡಬೇಕು.
  • ಇಲ್ಲಿಯೂ ಕ್ಲಿಕ್‌ ಮಾಡಿದ ಬಳಿಕ ಸಚಿವಾಲಯಗಳ ಜತೆಯಲ್ಲಿ ನಿಗಮ ಮಂಡಳಿಗಳ ಪಟ್ಟಿ ತೆರೆಯಲಿದೆ. ಇಲ್ಲಿ ಕಾಣುವ ಪ್ರಥಮ ಆಯ್ಕೆ 'ಆರ್ಥಿಕ ಇಲಾಖೆ' ಹೆಸರಿನ ಮೇಲೆ ಕ್ಲಿಕ್‌ ಮಾಡಿ.

    ಇದನ್ನೂ ಓದಿರಿ: ದೆಹಲಿ ರೈತರ ಪ್ರತಿಭಟನೆ ಕಾಂಗ್ರೆಸ್‌ನ ಟೂಲ್ ಕಿಟ್ ಭಾಗ; ಆರ್ ಅಶೋಕ್, ವಿಜಯೇಂದ್ರ, ಎಚ್‌ಡಿಕೆ ಆಕ್ರೋಶ
  • ಆರ್ಥಿಕ ಇಲಾಖೆ ಮೇಲೆ ಕ್ಲಿಕ್‌ ಮಾಡಿದ ಬಳಿಕ ಇದಕ್ಕಾಗಿ ರೂಪಿಸಲಾದ ಪ್ರತ್ಯೇಕ ವೆಬ್‌ಸೈಟ್‌ ನಿಮಗೆ ತೆರೆದುಕೊಂಡು ಮಾಹಿತಿ ಒದಗಿಸುತ್ತದೆ.
  • ಆರ್ಥಿಕ ಇಲಾಖೆಯ ಮೇನ್‌ ಪೇಜ್‌ ತೆರೆದ ನಂತರ ವಿವಿಧ ಆಯ್ಕೆಗಳು ಮುಂದೆ ಬರುತ್ತವೆ. ಅದರಲ್ಲಿ ನಿಮಗೆ ಬೇಕಾಗಿರುವ ಮುಖ್ಯವಾದ ಬಜೆಟ್‌ ಪ್ರತಿ ಡೌನ್‌ಲೋಡ್‌ಗಾಗಿ 'ಅಯವ್ಯಯ ದಾಖಲೆಗಳು' ಎಂಬ ಆಯ್ಕೆ ಇರುತ್ತದೆ.
  • ಅದನ್ನು ಗಮನಿಸಿ ಹಾಗೆಯೇ ಇದರ ಕೆಳಗೆ ಯಾವೆಲ್ಲಾ ಸಾಲಿನ ದಾಖಲೆ ನಿಮಗೆ ಅಗತ್ಯವೋ ಅದನ್ನು ಪಡೆದುಕೊಳ್ಳಬಹುದು. ನಿಮಗೆ ಬೇಕಾಗಿರುವುದು 2024-25 ನೇ ಸಾಲಿನ ಬಜೆಟ್‌ ಪ್ರತಿ ಡೌನ್‌ಲೋಡ್‌ಗಾಗಿ ಮೊದಲನೇ ಆಯ್ಕೆ ಮೇಲೆಯೇ ಕ್ಲಿಕ್‌ ಮಾಡಬೇಕು.
  • ನಂತರದಲ್ಲಿ ನಿಮಗೆ 'ಅಯವ್ಯಯ ಸಂಬಂಧಿತ ಆದೇಶಗಳು' ಹಾಗೂ 'ಅಯವ್ಯಯದ ಸಂಪುಟಗಳ ಆಯ್ಕೆ ಕಾಣಿಸುತ್ತದೆ. ಅದರಲ್ಲಿ ನೀವು 'ಅಯವ್ಯಯದ ಸಂಪುಟಗಳು 2024-25 ಎಂಬುದರ ಮೇಲೆ ಕ್ಲಿಕ್‌ ಮಾಡಿ.
  • ಈ ವಿಭಾಗದಲ್ಲಿ ಬಲ ಭಾಗದ ಮೂಲೆಯಲ್ಲಿ ಪಿಡಿಎಫ್‌ ಫೈಲ್‌ ಇರಲಿದೆ, ಇದರಲ್ಲಿ ವೀಕ್ಷಿಸಿ ಅಥವಾ ಡೌನ್‌ಲೋಡ್‌ ಮಾಡಿ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿದರೆ ಸಾಕು.
  • ಡೌನ್‌ ಲೋಡ್‌ ಆಗಿದ್ದನ್ನು ನಿಮಗೆ ಬೇಕಾದ ಕಡಗೆ ಒಂದು ಕಡೆ ಉಳಿಸಿಕೊಳ್ಳಿ. ಆನಂತರ ವೆಬ್‌ಸೈಟ್‌ ಮುಚ್ಚಿದರೆ ಆಯಿತು.

    ಇದನ್ನೂ ಓದಿರಿ: ಅರ್ಜುನ್ ದೇಶ್ವಾಲ್ ದಾಖಲೆಯ 20 ರೈಡ್‌ ಪಾಯಿಂಟ್; ಪ್ರೊ ಕಬಡ್ಡಿ ಸೆಮಿಫೈನಲ್‌ ಪ್ರವೇಶಿಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್
  • ಮೇಲೆ ವಿವರಿಸಿದ ಹಂತ ಬಿಟ್ಟೂ ನೀವು ನೇರವಾಗಿ ಆರ್ಥಿಕ ಇಲಾಖೆಯ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು. ಇದಕ್ಕೆ ಕ್ಲಿಕ್‌ ಮಾಡಿದರೆ ಅಲ್ಲಿಯೂ ಬಜೆಟ್‌ ಪಿಡಿಎಫ್‌ ಪ್ರತಿ ಸಿಗಲಿದೆ. https://finance.karnataka.gov.in/
  • ವೆಬ್‌ಸೈಟ್‌ ವೇಳೆ ಅನಗತ್ಯ ಮಾಹಿತಿಗಳು, ಲಿಂಕ್‌ಗಳು ಬಂದರೆ ಯಾವುದೇ ಕಾರಣಕ್ಕೆ ಅದನ್ನು ಒತ್ತಬೇಡಿ. ಇದು ತೊಂದರೆಗೂ ದಾರಿ ಮಾಡಿಕೊಡಬಹುದು.

Whats_app_banner